ಆಟದಿಂದ ವಂಚಿತರಾದ ಮಕ್ಕಳು; ಆಟದ ಮೈದಾನದಲ್ಲಿ ಗೋವಿನಜೋಳ ಬೆಳೆ, ಗ್ರಾಮಸ್ಥರಿಂದ ಆಕ್ರೋಶ
ಶಾಲೆಯ ಅಭಿವೃದ್ಧಿ ದೃಷ್ಟಿಯಿಂದ ಎಸ್ಡಿಎಮ್ಸಿ ಕಮೀಟಿ ಮಾಡಲಾಗುತ್ತೇ. ಆದ್ರೆ ಗದಗ ಜಿಲ್ಲೆಯ ರೋಣ ತಾಲೂಕಿನ ಬಿಎಸ್ ಬೇಲೇರಿ ಗ್ರಾಮದಲ್ಲಿ ಅದೇ ಎಸ್ಡಿಎಮ್ಸಿ ಅಧ್ಯಕ್ಷ ಶಾಲೆಯ ಅಭಿವೃದ್ಧಿ ಮಾಡದೆ ಶಾಲೆಯ ಮೈದಾನವನ್ನೇ ಕಬಳಿಸಿದ್ದಾರೆ. ಹೌದು ಮಕ್ಕಳ ಆಟವಾಡುವ ಮೈದಾನದಲ್ಲಿ ಬಿತ್ತನೆ ಮಾಡಿ ಭರ್ಜರಿಯಾಗಿ ಬೆಳೆ ಬೆಳೆದಿದ್ದಾರೆ.
ಗದಗ: ಮಕ್ಕಳು ಆಡುವ ಮೈದಾನದಲ್ಲಿ ಅಕ್ರಮವಾಗಿ ಗೋವಿನಜೋಳ ಬೆಳೆಯಲಾಗಿರುವ ಘಟನೆ ನಡೆದಿದೆ. ಮಕ್ಕಳಿಗೆ ಮೈದಾನ ಇದ್ರು, ಆಟವಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಎಸ್ಡಿಎಮ್ಸಿ ಅಧ್ಯಕ್ಷನ ಅಂದಾ ದರ್ಬಾರ್ಗೆ ಮಕ್ಕಳು, ಗ್ರಾಮಸ್ಥರು ಕಿಡಿಕಾರಿದ್ದಾರೆ.
ಶಾಲೆಯ ಅಭಿವೃದ್ಧಿ ದೃಷ್ಟಿಯಿಂದ ಎಸ್ಡಿಎಮ್ಸಿ ಕಮೀಟಿ ಮಾಡಲಾಗುತ್ತೇ. ಆದ್ರೆ ಗದಗ ಜಿಲ್ಲೆಯ ರೋಣ ತಾಲೂಕಿನ ಬಿಎಸ್ ಬೇಲೇರಿ ಗ್ರಾಮದಲ್ಲಿ ಅದೇ ಎಸ್ಡಿಎಮ್ಸಿ ಅಧ್ಯಕ್ಷ ಶಾಲೆಯ ಅಭಿವೃದ್ಧಿ ಮಾಡದೆ ಶಾಲೆಯ ಮೈದಾನವನ್ನೇ ಕಬಳಿಸಿದ್ದಾರೆ. ಹೌದು ಮಕ್ಕಳ ಆಟವಾಡುವ ಮೈದಾನದಲ್ಲಿ ಬಿತ್ತನೆ ಮಾಡಿ ಭರ್ಜರಿಯಾಗಿ ಬೆಳೆ ಬೆಳೆದಿದ್ದಾರೆ. ಈ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಬರಪೂರವಾಗಿ ಗೋವಿನಜೋಳವನ್ನು ಬಿತ್ತನೆ ಮಾಡಿ ಬೆಳೆ ಬೆಳೆದಿದ್ದಾರೆ. ಎಸ್ಡಿಎಮ್ಸಿ ಅಧ್ಯಕ್ಷ ಅಶೋಕ ಹೊಸಮನಿ ಅಂದಾ ದರ್ಬಾರ್ ನಡೆಸಿದ್ದಾನೆ ಅಂತ ಗ್ರಾಮಸ್ಥರು ಕಿಡಿಕಾರಿದ್ದಾರೆ.
ಶಾಲೆ ಶಿಕ್ಷಕರನ್ನು ಬುಟ್ಟಿಗೆ ಹಾಕಿಕೊಂಡು, ಇತರೆ ಸದಸ್ಯರ ಗಮನಕ್ಕೆ ಅಧಿಕೃತವಾಗಿ ಎಸ್ಡಿಎಮ್ಸಿ ಸಭೆಯಲ್ಲಿ ಠರಾವು ಪಾಸ್ ಮಾಡಿದ್ದಾರೆ. ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಗೋವಿನಜೋಳವನ್ನು ಬೆಳೆದಿದ್ದಾರೆ. ಶಾಲೆ ಮೈದಾನದಲ್ಲಿ ಪೋಷಕರು ಹೂ, ಮರ ಗಿಡಗಳನ್ನು ಬೆಳೆಸಬೇಕು ಅದನ್ನು ಬಿಟ್ಟು ಹೀಗೆ ವ್ಯವಸಾಯ ಮಾಡಿದ್ರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಶಾಲೆ ಆಟದ ಮೈದಾನದಲ್ಲಿ ಈ ರೀತಿ ಬೆಳೆ ಬೆಳೆದು ಮಕ್ಕಳ ಆಟಕ್ಕೆ ಕೊಕ್ಕೆ ಹಾಕಿದ್ದು, ಸರಿಯಲ್ಲಿ ಜಿಲ್ಲಾಡಳಿತ ಸರ್ಕಾರಿ ಶಾಲೆಗಳತ್ತ ಕಾಳಜಿ ವಹಿಸಬೇಕು. ಬೇಲಿ ಹಾಕಿ ಸರ್ಕಾರದ ಆಸ್ತಿ ಕಾಪಾಡಿಕೊಳ್ಳಬೇಕು. ಆದ್ರೆ, ಶಾಲೆ ಮೈದಾನದಲ್ಲಿ ಬಿತ್ತನೆ ಮಾಡೋದು ಅಂದ್ರೆ ಯಾವ ನ್ಯಾಯ. ಜಿಲ್ಲಾಡಳಿತ ಶಿಕ್ಷಣ ಇಲಾಖೆ ಏನ್ ಮಾಡ್ತಾಯಿದೆ. ಇನ್ನು ಕ್ಷೇತ್ರದ ಶಾಸಕರೂ ಸಚಿವ ಸಿ ಸಿ ಪಾಟೀಲ್ರಾಗಲೀ, ಜಿಲ್ಲಾ, ತಾಲೂಕ ಪಂಚಾಯತ್ ಸದಸ್ಯರಾಗಲೀ ಶಾಲೆಯ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅಂತ ಗ್ರಾಮಸ್ಥ ನಿಂಗಪ್ಪ ಮೇಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಶಾಲೆಗೆ ಮೈದಾನ ಇದ್ರು ಕೂಡಾ ಮಕ್ಕಳಿಗೆ ಆಟವಾಡುವ ಭಾಗ್ಯ ಇಲ್ಲದಂತಾಗಿದೆ. ಮಕ್ಕಳು ಪಾಠವನ್ನು ಕೇಳಿಕೊಂಡು ಆಟವಾಡದೆ ಮನೆಗೆ ಹೋಗಬೇಕು. ಮಕ್ಕಳು ಆ ಗೋವಿನಜೋಳ ಬೆಳೆದ ಪ್ರದೇಶಕ್ಕೆ ಹೋದ್ರೆ ಎಸ್ಡಿಎಮ್ಸಿ ಅಧ್ಯಕ್ಷ ಬೆಳೆ ಹಾಳಾಗುತ್ತೇ ಎಂದು ದಬ್ಬಾಳಿಕೆ ಕೂಡಾ ಮಾಡುತ್ತಾನಂತೆ. ಸರ್ಕಾರಿ ವೇತನ ಪಡೆದುಕೊಂಡು ಮಕ್ಕಳಿಗೆ ಪಾಠವನ್ನು ಮಾಡಬೇಕಾದ ಮುಖ್ಯೋಪಾಧ್ಯಾಯ ಕೂಡಾ ಎಸ್ಡಿಎಮ್ಸಿ ಅಧ್ಯಕ್ಷನಿಗೆ ಸಾಥ್ ನೀಡಿದ್ದಾರೆ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ. ನಿಯಮ ಮೀರಿ ಶಿಕ್ಷಕರು ಹಾಗೂ ಸದಸ್ಯರು ಠರಾವು ಪಾಸ್ ಮಾಡಿಕೊಂಡು ಸರ್ಕಾರದ ಮೈದಾನದಲ್ಲಿ ವ್ಯವಸಾಯ ಮಾಡಿದ್ದಾರೆ. ಇನ್ನೂ ಈ ಕುರಿತು ಶಾಲೆಯ ಮುಖ್ಯೋಪಾಧ್ಯಾಯ ಸಂಗಪ್ಪ ಹುನಗುಂಡಿ ಅವರನ್ನು ಕೇಳಿದ್ರೆ ಅವರು ಹೇಳೋ ಕಥೆನೇ ಬೇರೆ. ಈ ಹಿಂದೆ ಗ್ರಾಮದ ಕೆಲವು ರೈತರು ಗೋವಿನಜೋಳ ರಾಶಿ ಮಾಡಿದ್ರು. ಇದ್ರಿಂದ ಮಕ್ಕಳಿಗೆ ಸಮಸ್ಯೆ ಆಗ್ತಾಯಿತ್ತು. ಹಾಗಾಗಿ ಆ ಮೈದಾನವನ್ನು ಸ್ವಚ್ಛ ಮಾಡಿಕೊಂಡು ಅಧ್ಯಕ್ಷರು ಗೋವಿನಜೋಳದ ಬೆಳೆಯನ್ನು ಬೆಳೆದಿದ್ದಾರೆ. ಈವಾಗ ಗೋವಿನಜೋಳದ ಬೆಳೆಯನ್ನು ತೆರವು ಮಾಡಿಸುತ್ತೇನೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಸಂಗಪ್ಪ ಹುಣಗುಂಡಿ ತಿಳಿಸಿದ್ದಾರೆ.
ಮಕ್ಕಳು ಆಟ ಆಡ್ತಾ ನಲಿಯಬೇಕಾದ ಮೈದಾನದಲ್ಲಿ ಬೆಳೆ ಬೆಳೆಯಲಾಗಿದೆ. ಅದಕ್ಕೆ ಕಡಿವಾಣ ಹಾಕಬೇಕಾದ ಶಿಕ್ಷಕರು ಎಸ್ಡಿಎಮ್ಸಿ ಅಧ್ಯಕ್ಷನಿಗೆ ಸಾಥ್ ನೀಡಿದ್ದಾರೆ. ಸರ್ಕಾರ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಲಕ್ಷ ಲಕ್ಷ ಅನುದಾನ ನೀಡಿದ್ರೂ ಇಲ್ಲಿನ ಶಾಲೆ ಮಾತ್ರ ಯಾವುದೇ ಅಬಿವೃದ್ಧಿ ಕಾಣುತ್ತಿಲ್ಲ. ಇನ್ನಾದ್ರು ಗದಗ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಗಾಢನಿದ್ರೆಯಿಂದ ಎದ್ದು, ಚುರುಕು ಮುಟ್ಟಿಸುವ ಕೆಲಸ ಮಾಡಬೇಕಾಗಿದೆ. ಆಗ ಮಾತ್ರ ಮಕ್ಕಳು ಸ್ವಚಂದವಾಗಿ ಪಾಠ, ಆಟ ಆಡಲು ಸಾಧ್ಯವಾಗಲಿದೆ.
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ
ಇದನ್ನೂ ಓದಿ: ಬೆಂಗಳೂರು: ಕೊವಿಡ್ ಲಸಿಕೆ ಪೂರೈಸುವುದಕ್ಕೆ ಡ್ರೋನ್ ಬಳಕೆ; 10 ನಿಮಿಷದಲ್ಲಿ 14 ಕಿ.ಮೀ ದೂರ ಸಾಗಾಟ