Temple Tour: ಅಕ್ಷರಾಭ್ಯಾಸಕ್ಕೆ ಶೃಂಗೇರಿಯಷ್ಟೆ ಈ ದೇಗುಲ ಹೆಸರುವಾಸಿ

ಮುದ್ರಣ ಕಾಶಿ ಗದಗದಲ್ಲಿರುವ ಐತಿಹಾಸಿಕ ಹಿನ್ನೆಲೆಯಿರುವ ಶ್ರೀ ಸರಸ್ವತಿ ದೇವಾಲಯವೋ ಒಂದು. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತಾದಿಗಳು ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ.

ಹಿಂದೂ ಪುರಾಣದ ಪ್ರಕಾರ ಒಂದೊಂದು ದೇವರು ಒಂದೊಂದು ಸಿದ್ಧಿಗಳನ್ನ ಕರುಣಿಸುವುದಕ್ಕೆ ಫೇಮಸ್. ಉದಾಹರಣೆಗೆ ಹೇಳೋದಾದರೆ ಲಕ್ಷ್ಮಿ ಸಕಲ ಸಂಪತ್ತನ್ನು ಕೊಡುವಂತಾ ಸಿರಿ ದೇವಿಯಾದರೆ, ಗಣಪತಿ ಒಳಿತನ್ನು ಮಾಡುವ ಅಧಿದೇವತೆ. ಅದೇ ರೀತಿ ವಿದ್ಯೆಗೆ ಅಧಿದೇವತೆ ಯಾರು ಅಂತ ಕೇಳಿದ್ರೆ ಎಲ್ಲರೂ ಹೇಳೋದು ಸರಸ್ವತಿ ಅಂತ. ರಾಜ್ಯದಲ್ಲಿ ಬ್ರಹ್ಮನ ಪತ್ನಿ ಸರಸ್ವತಿಗೆ ಇರುವಂತಾ ಮಂದಿರಗಳ ಪೈಕಿ ಮುದ್ರಣ ಕಾಶಿ ಗದಗದಲ್ಲಿ ಇರುವಂತಾ ಸರಸ್ವತಿ ಮಂದಿರ ಎಲ್ಲರ ಗಮನ ಸೆಳೆಯುತ್ತದೆ. ಜ್ಞಾನ ಪ್ರದಾಯಿನಿ ಸರಸ್ವತಿ ದೇವಾಲಯಗಳು ಬಹಳ ಅಪರೂಪ. ಇಡೀ ದೇಶದಲ್ಲೇ ಬೆರಳಣಿಕೆಯಷ್ಟು ಸರಸ್ವತಿ ದೇವಾಲಯಗಳಿವೆ. ಅಂತಾ ಒಂದು ಸರಸ್ವತಿ ದೇವಾಲಯ ನಮ್ಮ ರಾಜ್ಯದಲ್ಲೂ ಇದೆ ಅನ್ನೋದು ಜನರಿಗೆ ಗೊತ್ತಿಲ್ಲ. ಮುದ್ರಣ ಕಾಶಿ ಗದಗದಲ್ಲಿರುವ ಐತಿಹಾಸಿಕ ಹಿನ್ನೆಲೆಯಿರುವ ಶ್ರೀ ಸರಸ್ವತಿ ದೇವಾಲಯವೋ ಒಂದು. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತಾದಿಗಳು ಈ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ವಿದ್ಯಾರಂಭ ಮತ್ತು ಅಕ್ಷರಾಭ್ಯಾಸಕ್ಕೆ ಶೃಂಗೇರಿಯಷ್ಟೆ ಈ ದೇಗುಲ ಹೆಸರುವಾಸಿಯಾಗಿದೆ.

Click on your DTH Provider to Add TV9 Kannada