ತುಮಕೂರು: ರಾಜ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ (Assembly elections) ಹೆಚ್ಚು- ಕಡಿಮೆ ಒಂದು ವರ್ಷವಿದೆ. ಆದರೆ ಈಗಲೇ ಪಕ್ಷಗಳಿಂದ ತಯಾರಿಗಳು ನಡೆಯುತ್ತಿವೆ. ಈ ನಡುವೆ ಟಿಕೆಟ್ಗಾಗಿ ಲಾಬಿ ಕೂಡಾ ಶುರುವಾಗಿದೆ. ಕಾಂಗ್ರೆಸ್ (Congress) ನಾಯಕರಿಗೆ ತುಮಕೂರು ಜಿಲ್ಲೆ ಬಿಸಿ ತುಪ್ಪವಾದಂತೆ ಕಾಣುತ್ತಿದೆ. ಕುಣಿಗಲ್ ಕಾಂಗ್ರೆಸ್ ಟಿಕೆಟ್ಗಾಗಿ ಜಿದ್ದಾಜಿದ್ದಿ ಶುರುವಾಗಿದ್ದು, ಶಾಸಕ ಡಾ.ರಂಗನಾಥ್, ಮಾಜಿ ಸಂಸದ ಎಸ್.ಪಿ ಮುದ್ದಹನುಮೇಗೌಡ, ಮಾಜಿ ಶಾಸಕ ರಾಮಸ್ವಾಮಿ ನಡುವೆ ಟಿಕೆಟ್ ಫೈಟ್ ಆರಂಭವಾಗಿದೆ.
ಸಿದ್ದರಾಮಯ್ಯ ಬಲದಲ್ಲಿ ಟಿಕೆಟ್ ಕೇಳಲು ಮುಂದಾಗಿರುವ ಮಾಜಿ ಶಾಸಕ ರಾಮಸ್ವಾಮಿ, ಡಿಕೆ ಶಿವಕುಮಾರ್ ಸಂಬಂಧಿ ಡಾ.ರಂಗನಾಥ್ಗೆ ಟಿಕೆಟ್ ನೀಡದಂತೆ ಒತ್ತಡ ಹೇರುತ್ತಿದ್ದಾರೆ. ಡಾ.ರಂಗನಾಥ್ಗೆ ಟಿಕೆಟ್ ನೀಡಿದರೆ ಬಂಡಾಯದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಎಚ್ಚರಿಕೆಯನ್ನೂ ರಾಮಸ್ವಾಮಿಗೌಡ ನೀಡಿದ್ದಾರೆ. ಮತ್ತೊಂದಡೆ ಮಾಜಿ ಸಂಸದ ಎಸ್.ಪಿ ಮುದ್ದಹನುಮೇಗೌಡ ಕೂಡ ಕ್ಷೇತ್ರದಲ್ಲಿ ಭರ್ಜರಿ ಓಡಾಟ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿ ನೀಡಿದ ಭರವಸೆ ಈಡೇರಿಸಲಿ, ಕುಣಿಗಲ್ ಕಾಂಗ್ರೆಸ್ ಟಿಕೆಟ್ ನನಗೆ ನೀಡುವಂತೆ ಮುದ್ದಹನುಮೇಗೌಡ ಪಟ್ಟು ಬಿದ್ದಿದ್ದಾರೆ.
ಇದನ್ನೂ ಓದಿ: Anti Ageing Food: ವಯಸ್ಸಾಗದಂತೆ ತಡೆಯುವ ಈ ಆಹಾರಗಳು ನಿಮ್ಮ ಡಯಟ್ನಲ್ಲಿರಲಿ
ಚುನಾವಣೆಗೆ ಇನ್ನು ಒಂದು ವರ್ಷ ಸಮಯವಿದೆ. ಆದರೆ ಆಕಾಂಕ್ಷಿತರು ಈಗಲೇ ಕುಣಿಗಲ್ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಶುರು ಮಾಡಿದ್ದಾರೆ. ಇಡೀ ಕ್ಷೇತ್ರ ಸುತ್ತಿ ಮತದಾರರ ಮನ ಗೆಲ್ಲುವ ತಂತ್ರ ನಡೆಸುತ್ತಿದ್ದಾರೆ. ಟೆಕೆಟ್ ಸಿಗುವ ವಿಶ್ವಾಸದಲ್ಲಿ ಮಾಜಿ ಶಾಸಕ ರಾಮಸ್ವಾಮಿ ಇದ್ದಾರೆ. ಸಂಬಂಧಿಯನ್ನು ಬಿಟ್ಟು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬೇರೆಯವರಿಗೆ ಟಿಕೆಟ್ ನೀಡುತ್ತಾರ ಎಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಇನ್ನೂ ಅಂತಿಮವಾಗದ ಜೆಡಿಎಸ್ ಅಭ್ಯರ್ಥಿ ಹೆಸರು:
ಜೂನ್ 13ರಂದು ನಡೆಯುವ ವಿಧಾನಪರಿಷತ್ ಚುನಾವಣೆಗೆ ಇನ್ನೂ ಜೆಡಿಎಸ್ ಅಭ್ಯರ್ಥಿ ಹೆಸರು ಅಂತಿಮವಾಗಿಲ್ಲ. ಅಭ್ಯರ್ಥಿ ಹೆಸರು ಘೋಷಣೆ ಬಗ್ಗೆ ಜೆಡಿಎಸ್ ಗೊಂದಲದಲ್ಲಿದ್ದಾರೆ. ಬೆಳಗ್ಗೆ 10 ಗಂಟೆ ನಂತರ ಅಭ್ಯರ್ಥಿ ಹೆಸರು ಘೋಷಣೆ ಮಾಡುವ ಸಾಧ್ಯತೆಯಿದೆ. ಮಾಜಿ ಎಂಎಲ್ಸಿ ಶರವಣಗೆ ಜೆಡಿಎಸ್ ಟಿಕೆಟ್ ಸಿಗುವ ಸಾಧ್ಯತೆಯಿದೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:29 am, Tue, 24 May 22