ರಾಜ್ಯದಲ್ಲಿ ಬುಕ್ ವಾರ್: ನೀಚ ಮಟ್ಟದ ವಿರೋಧಕ್ಕೆ ಶಿಕ್ಷಣ ಸಚಿವ ಗರಂ, ಹೆಗ್ಡೆವಾರ್ ಪಠ್ಯ ಸೇರ್ಪಡೆಗೆ ಸಿಎಫ್​ಐ ವಿರೋಧ

ರಾಜ್ಯದಲ್ಲಿ ಬುಕ್ ವಾರ್: ನೀಚ ಮಟ್ಟದ ವಿರೋಧಕ್ಕೆ ಶಿಕ್ಷಣ ಸಚಿವ ಗರಂ, ಹೆಗ್ಡೆವಾರ್ ಪಠ್ಯ ಸೇರ್ಪಡೆಗೆ ಸಿಎಫ್​ಐ ವಿರೋಧ
ಬಿ.ಸಿ.ನಾಗೇಶ್

ಪಠ್ಯ ಪುಸ್ತಕದಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ನಾವು ಪುಸ್ತಕದಲ್ಲಿ ಕುವೆಂಪು ಅವರ ಬಗ್ಗೆ ಹೆಚ್ಚಿನ ವಿಷಯ ಸೇರಿಸಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

TV9kannada Web Team

| Edited By: Rakesh Nayak

May 23, 2022 | 3:44 PM

ಬೆಂಗಳೂರು: ಪಠ್ಯಪುಸ್ತಕದಲ್ಲಿ ನಾಡ ಕವಿ, ಜ್ಞನಾಪೀಠ ಪುರಷ್ಕೃತ, ರಾಷ್ಟ್ರಕವಿ ಕುವೆಂಪು (Kuvempu) ಅವರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದ್ದು, ಇಂಥ ಆರೋಪಗಳಿಗೆ ಗರಂ ಆದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (B.C.Nagesh) ಸ್ಪಷ್ಟನೆ ನೀಡಿದ್ದಾರೆ.  ರಾಷ್ಟ್ರಕವಿ ಕುವೆಂಪುಗೆ ಅಪಮಾನ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಟಿವಿ9 ಜೊತೆ ಮಾತನಾಡುತ್ತಾ ಹೇಳಿದರು. ಕುವೆಂಪು ಬಗ್ಗೆ ನಾವು ಎಷ್ಟು ಪಠ್ಯ ಸೇರಿಸಿದ್ದೀವಿ ಅಂತಾ ನೋಡಲಿ. ನಾವು ಕುವೆಂಪು ಬಗ್ಗೆ ಹೆಚ್ಚು ಪಠ್ಯ ಸೇರಿಸಿದ್ದೇವೆ. ರಾಷ್ಟ್ರಕವಿ ಕುವೆಂಪುಗೆ ಶಿಕ್ಷಣ ಇಲಾಖೆ ಅಪಮಾನ ಮಾಡಿಲ್ಲ. ಸಾಹಿತಿ ಬರಗೂರು ಪರಿಷ್ಕರಣೆಯಲ್ಲಿ ಇರುವುದನ್ನೆ ನೀಡಲಾಗಿದೆ. 4ನೇ ತರಗತಿ ಪರಿಸರ ಅಧ್ಯಯನ ಪಠ್ಯವನ್ನ ನಾವು ಪರಿಷ್ಕರಿಸಿಲ್ಲ.  ಈ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಹೆಗ್ಡೆವಾರ್ ಪಠ್ಯ ಸೇರ್ಪಡೆಗೆ ಸಿಎಫ್ಐ ವಿರೋಧ

ಪಠ್ಯಪುಸ್ತಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಸಂಸ್ಥಾಪಕ ಹೆಗ್ಡೆವಾರ್ ಭಾಷಣ ಸೇರ್ಪಡಿಸಿದ ವಿಚಾರಕ್ಕೆ ಪರ ವಿರೋಧ ವ್ಯಕ್ತವಾಗುತ್ತಿದೆ. ಇದಕ್ಕೆ ಮುಸ್ಲಿಂ ಸಂಘಟನೆಗಳೂ ತೀರ್ವ ವಿರೋಧ ವ್ಯಕ್ತಪಡಿಸುತ್ತಿದ್ದು, ಇಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತು.

ಇದನ್ನೂ ಓದಿ: ದ್ವಿತೀಯ ಪಿಯುಸಿ ಪಠ್ಯ ಪುಸ್ತಕ ಪರಿಷ್ಕರಣೆಗೆ ಚಾಲನೆ ನೀಡಿದ ಶಿಕ್ಷಣ ಇಲಾಖೆ

ಬೆಂಗಳೂರಿನ ಪ್ರೆಸ್​ ಕ್ಲಬ್​ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಅತಾವುಲ್ಲಾ,  ಹೆಗ್ಡೆವಾರ್ ಭಾಷಣವನ್ನು ಶೀಘ್ರ ಹಿಂತೆಗೆಯುವಂತೆ ಒತ್ತಾಯಿಸಿದರು. ಪಠ್ಯ ಪುಸ್ತಕದಲ್ಲಿ ಕೇಶವ್ ಹೆಗ್ಡೇವಾರ್ ಪಠ್ಯ ಸೇರ್ಪಡೆ ಮಾಡಿ ಹಲವಾರು ಪ್ರಗತಿಪರ ಹೋರಾಟಗಾರರು, ಲೇಖಕರ ಪಠ್ಯವನ್ನ ತೆಗೆದು ಹಾಕಿದ್ದಾರೆ. ಸಾಮರಸ್ಯ ನಾಡಿನಲ್ಲಿ ಪಠ್ಯಕ್ರಮದಲ್ಲಿ ಕೇಸರಿಕರಣ ಮಾಡಲಾಗುತ್ತಿದೆ. ಇದರ ಹಿಂದೆ ರಾಜ್ಯ ಸರ್ಕಾರದ ಕೈವಾಡ ಇದ್ದು, ಸರ್ಕಾರದ ಕುಮ್ಮಕ್ಕಿನಿಂದಲೇ ಪಠ್ಯ ಕ್ರಮದಲ್ಲಿ ಬದಲಾವಣೆಯಾಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: ಭಗತ್​, ಹೆಡ್ಗೆವಾರ್, ನಾರಾಯಣ ಗುರು ಬಗ್ಗೆ ವಿವಾದ ಮಾಡುತ್ತಿರುವವರು ಪಠ್ಯ ಪುಸ್ತಕಗಳನ್ನು ಓದಿದವರಲ್ಲ: ರೋಹಿತ್ ಚಕ್ರತೀರ್ಥ

ರೋಹಿತ್ ಚಕ್ರವರ್ತಿ ಶಿಕ್ಷಣ ತಜ್ಞರಲ್ಲ

ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲು ರೋಹಿತ್ ಚಕ್ರವರ್ತಿ ಶಿಕ್ಷಣ ತಜ್ಞರಲ್ಲ. ರಾಜ್ಯದಲ್ಲಿ ವಿವಿಧ ಚಿಂತಕರು, ಸಾಹಿತಿಗಳು ಇದ್ದಾರೆ. ಅವರ ಸಮ್ಮುಖದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಬೇಕಿತ್ತು. ಆದರೆ, ಇವರು ರಾಜಕೀಯ ಪ್ರೇರಿತವಾಗಿ ಕೇಸರಿಕರಣ ಮಾಡಲು ಮುಂದಾಗಿದ್ದಾರೆ. ಕೂಡಲೇ ಸರ್ಕಾರ ಈ ಪಠ್ಯ ಕ್ರಮ ಬದಲಾವಣೆಯನ್ನು ಕೈಬಿಡಬೇಕು. ಇಲ್ಲವಾದಲ್ಲಿ ನಾವು ರಾಜ್ಯಾದ್ಯಂತ ಹೋರಾಟ ಮಾಡಲು ಮುಂದಾಗುತ್ತೇವೆ. ಬೆಂಗಳೂರಿನಲ್ಲಿ ಬೀದಿಗಿಳಿದು ದೊಡ್ಡ ಮಟ್ಟದ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Umran Malik: ಸಾಟಿಯಿಲ್ಲದ ವೇಗಿಗೆ 14 ಪ್ರಶಸ್ತಿ: ಐಪಿಎಲ್​ನಲ್ಲಿ ಹೊಸ ದಾಖಲೆ

ಇದನ್ನೂ ಓದಿ: ಅಳಿವಿನಂಚಿನಲ್ಲಿರುವ ‘ಶಿರುಯಿ ಲಿಲಿ’ ಹೂವಿನ ಸಂತತಿ: ಘಮಘಮಿಸುವ ಈ ಹೂವು ಎಲ್ಲಿ ಕಂಡುಬರುತ್ತದೆ ಗೊತ್ತಾ? 

ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ

Follow us on

Most Read Stories

Click on your DTH Provider to Add TV9 Kannada