ಬೆಂಗಳೂರು: ಭಗತ್, ಹೆಡ್ಗೆವಾರ್, ನಾರಾಯಣಗುರುಗಳ ಬಗ್ಗೆ ವಿವಾದ ಮಾಡುತ್ತಿರುವವರು ಪಠ್ಯ ಪುಸ್ತಕಗಳನ್ನು ಓದಿದವರಲ್ಲ. ಎಡ ಸಿದ್ದಾಂತಿಗಳು ಅವರು ಕಟ್ಟಿರುವ ಸೌಧವನ್ನು ಸ್ಪಲ್ಪ ಅಲಗಾಡಿಸಿದರು ತಡೆದುಕೊಳ್ಳೊಕೆ ಆಗಲ್ಲ. ಈ ಕಾರಣಕ್ಕೋಸ್ಕರ ಅವರು ವಿವಾದಗಳನ್ನು ಮಾಡುತ್ತಿದ್ದಾರೆ ಎಂದು ಟಿವಿ 9ಗೆ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿಕೆ ನೀಡಿದ್ದಾರೆ. ಅಲ್ಲೊಂದು, ಇಲ್ಲೊಂದು ಪಿಡಿಎಫ್ ಓಡುತ್ತಿದೆ ಅದು ಯಾವುದು ಅಧಿಕೃತವಲ್ಲ. ಕೆಲವು ಪುಟಗಳನ್ನು ಸೇರಿಸಬಹುದು, ಅಥವಾ ತೆಗೆಯಬಹುದು ಹಾಗಾಗಿ ಅಧಿಕೃತವಾಗಿ ಯಾವುದು ಪಿಡಿಎಫ್ ಬಂದಿಲ್ಲ. ಪಠ್ಯಪುಸ್ತಕ ಮಕ್ಕಳ ಕೈಗೆ ಹೋಗುವವರೆಗೂ ಯಾವ ವದಂತಿಗೆ ಕಿವಿಕೊಡಬಾರದು. ಭಗತ್, ನಾರಾಯಣಗುರು ಪಾಠ ಬಿಟ್ಟಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ್ದು, ನಾರಾಯಣ ಗುರು ಪಾಠ ಕೈ ಬಿಡುವ ಪ್ರಶ್ನೆಯಿಲ್ಲ. ಇದು 7ನೇ ತರಗತಿ ಹಾಗೂ 10ನೇ ತರಗತಿಯಲ್ಲಿ ಕೂಡಾ ಇದೆ ಎಂದು ಹೇಳಿದರು.
7ನೇ ತರಗತಿಯಲ್ಲಿ ಸಮಾಜ ಸುಧಾರಕರ ಬಗ್ಗೆ ಹೇಳುತ್ತೇವೆ. ಅದರಲ್ಲಿ ಅನೇಕ ವ್ಯಕ್ತಿಗಳು ಇದ್ದಾರೆ. ಅದರಲ್ಲೂ ಕೂಡ ಮುಸ್ಲಿ ನಾಯಕರು ಇದ್ದಾರೆ. ಬೇರೆ ಬೇರೆ ಜಾತಿಯ ಸಮಾಜ ಸುಧಾಕರು ಇದ್ದಾರೆ. ಅವರೆಲ್ಲರ ಜೊತೆ ನಾರಾಯಣಗುರುಗಳ ಬಗ್ಗೆ ಒಂದು ಪುಟದ ವಿವರಣೆ ಇದೆ. 10ನೇ ತರಗಿಯಲ್ಲಿಯೂ ನಾರಾಯಣ ಗುರುಗಳ ಬಗ್ಗೆ ವಿಸ್ತಾರವಾಗಿ ಕೊಟ್ಟಿದ್ದೇವೆ. ಪೇರಿಯಾರ ಬಗ್ಗೆಯೂ ಹಾಕಿದ್ದೇವೆ, ಅವರು ಕೂಡಾ ಸಮಾಜಿಕ ಕ್ರಾಂತಿ ಮಾಡಿದ್ದಾರೆ. ಆದರೆ ಹೆಗ್ಡೆವಾರ್ ಹೆಸರನ್ನು ಇಟ್ಟುಕೊಂಡು ವಿವಾದ ಮಾಡುತ್ತಿದ್ದಾರೆ. ಇದು ಪಕ್ಷ, ಸಮುದಾಯ ಟಾರ್ಗೆಟ್ ಮಾಡಿ ಈ ರೀತಿ ಮಾಡುತ್ತಿದ್ದಾರೆ ಎಂದರು. ಹೆಗ್ಡೆವಾರ ವಿಚಾರ ಪಠ್ಯಪುಸ್ತಕದಲ್ಲಿ ಯಾಕೆ ಎಂದು ಕಾಂಗ್ರೆಸ್ ಹೇಳಿಕೆ ವಿಚಾರ ಹಿನ್ನೆಲೆ ಸತ್ಯಾಗ್ರಹದ ಬಗ್ಗೆ ಹೇಳುವಾಗ ಗಾಂದಿಜಿ ಬಗ್ಗೆ ಹೇಳುತ್ತೇವೆ. ಹಾಗೇಯೆ ವ್ಯಕ್ತಿತ್ವ ನಿರ್ಮಾಣದ ಬಗ್ಗೆ ಹೇಳುವಾಗ ಹೆಗ್ಡೆವಾರ್ ಬಗ್ಗೆ ಹೇಳುತ್ತೇವೆ. ಹಾಗೇಯೆ ವ್ಯಕ್ತಿತ್ವ ನಿರ್ಮಾಣದಲ್ಲಿ ಜೋವನದಲ್ಲಿ ತೊಡಗಿಸಿದ್ರು. ಬದುಕ್ಕಿದ್ದಾಗಲೇ ಆರ್ಎಸ್ಎಸ್ ಸಂಘಟನೆ ಇಡಿ ದೇಶದಲ್ಲಿಯೇ ಸ್ವಯಂ ಸಂಘಟನೆ ಆಗಿತ್ತು. ಸಾವಿರಾರು ಕಾರ್ಯಕರ್ತರು ದುಡಿಯುತ್ತಿದ್ದರು. ಪ್ರತಿನಿತ್ಯ ಸಾವಿರಾರು ಕಾರ್ಯಕರ್ತರ ಜೊತೆ ಮಾತನಾಡುತ್ತಿದ್ರು. ಒಬ್ಬ ವ್ಯಕ್ತಿ ಜೀವನದಲ್ಲಿ ಹೇಗೆ ಬೆಳೆಯಬೇಕು, ಉದ್ದೇಶ ಹೇಗೆ ಇಟ್ಟುಕೊಳ್ಳಬೇಕು, ಯಾವ ರೀತಿ ತನ್ನ ಜೀವನ ರೂಪಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಭವಿಷ್ಯ ಅವರಷ್ಟು ಅನುಭವ ಆ ಕಾಲದಲ್ಲಿ ಯಾರಿಗೂ ಸಿಕ್ಕಿರಕ್ಕಲಿಲ್ಲ. ಅಂತಹ ಒಬ್ಬ ವ್ಯಕ್ತಿ ವ್ಯಕ್ತಿತ್ವ ನಿರ್ಮಾಣದ ಬಗ್ಗೆ ಮಾತನಾಡುವಾಗ ನಿಮ್ಮ ಜೀವನದಲ್ಲಿ ವ್ಯಕ್ತಿಯನ್ನು ಇಟ್ಟುಕೊಳ್ಳಬೇಕಾ, ಅಥವಾ ಮೌಲ್ಯವನ್ನು ಇಟ್ಟುಕೊಳ್ಳಬೇಕಾ ಎಂದು ಹೇಳುವಾಗ ಆ ಮಾತು ಖಂಡಿತ ಮುಖ್ಯ ಆಗುತ್ತೆ ಎಂದು ಹೇಳಿದರು.
ಇದನ್ನೂ ಓದಿ: ಗಂಗೂಬಾಯಿ ಕಾಠಿಯಾವಾಡಿ: ಆಲಿಯಾ ಭಟ್ಳಂತೆ ಕಾಣಿಸಿಕೊಂಡ ಬೆಕ್ಕು ಫುಲ್ ವೈರಲ್: ನೆಟ್ಟಿಗರು ಫಿದಾ
ಹಾಗಾಗಿ ಹೆಗ್ಡೆವಾರ್ ವ್ಯಕ್ತಿತ್ವ ನಿರ್ಮಾಣದ ಬಗ್ಗೆ ಆದರ್ಶ ಪುರುಷ, ಮೌಲ್ಯಗಳ ಮಾತನಾಡೋದು ಮುಖ್ಯ ಆಗುತ್ತೆ ಅಂತ ಪಾಠದಲ್ಲಿ ಹಾಕಿದ್ದೇವೆ. ಅದೊಂದು ಹೊಸ ಬಗೆಯ ಚಿಂತನೆ ಆಗಿದೆ. ವ್ಯಕ್ತಿ ಪೂಜೆ ಮಾಡಬೇಡಿ, ಒಂದಷ್ಟೂ ಮೌಲ್ಯ ಇಟ್ಟುಕೊಳ್ಳಿ. ಸತ್ಯ, ಧರ್ಮ, ಪ್ರಾಮಾಣಿಕತೆ, ಬಗ್ಗೆ ಹೇಳುವಾಗ ಯಾಕೆ ಇವರಿಗೆ ಅಪತ್ಯವಾಗಬೇಕು. ಗಾಂಧಿಜಿ ಹೇಳುವಂತ ಮಾತುಗಳು ಅದೆ. ಸತ್ಯ, ಅಹಿಂಸೆ, ಪಾಲನೆ ಮಾಡು ಅಂದ್ರು. ನಾವು ಆರ್ ಎಸ್ ಎಸ್ ಅಜೆಂಡಾ ಹೇಳುತ್ತಿಲ್ಲ. ಕಾರ್ಲ್ ಮಾರ್ಕ್ಸ್ ಕೂಡಾ ಅದನ್ನೆ ಹೇಳಿದ್ದಾರೆ. ವ್ಯಕ್ತಿಗಳನ್ನು ಪೂಜಿಸಬೇಡಿ ಅಂತ ಅವರನ್ನು ಆರಾಧನೆ ಮಾಡಬೇಡಿ ಮೌಲ್ಯಗಳನ್ನು ಇಟ್ಟುಕೊಳ್ಳಿ ಅಂದಿದ್ದಾರೆ. ಇವರಿಗೆ ಸಿದ್ದಾಂತ ಬೇಕಾಗಿಲ್ಲ, ಮೌಲ್ಯಗಳು ಬೇಕಾಗಿಲ್ಲ. ಹೆಡ್ಗೆವಾರ್ ಹೇಳುತ್ತಿದ್ದಾರೆ ಎಂದು ವಿರೋಧಿಸುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದೆ. ರಾಜಕೀಯವಾಗಿ ಬೇರೆ ವಿಷಯ ಸಿಗುತ್ತಿಲ್ಲ. ಹಿಂದೂಗಳು ಹಾಗೂ ಹಿಂದೂಗಳು ಅಲ್ಲದವರು ಎರಡು ಗುಂಪು ಮಾಡಿ, ಯಾವದೋ ಒಂದು ಗುಂಪಿನ ವೋಟ್ ಬ್ಯಾಂಕ್ ಪರಿವರ್ತನೆಗಾಗಿ ರಾಜಕೀಯ ಮಾಡುತ್ತಿದ್ದಾರೆ. ಏನು ವಿಷಯ ಸಿಗದಿದ್ದಾಗ ಈ ಪಠ್ಯಪುಸ್ತಕದ ಬಗ್ಗೆ ಮಾತನಾಡುತ್ತಿದ್ದಾರೆ. ಭಾವನಾತ್ಮಕ ವಿವಾದಕ್ಕೆ ಪ್ರಯತ್ನಸುತ್ತಿದ್ದಾರೆ. ಹಿಂದಿನ ಎಲ್ಲ ಗೊಂದಲವನ್ನು ಪರಿಹರಿಸಿ ಪಠ್ಯಪುಸ್ತಕ ತಂದಿದ್ದೇವೆ. ಅನೇಕ ವಿಚಾರ, ಸುಳ್ಳು, ಸಿದ್ದಾತಂಗಳನ್ನು ತೆಗೆದುಹಾಕಿ ವಯೋಮಾನಕ್ಕೆ ತಕ್ಕಂತೆ ಪಠ್ಯಪುಸ್ತಕ ನೀಡಿದ್ದೇವೆ ಎಂದು ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿದ್ದಾರೆ.
ನಮ್ಮ ದೇಶ, ಮಾತೃಭೂಮಿ ಅಂತ ಶಬ್ದ ಬಂದಾಗ ದೇಶ ಅಂತ ಮಾಡುತ್ತಾರೆ. ಭಾರತ ಒಂದು ಸಾರ್ವಭೌಮ ದೇಶ ಅಂತಹ ಭಾಗಗಳು ಬಂದಾಗ ಅಂತವುಗಳನ್ನು ತೆಗೆದು ರಾಜ್ಯಗಳ ಒಕ್ಕೂಟ ಅಂತ ಮಾಡುತ್ತಾರೆ. ಇವರ ಉದ್ದೇಶ ಇದೊಂದು ದೇಶ ಅಂತ ಹೇಳಬಾರದು ಅದೊಂದು ರಾಜ್ಯಗಳ ಒಕ್ಕೂಟ ಸೇರಿಸಿ ದೇಶ ಅಂತ ಕರೆಯುತ್ತಾರೆ ಅಂತ ಹೇಳುತ್ತಾರೆ. ಒಂದು ಸಮುದಾಯದ ಟಾರ್ಗೆಟ್ ಮಾಡಿ, ಬ್ರಾಹ್ಮಣ, ಲಿಂಗಾಯತ ಸಮುದಾಯದವರು ಬೇರೆಯವರನ್ನ ತುಳಿದ್ರು ಎಂಬ ಅಭಿಪ್ರಾಯ ಬರುವಂತೆ ಸಾಹಿತ್ಯ ಬರೆಯುತ್ತಾರೆ. ಒಂದಷ್ಟೂ ದೊಡ್ಡ ವ್ಯಕ್ತಿಗಳು ವ್ಯಾಸಮಹರ್ಷಿ, ವಾಲ್ಮೀಕಿ ಇವರು ದೇಶದ ಆತ್ಮಗೌರವ ಹೆಚ್ಚಿಸಿದ್ದಾರೆ. ಇವರ ಹೆಸರು ಹೇಳುವಾಗ ಬಹು ವಚನ ತೆಗೆದು ಹಾಕಿ ಏಕ ವಚನ ಬಳಿಸಿದ್ದಾರೆ. ದೇಶದ ಬಗ್ಗೆ ಗೌರವ ತರುವ ವಿಚಾರಗಳನ್ನು ಕೀಳುಮಟ್ಟಕ್ಕೆ ತಂದು ನಿಲ್ಲಿಸುವ ಕೆಲಸ ಮಾಡಿದ್ದಾರೆ.
ಭಾರತದ ಸಿಂದೂ ಸಂಸ್ಕೃತಿಗೂ ವೈದಿಕ ಸಂಸ್ಕೃತಿಗೂ ಸಂಬಂಧವಿಲ್ಲ ಎಂಬ ವಾದವನ್ನು ತಂದ್ರು. ಬರಗೂರು ರಾಮಚಂದ್ರಪ್ಪ ಬೌದ್ದಿಕವಾಗಿ ದಿವಾಳಿ ಅಗಿದ್ದಾರೆ. ಅವರ ಬಳಗವೂ ಸಹ ಬೌದ್ದಿಕ ದಿವಾಳಿಯಾಗಿದೆ. ಅ ಹಿಂದ ರಾಮಚಂದ್ರಪ್ಪ ೨೦೧೫ ರಲ್ಲಿ ಕುವೆಂಪು, ಹೆಚ್ ಎಸ್ ವೆಂಕಟೇಶ್ ಮೂರ್ತಿ, ಜೆ ಪಿ ರಾಜರತ್ನಂ, ಚನ್ನವೀರ ಕಣವಿ ಪಠ್ಯ ಕೈಬಿಟ್ಟಿದ್ರು. ಆಗ ಏಕೆ ಇವರ್ಯಾರು ಮಾತನಾಡಿಲ್ಲ. ರಾಮಚಂದ್ರಪ್ಪ ಇವರನ್ನೆಲ್ಲಾ ಚೆನ್ನಾಗಿ ನೋಡಿಕೊಂಡಿದ್ದಾರೆ ಅದಕ್ಕೆ ಮಾತನಾಡುತ್ತಿಲ್ಲ. ನಾನು ರಾಮಚಂದ್ರಪ್ಪರನ್ಬ ವೈಯಕ್ತಿಕವಾಗಿ ಟೀಕೆ ಮಾಡುತ್ತಿಲ್ಲ, ಅವರನ್ನ ವೈಚಾರಿಕವಾಗಿ ವಿರೋಧಿಸುತ್ತಿದ್ದೇನೆ ಎಂದು ಹೇಳಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.