AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೀಕೆಂಡ್​ ಶಾಪಿಂಗ್: ಬ್ರಿಗೇಡ್ ರಸ್ತೆ ಕಾಂಪ್ಲೆಕ್ಸ್ ನಿಂದ ಜಿಗಿದು ಯುವಕ-ಯುವತಿ ಆತ್ಮಹತ್ಯೆಗೆ ಯತ್ನ, ಚಿಕಿತ್ಸೆ ಫಲಿಸದೆ ನಿಮ್ಹಾನ್ಸ್​​ ನಲ್ಲಿ ಯುವತಿ ಸಾವು

ಶನಿವಾರ ವೀಕೆಂಡ್ ವೇಳೆ​ ಶಾಪಿಂಗ್ ಗೆ ಬಂದಿದ್ದ ಯುವಕ-ಯುವತಿ ಸಾರ್ವಜನಿಕರೆದುರೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬ್ರಿಗೇಡ್ ರಸ್ತೆಯ ಶಾಂಪಿಂಗ್ ಕಾಂಪ್ಲೆಕ್ಸ್ ನಿಂದ ಜಿಗಿದು ಆತ್ಮಹತ್ಯೆಗೆ ಮುಂದಾಗಿದ್ದಾರೆ.

ವೀಕೆಂಡ್​ ಶಾಪಿಂಗ್: ಬ್ರಿಗೇಡ್ ರಸ್ತೆ ಕಾಂಪ್ಲೆಕ್ಸ್ ನಿಂದ ಜಿಗಿದು ಯುವಕ-ಯುವತಿ ಆತ್ಮಹತ್ಯೆಗೆ ಯತ್ನ, ಚಿಕಿತ್ಸೆ ಫಲಿಸದೆ ನಿಮ್ಹಾನ್ಸ್​​ ನಲ್ಲಿ ಯುವತಿ ಸಾವು
ವೀಕೆಂಡ್​ ಶಾಪಿಂಗ್: ಬ್ರಿಗೇಡ್ ರಸ್ತೆಯಲ್ಲಿ ಕಾಂಪ್ಲೆಕ್ಸ್ ನಿಂದ ಜಿಗಿದು ಯುವಕ-ಯುವತಿ ಆತ್ಮಹತ್ಯೆ ಯತ್ನ
Follow us
TV9 Web
| Updated By: ಸಾಧು ಶ್ರೀನಾಥ್​

Updated on:May 21, 2022 | 4:06 PM

ಬೆಂಗಳೂರು: ಶನಿವಾರ ವೀಕೆಂಡ್ ವೇಳೆ​ ಶಾಪಿಂಗ್ ಗೆ ಬಂದಿದ್ದ ಯುವಕ-ಯುವತಿ ಸಾರ್ವಜನಿಕರೆದುರೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬ್ರಿಗೇಡ್ ರಸ್ತೆಯ ಶಾಂಪಿಂಗ್ ಕಾಂಪ್ಲೆಕ್ಸ್ ನಿಂದ ಜಿಗಿದು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಯುವತಿಯ ತಲೆಗೆ ಗಂಭೀರವಾದ ಗಾಯಗಳಾಗಿದ್ದು, ಆಕೆಯನ್ನು ಸ್ಥಳೀಯ ಕಬ್ಬನ್ ಪಾರ್ಕ್ ಪೊಲೀಸರು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಿಕಿತ್ಸೆ ಫಲಿಸದೆ ನಿಮ್ಹಾನ್ಸ್​​ ನಲ್ಲಿ ಯುವತಿ ಸಾವು:

ಬ್ರಿಗೇಡ್‌ ರಸ್ತೆಯ ಶಾಪಿಂಗ್‌ ಕಾಂಪ್ಲೆಕ್ಸ್‌ ಮೇಲಿಂದ ಯುವಕ-ಯುವತಿ ಕೆಳಗೆ ಬಿದ್ದಿದ್ದ ಪ್ರಕರಣದಲ್ಲಿ, ತಾಜಾ ಮಾಹಿತಿ ಪ್ರಕಾರ ಚಿಕಿತ್ಸೆ ಫಲಿಸದೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಯುವತಿ ಅಸುನೀಗಿದ್ದಾರೆ. ಇಬ್ಬರಿಗೂ ಗಂಭೀರ ಗಾಯಗಳಾದ ಹಿನ್ನೆಲೆಯಲ್ಲಿ ನಿಮ್ಹಾನ್ಸ್‌ಗೆ ದಾಖಲಿಸಲಾಗಿತ್ತು. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಗಾಯಾಳು ಯುವತಿ ಕೊನೆಯುಸಿರೆಳೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಯುವಕನಿಗೆ ಚಿಕಿತ್ಸೆ ಮುಂದುವರಿದಿದೆ.

ಸೆಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳು:

ಬೆಂಗಳೂರಿನಲ್ಲಿ ಶಾಂಪಿಗ್ ಗೆ ಬಂದಿದ್ದ ಯುವಕ ಯುವತಿ ಕಾಲು ಜಾರಿ ಬಿದ್ದ‌‌ ಪ್ರಕರಣದಲ್ಲಿ ನಿಮ್ಹಾನ್ಸ್‌ ನಲ್ಲಿ ಯುವತಿ ಲಿಯಾ (18) ಅಸುನೀಗಿದ್ದಾರೆ. ಯುವತಿ ಬೆಂಗಳೂರಿನ ಕಾಕ್ಸ್ ಟೌನ್ ನ ನಿವಾಸಿ. ಯುವಕ‌‌ ಕ್ರಿಸ್ ಪೀಟರ್ (18) ಎಚ್‌ಎಎಲ್ ನಿವಾಸಿ. ಶಾಪಿಂಗ್ ‌ಗೆ ವೇಳೆ ಕಾಲು ಜಾರಿ ಯುವತಿ ಮೊದಲು ಬಿದ್ದಿದ್ದಾಳೆ. ಯುವತಿಯನ್ನ ಹಿಡಿದುಕೊಳ್ಳಲು ಹೋಗಿ ಯುವಕ ಕೂಡ ಬಿದ್ದಿದ್ದಾನೆ. ಯುವತಿಯ ಮೇಲೆ ಯುವಕ ಬಿದ್ದಿದ್ದರಿಂದ ಬದುಕಿದ್ದಾನೆ. ಯುವಕನ ಕಾಲು ಮುರಿದಿದ್ದು ಚಿಕಿತ್ಸೆ ಮುಂದುವರೆಸಲಾಗಿದೆ. ಯುವತಿಗೆ ಗಂಭೀರ ಗಾಯಗಳಾಗಿರೋದ್ರಿಂದ ಮೃತ ಪಟ್ಟಿದ್ದಾಳೆ. ಇಬ್ಬರೂ ಸೆಂಟ್ ಜೋಸೆಫ್ ಕಾಲೇಜ್ ನಲ್ಲಿ ಇಬ್ಬರೂ ದ್ವಿತೀಯ ವರ್ಷದ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳು.

ಕೇಂದ್ರ ವಿಭಾಗದ ಪ್ರಭಾರ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಸ್ಪಷ್ಟನೆ:

ಕಾಂಪ್ಲೆಕ್ಸ್‌ ಮೇಲಿಂದ ಯುವಕ-ಯುವತಿ ಕೆಳಗೆ ಬಿದ್ದಿದ್ದ ಪ್ರಕರಣದಲ್ಲಿ ಸ್ನೇಹಿತರ ಜೊತೆ ಶಾಪಿಂಗ್​ಗೆ ಬಂದಿದ್ದಾಗ ಅವಘಡ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯಂತೆ ಸ್ಟೇರ್ ಕೇಸ್‌ನಿಂದ ಆಯತಪ್ಪಿ ಬಿದ್ದಿದ್ದಾರೆ. ಯುವಕ ಕ್ರಿಸ್ ಬೆಂಗಳೂರಿನವನು, ಯವತಿ ಲೀಯಾ ಆಂಧ್ರದವಳು. ರಕ್ತಸ್ರಾವದಿಂದ ಚಿಕಿತ್ಸೆ ಫಲಿಸದೆ ಲೀಯಾ ಆಸ್ಪತ್ರೆಯಲ್ಲಿ ಸಾವು. ಘಟನೆಗೆ ನಿಖರ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸ್ತಿದ್ದೇವೆ. ಯುವಕ ಕ್ರಿಸ್ ಅಪಾಯದಿಂದ ಪಾರಾಗಿದ್ದಾನೆ ಆದರೆ ಶಾಕ್​ನಲ್ಲಿದ್ದಾನೆ ಎಂದು ಕೇಂದ್ರ ವಿಭಾಗ ಪ್ರಭಾರ ಡಿಸಿಪಿ ಡಾ. ಎಸ್.ಡಿ. ಶರಣಪ್ಪ ಹೇಳಿದ್ದಾರೆ.

ಚಿಕ್ಕೋಡಿ: ಕುಡಿದ ಅಮಲಿನಲ್ಲಿ ಬಾವಿಗೆ ಬಿದ್ದು ಇಹಲೋಕ ತ್ಯಜಿಸಿದ ಯುವಕ

ಚಿಕ್ಕೋಡಿ: ಕುಡಿದ ಅಮಲಿನಲ್ಲಿ ಬಾವಿಗೆ ಬಿದ್ದು ಯುವಕನೊಬ್ಬ ಇಹಲೋಕ ತ್ಯಜಿಸಿದ್ದಾರೆ. ಸಾಗರ ಹೆರವಾಡೆ (23) ಮೃತಪಟ್ಟವ. ಈತ ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದ ನಿವಾಸಿ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರು ಗ್ರಾಮದ ಹೊರವಲಯದ ಬಾವಿಯಲ್ಲಿ ಬಿದ್ದು ಸಾವಿಗೀಡಾಗಿದ್ದಾನೆ. ಕಳೆದ ಎರಡು ದಿನಗಳ ಹಿಂದೆ ಈತ ಕೃಷ್ಣಾ ಕಿತ್ತೂರ ಗ್ರಾಮದಲ್ಲಿ ಜರುಗುತ್ತಿದ್ದ ಲಕ್ಷ್ಮೀ ಜಾತ್ರೆಗೆ ಆಗಮಿಸಿದ್ದ. ಕುಡಿದ ಅಮಲಿನಲ್ಲಿ ಈತ ಬಾವಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಈತನ ಜೇಬಿನಲ್ಲಿ ತಂಬಾಕು, ಮಾವಾ ಸಿಕ್ಕಿದೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಪೋ ಅಧಿಕಾರಿಗಳ ನಿರ್ಲಕ್ಷ್ಯ: ಬಸ್ ರಿಪೇರಿ ಮಾಡುವ ವೇಳೆ ಕೆಎಸ್​ಆರ್​​ಟಿಸಿ ಮೆಕಾನಿಕ್ ದಾರುಣ ಸಾವು ಬಳ್ಳಾರಿ: ಇಲ್ಲಿನ ಕುರುಗೋಡು KSTRC ಡಿಪೋದಲ್ಲಿ ದುರ್ಘಟನೆಯೊಂದು ಸಂಭವಿಸಿದ್ದು ಮೆಕಾನಿಕ್ ದಾರುಣವಾಗಿ ಮೃತಪಟ್ಟಿದ್ದಾರೆ. ಇದಕ್ಕೆ ಡಿಪೋ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ಮೆಕಾನಿಕ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಡಿಪೋದಲ್ಲಿ ಬಸ್ ರಿಪೇರಿ ಮಾಡುವ ವೇಳೆ ಸಂಭವಿಸಿದ ಅವಘಡದಲ್ಲಿ KSTRC ಮೆಕಾನಿಕ್ ಟಿ ಮಂಜುನಾಥ ದರುಂತ ಅಂತ್ಯ ಕಂಡಿದ್ದಾರೆ.

ಬಸ್ ಕೆಳಗಡೆ ತುಂಡಾಗಿದ್ದ ಬುಷ್ ರಾಡ್ ಸರಿಪಡಿಸೋ ವೇಳೆ ಅವಘಡ ಸಂಭವಿಸಿದೆ. ರಾಡ್ ತುಂಡಾಗಿ ಕಾರ್ಮಿಕನ ಗಂಟಲಿಗೆ ಸಿಲುಕಿ ಸ್ಥಳದಲ್ಲೇ ಆತ ಸಾವನ್ನಪ್ಪಿದ್ದಾನೆ. ಮೃತ ಮಂಜುನಾಥ ಬಾದನಹಟ್ಟಿ ನಿವಾಸಿ. ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ರ್ಯಾಂಪ್ ವ್ಯವಸ್ಥೆ ಕಲ್ಪಿಸದೇ ಮೆಕಾನಿಕ್ ಗೆ ರಿಪೇರಿ ಮಾಡಲು ಹೇಳಿದ್ದರಿಂದ ಈ ದುರಂತ ಸಂಭವಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರು: ಡಿವೈಡರ್ ಗೆ ಡಿಕ್ಕಿ ಹೊಡೆದು ಸಿಮೆಂಟ್ ಲಾರಿ ಪಲ್ಟಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸಿಮೆಂಟ್ ಲಾರಿ ಪಲ್ಟಿಯಾಗಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಲ್ಲೇನಹಳ್ಳಿ ಬಳಿ ನಡೆದಿದೆ. ಅದೃಷ್ಟವಶಾತ್ ಪ್ರಾಣಪಾಯದಿಂದ ಚಾಲಕ ಪಾರಾಗಿದ್ದಾನೆ. ಸಿಮೆಂಟ್ ಲಾರಿ ಮಧುಗಿರಿಯಿಂದ ಕೊಡಿಗೇನಹಳ್ಳಿ ಕಡೆಗೆ ತೆರಳುತ್ತಿತ್ತು. ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Also Read:  Common Superstitions: ನದಿಯಲ್ಲಿ ನಾಣ್ಯ ಹಾಕುವುದು, ಬಾಗಿಲಿಗೆ ನಿಂಬೆಕಾಯಿ- ಮೆಣಸಿನಕಾಯಿ ಕಟ್ಟುವುದು ಏಕೆ ಗೊತ್ತಾ!?

Also Read: Health Tips: ರಾತ್ರಿಯ ವೇಳೆ ಮರೆತು ಕೂಡ ಈ ಹಣ್ಣುಗಳನ್ನು ಸೇವಿಸಬೇಡಿ: ಅವು ಯಾವುವು? ಯಾಕೆ? ತಿಳಿಯೋಣ

Published On - 2:39 pm, Sat, 21 May 22

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್