Common Superstitions: ನದಿಯಲ್ಲಿ ನಾಣ್ಯ ಹಾಕುವುದು, ಬಾಗಿಲಿಗೆ ನಿಂಬೆಕಾಯಿ- ಮೆಣಸಿನಕಾಯಿ ಕಟ್ಟುವುದು ಏಕೆ ಗೊತ್ತಾ!?
ಜನರು ಎಂದಾದರೂ ನದಿಯ ಹತ್ತಿರ ಹೋದಾಗ ಅದರಲ್ಲಿ ನಾಣ್ಯ ಹಾಕುವುದನ್ನು ನೀವು ಗಮನಿಸಬಹುದು. ಆದರೆ ಇದಕ್ಕೆ ಕಾರಣವೇನೆಂದು ಜನರಿಗೆ ತಿಳಿದಿಲ್ಲ. ಹೀಗಿರುವಾಗ ನದಿಗೆ ನಾಣ್ಯ ಹಾಕಲು ಪೌರಾಣಿಕ ಕಾರಣದ ಬಗ್ಗೆ ಇಲ್ಲಿ ತಿಳಿಯೋಣ.
ಭಾರತ ಸಂಪ್ರದಾಯಗಳ ನಾಡು. ಇಲ್ಲಿ ನಾವು ಅನೇಕ ವಿಶೇಷ ವಿಚಾರ ವಿಷಯಗಳನ್ನು ಹೊಂದಿದ್ದೇವೆ. ಅವುಗಳ ಆಚರಣೆಗೆ ಇರುವ ಅರ್ಥ ಮತ್ತು ಕಾರಣಗಳು ನಮಗೆ ತಿಳಿದಿಲ್ಲ. ಜನರು ಎಂದಾದರೂ ನದಿಯ ಹತ್ತಿರ ಹೋದಾಗ ಅದರಲ್ಲಿ ನಾಣ್ಯ ಹಾಕುವುದನ್ನು ನೀವು ಗಮನಿಸಬಹುದು (Superstition). ಆದರೆ ಇದಕ್ಕೆ ಕಾರಣವೇನೆಂದು ಜನರಿಗೆ ತಿಳಿದಿಲ್ಲ. ಹೀಗಿರುವಾಗ ನದಿಗೆ ನಾಣ್ಯ ಹಾಕಲು (throwing coins) ಪೌರಾಣಿಕ ಕಾರಣದ ಬಗ್ಗೆ ಇಲ್ಲಿ ತಿಳಿಯೋಣ. ವಾಸ್ತವವಾಗಿ ಅನೇಕರು ಹೀಗೆ ಮಾಡುವುದರಿಂದ ಅದೃಷ್ಟ ಖುಲಾಯಿಸುತ್ತದೆ ಎಂದು ಭಾವಿಸಿರುತ್ತಾರೆ (Spiritual). ಹಾಗೆಯೇ ಬಾಗಿಲಿಗೆ ನಿಂಬೆಕಾಯಿ- ಮೆಣಸಿನಕಾಯಿ ಕಟ್ಟುವುದು ಏಕೆ (hanging lemon and chillies) ಎಂಬುದನ್ನೂ ತಿಳಿಯೋಣ.
ನದಿಯಲ್ಲಿ ನಾಣ್ಯಗಳನ್ನು ಹಾಕಲು ಇದೆ ವಿಶೇಷ ಕಾರಣ:
ಈ ಪದ್ಧತಿಯ ಹಿಂದೆ ಒಂದು ಗುಪ್ತ ಕಾರಣವಿದೆ. ವಾಸ್ತವವಾಗಿ, ನದಿಯಲ್ಲಿ ನಾಣ್ಯಗಳನ್ನು ಹಾಕುವ ಈ ಪದ್ಧತಿ ಪ್ರಾರಂಭವಾದ ಸಮಯದಲ್ಲಿ ತಾಮ್ರದ ನಾಣ್ಯಗಳನ್ನು ಬಳಸಲಾಗುತ್ತಿತ್ತು. ತಾಮ್ರವನ್ನು ನೀರಿನ ಶುದ್ಧೀಕರಣಕ್ಕಾಗಿ ಬಳಸಲಾಗುತ್ತದೆ. ಅದಕ್ಕಾಗಿಯೇ ಜನರು ನದಿ ಅಥವಾ ಯಾವುದೇ ಕೊಳದ ಸುತ್ತಲೂ ಹೋಗುವಾಗ, ಅವರು ಅದರಲ್ಲಿ ತಾಮ್ರದ ನಾಣ್ಯವನ್ನು ಹಾಕುತ್ತಿದ್ದರು.
ಜ್ಯೋತಿಷ್ಯದಲ್ಲಿ ಏನು ಹೇಳಲಾಗಿದೆ:
ಜನರು ಯಾವುದೇ ರೀತಿಯ ದೋಷವನ್ನು ತೊಡೆದುಹಾಕಲು ಬಯಸಿದರೆ, ಅದಕ್ಕಾಗಿ ಅವರು ನೀರಿನಲ್ಲಿ ನಾಣ್ಯಗಳು ಮತ್ತು ಕೆಲವು ಪೂಜಾ ಸಾಮಗ್ರಿಗಳನ್ನು ಹರಿಸಬೇಕು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಇದರೊಂದಿಗೆ ಹರಿಯುವ ನೀರಿನಲ್ಲಿ ಬೆಳ್ಳಿಯ ನಾಣ್ಯವನ್ನು ಹಾಕಿದರೆ ದೋಷವು ಕೊನೆಗೊಳ್ಳುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.
ಬಾಗಿಲಿಗೆ ನಿಂಬೆಕಾಯಿ- ಮೆಣಸಿನಕಾಯಿ ಕಟ್ಟುವುದು ಏಕೆ
ಇನ್ನು, ಮನೆ ಹಾಗೂ ಅಂಗಡಿಗಳ ಮುಂದೆ ನಿಂಬೆ ಹಣ್ಣು, ಮೆಣಸಿನಕಾಯಿಗಳನ್ನು ಕಟ್ಟುವುದು ಸಾಮಾನ್ಯ. ಬಹುತೇಕರು ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿಗಳನ್ನು ದಾರಕ್ಕೆ ಪೋಣಿಸಿ ಕಟ್ಟಿರುತ್ತಾರೆ. ಆದರೆ ಅದಕ್ಕೆ ಕಾರಣವೇನು ಎನ್ನುವುದು ಎಲ್ಲರಿಗೂ ಗೊತ್ತಿರುವುದಿಲ್ಲ.
ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿ ಪೋಣಿಸಿ ಕಟ್ಟುವುದು ಒಂದು ಸಂಪ್ರದಾಯವಾಗಿ ಬೆಳೆದಿದೆ. ವಾಹನಗಳಿಗೆ ಪೂಜೆ ಮಾಡಿ ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿ ಕಟ್ಟುವುದನ್ನು ಸಹ ನೋಡಿದ್ದೇವೆ. ಪುರಾಣಗಳ ಪ್ರಕಾರ ಇದು ದರಿದ್ರ ಲಕ್ಷ್ಮಿಯನ್ನು ಮನೆ ಹಾಗೂ ಅಂಗಡಿಗಳಿಂದ ದೂರವಿಡಲು ಮಾಡುವ ಉಪಾಯ.
ನಮ್ಮಲ್ಲಿರುವ ದೇವತೆಗಳಲ್ಲಿ ಅದೃಷ್ಟ ಲಕ್ಷ್ಮಿ ಇರುವಂತೆ ದರಿದ್ರ ಲಕ್ಷ್ಮಿಯೂ ಇದ್ದಾಳೆ. ದರಿದ್ರ ಲಕ್ಷ್ಮಿಯನ್ನು ಅದೃಷ್ಟ ಲಕ್ಷ್ಮಿಯ ಸಹೋದರಿ ಎನ್ನುತ್ತಾರೆ. ಹೀಗೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಇದನ್ನು, ಎಲ್ಲರೂ ನಂಬಿದ್ದಾರೆ ಕೂಡ. ದರಿದ್ರ ಲಕ್ಷ್ಮಿಗೆ ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿ ಇಷ್ಟದ ಆಹಾರವಂತೆ.
ದರಿದ್ರ ಲಕ್ಷ್ಮಿ ಮನೆ, ಅಂಗಡಿಗಳಿಗೆ ಪ್ರವೇಶಿಸಲು ಬಂದಾಗ ಬಾಗಿಲಿನಲ್ಲೇ ತನ್ನಿಷ್ಟದ ಆಹಾರವನ್ನು ಕಂಡು, ಅದನ್ನು ಸೇವಿಸುತ್ತಾಳಂತೆ. ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿಯನ್ನು ಸೇವಿಸಿದಾಗ ಆಕೆಗೆ ಕೋಪ ಕಡಿಮೆಯಾಗಿ ಆ ಸ್ಥಳವನ್ನು ಬಿಟ್ಟು ಹೋಗುತ್ತಾಳೆ. ಇದರಿಂದ ಬಡತನ, ಕಷ್ಟಗಳು ಸುಳಿಯುವುದಿಲ್ಲ ಎಂಬುದು ಬಲವಾದ ನಂಬಿಕೆ.
ವೈಜ್ಞಾನಿಕ ಕಾರಣವೇನು ಗೊತ್ತಾ?
ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿಯನ್ನು ಹತ್ತಿಯ ದಾರಕ್ಕೆ ಕಟ್ಟಿ ನೇತು ಹಾಕಿದಾಗ, ಆ ದಾರವು ನಿಂಬೆ ಹಣ್ಣು ಹಾಗೂ ಮೆಣಸಿನ ಕಾಯಿಯಲ್ಲಿರುವ ರಸವನ್ನು ಹೀರಿಕೊಳ್ಳುತ್ತದೆ. ಇವೆರೆಡರ ವಾಸನೆಗೆ ಕ್ರಿಮಿ, ಕೀಟಗಳು ಸಾಯುತ್ತವೆ. ಹೀಗಾಗಿ ಮನೆ, ಅಂಗಡಿಗಳಲ್ಲಿ ಸುರಕ್ಷಿತವಾಗಿರಲು ಸಹಕಾರಿಯಾಗುತ್ತದೆ ಎಂದು ನಂಬಲಾಗಿದೆ.
ವಾಹನಗಳಿಗೆ ನಿಂಬೆ ಹಣ್ಣು ಹಾಗೂ ಮೆಣಸಿನಕಾಯಿಯನ್ನು ಕಟ್ಟಲು ಸಹ ಕಾರಣವಿದೆ. ಇವು ದೃಷ್ಟಿಯಾಗದಂತೆ ತಡೆಯುತ್ತವೆ ಎನ್ನುವುದು ಜನರ ನಂಬಿಕೆಯಾಗಿದೆ.
To read the article in Telugu click the link here