AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ, ಡಿಸಿ ಮಂಜುನಾಥ್​ ವಿರುದ್ದವೂ ದೂರುದಾರ ಅರೋಪ

ಜಿಲ್ಲಾಧಿಕಾರಿ ಜೆ. ಮಂಜುನಾಥ್ ಕಚೇರಿಯಲ್ಲಿ ಕಳೆದ ಅರ್ಧ ಗಂಟೆಯಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) 6 ಮಂದಿ ಅಧಿಕಾರಿಗಳ ತಂಡದಿಂದ ಡಿಸಿ ಕಚೇರಿ ಮೇಲೆ ದಾಳಿ ನಡೆದಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ, ಡಿಸಿ ಮಂಜುನಾಥ್​ ವಿರುದ್ದವೂ ದೂರುದಾರ ಅರೋಪ
ಅವ್ಯಾಹತವಾಗಿ ಮುಂದುವರಿದಿದೆ ಭ್ರಷ್ಟಾಚಾರ -ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ
TV9 Web
| Edited By: ಸಾಧು ಶ್ರೀನಾಥ್​|

Updated on:May 21, 2022 | 6:00 PM

Share

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹಬ್ಬಿದೆ ಎಂಬ ಪ್ರತತಿಪಕ್ಷಗಳ ಕೂಗಿನ ಮಧ್ಯೆ ರಾಜಧಾನಿ ಬೆಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ಇಂದು ಶನಿವಾರ ದಾಳಿ ನಡೆಸಿದ್ದಾರೆ. ಜಿಲ್ಲಾಧಿಕಾರಿ ಜೆ. ಮಂಜುನಾಥ್ ಕಚೇರಿಯಲ್ಲಿ ಕಳೆದ ಅರ್ಧ ಗಂಟೆಯಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) 6 ಮಂದಿ ಅಧಿಕಾರಿಗಳ ತಂಡದಿಂದ ಡಿಸಿ ಕಚೇರಿ ಮೇಲೆ ದಾಳಿ ನಡೆದಿದೆ. ಡಿಸಿ ಕಚೇರಿಗೆ ಹಲವು ಹಿರಿಯ ಅಧಿಕಾರಿಗಳನ್ನ ಕರೆಸಿಕೊಂಡ ಎಸಿಬಿ ಅಧಿಕಾರಿಗಳು ಡೋರ್ ಕ್ಲೋಸ್ ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಉಪ ತಹಶೀಲ್ದಾರ್​ ಮಹೇಶ್ ಬಳಿ ಹಣ ಇದ್ದಾಗ..

DC ಕಛೇರಿ ಯಲ್ಲಿ ಲಂಚ ಪಡೆಯುವಾಗ ಮಹೇಶ್ ಎಂಬಾತ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಇದೀಗ ಚಂದ್ರ ಎಂಬಾತನನನ್ನು ಎಸಿಬಿ ಅಧಿಕಾರಿಗ ವಿಚಾರಣೆ ನಡೆಸುತ್ತಿದ್ದಾರೆ. ಉಪ ತಹಶೀಲ್ದಾರ್​ ಮಹೇಶ್ ಬಳಿ ಹಣ ಇದ್ದಾಗ ಎಸಿಬಿ ಅಧಿಕಾರಿಗಳು ಟ್ರಾಪ್ ಮಾಡಿದ್ದಾರೆ. ಡಿಸಿ ಮಂಜುನಾಥ್ ರವರ ಜೊತೆಗೆ ಕೆಲಸ ಮಾಡ್ತಿದ್ದ ಮಹೇಶ್. 5 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಕ್ಲರ್ಕ್ ಚಂದ್ರು ಎಸಿಬಿ ಬಲೆಗೆ ಬಿದ್ದಿದ್ದಾನೆ. ಎಸಿಬಿ ಡಿವೈಎಸ್​ಪಿ ರವಿಶಂಕರ್ ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.

ಜಿಲ್ಲಾಧಿಕಾರಿ ಮಂಜುನಾಥ್​ ವಿರುದ್ದವೂ ದೂರುದಾರ ಅರೋಪ:

ಆಜಾಂ ಪಾಷ ಎಂಬಾತನಿಗೆ ಜಮೀನಿನ ವಿಷಯ ಎಸಿ ಕೋರ್ಟ್ ನಲ್ಲಿ ತೀರ್ಮಾನ ಅಗಿ ಡಿಸಿ ಕೋರ್ಟ್ ಗೆ ಹೋಗಿತ್ತು. ಈ ಫೈಲ್ ಅನ್ನು ಕ್ಲಿಯರ್ ಮಾಡಿಕೊಡಲು 15 ಲಕ್ಷ ರೂಪಾಯಿ ಕೇಳಿ ಕೊನೆಗೆ ಐದು ಲಕ್ಷ ರೂಪಾಯಿಗೆ ಒಪ್ಪಿ, ಲಂಚ ಒಡೆಯುತ್ತಿದ್ದಾಗ ದಾಳಿ ನಡೆದಿದೆ. ದೂರು ನೀಡಿದ ನಂತ್ರ ಕೇಸ್ ದಾಖಲು ಮಾಡಿ, ಎಸಿಬಿ ಅಧಿಕಾರಿಗಳು ಟ್ರಾಪ್ ಮಾಡಿದ್ದಾರೆ. ಜಿಲ್ಲಾಧಿಕಾರಿ ಮಂಜುನಾಥ್​ ವಿರುದ್ದವೂ ಎಸಿಬಿ ಅಧಿಕಾರಿಗಳ ಎದುರು ದೂರುದಾರ ಅರೋಪ ಮಾಡಿದ್ದಾರೆ. ಸದ್ಯ ವಿಚಾರಣೆ ನಡೆಸಿ ಡಿಸಿ ವಿರುದ್ದ ಸಾಕ್ಷ್ಯ ಸಿಕ್ಕರೆ ಅವರ ವಿರುದ್ದವೂ ತನಿಖೆ ನಡೆಯಲಿದೆ ಎಂದು ಎಸಿಬಿ ಮೂಲಗಳು ಹೇಳಿವೆ.

ಜಮೀನು ವ್ಯಾಜ್ಯ 1 ವರ್ಷದಿಂದ ವಿಚಾರಣೆ ನಡೆಯುತ್ತಿತ್ತು: ನನ್ನ ಜಮೀನು ವ್ಯಾಜ್ಯ 1 ವರ್ಷದಿಂದ ವಿಚಾರಣೆ ನಡೆಯುತ್ತಿತ್ತು. ವಿನಾಕಾರಣ ವಿಳಂಬ ಮಾಡಿ, ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪ್ರಕರಣದ ದೂರುದಾರ ಆಜಂ ಪಾಷಾ ಅಲವತ್ತುಕೊಂಡಿದ್ದಾರೆ. ಡಿಸಿ ಮಂಜುನಾಥ್‌ ಸೂಚನೆ ಮೇರೆಗೆ ಮಹೇಶ್ ಲಂಚ ಕೇಳಿದ್ದರು. ಸರ್ಕಾರದ ಸೂಚನೆ ಇದೆ, ಆದೇಶ ಮಾಡಲು ಆಗಲ್ಲವೆಂದಿದ್ದರು. ಒಟ್ಟು 15 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. 5 ಲಕ್ಷ ರೂ. ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ನನ್ನ ಜಮೀನು ಜಾಗಕ್ಕೆ ಬೇರೆಯವರು ಕೇಸ್ ಹಾಕಿದ್ದರು. ಡಿಸಿಯನ್ನ ಎರಡು ಬಾರಿ ಭೇಟಿ ಆಗಿದ್ದೆ. ಆಗ ಮಹೇಶ್ ಅವರ ಬಳಿ ಮಾತಾನಾಡುವಂತೆ ಡಿಸಿ ಹೇಳಿದ್ದರು. ಎಸಿ ಕೋರ್ಟ್ ನಲ್ಲಿ ಜಮೀನು ಕೇಸ್ ನನ್ನ ಪರ‌ ಆಗಿತ್ತು. ಈಗ ಮತ್ತೆ ಆದೇಶ ಮಾಡಲಾಗಿತ್ತು. ಹಣಕ್ಕಾಗಿ ‌ವಿನಾಕಾರಣ ವಿಳಂಬ ಮಾಡಿದ್ರು. ಹಾಗಾಗಿ ಎಸಿಬಿಯಲ್ಲಿ ಎಫ್ಐಆರ್ ದಾಖಲು ಮಾಡಿದ್ದೆ ಎಂದು ದೂರುದಾರ ಅಜಂಪಾಷಾ‌ ಹೇಳಿದ್ದಾರೆ.

ದೂರುದಾರ ಆಜಂ ಪಾಷಾ ಆಧಾರರಹಿತ ಆರೋಪ -ಜಿಲ್ಲಾಧಿಕಾರಿ ಸ್ಪಷ್ಟನೆ

ACB ರೇಡಲ್ಲಿ ಸಿಕ್ಕಿಬಿದ್ದ ಮಹೇಶ್‌ ಕೇಸ್‌ಗೆ ಜಿಲ್ಲಾಧಿಕಾರಿ ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ. ನನಗೂ, ಬೆಂಗಳೂರು ನಗರ ಡಿಸಿ ಕಚೇರಿ ಮ್ಯಾನೇಜರ್‌ ಮಹೇಶ್ ಲಂಚ ಕೇಸ್‌ಗೂ ಸಂಬಂಧವಿಲ್ಲ. ದೂರುದಾರ ಆಜಂ ಪಾಷಾ ಆಧಾರ ರಹಿತವಾದ ಆರೋಪ ಮಾಡಿದ್ದಾರೆ ಎಂದು ಬೆಂಗಳೂರು ನಗರ ಡಿಸಿ ಜೆ.ಮಂಜುನಾಥ್ ಟಿವಿ9ಗೆ ಸ್ಪಷ್ಟನೆ ನೀಡಿದ್ದಾರೆ.

Also Read: ವೀಕೆಂಡ್​ ಶಾಪಿಂಗ್: ಬ್ರಿಗೇಡ್ ರಸ್ತೆ ಕಾಂಪ್ಲೆಕ್ಸ್ ನಿಂದ ಜಿಗಿದು ಯುವಕ-ಯುವತಿ ಆತ್ಮಹತ್ಯೆಗೆ ಯತ್ನ, ಚಿಕಿತ್ಸೆ ಫಲಿಸದೆ ನಿಮ್ಹಾನ್ಸ್​​ ನಲ್ಲಿ ಯುವತಿ ಸಾವು

Also Read: ಡಿಪೋ ಅಧಿಕಾರಿಗಳ ನಿರ್ಲಕ್ಷ್ಯ: ಬಸ್ ರಿಪೇರಿ ಮಾಡುವ ವೇಳೆ ಕೆಎಸ್​ಆರ್​​ಟಿಸಿ ಮೆಕಾನಿಕ್ ದಾರುಣ ಸಾವು

Published On - 3:43 pm, Sat, 21 May 22

Follow Us
TV9 Web
TV9 Web

TV9 Kannada

Read More
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ