AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಎಂಎಫ್ ಪಶು ಆಹಾರ ಘಟಕದಲ್ಲಿ ಗೋಲ್ಮಾಲ್: ಕಳಪೆ ಆಹಾರದಿಂದ 1,600 ಹಸುಗಳ ಸಾವಿನ ಶಂಕೆ!

ರಾಜಾನುಕುಂಟೆಯ ಕೆಎಂಎಫ್ ಪಶು ಆಹಾರ ಘಟಕದಲ್ಲಿ ಕಳಪೆ ಕಚ್ಚಾ ವಸ್ತುಗಳನ್ನು ಬಳಸಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಕಳಪೆ 'ನಂದಿನಿ ಪಶು ಆಹಾರ' ಸೇವನೆಯಿಂದ ಕಳೆದ ಎರಡು ತಿಂಗಳಲ್ಲಿ 1,600 ಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿದ್ದು, ಜಾನುವಾರುಗಳ ಹಾಲಿನ ಇಳುವರಿ ಕುಸಿದಿದೆ. ಇದರಿಂದ ಬೆಂಗಳೂರು ಸುತ್ತಮುತ್ತಲಿನ ಹೈನುಗಾರರು ತೀವ್ರ ಆತಂಕಗೊಂಡಿದ್ದು, ಟನ್‌ಗಟ್ಟಲೆ ಆಹಾರವನ್ನು ಘಟಕಕ್ಕೆ ವಾಪಸ್ ಕಳುಹಿಸುತ್ತಿದ್ದಾರೆ.

ಕೆಎಂಎಫ್ ಪಶು ಆಹಾರ ಘಟಕದಲ್ಲಿ ಗೋಲ್ಮಾಲ್: ಕಳಪೆ ಆಹಾರದಿಂದ 1,600 ಹಸುಗಳ ಸಾವಿನ ಶಂಕೆ!
ಸಾಂದರ್ಭಿಕ ಚಿತ್ರImage Credit source: gettyimages.com
ಶಿವಪ್ರಸಾದ್​ ಬಿ.
| Edited By: |

Updated on:Aug 01, 2026 | 11:31 AM

Share

ಮುಖ್ಯಾಂಶಗಳು

  • ರಾಜಾನುಕುಂಟೆ ಕೆಎಂಎಫ್ ಘಟಕದಲ್ಲಿ ಕಳಪೆ ಪಶು ಆಹಾರ ತಯಾರಿಸಿ ಭಾರಿ ಗೋಲ್ಮಾಲ್.
  • ಕಳಪೆ ಆಹಾರ ಸೇವಿಸಿ ಎರಡು ತಿಂಗಳಲ್ಲಿ 1,600 ಹಸುಗಳ ಸಾವು.
  • ಬ್ಯಾಚ್‌ಗಟ್ಟಲೆ ಕಳಪೆ ಆಹಾರವನ್ನು ಕೆಎಂಎಫ್ ಘಟಕಕ್ಕೆ ವಾಪಸ್ ಕಳುಹಿಸಿದ ರೈತರು.

ಬೆಂಗಳೂರು, ಆಗಸ್ಟ್ 01: ಹಾಲು ನೀಡಿ ರೈತರ ಬದುಕಿಗೆ ಆಸರೆಯಾಗಿದ್ದ ಜಾನುವಾರುಗಳಿಗೆ ಕರ್ನಾಟಕ ಹಾಲು ಮಹಾಮಂಡಳ (KMF) ಕಳಪೆ ಪಶು ಆಹಾರ ನೀಡಿ ವಿಷವುಣಿಸುತ್ತಿದೆಯಾ ಎಂಬ ಗಂಭೀರ ಅನುಮಾನ ವ್ಯಕ್ತವಾಗಿದೆ. ರಾಜಾನುಕುಂಟೆಯ ಕೆಎಂಎಫ್ ಪಶು ಆಹಾರ ಘಟಕದಲ್ಲಿ ಕಳಪೆ ಗುಣಮಟ್ಟದ ಕಚ್ಚಾ ವಸ್ತುಗಳನ್ನು ಬಳಸಿ ಪಶು ಆಹಾರ ತಯಾರಿಸುತ್ತಿರುವುದು ಅಷ್ಟೇ ಅಲ್ಲದೆ, ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಗಂಭೀರ ಆರೋಪ ಕೇಳಿಬಂದಿದೆ. ಕಳಪೆ ಆಹಾರ ಸೇವಿಸಿ ಕಳೆದ ಎರಡು ತಿಂಗಳಿನಲ್ಲಿ ಬರೋಬ್ಬರಿ 1,600 ಹಸುಗಳು ಸಾವನ್ನಪ್ಪಿದ್ದು, ಸಾವಿರಾರು ಜಾನುವಾರುಗಳು ರೋಗರುಜಿನದಿಂದ ನರಳುತ್ತಿವೆ.

ರಾಜಾನುಕುಂಟೆ ಘಟಕದಲ್ಲಿ ಕೋಟ್ಯಂತರ ರೂ. ವಂಚನೆ, ಲ್ಯಾಬ್ ವರದಿ ಬಹಿರಂಗ!

ಪಶು ಆಹಾರ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ಖರೀದಿಯಲ್ಲಿ ಕೆಎಂಎಫ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾರಿ ಗೋಲ್ಮಾಲ್ ನಡೆಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಪಶು ಆಹಾರಕ್ಕೆ ಅಗತ್ಯವಿರುವ ಕಾಕಂಬಿ (Molasses) ಖರೀದಿ ವೇಳೆಯಲ್ಲಿ ಅತಿ ಕಡಿಮೆ ಗುಣಮಟ್ಟದ TRS (Total Reducing Sugars) ಇದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ಅದನ್ನು ಖರೀದಿಸಿದ್ದಾರೆ.

ನಿಯಮಗಳ ಪ್ರಕಾರ ಲ್ಯಾಬ್ ಪರೀಕ್ಷೆ ನಡೆಸಿ ಗುಣಮಟ್ಟ ದೃಢಪಟ್ಟ ಮೇಲಷ್ಟೇ ಪಶು ಆಹಾರ ತಯಾರಿಸಬೇಕು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಬರೋಬ್ಬರಿ 86,000 ಮೆಟ್ರಿಕ್ ಟನ್ ಕಳಪೆ ಪಶು ಆಹಾರ ಉತ್ಪಾದನೆಯಾಗಿದೆ. ಈ ಕಳಪೆ ಕಚ್ಚಾ ವಸ್ತುಗಳ ಸತ್ಯಾಸತ್ಯತೆಯ ಲ್ಯಾಬ್ ರಿಪೋರ್ಟ್ (Lab Report) ‘ಟಿವಿ9’ ಗೆ ಲಭ್ಯವಾಗಿದೆ.

ಹಾಲಿನ ಇಳುವರಿ ಕುಸಿತ, ಗರ್ಭ ಧರಿಸದೆ ನರಳುತ್ತಿರುವ ಹಸುಗಳು!

ಕಳಪೆ ಗುಣಮಟ್ಟದ ‘ನಂದಿನಿ ಪಶು ಆಹಾರ’ ಸೇವನೆಯಿಂದ ಜಾನುವಾರುಗಳ ಆರೋಗ್ಯ ಸಂಪೂರ್ಣ ಕ್ಷೀಣಿಸಿದೆ. ಕೆಟ್ಟ ವಾಸನೆ ಹಾಗೂ ಕಳಪೆ ಮಟ್ಟದ ಕಾರಣಕ್ಕಾಗಿ ಹಸುಗಳು ಪಶು ಆಹಾರ ತಿನ್ನಲು ನಿರಾಕರಿಸುತ್ತಿವೆ. ಆಹಾರ ಸೇವಿಸದ ಕಾರಣ ಹಸುಗಳು ಗರ್ಭ ಧರಿಸದೆ, ಬಡಕಲಾಗಿ ಅನಾರೋಗ್ಯದಿಂದ ನರಳುತ್ತಿದ್ದು, 1,600 ಜಾನುವಾರುಗಳು ಅಸಹಜವಾಗಿ ಮೃತಪಟ್ಟಿವೆ. ಜಾನುವಾರುಗಳು ಕಾಯಿಲೆಗೆ ಬಿದ್ದಿರುವುದರಿಂದ ಹಾಲಿನ ಇಳುವರಿ ತೀವ್ರವಾಗಿ ಕುಸಿದಿದ್ದು, ರೈತರು ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ.

ರೈತರ ಮೇಲೆ ನಂದಿನಿ ಪಶು ಆಹಾರ ಖರೀದಿಗೆ ಒತ್ತಡ!

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಆನೇಕಲ್, ನೆಲಮಂಗಲ, ರಾಮನಗರ ಮತ್ತು ಚನ್ನಪಟ್ಟಣ ಭಾಗದ ಹೈನುಗಾರರಲ್ಲಿ ತೀವ್ರ ಆತಂಕ ಆವರಿಸಿದೆ. ಪ್ರತಿಯೊಂದು ಡೈರಿ ಸೊಸೈಟಿಯಲ್ಲೂ ಸಣ್ಣ ಪ್ರಮಾಣದ ವ್ಯತ್ಯಾಸವಿದ್ದರೂ ಹಾಲನ್ನು ತಿರಸ್ಕರಿಸುವ ಅಧಿಕಾರಿಗಳು, ರೈತರಿಗೆ ಅನಿವಾರ್ಯವಾಗಿ ನಂದಿನಿ ಪಶು ಆಹಾರವನ್ನೇ ಖರೀದಿಸುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.

ಬಮೂಲ್ (BAMUL) ವ್ಯಾಪ್ತಿಯಲ್ಲಿ ಪ್ರತಿ ತಿಂಗಳು 14,500 ಮೆಟ್ರಿಕ್ ಟನ್ ಪಶು ಆಹಾರ ಮಾರಾಟವಾಗುತ್ತಿದ್ದು, ಆಹಾರ ಸೇವಿಸದೆ ಹಸುಗಳು ಸಾಯುತ್ತಿರುವುದರಿಂದ ಆಕ್ರೋಶಗೊಂಡ ರೈತರು ಟನ್‌ಗಟ್ಟಲೆ ಪಶು ಆಹಾರವನ್ನು ರಾಜಾನುಕುಂಟೆ ಘಟಕಕ್ಕೆ ವಾಪಸ್ ಕಳುಹಿಸುತ್ತಿದ್ದಾರೆ. ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿದ್ದ ರೈತ ಕುಟುಂಬಗಳು ಈಗ ಕಂಗಾಲಾಗಿದ್ದು, ಈ ಹಗರಣದ ವಿರುದ್ಧ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:30 am, Sat, 1 August 26

Follow Us
ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ; ಗುರುದತ್
ಎಲ್ಲರೂ ಸೇರಿದ್ರೆ ಸಿನಿಮಾ, ನಿರ್ದೇಶಕರಿಗೆ ಹಲವು ಆಯ್ಕೆ ಇರುತ್ತೆ; ಗುರುದತ್
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ರವಿ ಕರ್ಕಾಟಕ, ಚಂದ್ರ ಕುಂಭರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ