AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಯಾನ್ ಇಂಡಿಯಾ ರಿಲೀಸ್​​ಗೆ ಸಜ್ಜಾದ ‘ಪ್ರೇಮದ ಊರಲಿ’ ಸಿನಿಮಾ

‘ಪ್ರೇಮದ ಊರಲಿ’ ಸಿನಿಮಾ ‘ಪ್ರೇಮನೆ ಊರಿಲೊ’ ಹೆಸರಿನಲ್ಲಿ ನಿನ್ನೆಯಷ್ಟೆ (ಅಕ್ಟೋಬರ್ 2) ತೆಲುಗು ರಾಜ್ಯಗಳಲ್ಲಿ ರಿಲೀಸ್ ಆಗಿದ್ದು, ಅಲ್ಲೂ ಸಹ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಇದೀಗ ಕೆಲ ದೊಡ್ಡ ವಿತರಕರರು ಸಿನಿಮಾದ ಬೆಂಬಲಕ್ಕೆ ನಿಂತಿದ್ದು, ಸಿನಿಮಾ ಅನ್ನು ಪ್ಯಾನ್ ಇಂಡಿಯಾ ಲೆವೆಲ್​​​ನಲ್ಲಿ ರಿಲೀಸ್ ಮಾಡಲಾಗುತ್ತಿದೆ.

ಪ್ಯಾನ್ ಇಂಡಿಯಾ ರಿಲೀಸ್​​ಗೆ ಸಜ್ಜಾದ ‘ಪ್ರೇಮದ ಊರಲಿ’ ಸಿನಿಮಾ
Premada Oorali
ಮಂಜುನಾಥ ಸಿ.
|

Updated on: Oct 03, 2026 | 4:30 PM

Share

ಮುಖ್ಯಾಂಶಗಳು

  • ಭರ್ಜರಿ ಪ್ರದರ್ಶನ ಕಾಣುತ್ತಿರುವ ’ಪ್ರೇಮದ ಊರಲಿ’ ಸಿನಿಮಾ
  • ’ಪ್ರೇಮದ ಊರಲಿ’ ಸಿನಿಮಾ ತೆಲುಗಿನಲ್ಲೂ ರಿಲೀಸ್ ಆಗಿದೆ.
  • ಈಗ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ ’ಪ್ರೇಮದ ಊರಲಿ’

‘ಪ್ರೇಮದ ಊರಲಿ’ ಕನ್ನಡ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಮ್ಯಾಜಿಕ್ ಸೃಷ್ಟಿಸಿದೆ. ಎರಡು ವಾರದ ಹಿಂದೆ ಕೆಲವೇ ಸೀಮಿತ ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಈ ಸಿನಿಮಾ ಈಗ ರಾಜ್ಯದಾದ್ಯಂತ 500 ಕ್ಕೂ ಹೆಚ್ಚು ಶೋಗಳನ್ನು ಪಡೆದುಕೊಂಡಿದ್ದು, ಬಹುತೇಕ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಅದ್ಯಾವ ಮಟ್ಟಿಗೆ ಕ್ರೇಜ್ ಹುಟ್ಟಿಸಿದೆಯೆಂದರೆ ಕನ್ನಡದ ಈ ಸಿನಿಮಾಕ್ಕೆ ಹೊರ ರಾಜ್ಯಗಳಲ್ಲಿಯೂ ಬೇಡಿಕೆ ಹೆಚ್ಚಿಸಿಕೊಂಡಿದೆ. ಈಗಾಗಲೇ ‘ಪ್ರೇಮದ ಊರಲಿ’ ಸಿನಿಮಾ ತೆಲುಗಿನಲ್ಲಿ ರಿಲೀಸ್ ಆಗಿದ್ದು, ಇದೀಗ ಪ್ಯಾನ್ ಇಂಡಿಯಾ ರಿಲೀಸ್​​ಗೆ ರೆಡಿ ಆಗಿದೆ.

‘ಪ್ರೇಮದ ಊರಲಿ’ ಸಿನಿಮಾ ‘ಪ್ರೇಮನೆ ಊರಿಲೊ’ ಹೆಸರಿನಲ್ಲಿ ನಿನ್ನೆಯಷ್ಟೆ (ಅಕ್ಟೋಬರ್ 2) ತೆಲುಗು ರಾಜ್ಯಗಳಲ್ಲಿ ರಿಲೀಸ್ ಆಗಿದ್ದು, ಅಲ್ಲೂ ಸಹ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಇದೀಗ ಕೆಲ ದೊಡ್ಡ ವಿತರಕರರು ಸಿನಿಮಾದ ಬೆಂಬಲಕ್ಕೆ ನಿಂತಿದ್ದು, ಸಿನಿಮಾ ಅನ್ನು ಪ್ಯಾನ್ ಇಂಡಿಯಾ ಲೆವೆಲ್​​​ನಲ್ಲಿ ರಿಲೀಸ್ ಮಾಡಲಾಗುತ್ತಿದೆ.

ಮೊದಲಿಗೆ ಪ್ರಶಾಂತ್ ಎಂಬುವರು ಸಿನಿಮಾದ ವಿತರಣೆ ಮಾಡಿದ್ದರು. ಬಳಿಕ ರಂಗಾಯಣ ರಘು ಅವರ ನೆರವಿನಿಂದ ಜಯಣ್ಣ ಕಂಬೈನ್ಸ್ ಅವರು ಸಿನಿಮಾದ ವಿತರಣೆಗೆ ಕೈಹಾಕಿದ್ದು, ಸಿನಿಮಾ ರಾಜ್ಯದ ಮೂಲೆ-ಮೂಲೆಗೂ ತಲುಪುವಂತೆ ಮಾಡಿದ್ದಾರೆ. ಕೆಆರ್​​ಜಿ ಸಹ ಇವರೊಟ್ಟಿಗೆ ಕೈ ಜೋಡಿಸಿದ್ದಾರೆ. ಇನ್ನು ಸಿನಿಮಾವನ್ನು ಈಗಾಗಲೇ ತೆಲುಗಿನಲ್ಲಿ ರಿಲೀಸ್ ಮಾಡಲಾಗಿದ್ದು, ಹಿಂದಿಯಲ್ಲಿಯೂ ಸಿನಿಮಾ ರಿಲೀಸ್ ಮಾಡಲು ಯೋಜನೆ ಚಾಲ್ತಿಯಲ್ಲಿದೆ.

ಇದನ್ನೂ ಓದಿ:ಸ್ಯಾಂಡಿ ಸ್ವಾರ್ಥಿ; ನೇರವಾಗಿ ಹೇಳಿದ ಕಿಚ್ಚ ಸುದೀಪ್

ಕನ್ನಡದ ‘ಕೆಜಿಎಫ್’, ತೆಲುಗಿನ ‘ಪುಷ್ಪ’ ಸೇರಿದಂತೆ ದಕ್ಷಿಣದ ಹಲವು ದೊಡ್ಡ ಸಿನಿಮಾಗಳನ್ನು ಉತ್ತರ ಭಾರತದಲ್ಲಿ ವಿತರಣೆ ಮಾಡಿರುವ ಅನಿಲ್ ತಡಾನಿ ಅವರ ನೆರವಿನಿಂದ ಉತ್ತರ ಭಾರತದಲ್ಲಿ ‘ಪ್ರೇಮದ ಊರಲಿ’ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಲಘು-ಬಗೆಯಿಂದ ಸಿನಿಮಾ ಅನ್ನು ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡಿಸುವ ಕಾರ್ಯ ಚಾಲ್ತಿಯಲ್ಲಿದೆ. ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಸಹ ಸಿನಿಮಾ ಅನ್ನು ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾ ಸಹ ಇದೇ ರೀತಿ ಮೊದಲಿಗೆ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ರಿಲೀಸ್ ಆಗಿತ್ತು. ಆ ಬಳಿಕ ಸಿನಿಮಾದ ಭರ್ಜರಿ ಪ್ರದರ್ಶನ ಕಂಡು ಬೇರೆ ಭಾಷೆಗಳವರೇ ಒತ್ತಾಯಿಸಿ ಸಿನಿಮಾವನ್ನು ಡಬ್ ಮಾಡಿಸಿ ತಮ್ಮ ರಾಜ್ಯಗಳಲ್ಲಿ ರಿಲೀಸ್ ಮಾಡಿದರು. ಆ ಬಳಿಕ ನಡೆದಿದ್ದು ಇತಿಹಾಸ. ಇದೀಗ ‘ಪ್ರೇಮದ ಊರಲಿ‘ ಸಿನಿಮಾ ಸಹ ಇದೇ ರೀತಿ ಮ್ಯಾಜಿಕ್ ಮಾಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
3705.30 ಕೋಟಿ ರೂ. ಬರ ಪರಿಹಾರಕ್ಕೆ ಸಿಎಂ ಡಿಕೆ ಶಿವಕುಮಾರ್ ಮನವಿ
3705.30 ಕೋಟಿ ರೂ. ಬರ ಪರಿಹಾರಕ್ಕೆ ಸಿಎಂ ಡಿಕೆ ಶಿವಕುಮಾರ್ ಮನವಿ
ಹಸಿ ಕಸದ ಜೊತೆ ಪ್ಲಾಸ್ಟಿಕ್ ಹಾಕಬೇಡಿ ಎಂದಿದ್ದಕ್ಕೆ ನಿವೃತ್ತ ಅಧಿಕಾರಿಯ ದರ್ಪ
ಹಸಿ ಕಸದ ಜೊತೆ ಪ್ಲಾಸ್ಟಿಕ್ ಹಾಕಬೇಡಿ ಎಂದಿದ್ದಕ್ಕೆ ನಿವೃತ್ತ ಅಧಿಕಾರಿಯ ದರ್ಪ
ಬಸ್ ತಂಗುದಾಣ ವಿರೂಪಗೊಳಿಸಿ ಬೇಕರಿ ನಿರ್ಮಾಣ
ಬಸ್ ತಂಗುದಾಣ ವಿರೂಪಗೊಳಿಸಿ ಬೇಕರಿ ನಿರ್ಮಾಣ
ಕರ್ನಾಟಕ ಬರಗಾಲ: ತಕ್ಷಣದ ಪರಿಹಾರಕ್ಕೆ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ
ಕರ್ನಾಟಕ ಬರಗಾಲ: ತಕ್ಷಣದ ಪರಿಹಾರಕ್ಕೆ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ
ಪೊಲೀಸರ ಮೇಲೆ ಒತ್ತಡ ಹಾಕಿರೋ ಸಿಎಂಗೆ ನಾಚಿಕೆಯಾಗಬೇಕು: ಬಿಎಸ್​ವೈ ವಾಗ್ದಾಳಿ
ಪೊಲೀಸರ ಮೇಲೆ ಒತ್ತಡ ಹಾಕಿರೋ ಸಿಎಂಗೆ ನಾಚಿಕೆಯಾಗಬೇಕು: ಬಿಎಸ್​ವೈ ವಾಗ್ದಾಳಿ
‘ಪ್ರೇಮದ ಊರಲಿ’ ಸಿನಿಮಾ ಕಲೆಕ್ಷನ್ ಬಗ್ಗೆ ನಿರ್ದೇಶಕ ಮನೋಜ್ ಮಾತು
‘ಪ್ರೇಮದ ಊರಲಿ’ ಸಿನಿಮಾ ಕಲೆಕ್ಷನ್ ಬಗ್ಗೆ ನಿರ್ದೇಶಕ ಮನೋಜ್ ಮಾತು
ಕುವೈತ್ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ
ಕುವೈತ್ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
17 ವರ್ಷ ಸೇವೆ ಸಲ್ಲಿಸಿ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ!
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ
ಕೆಪಿಎಸ್‌ಸಿ ಅಕ್ರಮ: 70 ಆರ್‌ಟಿಓ ಇನ್ಸ್‌ಪೆಕ್ಟರ್‌ ಹೆಚ್ಚುವರಿ ಆಯ್ಕೆಗೆ ತಡೆ