15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಪರೀಕ್ಷೆ ಆರಂಭ
ಯಾವುದೇ ಅಕ್ರಮ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದ್ದು, ಮೊಬೈಕ್ ಪೋನ್, ಬ್ಲೂಟೂತ್, ಡಿಜಿಟಲ್ ಸಾಮಾಗ್ರಿ, ಕೈಗಡಿಯಾರಕ್ಕೆ ಪರೀಕ್ಷಾ ಕೇಂದ್ರದಲ್ಲಿ ಅನುಮತಿ ಇಲ್ಲ.
ಬೆಂಗಳೂರು: ಪದವೀಧರ ಪ್ರಾಥಮಿಕ ಶಾಲಾ 15,000 ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ಆರಂಭವಾಗಿದೆ. ಇಂದು ಮತ್ತು ನಾಳೆ 2 ದಿನ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿವೆ. ರಾಜ್ಯದ 435 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಸಿಇಟಿ ಪರೀಕ್ಷೆ ನಡೆಯಲಿದೆ. ಯಾವುದೇ ಅಕ್ರಮ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿಕ್ಯಾಮರಾ ಕಣ್ಗಾವಲು ವಹಿಸಲಾಗಿದೆ. 1,00683 ಅಭ್ಯರ್ಥಿಗಳು ಇಂದು ಪರೀಕ್ಷೆ ಬರೆಯುತ್ತಿದ್ದಾರೆ. ಹೆಚ್ಚುವರಿ ಭದ್ರತೆಯಲ್ಲಿ ಪರೀಕ್ಷೆ ನಡೆಯುತ್ತಿದೆ. ಪ್ರತಿಯೊಬ್ಬರ ಕಿವಿ ಒಲೆ, ವಾಚ್ ಎಲ್ಲವನ್ನು ಚೆಕ್ ಮಾಡಿ ಪರೀಕ್ಷಾ ಕೇಂದ್ರಕ್ಕೆ ಹೋಗಲು ಅನುಮತಿ ನೀಡಲಾಗಿದೆ. ಯಾವುದೇ ಅಕ್ರಮ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದ್ದು, ಮೊಬೈಕ್ ಪೋನ್, ಬ್ಲೂಟೂತ್, ಡಿಜಿಟಲ್ ಸಾಮಾಗ್ರಿ, ಕೈಗಡಿಯಾರಕ್ಕೆ ಪರೀಕ್ಷಾ ಕೇಂದ್ರದಲ್ಲಿ ಅನುಮತಿ ಇಲ್ಲ.
ದಿನಾಂಕ: 21-03-2022 ರಂದು ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಸಲಾಗಿತ್ತು. ದಿನಾಂಕ: 22-04-2022 ರಂದು ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಶಿಕ್ಷಕರ ನೇಮಕಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ದಿನಾಂಕ: ಮೇ 21, 22, 2022 ಘೋಷಿಸಲಾಗಿತ್ತು. ಆ ಪ್ರಕಾರವಾಗಿ ಇಂದು ಮತ್ತು ನಾಳೆ ಪರೀಕ್ಷೆಗಳು ನಡೆಯಲಿವೆ.
ಇದನ್ನೂ ಓದಿ: Viral Video: ಛಾಯಾಗ್ರಾಹಕರ ಮುಂದೆ ಕಿರುಚುತ್ತಾ ಅರೆ ಬೆತ್ತಲೆಯಾದ ಮಹಿಳೆ: ಮುಂದೆ ಆಗಿದ್ದೇನು?
ಪರೀಕ್ಷೆ ಮಾದರಿ ಒಟ್ಟು 400 ಅಂಕಗಳಿಗೆ ಪರೀಕ್ಷೆ ಇರಲಿದೆ. ಸಾಮಾನ್ಯ ಜ್ಞಾನ ಪತ್ರಿಕೆ : 150 ಅಂಕಗಳು ನಿರ್ದಿಷ್ಟ ವಿಷಯ ಪತ್ರಿಕೆ : 150 ಅಂಕಗಳು ಭಾಷಾ ಜ್ಞಾನ ಪತ್ರಿಕೆ : 100 ಅಂಕಗಳು
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.