ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿ ಭಾಷಾ ಪ್ರೇಮ ಮೆರೆದ ಚಂದ್ರ ಆರ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಎಂದು ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಭಾಗ್ಯವತಿ ಅಮರೇಶ್
ಕೆನಡ ದೇಶದ ಸಂಸದ ಚಂದ್ರಕಾಂತ್ ಆರ್ಯರವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕರಾದ ಭಾಗ್ಯವತಿ ಅಮರೇಶ್ ಮನವಿ ಪತ್ರ ಸಲ್ಲಿಸಿದ್ದಾರೆ.
ಬೆಂಗಳೂರು: ಕರ್ನಾಟಕದ ಹೆಮ್ಮೆಯ ಪುತ್ರ ಕೆನಡಾದ ಸಂಸದ ಚಂದ್ರ ಆರ್ಯ(Chandra Arya) ಅವರು ಕೆನಡಾದ ಪಾರ್ಲಿಮೆಂಟ್ ಭವನದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸುವಾಗ ಕನ್ನಡದಲ್ಲಿ ಮಾತನಾಡಿ ಭಾಷಾ ಪ್ರೇಮ ಮೆರೆದಿದ್ದಾರೆ. ಅವರು ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ವಿಡಿಯೋ ರಾಜ್ಯದಲ್ಲಿ ಫುಲ್ ವೈರಲ್ ಆಗಿತ್ತು. ಕನ್ನಡಿಗರೆಲ್ಲರೂ ಅವರ ಭಾಷಾ ಪ್ರೇಮವನ್ನು ಕೊಂಡಾಡಿದರು. ಸದ್ಯ ಈಗ ಕೆನಡ ದೇಶದ ಸಂಸದ ಚಂದ್ರ ಆರ್ಯರವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ(Kannada Rajyotsava Award) ನೀಡಿ ಗೌರವಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ(Basavaraj Bommai) ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕರಾದ ಭಾಗ್ಯವತಿ ಅಮರೇಶ್(Bhagyawati Amaresh) ಮನವಿ ಪತ್ರ ಸಲ್ಲಿಸಿದ್ದಾರೆ.
I spoke in my mother tongue (first language) Kannada in Canadian parliament. This beautiful language has long history and is spoken by about 50 million people. This is the first time Kannada is spoken in any parliament in the world outside of India. pic.twitter.com/AUanNlkETT
— Chandra Arya (@AryaCanada) May 19, 2022
ಕರ್ನಾಟಕದ ಹೆಮ್ಮೆಯ ಪುತ್ರ ಕೆನಡ ದೇಶದ ಸಂಸದ ಚಂದ್ರ ಆರ್ಯ ರವರು ಕೆನಡ ಪಾರ್ಲಿಮೆಂಟ್ ಭವನದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸುವಾಗ ಕನ್ನಡ ಭಾಷೆಯನ್ನು ಬಳಸುವ ಮುಖಾಂತರ ಇಡೀ ಕರ್ನಾಟಕ ಮತ್ತು ಭಾರತದ ಗಮನ ಸೆಳೆದ್ದಿದ್ದಾರೆ. ಶ್ರೀಮಾನ್ ಚಂದ್ರ ಆರ್ಯ ರವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಅವರ ಮುಖದಲ್ಲಿದ್ದ ಆನಂದ ವರ್ಣಿಸಲು ಅಸಾಧ್ಯ. ಹೃದಯ ಪೂರ್ವಕವಾಗಿ ತನ್ನ ಮಾತೃ ಭಾಷೆಯನ್ನು ತಾನು ಹುಟ್ಟಿದ ರಾಜ್ಯ, ಜಿಲ್ಲೆ ಮತ್ತು ಊರನ್ನು ಹೇಳುತ್ತಾ ಜೊತೆಗೆ ರಾಷ್ಟ್ರಕವಿ ಕುವೆಂಪು ರವರನ್ನು ಮತ್ತು ವರನಟ ಡಾ. ರಾಜಕುಮಾರ್ ರವರನ್ನು ನೆನೆಸಿಕೊಂಡು ಪ್ರಮಾಣ ವಚನ ಸ್ವೀಕರಿಸಿ ಕನ್ನಡ ಭಾಷೆ ಮತ್ತು ಕರ್ನಾಟಕದ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ. ಇದನ್ನೂ ಓದಿ: ರವಿಶಂಕರ್ ಮಗ ಹಾಗೂ ನನ್ನ ಮಗ ಇಬ್ಬರೂ ಚಿತ್ರರಂಗಕ್ಕೆ ಬರ್ತಿದಾರೆ ಎಂದ ಸಾಯಿಕುಮಾರ್
ಇವರನ್ನು ನವಂಬರ್ ಒಂದನೇ ತಾರೀಖಿನಂದು ರಾಜ್ಯಕ್ಕೆ ವಿಶೇಷ ಆಹ್ವಾನಿತರಾಗಿ ಕರೆಸಿಕೊಂಡು ಕರ್ನಾಟಕ ರಾಜ್ಯ ಸರ್ಕಾರದಿಂದ ವಿತರಿಸುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಟ್ಟು ಗೌರವಿಸಬೇಕೆಂದು ನನ್ನ ಪ್ರಾರ್ಥನೆ. ನನ್ನ ಮನವಿಯನ್ನು ತಾವು ಜಾರಿಗೆ ತರುತ್ತೀರೆಂದು ನಂಬಿರುತ್ತೇನೆ ಎಂದು ಭಾಗ್ಯವತಿ ಅಮರೇಶ್ ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಯಾರು ಈ ಚಂದ್ರ ಆರ್ಯ? ಚಂದ್ರ ಆರ್ಯ 1963ರಲ್ಲಿ ತುಮಕೂರು ಜಿಲ್ಲೆ, ಶಿರಾ ತಾಲೂಕಿನ ದ್ವಾರಾಳು ಗ್ರಾಮದಲ್ಲಿ ಜನಿಸಿದವರು. ಇವರು ಪ್ರಸ್ತುತ ಕೆನಡಾದಲ್ಲಿ ನೆಪೆನ್ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. 2015ರ ಫೆಡರಲ್ ಚುನಾವಣೆ ಮತ್ತು 2019ರಲ್ಲಿ ನಡೆದ ಚುನಾವಣೆಗಳಲ್ಲಿ ಪುನಾರಾಯ್ಕೆಯಾಗಿದ್ದಾರೆ. ಪ್ರಸ್ತುತ ಕೆನಡಾದ ಅಂತಾರಾಷ್ಟ್ರಿಯ ವ್ಯಾಪಾರ ಸಮಿತಿ ಸದಸ್ಯರು ಆಗಿದ್ದಾರೆ. 58 ವರ್ಷದ ಚಂದ್ರ ಆರ್ಯ ಅವರು ಸದ್ಯ ಕೆನಡಾದ ಓಂಟಾರಿಯೋದಲ್ಲಿ ನೆಲೆಸಿದ್ದಾರೆ.
Published On - 10:42 pm, Fri, 20 May 22