Umran Malik: ಸಾಟಿಯಿಲ್ಲದ ವೇಗಿಗೆ 14 ಪ್ರಶಸ್ತಿ: ಐಪಿಎಲ್​ನಲ್ಲಿ ಹೊಸ ದಾಖಲೆ

IPL 2022: ಉಮ್ರಾನ್ ಮಲಿಕ್ ಹೊರತುಪಡಿಸಿ ಯಾವುದೇ ಬೌಲರ್​ ಈ ಬಾರಿಯ ಐಪಿಎಲ್​ನಲ್ಲಿ 155 ಕಿ.ಮೀ ವೇಗದಲ್ಲಿ ಚೆಂಡೆಸೆದಿಲ್ಲ. ಹೀಗಾಗಿ ಐಪಿಎಲ್ 2022ರ ಫಾಸ್ಟೆಸ್ಟ್ ಡೆಲಿವರಿ ಪ್ರಶಸ್ತಿ ಕೂಡ ಜಮ್ಮು ಕಾಶ್ಮೀರದ ಯುವ ವೇಗಿಗೆ ಲಭಿಸುವುದರಲ್ಲಿ ಅನುಮಾನವೇ ಇಲ್ಲ.

Umran Malik: ಸಾಟಿಯಿಲ್ಲದ ವೇಗಿಗೆ 14 ಪ್ರಶಸ್ತಿ: ಐಪಿಎಲ್​ನಲ್ಲಿ ಹೊಸ ದಾಖಲೆ
Umran Malik
Follow us
TV9 Web
| Updated By: ಝಾಹಿರ್ ಯೂಸುಫ್

Updated on: May 23, 2022 | 2:48 PM

IPL 2022: ಐಪಿಎಲ್ ಸೀಸನ್​ 15 ನಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡವು ನೀರಸ ಪ್ರದರ್ಶನ ನೀಡಿದೆ. ಲೀಗ್ ಹಂತದ 14 ಪಂದ್ಯಗಳಲ್ಲಿ ಎಸ್​ಆರ್​ಹೆಚ್​ ತಂಡವು ಗೆದ್ದಿರುವುದು ಕೇವಲ 6 ಪಂದ್ಯ ಮಾತ್ರ. ಅಂದರೆ 8 ಪಂದ್ಯಗಳಲ್ಲಿ ಸೋಲು ಕಂಡಿದೆ. ಇದಾಗ್ಯೂ ತಂಡದಲ್ಲಿದ್ದ ಯುವ ವೇಗಿ ಉಮ್ರಾನ್ ಮಲಿಕ್ ಮಾತ್ರ ಈ ಬಾರಿ ಹೊಸ ಸಂಚಲ ಸೃಷ್ಟಿಸಿದ್ದರು. ಏಕೆಂದರೆ 22 ವರ್ಷದ ಯುವ ವೇಗಿ 14 ಪಂದ್ಯಗಳಲ್ಲಿ ಉರುಳಿಸಿದ್ದು ಬರೋಬ್ಬರಿ 24 ವಿಕೆಟ್​ಗಳು. ಈ ಮೂಲಕ ಉಮ್ರಾನ್ ಮಲಿಕ್ ಈ ಬಾರಿ ಎಸ್​ಆರ್​ಹೆಚ್ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.

ವಿಶೇಷ ಎಂದರೆ ಈ 14 ಪಂದ್ಯಗಳಲ್ಲಿ ಉಮ್ರಾನ್ ಮಲಿಕ್ (Umran Malik) 14 ಬಾರಿ ವಿಶೇಷ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಂದರೆ ಈ ಬಾರಿಯ ಐಪಿಎಲ್​ನಲ್ಲಿ (IPL 2022) ನೀಡಲಾಗುತ್ತಿರುವ ಫಾಸ್ಟೆಸ್ಟ್ ಡೆಲಿವರಿ ಆಫ್​ ದಿ ಮ್ಯಾಚ್ ಅವಾರ್ಡ್​ ಅನ್ನು ಸತತವಾಗಿ ಪಡೆದ ಏಕೈಕ ಬೌಲರ್ ಉಮ್ರಾನ್ ಮಲಿಕ್. ಗಂಟೆಗೆ 150 ಕಿ.ಮೀ ವೇಗದಲ್ಲಿ ಸ್ಥಿರವಾಗಿ ಚೆಂಡೆಸೆಯುವ ಉಮ್ರಾನ್ ಮಲಿಕ್ ಎಸ್​ಆರ್​ಹೆಚ್​ ತಂಡದ ಎಲ್ಲಾ ಪಂದ್ಯಗಳಲ್ಲೂ ಫಾಸ್ಟೆಸ್ಟ್ ಡೆಲಿವರಿ ಅವಾರ್ಡ್​ ಪಡೆದಿದ್ದಾರೆ. ಅಂದರೆ ಇದುವರೆಗೆ ಉಮ್ರಾನ್ ಮಲಿಕ್ ವೇಗವನ್ನು ಎದುರಾಳಿ ತಂಡದ ಯಾವುದೇ ಬೌಲರ್​ಗೆ ದಾಟಲಾಗಲಿಲ್ಲ.

ಪಂಜಾಬ್ ಕಿಂಗ್ಸ್​ ವಿರುದ್ದದ ಕೊನೆಯ ಪಂದ್ಯದಲ್ಲೂ 153.5 ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಮೂಲಕ 14ನೇ ಬಾರಿ ಫಾಸ್ಟೆಸ್ಟ್ ಡೆಲಿವರಿ ಅವಾರ್ಡ್ ಪಡೆದರು. ಈ ಮೂಲಕ ಐಪಿಎಲ್​ನಲ್ಲಿನ ವಿಶೇಷ ಪ್ರಶಸ್ತಿಯನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡ ಮೊದಲ ಆಟಗಾರ ಎನಿಸಿಕೊಂಡರು. ಅಲ್ಲದೆ ಸತತ ಫಾಸ್ಟೆಸ್ಟ್ ಡೆಲಿವರಿ ಅವಾರ್ಡ್​ ಪಡೆದ ಏಕೈಕ ಬೌಲರ್ ಎಂಬ ದಾಖಲೆಯನ್ನೂ ಕೂಡ ಉಮ್ರಾನ್ ಮಲಿಕ್ ಬರೆದಿದ್ದಾರೆ.

ಇದನ್ನೂ ಓದಿ
Image
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು
Image
Virat Kohli: ಕೊಹ್ಲಿ ಕಡೆಯಿಂದ ರಶೀದ್ ಖಾನ್​​ಗೆ ಸ್ಪೆಷಲ್ ಗಿಫ್ಟ್​: ಸೇಫ್ ಆಗಿ ಇಟ್ಟಿರಿ ಎಂದ ಸೌತ್ ಆಫ್ರಿಕಾ ಕ್ರಿಕೆಟಿಗ
Image
KL Rahul: ಐಪಿಎಲ್​ನಲ್ಲಿ ರಾಹುಲ್ ಅಬ್ಬರ: ಸತತ 5ನೇ ಬಾರಿ ಕೆಎಲ್ ಕಿಂಗ್
Image
IPL 2022: ಬುಮ್ರಾ ದಾಖಲೆ ಮುರಿದ ಉಮ್ರಾನ್ ಮಲಿಕ್

ಇನ್ನು ಈ ಬಾರಿಯ ಐಪಿಎಲ್​​ನಲ್ಲಿ ಗಂಟೆಗೆ 157 ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಮೂಲಕ ದಾಖಲೆ ನಿರ್ಮಿಸಿರುವ ಉಮ್ರಾನ್ ಮಲಿಕ್ ಅವರಿಗೆ ಟೂರ್ನಿಯ ಅತೀ ವೇಗದ ಪ್ರಶಸ್ತಿ ಕೂಡ ಸಿಗುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಉಮ್ರಾನ್ ಮಲಿಕ್ ಹೊರತುಪಡಿಸಿ ಯಾವುದೇ ಬೌಲರ್​ ಈ ಬಾರಿಯ ಐಪಿಎಲ್​ನಲ್ಲಿ 155 ಕಿ.ಮೀ ವೇಗದಲ್ಲಿ ಚೆಂಡೆಸೆದಿಲ್ಲ. ಹೀಗಾಗಿ ಐಪಿಎಲ್ 2022ರ ಫಾಸ್ಟೆಸ್ಟ್ ಡೆಲಿವರಿ ಪ್ರಶಸ್ತಿ ಕೂಡ ಜಮ್ಮು ಕಾಶ್ಮೀರದ ಯುವ ವೇಗಿಗೆ ಲಭಿಸುವುದರಲ್ಲಿ ಅನುಮಾನವೇ ಇಲ್ಲ ಎನ್ನಬಹುದು.

ಇತ್ತ ಐಪಿಎಲ್​ನಲ್ಲಿ ವೇಗದೊಂದಿಗೆ ಸಂಚಲನ ಸೃಷ್ಟಿಸಿ 24 ವಿಕೆಟ್​ಗಳನ್ನು ಪಡೆಯುತ್ತಿದ್ದಂತೆ ಅತ್ತ ಉಮ್ರಾನ್ ಮಲಿಕ್​ಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್​ ಸಿಕ್ಕಿದೆ. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ದದ 5 ಪಂದ್ಯಗಳ ಟಿ20 ಸರಣಿಗಾಗಿ ಉಮ್ರಾನ್ ಮಲಿಕ್ ಆಯ್ಕೆಯಾಗಿದ್ದಾರೆ. ಒಂದು ವೇಳೆ ಸೌತ್ ಆಫ್ರಿಕಾ ವಿರುದ್ದ ಯುವ ವೇಗಿ ಮಿಂಚಿದರೆ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲೂ ಸ್ಥಾನ ಪಡೆಯಲಿದ್ದಾರೆ. ಒಟ್ಟಿನಲ್ಲಿ ಐಪಿಎಲ್​ ಮೂಲಕ ಮತ್ತೋರ್ವ ಆಟಗಾರ ಟೀಮ್ ಇಂಡಿಯಾದಲ್ಲಿ ಅವಕಾಶ ಪಡೆದಿರುವುದು ವಿಶೇಷ.

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ