IPL 2022: ಪ್ಲೇಆಫ್-ಫೈನಲ್‌ಗೆ ಹೊಸ ನಿಯಮ; ಹೀಗಾದರೆ ಪಂದ್ಯವನ್ನಾಡದೆ ಐಪಿಎಲ್​ನಿಂದ ಹೊರಬಿಳಲಿದೆ ಆರ್​ಸಿಬಿ!

IPL 2022: ಐಪಿಎಲ್ 2022 ರ ಹೊಸ ನಿಯಮಗಳ ಪ್ರಕಾರ, ಪ್ಲೇಆಫ್ ಪಂದ್ಯಗಳು ಹವಾಮಾನ ವೈಪರಿತ್ಯಕ್ಕೆ ಸಿಲುಕಿದರೆ ಮತ್ತು ಪಂದ್ಯವನ್ನು ನಿಗದಿತ ಸಮಯಕ್ಕೆ ನಡೆಸಲು ಸಾಧ್ಯವಾಗದಿದ್ದರೆ, ಸೂಪರ್ ಓವರ್ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ. ಆದರೆ...

IPL 2022: ಪ್ಲೇಆಫ್-ಫೈನಲ್‌ಗೆ ಹೊಸ ನಿಯಮ; ಹೀಗಾದರೆ ಪಂದ್ಯವನ್ನಾಡದೆ ಐಪಿಎಲ್​ನಿಂದ ಹೊರಬಿಳಲಿದೆ ಆರ್​ಸಿಬಿ!
ಆರ್​ಸಿಬಿ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on:May 23, 2022 | 4:14 PM

ಐಪಿಎಲ್ 2022 (IPL 202)ರ ಪ್ಲೇಆಫ್ ಸುತ್ತು ಮಂಗಳವಾರದಿಂದ ಆರಂಭವಾಗಲಿದೆ. ಮೊದಲ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (Gujarat Titans and Rajasthan Royals) ಪೈಪೋಟಿ ನಡೆಸಲಿದ್ದು, ಬುಧವಾರ ಲಕ್ನೋ-ಬೆಂಗಳೂರು (Lucknow-Bangalore) ನಡುವೆ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಬಿಸಿಸಿಐ ಮಹತ್ವದ ಘೋಷಣೆ ಮಾಡಿದೆ. ಈ ಪ್ರಕಟಣೆಯು ಸಾಕಷ್ಟು ಆಸಕ್ತಿದಾಯಕವಾಗಿರುವ ಪ್ಲೇಆಫ್ ಪಂದ್ಯಗಳ ನಿಯಮಗಳ ಕುರಿತಾಗಿದೆ. ಐಪಿಎಲ್ 2022 ರ ಹೊಸ ನಿಯಮಗಳ ಪ್ರಕಾರ, ಪ್ಲೇಆಫ್ ಪಂದ್ಯಗಳು ಹವಾಮಾನ ವೈಪರಿತ್ಯಕ್ಕೆ ಸಿಲುಕಿದರೆ ಮತ್ತು ಪಂದ್ಯವನ್ನು ನಿಗದಿತ ಸಮಯಕ್ಕೆ ನಡೆಸಲು ಸಾಧ್ಯವಾಗದಿದ್ದರೆ, ಸೂಪರ್ ಓವರ್ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ. ಆದರೆ ಸೂಪರ್ ಓವರ್​ ಕೂಡ ಆಡಲಾಗದಿದ್ದರೆ, ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ.

ಅರ್ಥಾತ್ ಗುಜರಾತ್-ರಾಜಸ್ಥಾನ ನಡುವಿನ ಪಂದ್ಯದಲ್ಲಿ ಒಂದೇ ಒಂದು ಚೆಂಡನ್ನು ಎಸೆಯಲಾಗದಿದ್ದರೆ, ಲೀಗ್ ಹಂತದಲ್ಲಿ ನಂ.1 ಸ್ಥಾನದಲ್ಲಿರುವ ಹಾರ್ದಿಕ್ ಪಾಂಡ್ಯ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಅದೇ ರೀತಿ ಲಕ್ನೋ-ಬೆಂಗಳೂರು ಪಂದ್ಯದಲ್ಲೂ ಒಂದೇ ಒಂದು ಬಾಲ್ ಎಸೆಯಲಾಗದಿದ್ದರೆ ಡು ಪ್ಲೆಸಿಸ್ ತಂಡ ಆಡದೇ ಐಪಿಎಲ್​ನಿಂದ ಹೊರಗುಳಿಯಲಿದೆ. ಐಪಿಎಲ್‌ನ ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯವು ಕೋಲ್ಕತ್ತಾದಲ್ಲಿ ನಡೆಯಲಿದ್ದು, ಅಲ್ಲಿನ ಹವಾಮಾನ ಆಟಕ್ಕೆ ಕಂಟಕವಾಗುವ ಸಾಧ್ಯತೆಗಳಿವೆ. ಕೋಲ್ಕತ್ತಾದಲ್ಲಿ ಕಳೆದ ಎರಡು ದಿನಗಳಿಂದ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ಮುಂದಿನ ವಾರದವರೆಗೂ ಇದೇ ವಾತಾವರಣ ಇರುವ ಸಾಧ್ಯತೆ ಇದೆ.

ಇದನ್ನೂ ಓದಿ:SRH vs PBKS Highlights, IPL 2022: ಗೆಲುವಿನೊಂದಿಗೆ ಐಪಿಎಲ್ ಪ್ರಯಾಣ ಮುಗಿಸಿದ ಪಂಜಾಬ್

ಇದನ್ನೂ ಓದಿ
Image
Women’s T20 Challenge 2022: ಇಂದಿನಿಂದ ಮಹಿಳಾ ಟಿ20 ಚಾಲೆಂಜ್
Image
Umran Malik: ಸಾಟಿಯಿಲ್ಲದ ವೇಗಿಗೆ 14 ಪ್ರಶಸ್ತಿ: ಐಪಿಎಲ್​ನಲ್ಲಿ ಹೊಸ ದಾಖಲೆ

ಪ್ಲೇಆಫ್ ಪಂದ್ಯಗಳು ತಡವಾಗಿ ಆರಂಭವಾಗಬಹುದು ಮೂರು ಪ್ಲೇಆಫ್ ಪಂದ್ಯಗಳ ಪ್ರಾರಂಭದಲ್ಲಿ ವಿಳಂಬವಾದರೆ, ಅದಕ್ಕೂ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ. ನಿಯಮಗಳ ಪ್ರಕಾರ ರಾತ್ರಿ 9.40 ರಿಂದ ಪಂದ್ಯಗಳನ್ನು ಆರಂಭಿಸಲು ಕಾಲವಕಾಶ ನೀಡಲಾಗಿದೆ. ಫೈನಲ್‌ನಲ್ಲಿಯೂ ಇದೇ ಅವಕಾಶವಿದೆ. ಹವಾಮಾನ ವೈಪರೀತ್ಯದಿಂದ ಪಂದ್ಯ ತಡವಾದರೆ ರಾತ್ರಿ 10.10 ರಿಂದ ಪಂದ್ಯವನ್ನು ಆರಂಭಿಸಬಹುದಾಗಿದೆ. ಐಪಿಎಲ್ ವೇಳಾಪಟ್ಟಿಯ ಪ್ರಕಾರ ಫೈನಲ್‌ ಪಂದ್ಯದ ಆರಂಭದ ಸಮಯವನ್ನು ರಾತ್ರಿ 8 ಗಂಟೆಗೆ ನಿಗಧಿಪಡಿಸಲಾಗಿದೆ. ಅಂತಿಮ ಪಂದ್ಯದಲ್ಲಿ ಒಂದೇ ಒಂದು ಚೆಂಡನ್ನು ಎಸೆಯಲಾಗದಿದ್ದರೆ ಅದಕ್ಕಾಗಿ ಮೀಸಲು ದಿನವನ್ನೂ ಇಡಲಾಗಿದೆ. ಆದಾಗ್ಯೂ, ಎರಡು ಅರ್ಹತಾ ಪಂದ್ಯಗಳಿಗೆ ಮತ್ತು ಎಲಿಮಿನೇಟರ್ ಪಂದ್ಯಕ್ಕೆ ಯಾವುದೇ ಮೀಸಲು ದಿನವಿಲ್ಲ. ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳಲ್ಲಿ ಮೊದಲ ಇನಿಂಗ್ಸ್ ನಡೆದು, ಎರಡನೇ ಇನ್ನಿಂಗ್ಸ್‌ಗೆ ಮಳೆ ಅಡ್ಡಿಪಡಿಸಿದರೆ, ಪಂದ್ಯದ ಫಲಿತಾಂಶವನ್ನು ಡಕ್ವರ್ತ್-ಲೂಯಿಸ್ ನಿಯಮದಿಂದ ನಿರ್ಧರಿಸಲಾಗುತ್ತದೆ.

ಫೈನಲ್ ಪಂದ್ಯಕ್ಕೆ 2 ದಿನ ಮೀಸಲು ಹೊಸ ನಿಯಮದ ಪ್ರಕಾರ, ಮಳೆಯಿಂದಾಗಿ ಐಪಿಎಲ್ 2022 ರ ಫೈನಲ್ ಪಂದ್ಯವನ್ನು ಮಧ್ಯದಲ್ಲಿ ನಿಲ್ಲಿಸಿದರೆ, ಮರುದಿನ ಅಂದರೆ ಮೀಸಲು ದಿನದಂದು ಆಟವನ್ನು ಎಲ್ಲಿಗೆ ನಿಂತಿರುತ್ತದೋ, ಅಲ್ಲಿಂದ ಪ್ರಾರಂಭವಾಗುತ್ತದೆ. ಫೈನಲ್‌ನಲ್ಲಿ ಟಾಸ್ ನಂತರ ಆಟ ಪ್ರಾರಂಭವಾಗದೆ ಇದ್ದರೆ, ಮೀಸಲು ದಿನದಂದು ಮತ್ತೆ ಟಾಸ್ ನಡೆಯಲಿದೆ.

Published On - 4:13 pm, Mon, 23 May 22

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ