ದ್ವಿತೀಯ ಪಿಯುಸಿ ಪಠ್ಯ ಪುಸ್ತಕ ಪರಿಷ್ಕರಣೆಗೆ ಚಾಲನೆ ನೀಡಿದ ಶಿಕ್ಷಣ ಇಲಾಖೆ

ಬಿಸಿ ನಾಗೇಶ್ ಅವರ ಈ ಪತ್ರಕ್ಕೆ ಪಿಯು ಬೋರ್ಡ್ ನಿರ್ದೇಶಕರು ಸಕಾರಾತ್ಮಕವಾಗಿ ಉತ್ತರ ನೀಡಿದರು. ಎನ್​ಸಿಎಫ್ ಆಧರಿಸಿ ಪಠ್ಯಕ್ರಮ, ಪಠ್ಯ ವಸ್ತು ಹಾಗೂ ಹೊಸ ಪಠ್ಯ ಪುಸ್ತಕ ರಚನೆಯಾಗಲಿದೆ.

ದ್ವಿತೀಯ ಪಿಯುಸಿ ಪಠ್ಯ ಪುಸ್ತಕ ಪರಿಷ್ಕರಣೆಗೆ ಚಾಲನೆ ನೀಡಿದ ಶಿಕ್ಷಣ ಇಲಾಖೆ
ಶಿಕ್ಷಣ ಸಚಿವ ಬಿ ಸಿ ನಾಗೇಶ್
TV9kannada Web Team

| Edited By: sandhya thejappa

May 23, 2022 | 1:15 PM

ಬೆಂಗಳೂರು: ಶಾಲಾ ಪಠ್ಯ ವಿವಾದದ ನಡುವೆ ಪಿಯು ಪಠ್ಯ ಪರಿಷ್ಕರಣೆ ಮಾಡಲು ಶಿಕ್ಷಣ ಇಲಾಖೆ (Education Department) ಮುಂದಾಗಿದೆ. ದ್ವಿತೀಯ ಪಿಯುಸಿಯ (2nd PUC) ಭಾರತದ ಇತಿಹಾಸ ಪಠ್ಯ ಪುಸ್ತಕ ಪರಿಷ್ಕರಣೆಗೆ ಚಾಲನೆ ನೀಡಿರುವ ಶಿಕ್ಷಣ ಇಲಾಖೆ, ಪಠ್ಯ ಪರಿಷ್ಕರಣೆಯನ್ನು ರೋಹಿತ್ ಸಮಿತಿಗೆ ವಹಿಸಲು ಸೂಚನೆ ನೀಡಿದೆ. ದ್ವಿತೀಯ ಪಿಯುಸಿಯ ಭಾರತದ ಇತಿಹಾಸ ಅಧ್ಯಾಯ 4.2 ಹೊಸ ‘ಧರ್ಮಗಳ ಉದಯ’ ಪಠ್ಯಭಾಗ ಪರಿಷ್ಕರಣೆಗೆ ಸೂಚನೆ ನೀಡಲಾಗಿದೆ. ಇದೇ ವರ್ಷ ಫೆಬ್ರವರಿ 17 ರಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಪತ್ರ ಬರೆದಿದ್ದರು. ಹೊಸ ಧರ್ಮಗಳ ಉದಯ ಪಠ್ಯದಲ್ಲಿ ನಿರ್ದಿಷ್ಟ ಸಮುದಾಯಗಳ ಭಾವನೆಗಳಿಗೆ ಧಕ್ಕೆಯಾಗುವಂತಹ ವಿಷಯಗಳಿರುವ ಬಗ್ಗೆ ದೂರು ಬಂದಿವೆ. ಈ ನಿಟ್ಟಿನಲ್ಲಿ ಸಮುದಾಯಗಳ ಭಾವನೆಗಳಿಗೆ ಧಕ್ಕೆಯಾಗುವಂತಹ ವಿಷಯ ತೆಗೆಯುವಂತೆ ಸೂಚನೆ ನೀಡಿದ್ದರು.

ಬಿಸಿ ನಾಗೇಶ್ ಅವರ ಈ ಪತ್ರಕ್ಕೆ ಪಿಯು ಬೋರ್ಡ್ ನಿರ್ದೇಶಕರು ಸಕಾರಾತ್ಮಕವಾಗಿ ಉತ್ತರ ನೀಡಿದರು. ಎನ್ಸಿಎಫ್ ಆಧರಿಸಿ ಪಠ್ಯಕ್ರಮ, ಪಠ್ಯ ವಸ್ತು ಹಾಗೂ ಹೊಸ ಪಠ್ಯ ಪುಸ್ತಕ ರಚನೆಯಾಗಲಿದೆ. ಯಾವುದೇ ವಿವಾದಿತ ಅಂಶಗಳಿಲ್ಲದಂತೆ ಕ್ರಮವಹಿಸಲಾಗುತ್ತದೆ ಎಂದು ಪಿಯು ಬೋರ್ಡ್ ತಿಳಿಸಿತ್ತು.

ಇದನ್ನೂ ಓದಿ: Humanitarian Crisis: ವಿಶ್ವದಾದ್ಯಂತ 10 ಕೋಟಿಗೂ ಹೆಚ್ಚು ಮಂದಿ ಬಲವಂತದಿಂದ ತಮ್ಮ ಮನೆ ತೊರೆದಿದ್ದಾರೆ ಎನ್ನುತ್ತಿದೆ ವಿಶ್ವಸಂಸ್ಥೆಯ ಈ ವರದಿ

ಪಠ್ಯ ಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿ ಹೇಳಿಕೆ ನೀಡಿರುವ ಶಿಕ್ಷಣ ಸಚಿವರು, ಕೆಲವರಿಗೆ ಈ ನೆಲದ ವಿಚಾರ ಕಂಡರೆ ಆಗಲ್ಲ. ರಾಷ್ಟ್ರೀಯತೆ ಅಂದರೆ ಅದು ಬಿಜೆಪಿಯದು ಅಂದು ಕೊಂಡಿದ್ದಾರೆ. ವಿಷಯದ ಬಗ್ಗೆ ಚರ್ಚೆಗೆ ಬರುವುದಾದ್ರೆ ನಾವು ಸಿದ್ಧ. ಅವರು ವಿಷಯದ ಬಗ್ಗೆ ಚರ್ಚೆ ಮಾಡೊದಕ್ಕೆ ಸಿದ್ಧರಿಲ್ಲ. ನೀಚಮಟ್ಟಕ್ಕೆ ಇಳಿದು ವಿವಾದ ಮಾಡುತ್ತಾ ಇದ್ದಾರೆ. ಪಠ್ಯದಲ್ಲಿ ಜಾತಿ ಹಿಡಿದು ನೀಚ ಮಟ್ಟದ ವಿರೋಧಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.

ಇನ್ನು ಕುವೆಂಪುಗೆ ಅವಮಾನ ಆಗಿರುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ನಾಗೇಶ್, ಕುವೆಂಪು ಬಗ್ಗೆ ನಾವು ಎಷ್ಟು ಪಠ್ಯ ಸೇರಿಸಿದ್ದೀವಿ ನೋಡಲಿ. ಅವರು ಎಷ್ಟು ಪಠ್ಯ ಸೇರಿಸಿದ್ದಾರೆ? ಕುವೆಂಪು ಬಗ್ಗೆ ಅವಮಾನ ನಾವು ಮಾಡಿಲ್ಲ ಎಂದರು.

ವಿವಾಧಕ್ಕೆ ತೆರೆ ಎಳೆಯಲು ಮುಂದಾದ ಶಿಕ್ಷಣ ಸಚಿವ: ಪಠ್ಯ ಪರಿಷ್ಕರಣೆಯ ವಿವಾಧಕ್ಕೆ ತೆರೆ ಎಳೆಯಲು ಶಿಕ್ಷಣ ಸಚಿವ ನಾಗೇಶ್ ಮುಂದಾಗಿದ್ದಾರೆ. ಪಠ್ಯ ಪರಿಷ್ಕರಣೆ ಹಾಗೂ ವಿರೋಧದ ಕುರಿತು ಇಂದು 3 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಪ ಪತ್ರಿಕಾಗೋಷ್ಠಿಗೂ ಮುನ್ನಾ ರೋಹಿತ್ ಚಕ್ರತಿರ್ಥ ಜೊತೆ ಚರ್ಚೆ ನಡೆಸುತ್ತಾರೆ.

ರೋಹಿತ್ ವಿರುದ್ಧ ಸಿದ್ದರಾಮಯ್ಯ ಆಕ್ರೋಶ: ಇನ್ನು ರೋಹಿತ್ ವಿರುದ್ಧ ಟ್ವೀಟ್ ಮಾಡಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. ನಾಡಗೀತೆಯನ್ನು ಅವಹೇಳನ ಮಾಡಿದ, ರಾಷ್ಟ್ರಕವಿಯನ್ನು ಗೇಲಿ ಮಾಡಿದ ಇಂತಹ ಒಬ್ಬ ಕಿಡಿಗೇಡಿಯನ್ನು ಪಠ್ಯಪುಸ್ತಕ ಪರಿಷ್ಟರಣಾ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ ಬಿಜೆಪಿ ಸರ್ಕಾರಕ್ಕೆ ಮರ್ಯಾದೆ ಇದ್ದರೆ, ಮೊದಲು ಈತನನ್ನು ಕಿತ್ತುಹಾಕಬೇಕು ಅಂತ ಒತ್ತಾಯಿಸಿದ್ದಾರೆ.

ಇದನ್ನೂ ಓದಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada