ಅರಬ್ಬಿ ಸಮುದ್ರದಲ್ಲಿ ನೋಡ ನೋಡುತ್ತಿದ್ದಂತೆ ಮುಳುಗಿದ ದೋಣಿ; ವಿಡಿಯೋ ಇಲ್ಲಿದೆ

ಅರಬ್ಬಿ ಸಮುದ್ರದಲ್ಲಿ ನೋಡ ನೋಡುತ್ತಿದ್ದಂತೆ ಮುಳುಗಿದ ದೋಣಿ; ವಿಡಿಯೋ ಇಲ್ಲಿದೆ

TV9 Web
| Updated By: sandhya thejappa

Updated on: May 23, 2022 | 11:52 AM

ಮೀನುಗಾರರು ಆಳಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಮುಸ್ತಾಕ್(52), ರೋಜಿ ಅಬೂಬಕ್ಕರ್(55), ಶಬ್ಬೀರ್(50), ತರಿಸಲ್ಲ ಅಶ್ರಫ್(37), ಬೊಂಬಾ ಮೊಹಮ್ಮದ್(47) ಜೀವಾಪಾಯದಿಂದ ಪಾರಾಗಿದ್ದಾರೆ.

ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಗ್ರಾಮ ಬಳಿ ಕಡಲ ತೀರದಲ್ಲಿ ಮೀನುಗಾರಿಕಾ ದೋಣಿಯೊಂದು (Fishing Boat) ಮುಳುಗಡೆಯಾಗಿದೆ. ಸ್ಥಳೀಯ ಮೀನುಗಾರರು ಮುಳುಗಿದ ದೋಣಿಯಲ್ಲಿದ್ದ ಐವರು ಮೀನುಗಾರರನ್ನ ರಕ್ಷಣೆ (Rescue) ಮಾಡಿದ್ದಾರೆ. ಮೀನುಗಾರರು ಆಳಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಮುಸ್ತಾಕ್(52), ರೋಜಿ ಅಬೂಬಕ್ಕರ್(55), ಶಬ್ಬೀರ್(50), ತರಿಸಲ್ಲ ಅಶ್ರಫ್(37), ಬೊಂಬಾ ಮೊಹಮ್ಮದ್(47) ಜೀವಾಪಾಯದಿಂದ ಪಾರಾಗಿದ್ದಾರೆ. ಮುಳುಗಡೆಯಾಗಿರುವ ಅಮೀನಾ ಬೋಟ್ ಶಿರೂರಿನ ಮುಸ್ತಾಕ್ ಮಾಲೀಕತ್ವದ್ದು ಎಂದು ತಿಳಿದುಬಂದಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ