ಸಖತ್ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅದಿತಿ ಪ್ರಭುದೇವ; ಯಾವ ಚಿತ್ರ?

Aditi Prabhudeva | Alexa Movie: ಸ್ಯಾಂಡಲ್​ವುಡ್ ನಟಿ ಅದಿತಿ ಪ್ರಭುದೇವ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ‘ಅಲೆಕ್ಸಾ’ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ನಟಿ ಆಕ್ಷನ್ ದೃಶ್ಯಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

TV9kannada Web Team

| Edited By: shivaprasad.hs

May 23, 2022 | 7:15 AM

ಚಂದನವನದ ಬೆಡಗಿ ಅದಿತಿ ಪ್ರಭುದೇವ (Aditi Prabhudeva) ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ‘ಅಲೆಕ್ಸಾ’ (Alexa Movie) ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ನಟಿ ಆಕ್ಷನ್ ದೃಶ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಖ್ಯಾತ ಸ್ಟಂಟ್ ಮಾಸ್ಟರ್ ರವಿ ವರ್ಮಾ ‘ಅಲೆಕ್ಸಾ’ಗೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷವೆಂದರೆ ‘ಅಲೆಕ್ಸಾ’ ಚಿತ್ರದಲ್ಲಿ ನಾಯಕ ಪವನ್ ತೇಜ ಹಾಗೂ ನಾಯಕಿ ನಾಯಕಿ ಅದಿತಿ ಈರ್ವರೂ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಪ್ರಮುಖ ಫೈಟಿಂಗ್ ದೃಶ್ಯದಲ್ಲಿ ಭಾಗಿಯಾಗಿದ್ದ ನಟಿ, ನಂತರ ಚಿತ್ರದ ಬಗ್ಗೆ ಮಾತನಾಡಿದ್ದಾರೆ. “ಚಿತ್ರದ ಕತೆ ವಿಭಿನ್ನವಾಗಿದ್ದು, ಅದಕ್ಕೆ ತಕ್ಕಂತೆ ನಾಯಕಿಯೂ ಫೈಟ್ ಮಾಡುತ್ತಾಳೆ. ಸಿನಿಮಾ ಬಹಳ ವಿಭಿನ್ನವಾಗಿದೆ” ಎಂದು ಅವರು ಖುಷಿ ಹಂಚಿಕೊಂಡಿದ್ದಾರೆ.

ವಿಶೇಷವೆಂದರೆ ಈ ಚಿತ್ರಕ್ಕೆ ಅದಿತಿ ಕಷ್ಟದ ಆಕ್ಷನ್ ದೃಶ್ಯಗಳಲ್ಲೂ ಭಾಗಿಯಾಗಿದ್ದಾರೆ. ನಾಯಕಿಗೆಂದೇ ಪ್ರತ್ಯೇಕ ಫೈಟ್ ಕೊರಿಯೋಗ್ರಾಫ್ ಮಾಡದೇ ಯುವಕರು ಫೈಟ್ ಮಾಡುವಂತೆಯೇ ಸಾಹಸ ನಿರ್ದೇಶನ ಮಾಡಲಾಗಿದೆ. ಇದು ಚಿತ್ರಕ್ಕೆ ಅಗತ್ಯವಾಗಿತ್ತು ಎನ್ನುವುದು ಚಿತ್ರತಂಡದ ಮಾತು. ಜೀವ ಅವರು ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಚಂದ್ರಶೇಖರ್ ಬಂಡವಾಳ ಹೂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada