ನೋವಾದರೂ ಅದನ್ನು ಮನಸ್ಸಲ್ಲೇ ಇಟ್ಟುಕೊಂಡ ನಟಿ ಅದಿತಿ ಪ್ರಭುದೇವ; ಅಚ್ಚರಿ ವಿಚಾರ ಬಿಚ್ಚಿಟ್ಟ ರವಿವರ್ಮ
‘ಅಲೆಕ್ಸಾ’ ಸಿನಿಮಾದಲ್ಲಿಅದಿತಿ ಅವರು ಸ್ಟಂಟ್ಸ್ ಮಾಡಿದ್ದಾರೆ. ಸಾಮಾನ್ಯವಾಗಿ ಹೀರೋಯಿನ್ಗಳು ಸ್ಟಂಟ್ಸ್ ಮಾಡುತ್ತಾರೆ ಎಂದರೆ ಸ್ಟಂಟ್ ಡೈರೆಕ್ಟರ್ಗಳು ಸುಲಭದ ಫೈಟಿಂಗ್ಸ್ ಹೇಳಿಕೊಡುತ್ತಾರೆ. ಆದರೆ, ಸಾಹಸ ನಿರ್ದೇಶಕ ರವಿ ವರ್ಮಾ ಅವರು ಈ ವಿಚಾರದಲ್ಲಿ ರಾಜಿ ಆಗಿಲ್ಲ.
ನಟಿ ಅದಿತಿ ಪ್ರಭುದೇವ ಅವರು (Aditi Prabhudeva) ಮೊದಲಿನಿಂದಲೂ ಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಈಗ ಅವರು ‘ಅಲೆಕ್ಸಾ’ ಸಿನಿಮಾದಲ್ಲಿ (Aelxa Movie) ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅದಿತಿ ಅವರು ಸ್ಟಂಟ್ಸ್ ಮಾಡಿದ್ದಾರೆ ಅನ್ನೋದು ವಿಶೇಷ. ಇದಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದಾರೆ ಅವರು. ಸಾಮಾನ್ಯವಾಗಿ ಹೀರೋಯಿನ್ಗಳು ಸ್ಟಂಟ್ಸ್ ಮಾಡುತ್ತಾರೆ ಎಂದರೆ ಸ್ಟಂಟ್ ಡೈರೆಕ್ಟರ್ಗಳು ಸುಲಭದ ಫೈಟಿಂಗ್ಸ್ ಹೇಳಿಕೊಡುತ್ತಾರೆ, ಕರುಣೆ ತೋರುತ್ತಾರೆ. ಆದರೆ, ಸಾಹಸ ನಿರ್ದೇಶಕ ರವಿ ವರ್ಮಾ ಅವರು (Ravi Varma) ಈ ವಿಚಾರದಲ್ಲಿ ರಾಜಿ ಆಗಿಲ್ಲ. ಅವರು ತುಂಬಾನೇ ಟಫ್ ಫೈಟ್ಗಳನ್ನು ಅದಿತಿ ಅವರಿಂದ ಮಾಡಿಸಿದ್ದಾರೆ. ‘ಅದಿತಿ ಅವರ ಬಳಿ ಸಾಕಷ್ಟು ಸ್ಟಂಟ್ಸ್ ಮಾಡಿಸಿದ್ದೇನೆ. ಅವರು ನೋವಾದರೂ ಹೇಳಿಕೊಂಡಿಲ್ಲ. ಅದು ಖುಷಿ ಕೊಡುವ ವಿಚಾರ’ ಎಂದಿದ್ದಾರೆ ರವಿ ವರ್ಮಾ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos