ಹಿಂದಿ ಸಿನಿಮಾ ಆಫರ್​ ಬದಿಗಿಟ್ಟು ಕನ್ನಡದ ಚಿತ್ರ ಆಯ್ಕೆ ಮಾಡಿಕೊಂಡ ರವಿ ವರ್ಮಾ; ಮನಸಾರೆ ಹೊಗಳಿದ ಅದಿತಿ

Aditi Prabhudeva: ಹಲವು ಭಾಷೆಯಲ್ಲಿ ರವಿ ವರ್ಮಾ ಬ್ಯುಸಿ ಆಗಿದ್ದಾರೆ. ಕನ್ನಡದ ‘ಅಲೆಕ್ಸಾ’ ಚಿತ್ರಕ್ಕಾಗಿ ಅವರು ಹಿಂದಿ ಸಿನಿಮಾದ ಆಫರ್​ ಬಿಟ್ಟುಬಂದಿದ್ದಾರೆ.

TV9kannada Web Team

| Edited By: Madan Kumar

May 23, 2022 | 10:04 AM

ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ ಅದಿತಿ ಪ್ರಭುದೇವ (Aditi Prabhudeva) ಪ್ರತಿ ಸಿನಿಮಾದಲ್ಲಿಯೂ ಅವರು ಬೇರೆ ಬೇರೆ ರೀತಿಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಪಕ್ಕದ ಮನೆ ಹುಡುಗಿ ರೀತಿಯ ಪಾತ್ರಕ್ಕೂ ಸೈ, ಫೈಟಿಂಗ್​ ಮಾಡಲೂ ಸೈ ಎಂಬಂತಿರುವ ಅವರು ಈಗ ‘ಅಲೆಕ್ಸಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಭರ್ಜರಿ ಸಾಹಸ ದೃಶ್ಯಗಳಲ್ಲಿ ಅಭಿನಯಿಸುತ್ತಿದ್ದಾರೆ. ಅವರಿಗೆ ಸ್ಟಂಟ್ಸ್​ ಹೇಳಿಕೊಡುತ್ತಿರುವುದು ಸಾಹಸ ನಿರ್ದೇಶಕ ರವಿ ವರ್ಮಾ (Ravi Varma). ಹಲವು ಭಾಷೆಯಲ್ಲಿ ಬ್ಯುಸಿ ಆಗಿರುವ ರವಿ ವರ್ಮಾ ಅವರು ‘ಅಲೆಕ್ಸಾ’ ಚಿತ್ರಕ್ಕಾಗಿ ಕೆಲವು ಪರಭಾಷೆ ಆಫರ್​ಗಳನ್ನು ಬಿಟ್ಟುಬಂದಿದ್ದಾರೆ. ಅದಕ್ಕಾಗಿ ಅದಿತಿ ಪ್ರಭುದೇವ ಅವರು ಧನ್ಯವಾದ ಸಲ್ಲಿಸಿದ್ದಾರೆ. ‘4-5 ಹಿಂದಿ ಸಿನಿಮಾಗಳ (Hindi Cinema) ಡೇಟ್ಸ್​ ಬಿಟ್ಟು ಬಂದು ನಮ್ಮ ಕನ್ನಡದ ಸಿನಿಮಾಗಾಗಿ ರವಿ ವರ್ಮಾ ಕೆಲಸ ಮಾಡುತ್ತಿದ್ದಾರೆ. ಎಲ್ಲರಿಗೂ ಈ ಮನೋಭಾವ ಬರಲಿ’ ಎಂದು ಅದಿತಿ ಹೇಳಿದ್ದಾರೆ.

 

 

Follow us on

Click on your DTH Provider to Add TV9 Kannada