Viral Video: ಬ್ರಿಡ್ಜ್ ಮೇಲೆ ಹತ್ತಿ ನದಿಗೆ ಇಳಿಯುವ ಮೊಸಳೆಯ ರೋಚಕ ದೃಶ್ಯ ನೋಡಿ

ನದಿಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಮೊಸಳೆ ಸ್ಥಳಾಂತರಗೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Viral Video: ಬ್ರಿಡ್ಜ್ ಮೇಲೆ ಹತ್ತಿ ನದಿಗೆ ಇಳಿಯುವ ಮೊಸಳೆಯ ರೋಚಕ ದೃಶ್ಯ ನೋಡಿ
ವೈರಲ್ ಆದ ಮೊಸಳೆ
Follow us
TV9 Web
| Updated By: Rakesh Nayak Manchi

Updated on: May 23, 2022 | 12:47 PM

ಸಾಮಾಜಿಕ ಜಾಲತಾಣದಲ್ಲಿ ಆಗೊಂದು ಈಗೊಂದು ಎಂಬಂತೆ ಅಚ್ಚರಿಯ ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಅದರಂತೆ, ಸಾಮಾಜಿಕ ಜಾಲತಾಣದಲ್ಲಿ ಮೊಸಳೆ (Crocodile) ವಿಡಿಯೋವೊಂದು ಭಾರಿ ವೈರಲ್ (Viral video) ಆಗುತ್ತಿದೆ. ಹೇಳಿ ಕೇಳಿ ಮೊಸಳೆ ನೀರಿನಲ್ಲೂ ಇರುತ್ತದೆ, ಭೂಮಿ ಮೇಲೂ ಬದುಕುತ್ತದೆ. ನದಿ ಬಿಟ್ಟು ಆಹಾರ ಹುಡುಕಾಡುತ್ತಾ ಗ್ರಾಮಗಳಿಗೆ ನುಗ್ಗುವುದನ್ನೂ ನೋಡಿದ್ದೇವೆ. ಇದೀಗ ಮೊಸಳೆಯೊಂದು ನದಿಯೊಂದಕ್ಕೆ ಅಡ್ಡಲಾಗಿ ಕಟ್ಟಿದ ಸೇತುವೆ ಮೇಲೆ  ಹತ್ತಿ ನೀರಿರುವ ಸ್ಥಳಕ್ಕೆ ಹೋಗುವ ದೃಶ್ಯಾವಳಿ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ‘ಇಂಥ ಕೆಲಸ ಮಾಡ್ಬೇಡಿ’: ಎಲ್ಲರ ಎದುರು ಕರಣ್​ ಜೋಹರ್​ಗೆ ಅನಿಲ್​ ಕಪೂರ್ ವಾರ್ನಿಂಗ್​; ವಿಡಿಯೋ ವೈರಲ್​​

ವೈರಲ್ ವಿಡಿಯೋ ಗಮನಿಸಿದಾಗ, ನೀರು ಹರಿದು ಹೋಗದಂತೆ ಸೇತುವೆಗೆ ಅಡ್ಡಲಾಗಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಒಂದು ಭಾಗದಲ್ಲಿ ನೀರಿನ ಹರಿವು ಇಲ್ಲವಾಗಿದೆ. ಈ ಜಾಗದಲ್ಲಿದ್ದ ಸುಮಾರು 10 ಅಡಿ ಉದ್ದದ ಮೊಸಳೆಯೊಂದು ಆ ಸೇತುವೆ ಮೇಲೆ ಹತ್ತಿ ನೀರು ತುಂಬಿದ ಸ್ಥಳಕ್ಕೆ ಸ್ಥಳಾಂತರಗೊಂಡಿದೆ. ಹೀಗೆ ಹೋದ ಮೊಸಳೆಯ ಶೈಲಿ ನೆಟ್ಟಿಗರ ಗಮನ ಸೆಳೆದಿದೆ. ಅಲ್ಲದೆ, ಭಾರಿ ವೈರಲ್ ಕೂಡ ಆಗುತ್ತಿದೆ. ಈ ವಿಡಿಯೋವನ್ನು ಹೆಲಿಕಾಪ್ಟರ್ ಯಾತ್ರಾ ಬಳಕೆದಾರರು ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, 2.9 ಮಿಲಿಯನ್ ವೀಕ್ಷಣೆ ಕಂಡಿದ್ದು, 129k ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಕರ್ನಾಟಕದ ಕರಾವಳಿ ದಂಡೆಯ ರಸ್ತೆ ವಿಶ್ವದ ಅತ್ಯಂತ ಸುಂದರವಾದ ಸೈಕ್ಲಿಂಗ್ ಮಾರ್ಗ | ನಾರ್ವೇ ದೇಶದ ಪ್ರಜೆ ಟ್ವೀಟ್‌

ಇದನ್ನೂ ಓದಿ: ಕೊವಿಡ್ ಭೀತಿ: ಸೌದಿ ಪ್ರಜೆಗಳಿಗೆ ಭಾರತ ಸೇರಿ 15 ದೇಶಗಳಿಗೆ ಸಂಚಾರ ನಿರ್ಬಂಧ

ಇದನ್ನೂ ಓದಿ:  Nrityanjali  Jewellery Collection: ಭಾರತೀಯ ನೃತ್ಯಕಲೆಯನ್ನು ಚಿನ್ನದ ಆಭರಣಗಳ ಮೇಲೆ ಮೂಡಿಸಿದ ಮಲಬಾರ್​ ಗೋಲ್ಡ್​ನ ನೃತ್ಯಾಂಜಲಿ ಕಲೆಕ್ಷನ್

ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್  ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ