ಕೊವಿಡ್ ಭೀತಿ: ಸೌದಿ ಪ್ರಜೆಗಳಿಗೆ ಭಾರತ ಸೇರಿ 15 ದೇಶಗಳಿಗೆ ಸಂಚಾರ ನಿರ್ಬಂಧ
ಭಾರತೀಯರಿಗೆ ಸೌದಿ ಪ್ರವೇಶ ನಿರ್ಬಂಧವಿದೆಯೇ ಎನ್ನುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ರಿಯಾದ್: ಭಾರತ ಸೇರಿ 15 ದೇಶಗಳಿಗೆ ಪ್ರಯಾಣಿಸುವುದನ್ನು ತನ್ನ ಪ್ರಜೆಗಳಿಗೆ ಸೌದಿ ಅರೇಬಿಯಾ (Soudi Arabia) ನಿರ್ಬಂಧಿಸಿದೆ. ಇತ್ತೀಚಿನ ದಿನಗಳಲ್ಲಿ ಕೊವಿಡ್-19 (Covid) ಪ್ರಕರಣಗಳು ಹೆಚ್ಚಾಗುತ್ತಿರುವುದು ಇದಕ್ಕೆ ಮುಖ್ಯ ಕಾರಣ. ಭಾರತದೊಂದಿಗೆ ಲೆಬನಾನ್, ಸಿರಿಯಾ, ಟರ್ಕಿ, ಇರಾನ್, ಅಫ್ಘಾನಿಸ್ತಾನ, ಯೆಮೆನ್, ಸೊಮಾಲಿಯಾ, ಇಥಿಯೋಪಿಯಾ, ಕಾಂಗೊ, ಲಿಬಿಯಾ, ಇಂಡೋನೇಷಿಯಾ, ವಿಯೆಟ್ನಾಂ, ಅರ್ಮೇನಿಯಾ, ಬೆಲರೂಸ್ ಮತ್ತು ವೆನಜುವೆಲಾ ದೇಶಗಳಿಗೂ ತನ್ನ ಪ್ರಜೆಗಳು ಪ್ರಯಾಣಿಸುವಂತಿಲ್ಲ ಎಂದು ಸೌದಿ ಸರ್ಕಾರ ಸ್ಪಷ್ಟಪಡಿಸಿದೆ.
ಸೌದಿ ಸರ್ಕಾರದ ಪಾಸ್ಪೋರ್ಟ್ ಇಲಾಖೆಯ ಪ್ರಧಾನ ನಿರ್ದೇಶಕರು ಈ ಆದೇಶದ ಬಗ್ಗೆ ಅಧಿಸೂಚನೆ ಹೊರಡಿಸಿದ್ದಾರೆ. ಮೇಲಿನ ದೇಶಗಳಿಗೆ ಸೌದಿ ಪ್ರಜೆಗಳು ತೆರಳುವಂತಿಲ್ಲ ಎಂದು ಈ ಆದೇಶ ಸ್ಪಷ್ಟಪಡಿಸುತ್ತದೆ. ಭಾರತೀಯರಿಗೆ ಸೌದಿ ಪ್ರವೇಶ ನಿರ್ಬಂಧವಿದೆಯೇ ಎನ್ನುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ಉತ್ತರ ಕೊರಿಯಾ: ರಾಷ್ಟ್ರವ್ಯಾಪಿ ಲಾಕ್‌ಡೌನ್‌ಗೆ ಆದೇಶಿಸಿದ ಕಿಮ್ ಜಾಂಗ್
ಉತ್ತರ ಕೊರಿಯಾದಲ್ಲಿ (North Korea) ಮೊದಲ ಬಾರಿ ಕೊವಿಡ್-19 (Covid-19) ಪ್ರಕರಣ ಪತ್ತೆಯಾದ ಹಿನ್ನಲೆಯಲ್ಲಿ ನಾಯಕ ಕಿಮ್ ಜಾಂಗ್ ಉನ್ (Kim Jong Un) ರಾಷ್ಟ್ರವ್ಯಾಪಿ ಲಾಕ್‌ಡೌನ್‌ಗೆ ಆದೇಶಿಸಿದ್ದಾರೆ. ಸ್ಟೆಲ್ತ್ ಒಮಿಕ್ರಾನ್ ಮ್ಯುಟೆಂಟ್ ವೈರಸ್ ನಿಂದಾಗಿ ಗಂಭೀರ ಪರಿಸ್ಥಿತಿ ಸೃಷ್ಟಿಸಲಾಗಿದೆ ಎಂದು ಉತ್ತರ ಕೊರಿಯಾದ ಅಧಿಕೃತ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ಹೇಳಿದೆ. ಗುರುವಾರ ಕಿಮ್ ಭಾಗವಹಿಸಿದ್ದ ಪಕ್ಷದ ಸಭೆಯಲ್ಲಿ ಅಧಿಕಾರಿಗಳು ದೇಶದ ರಾಷ್ಟ್ರೀಯ ಕ್ವಾರಂಟೈನ್ ಕ್ರಮಗಳನ್ನು ಗರಿಷ್ಠ ತುರ್ತುಸ್ಥಿತಿ ಎಂದು ಹೇಳಿದ್ದಾರೆ. ಕೆಸಿಎನ್ಎ ಪ್ರಕಾರ ವೈರಸ್ ಹರಡುವಿಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಕಿಮ್ ದೇಶದಾದ್ಯಂತ ಎಲ್ಲಾ ನಗರಗಳು ಮತ್ತು ಕೌಂಟಿಗಳು ತಮ್ಮ ಪ್ರದೇಶಗಳನ್ನು ಸಂಪೂರ್ಣವಾಗಿ ಲಾಕ್‌ಡೌನ್ ಮಾಡುವಂತೆ ಆದೇಶಿಸಿದರು.
ಪ್ಯೊಂಗ್ಯಾಂಗ್‌ನಲ್ಲಿ ಜ್ವರದಿಂದ ಬಳಲುತ್ತಿರುವ ರೋಗಿಗಳಿಂದ ಸಂಗ್ರಹಿಸಿದ ಮಾದರಿಗಳು ವೈರಸ್‌ನ ಹೆಚ್ಚು ಹರಡುವ ಒಮಿಕ್ರಾನ್ ರೂಪಾಂತರವನ್ನು ಹೊಂದಿದೆ ಎಂದು ಕೆಸಿಎನ್ಎ ಸುದ್ದಿ ಸಂಸ್ಥೆ ಹೇಳಿದೆ. ನಾಯಕ ಕಿಮ್ ಜಾಂಗ್ ಉನ್ ಸೇರಿದಂತೆ ದೇಶದ ಉನ್ನತ ಅಧಿಕಾರಿಗಳು ಈ ಬಗ್ಗೆ ಚರ್ಚಿಸಲು ಪೊಲಿಟ್‌ಬ್ಯೂರೊ ಸಭೆಯನ್ನು ನಡೆಸಿದ್ದು ಅವರು “ಗರಿಷ್ಠ ತುರ್ತು” ವೈರಸ್ ನಿಯಂತ್ರಣ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಘೋಷಿಸಿದರು. ಕಡಿಮೆ ಅವಧಿಯಲ್ಲಿ ಮೂಲವನ್ನು ತೊಡೆದುಹಾಕುವುದು ಗುರಿಯಾಗಿದೆ” ಎಂದು ಕಿಮ್ ಸಭೆಯಲ್ಲಿ ಹೇಳಿದರು ಎಂದು ಕೆಸಿಎನ್ಎ ಹೇಳಿದೆ.
Published On - 10:59 am, Mon, 23 May 22