ಪ್ರಧಾನಿ ಮೋದಿ ಜತೆಗೆ ವೆನೆಜುವೆಲಾ ಅಧ್ಯಕ್ಷೆ ಒಪ್ಪಂದ: ಇಂಧನ ಬೆಲೆ ಕಡಿಮೆಯಾಗುವ ಸಾಧ್ಯತೆ?
ಅಮೆರಿಕ-ವೆನೆಜುವೆಲಾ ಉದ್ವಿಗ್ನತೆಯ ನಡುವೆ, ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿದರು. ಭಾರತ-ವೆನೆಜುವೆಲಾ ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಉಭಯ ನಾಯಕರು ಒಪ್ಪಿಕೊಂಡರು. ತೈಲ, ಔಷಧ, ಕೃಷಿ, ಡಿಜಿಟಲ್ ಕ್ಷೇತ್ರಗಳಲ್ಲಿ ಸಹಕಾರ, ಗ್ಲೋಬಲ್ ಸೌತ್ ಹಿತಾಸಕ್ತಿಗಳ ರಕ್ಷಣೆ ಕುರಿತು ಚರ್ಚಿಸಲಾಯಿತು. ಇದು ಭಾರತದ ಇಂಧನ ಭದ್ರತೆಗೆ ಮಹತ್ವದ ಹೆಜ್ಜೆಯಾಗಿದೆ.

ಅಮೆರಿಕ ಮತ್ತು ವೆನೆಜುವೆಲಾ ನಡುವಿನ ರಾಜಕೀಯ ಉದ್ವಿಗ್ನತೆಯ ನಡುವೆ, ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ (Delcy Rodríguez) ಅವರು ಶುಕ್ರವಾರ (ಜನವರಿ 30, 2026) ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಹತ್ವದ ಮಾತುಕತೆ ನಡೆಸಿದ್ದಾರೆ.ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಮಿಲಿಟರಿ ವಶಪಡಿಸಿಕೊಂಡ ನಂತರ, ಹಂಗಾಮಿ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ಡೆಲ್ಸಿ ರೊಡ್ರಿಗಸ್ ಮತ್ತು ಪ್ರಧಾನಿ ಮೋದಿ ನಡುವೆ ನಡೆದ ಮೊದಲ ಸಂವಾದ ಇದಾಗಿದೆ. ಭಾರತ ಮತ್ತು ವೆನೆಜುವೆಲಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು “ಹೊಸ ಎತ್ತರಕ್ಕೆ” ಕೊಂಡೊಯ್ಯಲು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ.
ನೆಜುವೆಲಾ ವಿಶ್ವದ ದೊಡ್ಡ ತೈಲ ನಿಕ್ಷೇಪ ಹೊಂದಿದ್ದು, ಇಂಧನ ಕ್ಷೇತ್ರದಲ್ಲಿ ಭಾರತದ ಹೂಡಿಕೆಗೆ ಒತ್ತು ನೀಡಲಾಗಿದೆ. ಜತೆಗೆ ಔಷಧೀಯ ಉತ್ಪನ್ನಗಳ ಪೂರೈಕೆಯಲ್ಲಿ ಸಹಕಾರ ಕೂಡ ನೀಡಲಾಗಿದೆ. ಕೃಷಿ ಸುಧಾರಣೆ ಮತ್ತು ಡಿಜಿಟಲ್ ತಂತ್ರಜ್ಞಾನದ ಹಂಚಿಕೆ.ಗಣಿಗಾರಿಕೆ ಮತ್ತು ಪ್ರವಾಸೋದ್ಯಮದಲ್ಲೂ ಬಹುದೊಡ್ಡ ಪಾಲುದಾರಿಯನ್ನು ವಹಿಸಲಿದೆ. ಪ್ರಧಾನಿ ಮೋದಿ ಅವರು ವೆನೆಜುವೆಲಾದಲ್ಲಿ ಶಾಂತಿ, ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಲ್ಲಿ ಭಾರತದ ಬೆಂಬಲವನ್ನು ಪುನರುಚ್ಚರಿಸಿದ್ದಾರೆ. ಎರಡೂ ದೇಶಗಳು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ಹಿತಾಸಕ್ತಿ ಕಾಪಾಡಲು ನಿಕಟವಾಗಿ ಕೆಲಸ ಮಾಡಲು ನಿರ್ಧರಿಸಿವೆ.
ಜನವರಿ ಆರಂಭದಲ್ಲಿ ಅಮೆರಿಕವು ವೆನೆಜುವೆಲಾ ಮೇಲೆ ನಡೆಸಿದ ಕಾರ್ಯಾಚರಣೆಯ ನಂತರ ಅಲ್ಲಿನ ರಾಜಕೀಯ ಪರಿಸ್ಥಿತಿ ಅಸ್ಥಿರವಾಗಿದ್ದರೂ, ಭಾರತದೊಂದಿಗೆ ಆರ್ಥಿಕ ಮತ್ತು ಆಯಕಟ್ಟಿನ ಸಂಬಂಧವನ್ನು ಗಟ್ಟಿಗೊಳಿಸಲು ವೆನೆಜುವೆಲಾ ಮುಂದಾಗಿರುವುದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಕುತೂಹಲ ಮೂಡಿಸಿದೆ. ಅಮೆರಿಕವು ವೆನೆಜುವೆಲಾ ಮೇಲಿನ ತೈಲ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸಡಿಲಿಸಿದ ನಂತರ, ಭಾರತೀಯ ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್ (RIL) ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ವೆನೆಜುವೆಲಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಆಸಕ್ತಿ ತೋರಿವೆ.
ಷ್ಯಾದ ತೈಲದಂತೆ ವೆನೆಜುವೆಲಾ ಕೂಡ ಭಾರತಕ್ಕೆ ರಿಯಾಯಿತಿ ದರದಲ್ಲಿ ತೈಲ ನೀಡುವ ಸಾಧ್ಯತೆ ಇದೆ. ಇದು ಭಾರತದ ಇಂಧನ ದರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಭಾರತದ ಸಂಸ್ಕರಣಾಗಾರಗಳು ವೆನೆಜುವೆಲಾದ ‘ಭಾರೀ ಕಚ್ಚಾ ತೈಲ’ವನ್ನು ಸಂಸ್ಕರಿಸಲು ಬೇಕಾದ ಸುಧಾರಿತ ತಂತ್ರಜ್ಞಾನವನ್ನು ಹೊಂದಿವೆ, ಇದು ಉಭಯ ದೇಶಗಳಿಗೆ ಲಾಭದಾಯಕವಾಗಿದೆ. ವೆನೆಜುವೆಲಾದಲ್ಲಿ ಭಾರತದ ONGC ವಿದೇಶ್ ಲಿಮಿಟೆಡ್ (OVL) ಹೂಡಿಕೆ ಮಾಡಿರುವ ಯೋಜನೆಗಳಿಂದ ಬರಬೇಕಾದ ಸುಮಾರು 600 ಮಿಲಿಯನ್ ಡಾಲರ್ ಲಾಭಾಂಶ ಬಾಕಿ ಇದೆ. ಹೊಸ ಒಪ್ಪಂದದ ಪ್ರಕಾರ, ವೆನೆಜುವೆಲಾ ಈ ಬಾಕಿ ಹಣದ ಬದಲಿಗೆ ಭಾರತಕ್ಕೆ ಕಚ್ಚಾ ತೈಲವನ್ನು ಪೂರೈಸಲು ಒಪ್ಪಿಕೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ: ಕ್ಯೂಬಾಗೆ ತೈಲ ಪೂರೈಸುವ ದೇಶಗಳಿಗೆ ಟ್ರಂಪ್ ಬೆದರಿಕೆ
ಕೇವಲ ತೈಲವಲ್ಲದೆ, ಔಷಧೀಯ ಉತ್ಪನ್ನಗಳು , ಕೃಷಿ ಯಂತ್ರೋಪಕರಣಗಳು ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ನೀಡಲು ಉಭಯ ದೇಶಗಳು ಚರ್ಚಿಸಿವೆ. ಡಾಲರ್ ಅವಲಂಬನೆಯನ್ನು ಕಡಿಮೆ ಮಾಡಲು ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ ಮಾಡುವ ಸಾಧ್ಯತೆಗಳ ಬಗ್ಗೆಯೂ ಪ್ರಾಥಮಿಕ ಮಾತುಕತೆಗಳು ನಡೆದಿವೆ ಎನ್ನಲಾಗಿದೆ. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಿರುವಾಗ, ಭಾರತವು ತನ್ನ ತೈಲ ಪೂರೈಕೆಯನ್ನು ವೈವಿಧ್ಯಗೊಳಿಸಲು ವೆನೆಜುವೆಲಾವನ್ನು ಒಂದು ವಿಶ್ವಾಸಾರ್ಹ ಪಾಲುದಾರನಾಗಿ ನೋಡುತ್ತಿದೆ.
ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
