ಎಟಿಎಂಗೆ ತುಂಬುವ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿಯ ಬಂಧನ | ರಿವಾಲ್ವರ್ ತೋರಿಸಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಪಿಜಿ ಮಾಲಿಕನ ಬಂಧನ
ಎಟಿಎಂಗೆ ತುಂಬುವ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ಬಳ್ಳಾರಿಯ ಬ್ರೂಸ್ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ: ಎಟಿಎಂಗೆ (ATM) ತುಂಬುವ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ಬಳ್ಳಾರಿಯ (Ballari) ಬ್ರೂಸ್ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೀಲಕಂಠನ ಬಂಧಿತ ಆರೋಪಿ. ನೀಲಕಂಠನಿಂದ 56.18 ಲಕ್ಷ ಹಣ, ಕೃತ್ಯಕ್ಕೆ ಬಳಸಿದ ಬೈಕ್. ಎರಡು ಮೊಬೈಲ್ ಪೋನ್. ಬ್ಯಾಗನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ನೀಲಕಂಠ ಸಿಎಸ್ಎಂ ಕಂಪನಿಯಲ್ಲಿ ಕಸ್ಟೋಡಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದನು. ಮೇ 21ರಂದು ಎಟಿಎಂಗೆ ಹಣ ತುಂಬಲು ಹಣ ನೀಡಲಾಗಿತ್ತು ಕರ್ನಾಟಕ ಬ್ಯಾಂಕ್ ಶಾಖೆಯ ಎಟಿಎಂಗೆ ತುಂಬಬೇಕಿದ್ದ ಹಣದೊಂದಿಗೆ ಆರೋಪಿ ಕೊಪ್ಪಳಕ್ಕೆ ಪರಾರಿಯಾಗಿದ್ದನು. ಬಳ್ಳಾರಿ ನಗರದ ಮೀನಾಕ್ಷಿ ಸರ್ಕಲ್ನಲ್ಲಿ ಘಟನೆ ನಡೆದಿತ್ತು. ಬಳ್ಳಾರಿಯ ಬ್ರೂಸ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನು ಓದಿ: ಬುಡಕಟ್ಟು ಪ್ರದೇಶದಲ್ಲಿ ಜನರ ಆರೋಗ್ಯ ತಪಾಸಣೆಗೆ 10 ಕಿಮೀ ನಡೆದು ಬಂದ ಆರೋಗ್ಯ ಕಾರ್ಯಕರ್ತರು
ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಯ ಬಂಧನ
ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಯುವತಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಉದ್ಯಮಿ ಆರೋಪಿ ಅನಿಲ್ ರವಿಶಂಕರ್ ಪ್ರಸಾದ್ ಯುವತಿಗೆ ರಿವಾಲ್ವರ್ ತೋರಿಸಿ ಅತ್ಯಾಚಾರವೆಸಗಿದ್ದನು. ಆರೋಪಿ ಅನಿಲ್ ಒಡೆತನದ ಪಿಜಿಯಲ್ಲಿದ್ದ ಸಂತ್ರಸ್ತೆ ವಾಸವಾಗಿದ್ದಳು. ಆರೋಪಿ ಬೆಂಗಳೂರಿನಲ್ಲಿ ಟೈಲ್ಸ್ ಬ್ಯುಸಿನೆಸ್ ಮಾಡುತ್ತಿದ್ದನು. ಆರೋಪಿಯನ್ನು ಬಂಧಿಸಿ ಆರೋಪಿಯ ಪೊಲೀಸರು ರಿವಾಲ್ವರ್ ಜಪ್ತಿ ಮಾಡಿದ್ದಾರೆ. ಆರೋಪಿಯನ್ನು ಕೋರ್ಟ್ಗೆ ಹಾಜರುಪಡಿಸಿ ಪೊಲೀಸರು 3 ದಿನ ಕಸ್ಟಡಿಗೆ ಪಡೆದಿದ್ದಾರೆ.
ಇದನ್ನು ಓದಿ: ದ್ವಿತೀಯ ಪಿಯುಸಿ ಪಠ್ಯ ಪುಸ್ತಕ ಪರಿಷ್ಕರಣೆಗೆ ಚಾಲನೆ ನೀಡಿದ ಶಿಕ್ಷಣ ಇಲಾಖೆ
ಬೈಕ್ ಸವಾರನ ಮೇಲೆ ಪೊಲೀಸರ ದರ್ಪ
ತುಮಕೂರು: ಬಡಕಾರ್ಮಿಕ ವ್ಯಾಪಾರಕ್ಕೆ ತೆರಳುತ್ತಿದ್ದ ಬೈಕ್ ಸವಾರನ ಮೇಲೆ ಪೊಲೀಸರ ದರ್ಪ ಮೆರದಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಆಲದಕಟ್ಟೆ ಬಳಿ ನಡೆದಿದೆ. ಬೈಕ್ನಲ್ಲಿ ತೆರಳುವಾಗ ಸವಾರನ ಹತ್ತಿರ ಡ್ರೈವಿಂಗ್ ಲೈಸೆನ್ಸ್, ಇನ್ಶೂರೆನ್ಸ್ ಇರಲಿಲ್ಲ. ಹೀಗಾಗಿ ಬೈಕ್ ಸವಾರನ ದಾಖಲೆ ಪರಿಶೀಲನೆ ನೆಪದಲ್ಲಿ ಸವಾರನಿಗೆ ಪೊಲೀಸರು ಲಂಚ ಕೇಳಿದ್ದಾರೆ. ಲಂಚ ಕೇಳಿ ಸವಾರನಿಗೆ ಅವಾಚ್ಯ ಶಬ್ದಗಳಿಂದ ಪೊಲೀಸರು ನಿಂದಿಸಿದ್ದಾರೆ. ಬಳಿಕ ತಮ್ಮ ಸಂಬಂಧಿಯಿಂದ 200 ರೂ ತರಿಸಿಕೊಂಡು ಹಣ ತರಿಸಿಕೊಂಡು ನೀಡಿದ್ದಾನೆ. ಹಣ ನೀಡುವಾಗ ಮೊಬೈಲ್ನಲ್ಲಿ ವಿಡಿಯೋ ಮಾಡಿದ್ದಕ್ಕೆ ಪೊಲೀಸರು ಹಲ್ಲೆ ಮಾಡಿದ್ದಾರೆ. ಪೊಲೀಸರು ಬೈಕ್ ಸವಾರನ ಸಂಬಂಧಿಗೆ ಕೈಗೆ ಹಾಗೂ ಮರ್ಮಾಂಗಕ್ಕೆ ಒದ್ದಿರುವ ಆರೋಪ ಕೇಳಿ ಬಂದಿದೆ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಾಮರಾಜಪೇಟೆ ಬೆಳ್ಳಿ ಅಂಗಡಿಯ ಕಳ್ಳತನ ಪ್ರಕರಣದ ಪ್ರಮುಖ ಆರೋಪಿ ಅರೇಸ್ಟ್
ಚಾಮರಾಜಪೇಟೆ: ಚಾಮರಾಜಪೇಟೆ ಬೆಳ್ಳಿ ಅಂಗಡಿಯ ಕಳ್ಳತನ ಪ್ರಕರಣದ ಪ್ರಮುಖ ಆರೋಪಿ ರಾಹುಲ್ ಜೈನ್ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ರಾಹುಲ್ ಜೈನ್ ಅನ್ನ ಹಾಕಿದ ಮನೆಗೆ ಕನ್ನ ಹಾಕಿದ್ದನು. ಚಾಮರಾಜಪೇಟೆಯ ಬೃಂದಾವನ ನಗರದಲ್ಲಿರುವ ಉತ್ತಮ್ ಜೈನ್ ಮಾಲೀಕತ್ವದ ಬೆಳ್ಳಿ ಅಂಗಡಿಯಲ್ಲಿ ಐದಾರು ವರ್ಷದಿಂದ ರಾಹುಲ್ ಜೈನ್ ಕೆಲಸ ಮಾಡುತ್ತಿದ್ದನು. ಅಂಗಡಿಯಲ್ಲಿ ರಾಹುಲ್ ಜೈನ್ ಮತ್ತು ಪವನ್ ಎಂಬ ಇಬ್ಬರು ಕೆಲಸ ಮಾಡುತ್ತಿದ್ದರು. ಪವನ್ ಕೆಲ ದಿನಗಳ ಹಿಂದಷ್ಟೇ ಕೆಲಸ ಬಿಟ್ಟಿದ್ದನು. ರಾಹುಲ ಜೈನ್ಗೆ ಹುಡುಗಿಯರ ಶೋಕಿ ಇತ್ತು. ರಾಹುಲ ಬೆಳ್ಳಿ ಸಪ್ಲೆ, ಕ್ಯಾಶ್ ಕಲೆಕ್ಟ್ ಮಾಡೊ ಕೆಲಸ ಮಾಡುತ್ತಿದ್ದನು. ಇತ್ತೀಚಿಗೆ ಅಂಗಡಿ ಮಾಲಿಕ ಉತ್ತಮ್ ಜೈನ್ ಗೆ ಆ್ಯಕ್ಸಿಡೆಂಟ್ ಆಗಿ ಅಷ್ಟಾಗಿ ಅಂಗಡಿಗೆ ಬರುತ್ತಿರಲಿಲ್ಲ. ಆಗಾಗ ಅಷ್ಟೇ ಅಂಗಡಿಗೆ ಬಂದು ಹೋಗ್ತಿದ್ದರು.
ಹೀಗಾಗಿ ಅಂಗಡಿ ಉಸ್ತುವಾರಿ ಎಲ್ಲಾ ರಾಹುಲ್ ಜೈನ್ ನೋಡಿಕೊಳ್ಳುತ್ತಿದ್ದನು. ರಾಹುಲ್ ತಂದೆ ಗಾರ್ಮೆಂಟ್ಸ್ ಕೂಡ ನಡೆಸ್ತಿದ್ದರು. ಬೆಳ್ಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಲೇ ಹಲವೆಡೆ ಬಟ್ಟೆ ಅಂಗಡಿ ತೆರೆದಿದ್ದನು. ರಾಹುಲ್ ಜೈನ್ ಸುದ್ದಗುಂಟೆಪಾಳ್ಯದಲ್ಲಿ ಅಂಗಡಿ ಬಟ್ಟೆ ಅಂಗಡಿ ಓಪನ್ ಮಾಡಿದ್ದನು. ಬಟ್ಟೆ ಅಂಗಡಿಯಲ್ಲಿ ರಾಜೇಶ್ ಮತ್ತು ಮಧು ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದರು. ಮುಂದೆ ಬಟ್ಟೆ ಅಂಗಡಿ ಲಾಸ್ ಆಗಿದ್ದಕ್ಕೆ ಅಂಗಡಿಯನ್ನು ರಾಹುಲ್ ಜೈನ್ ಕ್ಲೋಸ್ ಮಾಡಿದ್ದನು. ನಾಗರಬಾವಿಯಲ್ಲಿಯೂ ಇದ್ದ ಬಟ್ಟೆ ಅಂಗಡಿ ಕೂಡ ಲಾಸ್ ಆಗಿ ಮುಚ್ಚಲ್ಪಡುತ್ತದೆ. ಅಂಗಡಿ ಲಾಸ್ ಆಗಿದ್ದರಿಂದ ಅಂಗಡಿಯಲ್ಲಿ ಮಧು ಮತ್ತು ರಾಜೇಶ್ ಕೆಲಸ ಕಳೆದುಕೊಂಡಿದ್ದರು. ಶನಿವಾರ ಮತ್ತೊಂದು ನಂದೇ ಅಂಗಡಿ ಇದೆ ಶಿಫ್ಟ್ ಮಾಡ್ಬೇಕು ಅಂತಾ ಪಿಜಿಯಿಂದ ರಾಜೇಶ್ ಮತ್ತು ಮಧು ರಾಹುಲ್ ಕರೆತಂದಿದ್ದನು.
ಹೀಗಾಗಿ ಬೃಂದಾವನದಲ್ಲಿರುವ ಪ್ಲಾನೆಟ್ ಹೋಲ್ಡಿಂಗ್ಸ್ ಬೆಳ್ಳಿ ಅಂಗಡಿಗೆ ಬಂದು ಕಾರ್ ನಿಲ್ಲಿಸಿದ್ದ. ರಾತ್ರಿ ೧೧ ಗಂಟೆಗೆ ಬಂದವರು ಬೀಗ ಕಳೆದುಹೋಗಿದೆ ಬೀಗ ಕಟ್ ಮಾಡಬೇಕು ಅಂತಾ ರಾಹುಲ್ ಹೇಳಿದ್ದನು. ಆಗ ರಾಜೇಶ್ ಮತ್ತು ಮಧು ಜೊತೆಗೆ ಬಂದಿದ್ದ ಮತ್ತೋರ್ವ ಹುಡುಗನಿಗೆ ಅನುಮಾನ ಬಂದಿದೆ. ಅವರದ್ದೇ ಅಂಗಡಿಯಲ್ಲಿ ರಾತ್ರಿ ಬಂದು ಯಾಕೆ ಬೀಗ ಮುರಿಯಬೇಕು ಬೆಳಗ್ಗೆಯೇ ಬಂದು ಲಾಕ್ ಮುರಿದು ಸಾಮಾಗ್ರಿ ತೆಗೆದುಕೊಂಡು ಹೋಗ್ಬಹುದಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ ರಾಜೇಶ್ ಮತ್ತು ಮಧು ಬರೋದು ಬಂದಿದಿವಿ ಕಳ್ಳತನ ಮಾಡಿಯೇ ಬಿಡೋಣ ಎಂದು ನಿರ್ಧರಿಸಿದ್ದರು. ಅದರಂತೆ ಮೊದಲು ಬಂದವರೇ 11 ಗಂಟೆವರೆಗು ಕಾದಿದ್ದಾರೆ. ನಂತರ ಬಂದ ರಾಜೇಶ್ ಲಾಕ್ ಕಟ್ ಮಾಡಿ ಅಂಗಡಿ ಓಪನ್ ಮಾಡುತ್ತಾನೆ. ಮಧು ಬೈಕ್ ರೈಸ್ ಮಾಡ್ಕೊಂಡು ಕಾಯ್ತಿದ್ದ. ಬಂದಿದ್ದ ಯುವಕ ಕಳ್ಳತನ ಸಹಾವಸ ಬೇಡ ಅಂತಾ ಹೊರಡಲು ಸಿದ್ಧವಾಗಿದ್ದನು. ರಾಹುಲ್ ಜೈನ್ ಆತನನ್ನು ದೂರದಲ್ಲೇ ಕಾರಲ್ಲಿ ಕೂರಿಸಿಕೊಂಡಿದ್ದನು. ಫೋನ್ ಮೂಲಕ ಎಲ್ಲೆಲ್ಲಿ ಹಣ ಬೆಳ್ಳಿ ಇದೆ ಎಲ್ಲವನ್ನು ರಾಹುಲ್ , ರಾಜೇಶ್ ಗೆ ಹೇಳ್ತಿದ್ದನು. ರಾಜೇಶ್ ಒಳಹೋಗಿ ಕ್ಯಾಶ್ ಮತ್ತು ಸಿಲ್ವರ್ ಬಾಕ್ಸ್ ತೆಗೆದುಕೊಂಡು ಬಂದಿದ್ದನು.
ಮೊದಲ ಬಾರಿ ಗಟ್ಟಿ ಕರಗಿಸಿದ್ದ ಬೆಳ್ಳಿ ತೆಗೆದುಕೊಂಡು ಬಂದ ರಾಜೇಶ್ನು, ರೆಡಿ ಬೆಳ್ಳಿ ಆಭರಣ ಅಲ್ಲೇ ಬಿಟ್ಟುಬಂದಿದ್ದನು. ರಾಹುಲ್ ಜೈನ್ ಮತ್ತೆ ರಾಜೇಶ್ ಕರೆದುಕೊಂಡು ಅಂಗಡಿಗೆ ಬಂದಿದ್ದನು. ಆದರೆ ಅಲ್ಲೆ ಹತ್ತಿರದಲ್ಲಿ ಬೇರೆಯವರು ಇದ್ದಿದ್ದರಿಂದ ವಾಪಸ್ ಹೋಗಿಬಿಟ್ರು. ಉತ್ತಮ್ ಜೈನ್ ಭಾನುವಾರ ಬೆಳಿಗ್ಗೆ 11 ಗಂಟೆಗೆ ಬಂದಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬೀರಲಿಂಗೇಶ್ವರ ದೇವಸ್ಥಾನದ ಅರ್ಚಕನ ಬರ್ಬರ ಹತ್ಯೆ
ದಾವಣಗೆರೆ: ಬೀರಲಿಂಗೇಶ್ವರ ದೇವಸ್ಥಾನದ ಅರ್ಚಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದಲ್ಲಿ ನಡೆದಿದೆ. ಕುಮಾರಸ್ವಾಮಿ(45) ಕಲೆಯಾದ ದುರ್ದೈವಿ. ಸ್ಥಳಕ್ಕೆ ಎಸ್ಪಿ ಸಿ.ಬಿ.ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಆಸ್ತಿಗಾಗಿ ಪತ್ನಿಯ ತಮ್ಮನನ್ನೇ ಕೊಲೆ ಮಾಡಿ ಮಾವ
ಬಾಗಲಕೋಟೆ: ಆಸ್ತಿಗಾಗಿ ಪತ್ನಿಯ ತಮ್ಮನನ್ನೇ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ತಾಲೂಕಿನ ಶಿರೂರು ಗ್ರಾಮದಲ್ಲಿ ನಡೆದಿದೆ. ಸಂಗಪ್ಪ ಕೋಟಿ ಕೊಲೆಯಾದ ವ್ಯಕ್ತಿ. ರಮೇಶ್, ಸಂಗಪ್ಪ ಕೋಟಿಯ ಅಕ್ಕನ ಗಂಡ ಕೊಲೆ ಮಾಡಿದ ಆರೋಪಿ. ಕಳೆದ ಎರಡು ವರ್ಷಗಳಿಂದ ಆಸ್ತಿಗಾಗಿ ಕಲಹ ನಡೆಯುತ್ತಿತ್ತು. ಮಾವ ರಮೇಶ್ ಅಂಗಡಿ, ಅಳಿಯ ಸಂಗಪ್ಪನ ಮಧ್ಯೆ ಗಲಾಟೆ ನಡೆಯುತ್ತಿತ್ತು. ಸಂಗಪ್ಪ ಕೋಟಿ ಹೊಲದಿಂದ ಬರುವಾಗ ರಮೇಶ್ ಕಲ್ಲಿನಿಂದ ಚಚ್ಚಿ ಕೊಲೆಗೈದು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಪೊಲೀಸರ ಭೇಟಿ ನೀಡಿದ್ದಾರೆ. ಆರೋಪಿ ರಮೇಶ್ಗಾಗಿ ಗ್ರಾಮೀಣ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:37 pm, Mon, 23 May 22