AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಹೈಕಮಾಂಡ್​ಗೆ ತಲೆನೋವಾದ ಪರಿಷತ್​​ ಅಭ್ಯರ್ಥಿಗಳ ಆಯ್ಕೆ ವಿಚಾರ: ಇಂದು ಮಧ್ಯಾಹ್ನ ಅಥವಾ ಸಂಜೆ ಅಭ್ಯರ್ಥಿಗಳ ಪಟ್ಟಿ ಪ್ರಕಟ ನಿರೀಕ್ಷೆ

ಬಿಜೆಪಿ ಹೈಕಮಾಂಡ್​ಗೆ ಪರಿಷತ್​​ ಅಭ್ಯರ್ಥಿ ಆಯ್ಕೆ ತಲೆನೋವು ಉಂಟು ಮಾಡಿದ್ದು, ಅದೊಂದು ಅಭ್ಯರ್ಥಿ ಬಗ್ಗೆ ಬಿಜೆಪಿ ಹೈಕಮಾಂಡ್​​​​ನಲ್ಲಿ ಗೊಂದಲ ಉಂಟಾಗಿದೆ.

ಬಿಜೆಪಿ ಹೈಕಮಾಂಡ್​ಗೆ ತಲೆನೋವಾದ ಪರಿಷತ್​​ ಅಭ್ಯರ್ಥಿಗಳ ಆಯ್ಕೆ ವಿಚಾರ: ಇಂದು ಮಧ್ಯಾಹ್ನ ಅಥವಾ ಸಂಜೆ ಅಭ್ಯರ್ಥಿಗಳ ಪಟ್ಟಿ ಪ್ರಕಟ ನಿರೀಕ್ಷೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: May 23, 2022 | 12:45 PM

Share

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಇಂದು ಮಧ್ಯಾಹ್ನ ಅಥವಾ ಸಂಜೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ನಿರೀಕ್ಷೆಯಿದೆ. ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆಯ ದಿನವಾಗಿದ್ದು, ನಾಲ್ಕು ಸ್ಥಾನಗಳಿಗೆ ಹೈಕಮಾಂಡ್ ಅಭ್ಯರ್ಥಿಗಳ ಹೆಸರು ಪ್ರಕಟಿಸಬೇಕಿದೆ. ಬಿ.ವೈ. ವಿಜಯೇಂದ್ರ, ಎಂ. ರಾಜೇಂದ್ರ, ಲಕ್ಷ್ಮಣ ಸವದಿ, ನಿರ್ಮಲ್ ಕುಮಾರ್ ಸುರಾನಾ, ಗೀತಾ ವಿವೇಕಾನಂದ, ಕೇಶವಪ್ರಸಾದ್, ಛಲವಾದಿ ನಾರಾಯಣಸ್ವಾಮಿ, ಸಿದ್ಧರಾಜು, ಮಂಜಳಾ ಸೇರಿದಂತೆ ಹಲವು ಹೆಸರು ರೇಸ್​ನಲ್ಲಿವೆ. ವಿಜಯೇಂದ್ರಗೆ ಟಿಕೆಟ್ ಸಿಗುವ ಬಗ್ಗೆ ಕುತೂಹಲ ಹೆಚ್ಚಿದೆ. ಕುಟುಂಬ ರಾಜಕಾರಣದ ಬಗ್ಗೆ ಆಗಾಗ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತಿರುವ ವರಿಷ್ಠರು, ಹೀಗಾಗಿ ವಿಜಯೇಂದ್ರಗೆ ಟಿಕೆಟ್ ನೀಡುವ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ರಾಜ್ಯ ಕೋರ್ ಕಮಿಟಿಯಿಂದ ಕೇಂದ್ರೀಯ ಚುನಾವಣಾ ಸಮಿತಿಗೆ ವಿಜಯೇಂದ್ರ ಹೆಸರು ಶಿಫಾರಸ್ಸು ಮಾಡಲಾಗಿದೆ. 1:5 ರಂತೆ ನಾಲ್ಕು ಸ್ಥಾನಗಳಿಗೆ 20 ಹೆಸರುಗಳನ್ನು ಹೈಕಮಾಂಡ್ ತರಿಸಿಕೊಂಡಿದೆ.

ಬಿಜೆಪಿ ಹೈಕಮಾಂಡ್​ಗೆ ತಲೆನೋವಾದ ಅದೊಂದು ಅಭ್ಯರ್ಥಿ ಆಯ್ಕೆ:

ಬಿಜೆಪಿ ಹೈಕಮಾಂಡ್​ಗೆ ಪರಿಷತ್​​ ಅಭ್ಯರ್ಥಿ ಆಯ್ಕೆ ತಲೆನೋವು ಉಂಟು ಮಾಡಿದ್ದು, ಅದೊಂದು ಅಭ್ಯರ್ಥಿ ಬಗ್ಗೆ ಬಿಜೆಪಿ ಹೈಕಮಾಂಡ್​​​​ನಲ್ಲಿ ಗೊಂದಲ ಉಂಟಾಗಿದೆ. ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಸ್ಥಾನ ನೀಡಬೇಕೆ? ಬೇಡವೇ ಬಿ.ವೈ.ವಿಜಯೇಂದ್ರಗೆ ಸ್ಥಾನ ನೀಡಿದರೆ ಹೋಗುವ ಸಂದೇಶ ಏನು? ಬಿ.ವೈ.ವಿಜಯೇಂದ್ರಗೆ ಸ್ಥಾನ ನೀಡದಿದ್ದರೆ ಪರಿಣಾಮ ಏನಾಗಬಹುದು? ವಿಜಯೇಂದ್ರಗೆ ಸ್ಥಾನ ನೀಡದಿದ್ರೆ ಬಿ.ಎಸ್​. ಯುಡಿಯೂರಪ್ಪ ಮುನಿಸಿಕೊಳ್ಳದೆ ಇರುವರೇ? ಬಿಜೆಪಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಸಿತುಪ್ಪವಾಗಿದ್ದಾರೆ. ಸದ್ಯ ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ ಮೇಲೆ ಬಾರ ಹಾಕಿ ಕುಳಿತಿದ್ದಾರೆ. ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಇಂದು ಸಂಜೆಯೊಳಗೆ ಬಿಜೆಪಿ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Blindness: ಈ ಆಹಾರಗಳ ಸೇವನೆ ನಿಮ್ಮ ಕುರುಡುತನಕ್ಕೂ ಕಾರಣವಾಗಬಹುದು

ವಿಜಯೇಂದ್ರ ಪರ ಹಾಲಪ್ಪ ಆಚಾರ್ ಬ್ಯಾಟಿಂಗ್:

ಕೊಪ್ಪಳ: ಉಪಾಧ್ಯಕ್ಷರಾಗಿ ವಿಜಯೇಂದ್ರ ಏನೂ ದುಡದೇ ಇಲ್ವಾ..? ಅವರು ಕಾರ್ಯಕರ್ತ ಎಂದು ನೀವ್ಯಾಕೆ ಭಾವಿಸಲ್ಲ ಎಂದು ಕೊಪ್ಪಳದಲ್ಲಿ ಗಣಿ ಸಚಿವ ಹಾಲಪ್ಪ ಆಚಾರ್ ವಿಜಯೇಂದ್ರ ಪರ ಬ್ಯಾಟಿಂಗ್ ಮಾಡಿದ್ದಾರೆ. ನಮ್ಮ ರಾಷ್ಟ್ರೀಯ ನಾಯಕರು ತಗೆದುಕೊಳ್ಳೋ ನಿರ್ಧಾರ ಬಹಳ ಸ್ಪಷ್ಟವಾಗಿರತ್ತೆ. ಯಾವ ಕಾರ್ಯಕರ್ತರನ್ನು ಬಿಟ್ಟುಕೊಡಲ್ಲ. ವಿಜಯೇಂದ್ರ ಮೊದಲು ಕಾರ್ಯಕರ್ತ. ಇಲ್ಲಿ ಕುಟುಂಬ ರಾಜಕಾರಣದ ಮಾತೇ ಬರಲ್ಲ. ಬಿಜೆಪಿಯಲ್ಲಿ ಮೊದಲು ಕಾರ್ಯಕರ್ತರಿಗೆ ಆಧ್ಯತೆ ನೀಡಲಾಗುತ್ತೆ. ಕುಟುಂಬದಲ್ಲಿ ಯಾರಾದ್ರೂ ರಾಜಕಾರಣ ಮಾಡಿದ್ರೆ, ಇನ್ನುಳಿದವರು ಕಾರ್ಯಕರ್ತರಾಗಿ ಕೆಲಸ ಮಾಡಬಾರದಾ ಎಂದು ಪ್ರಶ್ನಿಸಿದ್ದಾರೆ. ಉಪಚುನಾವಣೆಯಲ್ಲಿ ವಿಜಯೇಂದ್ರ ಯಾವ ರೀತಿ ಕೆಲಸ ಮಾಡೀದಾರೆ ಅನ್ನೋದು ಗೊತ್ತಿದೆ ಎಂದು ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.