AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಠ್ಯ ಪುಸ್ತಕಗಳು ಪಕ್ಷ ಪುಸ್ತಕಗಳಾಗಬಾರದು: ಟಿಪ್ಪು ಪಠ್ಯ ವಿವಾದಕ್ಕೆ ಬರಗೂರು ರಾಮಚಂದ್ರಪ್ಪ ಪ್ರತಿಕ್ರಿಯೆ

ಟಿಪ್ಪು ವಿವಾದ ಕುರಿತು ಪ್ರತಿಕ್ರಿಯಿಸಿರುವ ಹಾಲಿ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ‘ಟಿಪ್ಪುವಿನ ವೈಭವೀಕರಣಕ್ಕೆ ಯಾವುದೇ ಆಧಾರವಿಲ್ಲ, ಸರಿಯಾದ ಮಾಹಿತಿ ಇಲ್ಲ’ ಎಂದು ಹೇಳಿದರು.

ಪಠ್ಯ ಪುಸ್ತಕಗಳು ಪಕ್ಷ ಪುಸ್ತಕಗಳಾಗಬಾರದು: ಟಿಪ್ಪು ಪಠ್ಯ ವಿವಾದಕ್ಕೆ ಬರಗೂರು ರಾಮಚಂದ್ರಪ್ಪ ಪ್ರತಿಕ್ರಿಯೆ
ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ ಮತ್ತು ರೋಹಿತ್ ಚಕ್ರತೀರ್ಥ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Mar 30, 2022 | 7:49 AM

Share

ಬೆಂಗಳೂರು: ಕರ್ನಾಟಕದ ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಸುಲ್ತಾನ್ ಕುರಿತ ಪಠ್ಯಕ್ಕೆ ಸಂಬಂಧಿಸಿದಂತೆ ವಿಜ್ಞಾನ ಲೇಖಕ ರೋಹಿತ್ ಚಕ್ರತೀರ್ಥ ಹೇಳಿಕೆಗೆ ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರತಿಕ್ರಿಯಿಸಿದ್ದಾರೆ. ಟಿವಿ9 ಕನ್ನಡ ವಾಹಿನಿಯೊಂದಿಗೆ ಮಾತನಾಡಿರುವ ಅವರು, ಪಠ್ಯಪುಸ್ತಕ ರಚನೆಗಾಗಿ ವಿವಿಧ ವಿಷಯಗಳಿಗೆ ಸಂಬಂಧಿಸಿದ 27 ಸಮಿತಿಗಳಿದ್ದವು. ಈ ಸಮಿತಿಗಳಿಗೆ ಪ್ರತ್ಯೇಕವಾಗಿ ಅಧ್ಯಕ್ಷರೂ ಇದ್ದರು. ಇವರೆಲ್ಲ ವಿಷಯ ತಜ್ಞರು. ಸಮಾಜ ವಿಜ್ಞಾನ ಪಠ್ಯ ವಿಷಯಗಳನ್ನು ಇತಿಹಾಸ ವಿಷಯ ತಜ್ಞರು ಬರೆದಿದ್ದರು. ಯಾವುದೇ ಪಠ್ಯದಲ್ಲಿ ಅಕಸ್ಮಾತ್‌ ತಪ್ಪು ಮಾಹಿತಿಗಳು ಅರಿವಿಲ್ಲದೇ ಬಂದಿದ್ದರೆ ಅಂಥವನ್ನು ತಿದ್ದುವುದು ತಪ್ಪಲ್ಲ ಎಂದು ಹೇಳಿದರು.

ಪಠ್ಯದಲ್ಲಿ ಯಾವುದೇ ಮಾಹಿತಿಯನ್ನು ಸೇರಿಸುವುದಕ್ಕೆ ಮತ್ತು ಬಿಡುವುದಕ್ಕೆ ಅಧಾರಗಳಿರಬೇಕು. ಇದನ್ನು ನಾನು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ಈಗ ಲಭ್ಯವಿರುವ ಮಾಹಿತಿ ಪ್ರಕಾರ ನಾವು ತಿಳಿಸಿದಂತೆ ಟಿಪ್ಪುವಿಗೆ ಸಂಬಂಧಿಸಿದ ಕೆಲ ಮಾಹಿತಿಗಳನ್ನು ಕೈ ಬಿಡಲಾಗಿದೆ. ಹಿಂದೆ ಇದ್ದ ಮಾಹಿತಿಗಳು ಆಧಾರ ರಹಿತವಾಗಿರಲಿಲ್ಲ. ಶೃಂಗೇರಿಯನ್ನೂ ಒಳಗೊಂಡಂತೆ ಕೆಲವು ದೇವಾಲಯಗಳಿಗೆ ಟಿಪ್ಪು ಸಹಾಯ ಮಾಡಿರುವ ವಿಷಯವನ್ನು ಚರಿತ್ರೆಕಾರರು ಹಿಂದಿನಿಂದ ಹೇಳಿದ್ದಾರೆ. ತನ್ನ ಸಂಸ್ಥಾನದ ಅಭಿವೃದ್ಧಿಗೆ ಟಿಪ್ಪು ಆರಂಭಿಸಿದ್ದ ಯೋಜನೆಗಳ ಬಗ್ಗೆಯೂ ಹಿಂದಿನಿಂದ ಹೇಳಲಾಗಿದೆ. ಈ ಹೇಳಿಕೆಗಳನ್ನು ಆಧಾರರಹಿತ ಎನ್ನುವವರು ತಾವು ಸಂಗ್ರಹಿಸಿರುವ ಪುರಾವೆಗಳನ್ನು ಕೊಡಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಟಿಪ್ಪುವನ್ನು ಮೈಸೂರು ಹುಲಿ ಎಂದು ಕರೆಯುವ ರೂಢಿಯಿದೆ. ನಾವು ಓದುವಾಗಲೂ ಇದು ರೂಢಿಯಲ್ಲಿತ್ತು. ಇದು ಹೋಗಲಿ ಎಂದರೆ ಉಳಿದವನ್ನು ತೆಗೆಯಲು ಕಾರಣಗಳಿಲ್ಲ. ಪಠ್ಯದಲ್ಲಿ ಅಳವಡಿಕೆಯಾಗಿರುವ ಮಾಹಿತಿ ಬೇರೆ, ಅಗನತ್ಯ ವೈಭವೀಕರಣ ಬೇರೆ. ಈ ಅಂಶಗಳನ್ನು ಸೂಕ್ಷ್ಮವಾಗಿ ಪರಿಗಣಿಸಬೇಕು. ಯಾವುದೇ ವಿಷಯದಲ್ಲಿ ವೈಭವೀಕರಣದ ಅಂಶಗಳು ಕಂಡುಬಂದಿದ್ದರೆ ಅಂಥವನ್ನು ತಿದ್ದುಪಡಿ ಮಾಡುವುದರಲ್ಲಿ ತಪ್ಪಿಲ್ಲ. ಆದರೆ ಪಠ್ಯಪುಸ್ತಕಗಳು ಎನ್ನುವುದು ಯಾವುದೇ ಪಕ್ಷದ ಪುಸ್ತಕಗಳಲ್ಲ, ಹಾಗೆ ಆಗಬಾರದು ಎಂದು ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯ ಮಾಜಿ ಸರ್ವಾಧ್ಯಕ್ಷ ಬರಗೂರು ರಾಮಚಂದ್ರಪ್ಪ ಸ್ಪಷ್ಟಪಡಿಸಿದರು.

ಟಿಪ್ಪು ವಿವಾದ ಕುರಿತು ಪ್ರತಿಕ್ರಿಯಿಸಿರುವ ಹಾಲಿ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ‘ಟಿಪ್ಪುವಿನ ವೈಭವೀಕರಣಕ್ಕೆ ಯಾವುದೇ ಆಧಾರವಿಲ್ಲ, ಸರಿಯಾದ ಮಾಹಿತಿ ಇಲ್ಲ’ ಎಂದು ಹೇಳಿದರು.

ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ್ ಕುರಿತ ಪಠ್ಯ ಮತ್ತು ಟಿಪ್ಪು ಸುಲ್ತಾನ್​ಗೆ ಇರುವ ಮೈಸೂರು ಹುಲಿ ಎನ್ನುವ ಬಿರುದಿನ ಸುತ್ತ ಎದ್ದಿರುವ ವಿವಾದದ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. 2014ರ ಅವಧಿಯಲ್ಲಿ ಆದ ಪಠ್ಯ ಪರಿಷ್ಕರಣೆಯಲ್ಲಿ ಈ ಅಂಶಗಳು ಪಠ್ಯದಲ್ಲಿ ಸೇರ್ಪಡೆಗೊಂಡವು. ಆಗ ಬರಗೂರು ರಾಮಚಂದ್ರಪ್ಪ ಮತ್ತು ಅವರ ನೇತೃತ್ವದ ತಂಡ ಕಾರ್ಯನಿರ್ವಹಿಸುತ್ತಿತ್ತು ಎನ್ನಲಾಗಿದೆ. ಸರ್ಕಾರ ಸಲ್ಲಿಸಿದ ಪರಿಷ್ಕರಣೆ ಶಿಫಾರಸು ಆಧಾರದ ಮೇಲೆ 2017ರಲ್ಲಿ ಟಿಪ್ಪು ವೈಭವೀಕರಣ ಪಠ್ಯದಲ್ಲಿ ಸೇರಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ಸಾಮಾನ್ಯವಾಗಿ 10ರಿಂದ 12 ವರ್ಷಗಳಿಗೊಮ್ಮೆ ಪಠ್ಯ ಬದಲಿಸುವುದು ವಾಡಿಕೆ. ಆದರೆ ಬರಗೂರು ರಾಮಚಂದ್ರಪ್ಪ ಪರಿಷ್ಕರಿಸಿದ ಪಠ್ಯವ್ನು 5 ವರ್ಷಕ್ಕೆ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: ಮದರಸಾ ಶಾಲೆಗಳನ್ನು ಸರ್ಕಾರ ವಹಿಸಿಕೊಳ್ಳುವುದಿಲ್ಲ -ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್ ಕೈಬಿಡುವುದಿಲ್ಲ: ಶಿಕ್ಷಣ ಸಚಿವ ನಾಗೇಶ್​

ಇದನ್ನೂ ಓದಿ: ‘ಮೈಸೂರು ಹುಲಿ’ ಬಿರುದು ಕೊಟ್ಟವರು ಯಾರು? ಟಿಪ್ಪು ಸುಲ್ತಾನ್ ವೈಭವೀಕರಣ ಇನ್ನು ಸಾಕು- ಸರ್ಕಾರಕ್ಕೆ ರೋಹಿತ್ ಚಕ್ರತೀರ್ಥ ಸಲಹೆ

Published On - 7:45 am, Wed, 30 March 22

ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆಗಳಿಂದ ಯಾರೂ ಸೋಂಬೇರಿಗಳಾಗಿಲ್ಲ: ಸಿದ್ದರಾಮಯ್ಯ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ನಗರಪಾಲಿಕೆ ನೌಕರರ ಸಮಸ್ಯೆಗಳ ಕಡೆ ಸಿಎಂ ಕೂಡಲೇ ಗಮನಹರಿಸಬೇಕು: ವಿಜಯೇಂದ್ರ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ