‘ಮೈಸೂರು ಹುಲಿ’ ಬಿರುದು ಕೊಟ್ಟವರು ಯಾರು? ಟಿಪ್ಪು ಸುಲ್ತಾನ್ ವೈಭವೀಕರಣ ಇನ್ನು ಸಾಕು- ಸರ್ಕಾರಕ್ಕೆ ರೋಹಿತ್ ಚಕ್ರತೀರ್ಥ ಸಲಹೆ

Mysore Tiger Tipu Sultan: ಟಿಪ್ಪುವಿನ ಬಗ್ಗೆ ಬರಗೂರು ರಾಮಚಂದ್ರಪ್ಪಗೆ ಸ್ಪಷ್ಟ ಮಾಹಿತಿ ಇಲ್ಲ. ಮನಸ್ಸಿಗೆ ಬಂದಂತೆ ಟಿಪ್ಪುವಿನ ವೈಭವೀಕರಣ ಮಾಡಲಾಗಿದೆ. ಮುಖ್ಯವಾಗಿ ಈಗ ಟಿಪ್ಪು ಬಿರುದು ತೆಗೆಯುವಂತೆ ವರದಿ ನೀಡಿದ್ದೇವೆ ಎಂದು ರೋಹಿತ್ ಚಕ್ರತೀರ್ಥ ಹೇಳಿದ್ದಾರೆ. ಜಾತಿ ಮತಗಳ ಬಗ್ಗೆ ಟಿಪ್ಪುವಿನ ಮಾತನ್ನೂ ಪಠ್ಯದಿಂದ ತೆಗೆಯಬೇಕು ಎಂದು ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಟಿವಿ9 ಜೊತೆ ಮಾತನಾಡುತ್ತಾ ತಿಳಿಸಿದರು.

‘ಮೈಸೂರು ಹುಲಿ’ ಬಿರುದು ಕೊಟ್ಟವರು ಯಾರು? ಟಿಪ್ಪು ಸುಲ್ತಾನ್ ವೈಭವೀಕರಣ ಇನ್ನು ಸಾಕು- ಸರ್ಕಾರಕ್ಕೆ ರೋಹಿತ್ ಚಕ್ರತೀರ್ಥ ಸಲಹೆ
'ಮೈಸೂರು ಹುಲಿ' ವೈಭವೀಕರಣಕ್ಕೆ ಕೊಡಲಿಪೆಟ್ಟು, ಟಿಪ್ಪು ಸುಲ್ತಾನ್ ನನ್ನು ಇನ್ನು 'ಮೈಸೂರು ಹುಲಿ' ಎಂದು ಕರೆಯುವುದು ಬೇಡ- ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ
Follow us
| Updated By: ಸಾಧು ಶ್ರೀನಾಥ್​

Updated on:Mar 28, 2022 | 7:37 PM

ಬೆಂಗಳೂರು: ಕೇವಲ ಶಾಲಾ ಪಠ್ಯದಲ್ಲಿ ವೈಭವೀಕರಣಕ್ಕೆ ಕಂಟಕ ಮಾತ್ರವಲ್ಲ ‘ಮೈಸೂರು ಹುಲಿ’ ಟಿಪ್ಪು ಸುಲ್ತಾನ್ (Mysore Tiger Tipu Sultan) ಎಂಬ ಬಿರುದಿಗೂ ಆಪತ್ತು ಎದುರಾಗಿದೆ. ಮುಖ್ಯವಾಗಿ ಈ ಬಿರುದನ್ನು ತೆಗೆಯುವಂತೆ ಪಠ್ಯ ಪರಿಷ್ಕರಣೆ ಸಮಿತಿ ಸಲಹೆ ನೀಡಿದೆ. ಈಗಾಗಲೇ ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ಈ ಅಂಶ ಉಲ್ಲೇಖಗೊಂಡಿದೆ. ಸರ್ಕಾರವು ಈ ವರದಿಯನ್ನು ಪರಿಶೀಲನೆ ಮಾಡಿ, ಪರಿಷ್ಕರಣೆಗೆ ಮುಂದಾದ್ರೆ ಬಿರುದಿಗೆ ಕುತ್ತು ಗ್ಯಾರೆಂಟಿ ಎನ್ನಲಾಗಿದೆ. ಹಾಗಾದ್ರೆ ಮುಂದಿನ ಶೈಕ್ಷಣಿಕ ವರ್ಷದಿಂದ ಮೈಸೂರು ಹುಲಿ ಬಿರುದು ಇರೊಲ್ವಾ? ಮೈಸೂರು ಹುಲಿ ಎಂಬ ಬಿರುದಿಗೆ ಕತ್ತರಿ ಹಾಕುತ್ತಾ ರಾಜ್ಯ ಸರ್ಕಾರ? ಎಬ ಪ್ರಶ್ನೆ ಈಗ ಎದ್ದಿದೆ.

‘ಮೈಸೂರು ಹುಲಿ’ ಎಂಬ ಬಿರುದನ್ನ ಕೈ ಬಿಡುವ ಸಾಧ್ಯತೆಯಿದೆ ಎಂದು ಪಠ್ಯ ಪುಸ್ತಕ ಸಮಿತಿ (Textbook Review Committee) ಅಧ್ಯಕ್ಷ, ಚಿಂತಕ ರೋಹಿತ್ ಚಕ್ರತೀರ್ಥ (Rohith Chakrathirtha) ಹೇಳಿದ್ದಾರೆ. ಟಿಪ್ಪುಗೆ ‘ಮೈಸೂರು ಹುಲಿ’ ಎಂದು ಬಿರುದು ಕೊಟ್ಟಿದ್ಯಾರು? ಬಿರುದು ಕೊಟ್ಟಿರುವ ಬಗ್ಗೆ ಮಾಹಿತಿ ಎಲ್ಲೂ ಅಡಕವಾಗಿಲ್ಲ. ಉಲ್ಲೇಕವಾಗಿಲ್ಲ, ದಾಖಲೆಗಳೂ ಇಲ್ಲ. ಸುಖಾ ಸುಮ್ಮನೇ ಮೈಸೂರು ಹುಲಿ ಎಂದು ವೈಭವೀಕರಣ ಮಾಡಲಾಗುತ್ತಿದೆ. ಜಾತಿ ಮತಗಳ ಬಗ್ಗೆ ಟಿಪ್ಪು ಬೇಕಾಬಿಟ್ಟಿಯಾಗಿ ಮಾತನಾಡಿದ್ದಾರೆ ಎಂದು ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿದ್ದಾರೆ.

ಯಾವುದೇ ದಾಖಲೆಯಿಲ್ಲದೆ, ತಪ್ಪುತಪ್ಪಾಗಿ ಟಿಪ್ಪು ಬಗ್ಗೆ ಪರಿಷ್ಕರಣೆ ಮಾಡಿದ್ದ ಬರಗೂರು ರಾಮಚಂದ್ರಪ್ಪ ಈ ಹಿಂದೆ, ಬರಗೂರು ರಾಮಚಂದ್ರಪ್ಪ ಪರಿಷ್ಕರಣೆ ಮಾಡಿದ್ದಾರೆ. ಟಿಪ್ಪುವಿನ ಬಗ್ಗೆ ಬರಗೂರು ರಾಮಚಂದ್ರಪ್ಪಗೆ ಸ್ಪಷ್ಟ ಮಾಹಿತಿ ಇಲ್ಲ. ಮನಸ್ಸಿಗೆ ಬಂದಂತೆ ಟಿಪ್ಪುವಿನ ವೈಭವೀಕರಣ ಮಾಡಲಾಗಿದೆ. ಮುಖ್ಯವಾಗಿ ಈಗ ಟಿಪ್ಪು ಬಿರುದು ತೆಗೆಯುವಂತೆ ವರದಿ ನೀಡಿದ್ದೇವೆ ಎಂದು ರೋಹಿತ್ ಚಕ್ರತೀರ್ಥ ಹೇಳಿದ್ದಾರೆ. ಜಾತಿ ಮತಗಳ ಬಗ್ಗೆ ಟಿಪ್ಪುವಿನ ಮಾತನ್ನೂ ಪಠ್ಯದಿಂದ ತೆಗೆಯಬೇಕು. ಮುಖ್ಯವಾಗಿ 2 ವಿಚಾರಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದೇವೆ ಎಂದು ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಟಿವಿ9 ಜೊತೆ ಮಾತನಾಡುತ್ತಾ ತಿಳಿಸಿದರು.

ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪರಿಷ್ಕರಣೆ ಪಠ್ಯ ಜಾರಿ 15 ದಿನಗಳ ಹಿಂದೆ ಸರ್ಕಾರಕ್ಕೆ ವರದಿ ನೀಡಿದ್ದೇವೆ. ಕೇವಲ ಟಿಪ್ಪು ವಿಚಾರ ಮಾತ್ರವಲ್ಲ ಅನೇಕ ವಿಚಾರಗಳು ಪರಿಷ್ಕರಣೆ ಆಗಿವೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪರಿಷ್ಕರಣೆ ಪಠ್ಯ ಜಾರಿಯಾಗಲಿದೆ. ಒಟ್ಟು 1 ರಿಂದ 10ನೇ ತರಗತಿಯ ಪಠ್ಯವನ್ನ ಪರಿಷ್ಕರಣೆ ಮಾಡಿದ್ದೇವೆ. ಈ ಪೈಕಿ 1 ರಿಂದ 5ನೇ ತರಗತಿಯ ಭಾಷಾ ವಿಷಯಗಳು ಹಾಗೂ 6 ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ವಿಷಯಗಳ ಪರಿಷ್ಕರಣೆ ಆಗಿದೆ. ಟಿಪ್ಪು ಬಗ್ಗೆ ಹೆಚ್ಚಾಗಿ ವೈಭವೀಕರಣ ಆಗಿರೋ ಹಿನ್ನೆಲೆ ಈ ಎಲ್ಲ ತರಗತಿಯ ಪಠ್ಯಗಳಿಗೂ ಪರಿಷ್ಕರಣೆ ಮಾಡಿದ್ದೇವೆ.

Education Minister BC Nagesh Will Answer Revise Syllabus On Tipu Sultan

ಕಾಶ್ಮೀರ್ ಫೈಲ್ಸ್ ನಲ್ಲಿ ಚಿಕ್ಕದಾಗಿ ಉಲ್ಲೇಖವಾಗಿರೋ ಲಲಿತಾದಿತ್ಯ ಇತಿಹಾಸ ಪಠ್ಯಕ್ಕೆ ಸೇರ್ಪಡೆ: ಬಾಬಾ ಬುಡನ್ ಗಿರಿ, ದತ್ತ ಪೀಠ, ಕಾಶ್ಮೀರಿ ಫೈಲ್ಸ್ ಅಳವಡಿಕೆ ವಿಚಾರ ಪ್ರಸ್ತಾಪಿಸಿದಾಗ ಕಾಶ್ಮೀರಿ ಫೈಲ್ಸ್ ಸಿನಿಮಾ ಬಗ್ಗೆ ಮಾಹಿತಿ ಇರಲಿಲ್ಲ. ಆದರೂ ಆ ಸಿನಿಮಾ ಬರೋದಕ್ಕೂ ಮುನ್ನವೇ ನಾವು ವರದಿಯಲ್ಲಿ ಕೊಟ್ಟಿದ್ದೀವಿ. ಕಾಶ್ಮೀರದ ಲಲಿತಾದಿದ್ಯತನ ವಿಚಾರ ಪಠ್ಯದಲ್ಲಿ ಸೇರ್ಪಡೆಗೆ ನಿರ್ಧರಿಸಲಾಗಿದೆ. ಕಾಶ್ಮೀರ್ ಫೈಲ್ಸ್ ನಲ್ಲಿ ಚಿಕ್ಕದಾಗಿ ಉಲ್ಲೇಖವಾಗಿರೋ ಲಲಿತಾದಿತ್ಯ ಇತಿಹಾಸ ಪಠ್ಯಕ್ಕೆ ಸೇರ್ಪಡೆಯಾಗಿದೆ. ಮುಂಬರೋ ಹೊಸ ಪಠ್ಯದಲ್ಲಿ ಕಾಶ್ಮೀರದ ಲಲಿತಾದಿತ್ಯನ ಇತಿಹಾಸ ಸೇರಿಸಲಾಗಿದೆ. ಕಾಶ್ಮೀರದ ಐತಿಹಾಸಿಕ ವ್ಯಕ್ತಿ ಯಾರು ಎಂದು ಲಲಿತಾದಿತ್ಯ ಬಗ್ಗೆ ಚಿಕ್ಕದಾಗಿ ಉಲ್ಲೇಖವಾಗಿದೆ. ಈ ಲಲಿತಾದಿತ್ಯ ಕಾಶ್ಮೀರದ ಕಾರ್ಕೋಟ ರಾಜವಂಶಕ್ಕೆ ಸೇರಿದ ಚಕ್ರವರ್ತಿ. ಕಾಶ್ಮೀರದ ಸಾಮ್ರಾಜ್ಯವನ್ನ ಅರ್ಧ ಚೀನಾವರೆಗೂ ವಿಸ್ತರಿಸಿದ್ದ ಮಹಾರಾಜ. ಕಲ್ಹಣನ ರಾಜತರಂಗಿಣಿಯಲ್ಲಿ ಲಲಿತಾದಿತ್ಯನ ಉಲ್ಲೇಖವಿದೆ. ಈಗ ಈ ಇತಿಹಾಸವನ್ನೂ ಪಠ್ಯಪುಸ್ತಕಕ್ಕೆ ಸೇರಿಸಲು ಮುಂದಾಗಿದ್ದೇವೆ ಎಂದು ರೋಹಿತ್ ಚಕ್ರತೀರ್ಥ ಟಿವಿ9 ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಟಿಪ್ಪು ಪಠ್ಯ ಕೈಬಿಡುವಂತೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮನವಿ: ಈ ಮಧ್ಯೆ, ಕರ್ನಾಟಕದಲ್ಲಿ ಶಾಲಾ ಪಠ್ಯಕ್ರಮದಿಂದ ಟಿಪ್ಪು ಸುಲ್ತಾನ್​ ಅಧ್ಯಾಯ ಕೈಬಿಡುವಂತೆ ಶಿಕ್ಷಣ ಸಚಿವರಿಗೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಮನವಿ ಮಾಡಿದ್ದಾರೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಗೆ ಮನವಿ‌ ಮಾಡಿರುವ ಅಪ್ಪಚ್ಚು ರಂಜನ್ ಅವರು ಗೋವಾದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಪಸಾದ ಬಳಿಕ ಅವರಿಗೂ ಕೂಡಾ ಮನವಿ ಸಲ್ಲಿಸಲಿದ್ದೇನೆ ಎಂದು ತಿಳಿಸಿದ್ದಾರೆ. ಈ ಹಿಂದೆ ಎಸ್​. ಸುರೇಶ್ ಕುಮಾರ್ ಶಿಕ್ಷಣ ಸಚಿವರಾಗಿದ್ದಾಗಲೂ ಅಪ್ಪಚ್ಚು ರಂಜನ್ ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ:

Pramod Sawant: ಎರಡನೇ ಬಾರಿ ಗೋವಾ ಸಿಎಂ ಆಗಿ ಪ್ರಮೋದ್ ಸಾವಂತ್ ಪ್ರಮಾಣವಚನ ಸ್ವೀಕಾರ; ಪ್ರಧಾನಿ ಮೋದಿ ಭಾಗಿ

Published On - 1:50 pm, Mon, 28 March 22

‘ಭೈರತಿ ರಣಗಲ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಲೈವ್ ವಿಡಿಯೋ ನೋಡಿ..
‘ಭೈರತಿ ರಣಗಲ್’ ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಲೈವ್ ವಿಡಿಯೋ ನೋಡಿ..
ಸುದೀಪ್ ಎದುರಲ್ಲೇ ಧರ್ಮ ಕೀರ್ತಿರಾಜ್​ಗೆ ನಾಲಾಯಕ್ ಎಂದ ಬಿಗ್ ಬಾಸ್ ಮಂದಿ
ಸುದೀಪ್ ಎದುರಲ್ಲೇ ಧರ್ಮ ಕೀರ್ತಿರಾಜ್​ಗೆ ನಾಲಾಯಕ್ ಎಂದ ಬಿಗ್ ಬಾಸ್ ಮಂದಿ
ಯಥರ್ವ್ ಯಶ್ ಅದ್ದೂರಿ ಬರ್ತ್​ಡೇ ಪಾರ್ಟಿ; ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಯಥರ್ವ್ ಯಶ್ ಅದ್ದೂರಿ ಬರ್ತ್​ಡೇ ಪಾರ್ಟಿ; ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಸೋಲದೇವನಹಳ್ಳಿ, ಗಂಗಮ್ಮನಗುಡಿ ಪೊಲೀಸ್ ಠಾಣೆಗಳಿಗೆ ಇನ್ಸ್‌ಪೆಕ್ಟರ್​ಗಳೇ ಇಲ್ಲ
ಸೋಲದೇವನಹಳ್ಳಿ, ಗಂಗಮ್ಮನಗುಡಿ ಪೊಲೀಸ್ ಠಾಣೆಗಳಿಗೆ ಇನ್ಸ್‌ಪೆಕ್ಟರ್​ಗಳೇ ಇಲ್ಲ
ಪಾಲಿಕೆ ಯಡವಟ್ಟಿಗೆ ಮಕ್ಕಳ ಆಟದ ಮೈದಾನಕ್ಕೆ ಕಂಟಕ
ಪಾಲಿಕೆ ಯಡವಟ್ಟಿಗೆ ಮಕ್ಕಳ ಆಟದ ಮೈದಾನಕ್ಕೆ ಕಂಟಕ
ಸಿದ್ದರಾಮಯ್ಯ ಬಳಿಕ ರಾಜ್ಯದ ಮುಸ್ಲಿಮರಿಗೆ ಚೊಂಬು: ಅನ್ಸಾರಿ
ಸಿದ್ದರಾಮಯ್ಯ ಬಳಿಕ ರಾಜ್ಯದ ಮುಸ್ಲಿಮರಿಗೆ ಚೊಂಬು: ಅನ್ಸಾರಿ
ಸುದೀಪ್ ಎದುರು ‘ಕೆಂಪೇಗೌಡ’ ಡೈಲಾಗ್ ಹೇಳಿದ ಚೈತ್ರಾ ಕುಂದಾಪುರ
ಸುದೀಪ್ ಎದುರು ‘ಕೆಂಪೇಗೌಡ’ ಡೈಲಾಗ್ ಹೇಳಿದ ಚೈತ್ರಾ ಕುಂದಾಪುರ
ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ ಎಂದ ತಾಯಿ
ನನ್ನ ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ನೀಡಿ ಎಂದ ತಾಯಿ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?