ಮದರಸಾ ಶಾಲೆಗಳನ್ನು ಸರ್ಕಾರ ವಹಿಸಿಕೊಳ್ಳುವುದಿಲ್ಲ -ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್ ಕೈಬಿಡುವುದಿಲ್ಲ: ಶಿಕ್ಷಣ ಸಚಿವ ನಾಗೇಶ್​

ಬೇರೆ ಮಕ್ಕಳಿಗೆ ಸಿಗುವ ಶಿಕ್ಷಣ ಮದರಸಾಗಳಲ್ಲೂ ಸಿಗಬೇಕು. ಮದರಸಾದಲ್ಲಿ ಶಿಕ್ಷಣ ಇಲಾಖೆ ನೀಡುತ್ತಿರುವ ಶಿಕ್ಷಣ ಮಕ್ಕಳಿಗೆ ಸಿಗಲ್ಲ. ಸರ್ಕಾರದ ಮತ್ತೊಂದು ಇಲಾಖೆ ಮದರಸಾದಲ್ಲಿ‌ ಶಿಕ್ಷಣ ನೀಡುತ್ತಿದೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿದ್ದಾರೆ.

ಮದರಸಾ ಶಾಲೆಗಳನ್ನು ಸರ್ಕಾರ ವಹಿಸಿಕೊಳ್ಳುವುದಿಲ್ಲ -ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್ ಕೈಬಿಡುವುದಿಲ್ಲ: ಶಿಕ್ಷಣ ಸಚಿವ ನಾಗೇಶ್​
ಶಿಕ್ಷಣ ಸಚಿವ ಬಿ ಸಿ ನಾಗೇಶ್ (ಸಂಗ್ರಹ ಚಿತ್ರ)
Follow us
| Updated By: ಸಾಧು ಶ್ರೀನಾಥ್​

Updated on:Mar 29, 2022 | 2:51 PM

ಬೆಂಗಳೂರು: ಮದರಸಾಗಳನ್ನ ತೆಗೆದುಕೊಳ್ಳುವ ವಿಚಾರ ಸರ್ಕಾರದ ಮುಂದಿಲ್ಲ. ಅವರಾಗಿಯೇ ಬಂದು ಕೇಳಿದರೆ ಮದರಸಾ ತೆಗೆದುಕೊಳ್ಳುತ್ತೇವೆ. ಇನ್ನೂ ಮದರಸಾಗಳ ಬಗ್ಗೆ ಸಿಎಂ ಬೊಮ್ಮಾಯಿ ಚರ್ಚೆಯೇ ಮಾಡಿಲ್ಲ. ಜೀವನಕ್ಕೆ ಬೇಕಾಗಿರುವ ಶಿಕ್ಷಣ (Education) ಮದರಸಾಗಳಲ್ಲಿ ಸಿಗುತ್ತಿಲ್ಲ. ಸ್ಪರ್ಧಾತ್ಮಕ ಜೀವನಕ್ಕೆ ಬೇಕಾದ ಅಂಶ ಮದರಸಾದಲ್ಲಿ ಇಲ್ಲ. ಬೇರೆ ಮಕ್ಕಳಿಗೆ ಸಿಗುವ ಶಿಕ್ಷಣ ಮದರಸಾಗಳಲ್ಲೂ ಸಿಗಬೇಕು. ಮದರಸಾದಲ್ಲಿ(Madrasa) ಶಿಕ್ಷಣ ಇಲಾಖೆ ನೀಡುತ್ತಿರುವ ಶಿಕ್ಷಣ ಮಕ್ಕಳಿಗೆ ಸಿಗಲ್ಲ. ಸರ್ಕಾರದ ಮತ್ತೊಂದು ಇಲಾಖೆ ಮದರಸಾದಲ್ಲಿ‌ ಶಿಕ್ಷಣ ನೀಡುತ್ತಿದೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸಚಿವ ಬಿ.ಸಿ.ನಾಗೇಶ್ (BC Nagesh) ಹೇಳಿಕೆ ನೀಡಿದ್ದಾರೆ.

ಬಳಿಕ ಮಾತನಾಡಿದ ಅವರು, ಅಲ್ಪ ಸಂಖ್ಯಾತರ ಇಲಾಖೆ ಮದರಸಾವನ್ನ ನಡೆಸುತ್ತಿದೆ. ಇತರ ಮಕ್ಕಳಂತೆ ಮದರಸಾ ವಿದ್ಯಾರ್ಥಿಗಳು ಕೂಡ. ಸಾಮಾನ್ಯ ಮಕ್ಕಳಂತೆ ಅವರು ವೈದ್ಯರು, ಇಂಜಿನಿಯರ್, ಆರ್ಟಿಸ್ಟ್ ಆಗಬೇಕು ಎಂದು ತಿಳಿಸಿದ್ದಾರೆ.

ಪಠ್ಯದಿಂದ ಟಿಪ್ಪು ಸುಲ್ತಾನ್ ವಿಚಾರವನ್ನು ನಾವು ಕೈಬಿಟ್ಟಿಲ್ಲ: ಬಿ.ಸಿ.ನಾಗೇಶ್

ಊಹೆ ಮಾಡಿಕೊಂಡು ಬರೆದ ಕೆಲವು ಅಂಶಗಳಿವೆ. ಆಧಾರವಿಲ್ಲದ, ದಾಖಲೆಯಿಲ್ಲದ ಅಂಶಗಳನ್ನ ತೆಗೆಯುತ್ತೇವೆ. ದಾಖಲೆ ಇರೋದನ್ನ ಮಾತ್ರ ಮಕ್ಕಳಿಗೆ ಪಠ್ಯದಲ್ಲಿ ಇಡಬೇಕಿದೆ. ಪಠ್ಯಪುಸ್ತಕ ಸಮಿತಿ ವರದಿ ನೋಡಿದ ನಂತರ ಉತ್ತರಿಸಿದ್ದೇನೆ. ಮುಂದಿನ ವಾರ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ. ಸಮಿತಿಯ ವರದಿಯನ್ನ ಸುದ್ದಿಗೋಷ್ಠಿ ಮೂಲಕ ನೀಡುತ್ತೇವೆ. ಈಗ ನಡೆಯುತ್ತಿರುವ ಚರ್ಚೆಗಳು ಕೇವಲ ಊಹಾಪೋಹ. ಪಠ್ಯದಿಂದ ಟಿಪ್ಪು ಸುಲ್ತಾನ್ ವಿಚಾರವನ್ನು ನಾವು ಕೈಬಿಟ್ಟಿಲ್ಲ. ಮಕ್ಕಳಿಗೆ ನಿಜವಾದ ಇತಿಹಾಸ ತಿಳಿಸುವುದೇ ನಮ್ಮ ಉದ್ದೇಶ. ಟಿಪ್ಪು ಬಿರುದಿಗೆ ದಾಖಲೆ ಇದ್ದರೆ ಅದನ್ನ ಮುಂದುವರಿಸುತ್ತೇವೆ. ಇಲ್ಲವಾದ್ರೆ ಸಮಿತಿ ನೀಡಿದ ವರದಿ ಪರಿಶೀಲಿಸಿ ಮುಂದಿನ ನಿರ್ಧಾರ ಮಾಡುತ್ತೇವೆ. ಟಿಪ್ಪು ವಿಚಾರ ವೈಭವೀಕರಣ ಮಾಡಿರೋದಕ್ಕೆ ಕತ್ತರಿ ಹಾಕ್ತೀವಿ ಎಂದು ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.

ಎಸ್​ಎಸ್​ಎಲ್​ಸಿ ಪರೀಕ್ಷೆಗೆ 20,994 ವಿದ್ಯಾರ್ಥಿಗಳು ಗೈರು ವಿಚಾರ

ಯಾವ ವರ್ಷವೂ ನೊಂದಾಯಿಸಿದ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆ ಬರೆಯೊಲ್ಲ. ಕಳೆದ ವರ್ಷದಂತೆ ಈ ವರ್ಷವೂ ಪಾಸ್ ಮಾಡ್ತಾರೆ ಅಂತ ಕೆಲವರ ನಂಬಿಕೆ ಇತ್ತು. ಹಾಗೆ ಅಂದುಕೊಂಡು ಈ ಹೆಚ್ಚು ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದರು. ವಿದ್ಯಾರ್ಥಿಗಳ ಗೈರಿಗೂ ಹಿಜಾಬ್​ಗೂ ಯಾವುದೇ ಸಂಬಂಧ ಇಲ್ಲ. ಕೆಲ ಜಿಲ್ಲೆಗಳಷ್ಟೇ ಹಿಜಾಬ್ ಸಮಸ್ಯೆ ಆಯ್ತು. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆದಿದ್ದಾರೆ. ಕಳೆದ ಎರಡು ವರ್ಷದ ಗೈರಿಗೂ ಈ ವರ್ಷವೂ ತುಂಬಾ ವ್ಯತ್ಯಾಸವಿದೆ. ಆಗ 6 ಸಾವಿರ, 12 ಸಾವಿರ ವಿದ್ಯಾರ್ಥಿಗಳು ಗೈರಾಗುತ್ತಿದ್ದರು. ಹಿಜಾಬ್ ವಿಚಾರದಿಂದ ಗೈರು ಅನ್ನೋಕೆ ಆಗೊಲ್ಲ. ಅನಾರೋಗ್ಯ ಸಮಸ್ಯೆ ಇತರರ ತೊಂದರೆಯಿಂದಲೂ ಗೈರಾಗಿರಬಹುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರದ ಅಧೀಕ್ಷಕಿಗೆ ಬೆದರಿಕೆ ಕರೆ ವಿಚಾರ

ರಾಜಾಜಿನಗರದ ಸಿದ್ದಗಂಗಾ ಪರೀಕ್ಷಾ ಕೇಂದ್ರದ ಪರೀಕ್ಷಾ ಅಧೀಕ್ಷಕಿಗೆ ಬೆದರಿಕೆ ಕರೆ ವಿಚಾರವಾಗಿ ಬಳಿಕ ಮಾತನಾಡಿದ ಅವರು, ಈ ಘಟನೆ ಬಗ್ಗೆ ಮಾಧ್ಯಮದಿಂದ ತಿಳಿದುಕೊಂಡೆ. ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ. ಡಿಡಿಪಿಐಗೆ ಭೇಟಿ ನೀಡುವಂತೆ ಹೇಳಿದ್ದೇನೆ. ಅಧೀಕ್ಷಕಿಯಿಂದ ನನಗೆ ಯಾವುದೇ ದೂರು ಬಂದಿಲ್ಲ. ಸರ್ಕಾರದ ಸಮವಸ್ತ್ರ ನಿಯಮ ಪಾಲನೆ ಎಲ್ಲರ ಕರ್ತವ್ಯ. ಪರೀಕ್ಷಾರ್ಥಿಗಳು ಶಿಕ್ಷಣ ಇಲಾಖೆ ಮಾರ್ಗಸೂಚಿ ಪಾಲಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಕರಗದಲ್ಲಿ ಮುಸ್ಲಿಮರಿಗೆ ಮಳಿಗೆ ಹಾಕಲು ಬಿಡಲ್ಲ; ಕರಗ ಉತ್ಸವದ ಮಾಜಿ ಅಧ್ಯಕ್ಷ ಗೋಪಿ ಹೇಳಿಕೆ

ಮೈಸೂರು ಜಿಲ್ಲೆಯಲ್ಲಿ ಎಸ್ಎಸ್ಎಲ್​ಸಿ ಪರೀಕ್ಷೆಗೆ 39 ಮುಸ್ಲಿಂ ವಿದ್ಯಾರ್ಥಿನಿಯರು ಗೈರು; ಶಿಕ್ಷಣ ಇಲಾಖೆ ಮೂಲಗಳಿಂದ ಮಾಹಿತಿ

Published On - 2:20 pm, Tue, 29 March 22

ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ