ಮೈಸೂರು ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ 39 ಮುಸ್ಲಿಂ ವಿದ್ಯಾರ್ಥಿನಿಯರು ಗೈರು; ಶಿಕ್ಷಣ ಇಲಾಖೆ ಮೂಲಗಳಿಂದ ಮಾಹಿತಿ
ಮೈಸೂರು ಜಿಲ್ಲೆಯಲ್ಲಿ 36,151 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರು. ಇದರಲ್ಲಿ 35,517 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಪುನರಾವರ್ತಿತ ಹಾಗೂ ಖಾಸಗಿಯಾಗಿ ಪರೀಕ್ಷೆ ಕಟ್ಟಿದವರ ಮಾಹಿತಿ ಲಭ್ಯವಾಗಿಲ್ಲ
ಮೈಸೂರು: ರಾಜ್ಯದಲ್ಲಿ ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ (SSLC Examination) ಆರಂಭವಾಗಿದೆ. ಮೊದಲ ದಿನವಾದ ಇಂದು ಕನ್ನಡ (Kannada) ವಿಷಯ ಪರೀಕ್ಷೆ ನಡೆದಿದೆ. ಜಿಲ್ಲೆಯಲ್ಲಿ ಮೊದಲ ದಿನ 634 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದು, ಇದರಲ್ಲಿ 39 ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿಲ್ಲ ಎಂದು ಶಿಕ್ಷಣ ಇಲಾಖೆ ಮೂಲಗಳಿಂದ ತಿಳಿದುಬಂದಿದೆ. ಜಿಲ್ಲೆಯಲ್ಲಿ 36,151 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರು. ಇದರಲ್ಲಿ 35,517 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಪುನರಾವರ್ತಿತ ಹಾಗೂ ಖಾಸಗಿಯಾಗಿ ಪರೀಕ್ಷೆ ಕಟ್ಟಿದವರ ಮಾಹಿತಿ ಲಭ್ಯವಾಗಿಲ್ಲ. ಯಾವ ಕಾರಣಕ್ಕೆ ಪರೀಕ್ಷೆಗೆ ಬಂದಿಲ್ಲ ಅಂತ ಶಿಕ್ಷಣ ಇಲಾಖೆ ಮಾಹಿತಿ ಕಲೆ ಹಾಕುತ್ತಿದೆ.
ಪರೀಕ್ಷೆಗೆ ಗೈರಾದ ಬಹುತೇಕ ವಿದ್ಯಾರ್ಥಿನಿಯರು ಶಾಲೆಗೂ ಬಂದಿರಲಿಲ್ಲ ಎಂದು ಶಿಕ್ಷಣ ಇಲಾಖೆ ಸರ್ಕಾರಕ್ಕೆ ಮಾಹಿತಿ ನೀಡಿದೆ. ಹಿಜಾಬ್ ಅಥವಾ ಯಾವ ಕಾರಣಕ್ಕೆ ಪರೀಕ್ಷೆಗೆ ಗೈರಾಗಿದ್ದಾರೆ? ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಟಿವಿ9ಗೆ ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಹೇಳಿಕೆ ನೀಡಿದರು.
ಮಂಡ್ಯದಲ್ಲಿ ಒಟ್ಟು 21,109 ವಿದ್ಯಾರ್ಥಿಗಳ ಹೆಸರು ಪರೀಕ್ಷೆಗೆ ನೋಂದಣಿಯಾಗಿತ್ತು. ಈ ಪೈಕಿ 20,673 ಪರಿಕ್ಷೆಗೆ ಹಾಜರಾಗಿದ್ದಾರೆ. 436 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ಹಿಜಾಬ್ ಕಾರಣದಿಂದ ಗೈರಾಗಿಲ್ಲ. ಆರೋಗ್ಯ ಕಾರಣ ಹಾಜರಾಗಿಲ್ಲ. ಕೆಲ ಮಕ್ಕಳು ಶಾಲೆ ಬಿಟ್ಟಿರುವ ಕಾರಣ ಹಾಜರಾಗಿಲ್ಲ.
ಕೊಪ್ಪಳ ಜಿಲ್ಲೆಯಾದ್ಯಂತ 737 ಜನ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಗಂಗಾವತಿ 404, ಕೊಪ್ಪಳ 155, ಕುಷ್ಟಗಿ 86 ಹಾಗೂ ಯಲಬುರ್ಗಾದಲ್ಲಿ 92 ವಿದ್ಯಾರ್ಥಿಗಳು ಗೈರಾಗಿದ್ದಾರೆ ಅಂತ ಡಿಡಿಪಿಐ ದೊಡ್ಡಬಸಪ್ಪ ನಿರಲಕೇರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ
‘ಕೆಜಿಎಫ್ ಚಾಪ್ಟರ್ 2’ ಟ್ರೇಲರ್ಗೆ ಕೋಟಿಕೋಟಿ ವೀಕ್ಷಣೆ; ಯಶ್ ಅವರನ್ನು ತಡೆಯುವವರೇ ಇಲ್ಲ
Published On - 2:28 pm, Mon, 28 March 22