ಶಿವಮೊಗ್ಗದಲ್ಲಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ! ಹಿಬಾಬ್ಗೆ ಅನುಮತಿ ನೀಡದಿದ್ದಕ್ಕೆ ವಿದ್ಯಾರ್ಥಿನಿ ವಾಪಸ್
ಹಿಜಾಬ್ ತೆಗೆದು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇಲ್ಲಿಯವರೆಗೆ ಹಿಜಾಬ್ ಅವಕಾಶಕ್ಕೆ ಯಾರು ಪಟ್ಟು ಹಿಡಿದಿಲ್ಲ. ಇಂದು ಯಾರು ಪರೀಕ್ಷೆಗೆ ಗೈರು ಆಗಿಲ್ಲ ಅಂತ ಡಿಡಿಪಿಐ ರಮೇಶ್ ಹೇಳಿದರು.
ಶಿವಮೊಗ್ಗ: ಎಸ್ಎಸ್ಎಲ್ಸಿ ಪರೀಕ್ಷೆ (SSLC Examination) ಬರೆಯಲು ಬಂದ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು (Honey) ದಾಳಿ ಮಾಡಿದ್ದು, ಈ ಘಟನೆ ಶಿವಮೊಗ್ಗದ ಮೇರಿ ಇಮ್ಯಾಕ್ಯುಲೇಟ್ ಬಾಲಿಕಾ ಶಾಲೆಯಲ್ಲಿ ನಡೆದಿದೆ. ಸದ್ಯ ವಿದ್ಯಾರ್ಥಿಗಳು ಪ್ರಾಥಮಿಕ ಚಿಕಿತ್ಸೆ ಪಡೆದು ಪರೀಕ್ಷೆಗೆ ಹಾಜರಾಗಿದ್ದಾರೆ. ಹೆಜ್ಜೇನು ದಾಳಿಗೊಳಗಾದ ಪೋಷಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಮೊಗ್ಗ ಡಿಡಿಪಿಐ ರಮೇಶ್, ಪರೀಕ್ಷೆಗೆ ಬರೆಯಲು ಬಂದ ಐದು ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ನಡೆದಿದೆ. ಪರೀಕ್ಷೆ ಕೇಂದ್ರದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಹೆಜ್ಜೇನು ದಾಳಿಗೊಳಗಾದ ವಿದ್ಯಾರ್ಥಿ ಗಳಿಗೆ ಹೆಚ್ಚುವರಿ ಅವಧಿಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಹಿಜಾಬ್ ತೆಗೆದು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇಲ್ಲಿಯವರೆಗೆ ಹಿಜಾಬ್ ಅವಕಾಶಕ್ಕೆ ಯಾರು ಪಟ್ಟು ಹಿಡಿದಿಲ್ಲ. ಇಂದು ಯಾರು ಪರೀಕ್ಷೆಗೆ ಗೈರು ಆಗಿಲ್ಲ ಅಂತ ಡಿಡಿಪಿಐ ರಮೇಶ್ ಹೇಳಿದರು.
ಹಿಜಾಬ್ ಧರಿಸಿ ಬಂದರೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಅಂತ ಸರ್ಕಾರ ಈಗಾಗಲೇ ತಿಳಿಸಿದೆ. ಆದರೆ ಶಿವಮೊಗ್ಗದ ಕಸ್ತೂರಬಾ ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿ ಹಿಬಾಜ್ಗೆ ಅನುಮತಿ ನೀಡದ ಹಿನ್ನೆಲೆ ಮನೆಗೆ ವಾಪಸ್ ಆಗಿದ್ದಳು. ನಂತರ ಪೋಷಕರು ಮನೆಗೆ ವಾಪಸಾಗಿದ್ದ ವಿದ್ಯಾರ್ಥಿನಿಯನ್ನ ಕರೆತಂದು ಬುದ್ಧಿವಾದ ಹೇಳಿದ್ದಾರೆ.
ಕಡ್ಡಾಯವಾಗಿ ಸಮವಸ್ತ್ರ ಧರಿಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಬರಬೇಕು. ಸಮವಸ್ತ್ರ ಹರಿದು ಹಾಳಾಗಿದ್ದರೆ ಅವರಿಗೆ ವಿನಾಯಿತಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಹಿಜಾಬ್ ಧರಿಸದೇ ಪರೀಕ್ಷೆ ಬರೆಯುತ್ತಿದ್ದಾರೆ. ಪೋಷಕರು ಮಕ್ಕಳ ಪರೀಕ್ಷೆ ಗಮನದಲ್ಲಿಟ್ಟುಕೊಂಡು ಹಿಜಾಬ್ ಧರಿಸದೇ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಡಿಡಿಪಿಐ ರಮೇಶ್ ಹೇಳಿದ್ದಾರೆ.
ಇದನ್ನೂ ಓದಿ
ಸಂಸದರಾಗಿ ಮಂಡ್ಯಕ್ಕೆ ಸುಮಲತಾರ ಕೊಡುಗೆ ಏನು: ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಪ್ರಶ್ನೆ
ಚಿತ್ರದುರ್ಗ: ಪೊಲೀಸ್ ಬಂದೋಬಸ್ತ್ನಲ್ಲಿ ವೀರಾಂಜನೇಯ ದೇಗುಲ ತೆರವುಗೊಳಿಸಿದ ಪುರಸಭೆ ಅಧಿಕಾರಿಗಳು
Published On - 11:01 am, Mon, 28 March 22