ಸಂಸದರಾಗಿ ಮಂಡ್ಯಕ್ಕೆ ಸುಮಲತಾರ ಕೊಡುಗೆ ಏನು: ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಪ್ರಶ್ನೆ

ಪ್ರತಿಬಾರಿ ಕಾಲು ಕೆರೆದುಕೊಂಡು ಜಗಳ ಹುಟ್ಟುಹಾಕೋದು. ಯಾರೋ ಏನೋ ಹೇಳಿದರು ಎಂದು ದೂರುವ ಮೂಲಕ ಅನುಕಂಪ ಗಿಟ್ಟಿಸಲು ಆಗುವುದಿಲ್ಲ ಎಂದು ವ್ಯಂಗ್ಯವಾಡಿದರು.

ಸಂಸದರಾಗಿ ಮಂಡ್ಯಕ್ಕೆ ಸುಮಲತಾರ ಕೊಡುಗೆ ಏನು: ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಪ್ರಶ್ನೆ
ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 28, 2022 | 10:32 AM

ಮಂಡ್ಯ: ಸಂಸದರಾಗಿ ಸುಮಲತಾ (Sumalatha) ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ. ಬೇರೆಯವರನ್ನು ದೂರುವ ಬದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಮದ್ದೂರಿನಲ್ಲಿ ಜೆಡಿಎಸ್ (JDS) ನಾಯಕ ನಿಖಿಲ್ ಕುಮಾರಸ್ವಾಮಿ  (Nikhil Kumaraswamy) ಹೇಳಿದರು. ಮಂಡ್ಯದ ಶಾಸಕರು ಮೂರ್ನಾಲ್ಕು ಬಾರಿ ಆಯ್ಕೆ ಆಗಿದ್ದಾರೆ. ಅಭಿವೃದ್ಧಿ ಆಗಿಲ್ಲ ಅಂದ್ರೆ ಜನರು ಶಾಸಕರನ್ನು ಪ್ರಶ್ನಿಸುತ್ತಾರೆ. 2024ರವರೆಗೂ ಸಂಸದೆ ಸುಮಲತಾ ಅವರಿಗೆ ಅಧಿಕಾರ ಇದೆ. ಜನರ ಜೊತೆ ನಿಂತು ಕೆಲಸ ಮಾಡಲಿ. ಅನುಕಂಪ ಗಿಟ್ಟಿಸುವ ತಂತ್ರಗಳು ಯಾವಾಗಲೂ ಫಲ ಕೊಡುವುದಿಲ್ಲ ಎಂದು ಹೇಳಿದರು.

ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆಯಾದರೆ ಜನರು ಶಾಸಕರನ್ನು ಹೊಣೆಯಾಗಿಸಿ ಪ್ರಶ್ನಿಸುತ್ತಾರೆ. ಸಂಸದರನ್ನು ಪ್ರಶ್ನಿಸುವುದು ಯಾರು? ಪ್ರತಿಬಾರಿ ಕಾಲು ಕೆರೆದುಕೊಂಡು ಜಗಳ ಹುಟ್ಟುಹಾಕೋದು. ಯಾರೋ ಏನೋ ಹೇಳಿದರು ಎಂದು ದೂರುವ ಮೂಲಕ ಅನುಕಂಪ ಗಿಟ್ಟಿಸಲು ಆಗುವುದಿಲ್ಲ ಎಂದು ವ್ಯಂಗ್ಯವಾಡಿದರು.

ಸುಮಲತಾ ವಿರುದ್ಧ ಸುರೇಶ್ ಗೌಡ ವಾಗ್ದಾಳಿ

ಲವು ದಿನಗಳಲ್ಲಿ ಒಂದಲ್ಲಾ ಕಾರಣದಿಂದ ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಮತ್ತು ವಿವಿಧ ಶಾಸಕರ ನಡುವೆ ಜಟಾಪಟಿ ನಡೆಯುತ್ತಲೇ ಇದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ನಡುವೆ ಸಮನ್ವಯಕ್ಕಾಗಿ ಜಿಲ್ಲಾ ಮಟ್ಟದಲ್ಲಿ ನಡೆಸುವ ‘ದಿಶಾ’ (District Development Coordination and Monitoring Committee – DISHA) ಸಭೆ ಇದೀಗ ಶಾಸಕರು ಮತ್ತು ಸಂಸದರ ನಡುವಣ ವಿವಾದಕ್ಕೆ ನೆಪವಾಗಿ ಒದಗಿಬಂದಿದೆ. ಕರ್ನಾಟಕ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದಾಗ ಸಂಸದೆ ಸುಮಲತಾ ದಿಶಾ ಸಭೆ ನಡೆಸಿದರು. ಅಧಿವೇಶನದಲ್ಲಿದ್ದ ಕಾರಣ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದು ಶಾಸಕ ಸುರೇಶ್ ಗೌಡ ಅವರ ಆರೋಪವಾಗಿದೆ.

‘ಸಂಸದೆ ಸುಮಲತಾ ಹೇಗೆ ಯೋಚಿಸುತ್ತಾರೆ ಎನ್ನುವುದು ನಮಗೆ ಅರ್ಥವಾಗಿದೆ. ನಾವು ಏನು ಮಾತನಾಡಿದರೂ ಅದನ್ನೇ ಅವರು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಕ್ಷೇತ್ರಕ್ಕೆ ಜಗಳ ಮಾಡುವುದಕ್ಕೆಂದೇ ಅವರು ಬರುತ್ತಾರೆ ಎಂದು ಮಂಡ್ಯದಲ್ಲಿ ನಾಗಮಂಗಲ ಶಾಸಕ ಸುರೇಶ್ ಗೌಡ ಹೇಳಿದರು. ನಾವ್ಯಾರೂ ಕ್ಷೇತ್ರಗಳಲ್ಲಿ ಇರುವುದಿಲ್ಲ. ನಾವೆಲ್ಲರೂ ನಿಷ್ಪ್ರಯೋಜಕರು. ಕ್ಷೇತ್ರಕ್ಕೆ ಅನುದಾನ ತರಲೂ ನಮ್ಮಿಂದ ಸಾಧ್ಯವಾಗಿಲ್ಲ ಎಂದು ಸುಮಲತಾ ಭಾವಿಸಿರುವಂತಿದೆ. ಇನ್ನೊಂದು ವರ್ಷದ ನಂತರ ಜನರೇ ಈ ಬಗ್ಗೆ ತೀರ್ಪು ಕೊಡಲಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಸುಮಲತಾ ವಿರುದ್ಧ ಜೆಡಿಎಸ್ ಶಾಸಕರ ಟಾಕ್ ವಾರ್; ಬಹಿರಂಗ ಚರ್ಚೆಗೆ ಆಹ್ವಾನಿಸಿದ ಡಿಸಿ ತಮ್ಮಣ್ಣ

ಇದನ್ನೂ ಓದಿ: ಮಂತ್ರಿಗಳಿಗೆ ಲೆಟರ್ ಕೊಟ್ಟು ಫೋಟೊ ಹಾಕಿದ್ರೆ ಪ್ರಯೋಜನವಿಲ್ಲ, ಮಂಡ್ಯಕ್ಕೆ ಏನು ಅನುದಾನ ತಂದಿದ್ದೀರಿ?: ಸುಮಲತಾಗೆ ರವೀಂದ್ರ ಶ್ರೀಕಂಠಯ್ಯ ಪ್ರಶ್ನೆ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು