ಸುಮಲತಾ ವಿರುದ್ಧ ಜೆಡಿಎಸ್ ಶಾಸಕರ ಟಾಕ್ ವಾರ್; ಬಹಿರಂಗ ಚರ್ಚೆಗೆ ಆಹ್ವಾನಿಸಿದ ಡಿಸಿ ತಮ್ಮಣ್ಣ

ಸುಮಲತಾ ನಮ್ಮ ಕೆಲಸದ ಬಗ್ಗೆ ಓಪನ್ ಚಾಲೆಂಜ್ ಮಾಡಲಿ. ಸುಮಲತಾ ಯಾವಾಗ ಚರ್ಚೆಗೆ ಬಂದರೂ ನಾನು ಸಿದ್ಧನಿದ್ದೇನೆ ಎಂದು ಮಂಡ್ಯದಲ್ಲಿ ಜೆಡಿಎಸ್ ಶಾಸಕ ಡಿ.ಸಿ. ತಮ್ಮಣ್ಣ ಚರ್ಚೆಗೆ ಆಹ್ವಾನ ನೀಡಿದ್ದಾರೆ.

ಸುಮಲತಾ ವಿರುದ್ಧ ಜೆಡಿಎಸ್ ಶಾಸಕರ ಟಾಕ್ ವಾರ್; ಬಹಿರಂಗ ಚರ್ಚೆಗೆ ಆಹ್ವಾನಿಸಿದ ಡಿಸಿ ತಮ್ಮಣ್ಣ
ಸುಮಲತಾ ಅಂಬರೀಶ್
Follow us
| Updated By: ganapathi bhat

Updated on: Mar 27, 2022 | 11:37 AM

ಮಂಡ್ಯ: ಸಂಸದೆ ಸುಮಲತಾ ಮತ್ತು ಜೆಡಿಎಸ್ ಶಾಸಕರ ಟಾಕ್ ವಾರ್ ಮತ್ತೆ ಮುಂದುವರಿದಿದೆ. ಮದ್ದೂರು ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ.ತಮ್ಮಣ್ಣ ಸುಮಲತಾರನ್ನ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ನಮ್ಮ ಜನರು ಕೊಡುವ ಸರ್ಟಿಫಿಕೆಟ್ ನಮಗೆ ಮುಖ್ಯ. ಇನ್ನೊಬ್ಬರ ಸರ್ಟಿಫಿಕೆಟ್ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಸಮಸ್ಯೆಯನ್ನ ಬಗೆಹರಿಸುವುದಿದ್ದರೆ ಸುಮಲತಾ ಬಗೆಹರಿಸಲಿ. ಸುಮಲತಾ ನಮ್ಮ ಕೆಲಸದ ಬಗ್ಗೆ ಓಪನ್ ಚಾಲೆಂಜ್ ಮಾಡಲಿ. ಸುಮಲತಾ ಯಾವಾಗ ಚರ್ಚೆಗೆ ಬಂದರೂ ನಾನು ಸಿದ್ಧನಿದ್ದೇನೆ ಎಂದು ಮಂಡ್ಯದಲ್ಲಿ ಜೆಡಿಎಸ್ ಶಾಸಕ ಡಿ.ಸಿ. ತಮ್ಮಣ್ಣ ಚರ್ಚೆಗೆ ಆಹ್ವಾನ ನೀಡಿದ್ದಾರೆ.

ಸಂಸದೆ ಸುಮಲತಾ ಬುದ್ದಿ ಏನು ಅಂತ ಅರ್ಥವಾಗಿದೆ. ನಾವು ಏನು ಮಾತನಾಡಿದ್ರು ಸುಮಲತಾ ಬಂಡವಾಳ ಮಾಡ್ಕೊಳ್ತಾರೆ. ಕಿತಾಪತಿ, ಜಗಳ ಮಾಡುವುದಕ್ಕೆ ಬರ್ತಾರೆ ಏನು ಮಾಡೋದು. ಅದಕ್ಕೆ ನಾವು ಮಾತನಾಡದೆ ಸುಮ್ಮನಿದ್ದೇವೆ ಎಂದು ಇತ್ತ ಮಂಡ್ಯದಲ್ಲಿ ನಾಗಮಂಗಲ ಶಾಸಕ ಸುರೇಶ್ ಗೌಡ ಹೇಳಿಕೆ ನೀಡಿದ್ದಾರೆ. ಅವರ ಪ್ರಕಾರ ನಾವು ಯಾರು ಶಾಸಕರು ಕ್ಷೇತ್ರದಲ್ಲಿ ಇಲ್ಲ. ನಾವು ನಿಷ್ಪ್ರಯೋಜಕರು, ಏನು ಅನುದಾನ ತಂದಿಲ್ಲ, ಬಹಳ ಸಂತೋಷ. ಇನ್ನು ಒಂದು ವರ್ಷವಾದ ಮೇಲೆ ಜನರೇ ತೀರ್ಪು ಕೊಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ನಮ್ಮನ್ನೆಲ್ಲ ಹೊರಗಿಟ್ಟು ದಿಶಾ ಸಭೆ ಮಾಡಿದಾಗ್ಲೆ ಅವರ ಬುದ್ದಿ ಅರ್ಥವಾಗಿದೆ. ಸರ್ಕಾರದ ರೂಲ್ಸ್ ಇದೆ, ಅಸೆಂಬ್ಲಿ ನಡೆಯುವ ಸಂದರ್ಭದಲ್ಲಿ ದಿಶಾ ಮೀಟಿಂಗ್ ಅಲ್ಲ, ದರ್ಕಾಸ್ ಮಿಟಿಂಗ್ ಸಹ ಕರೆಯುವ ಹಾಗಿಲ್ಲ. ಸರ್ಕಾರವೇ ಸೂಕ್ತ ನಿರ್ದೇಶನ ಕೊಟ್ಟಿದೆ. ದಿಶಾ ಸಭೆಗೆ ನಾವು ಬರಬಾರದು ಅನ್ನೊ ಒಂದು ಕಾರಣಕ್ಕೆ ನಮ್ಮನ್ನ ಬಿಟ್ಟು ಮೀಟಿಂಗ್ ಮಾಡ್ತಾರೆ. ನಾವು ಅಸೆಂಬ್ಲಿಯಲ್ಲಿ ಪಾಲ್ಗೊಳ್ಳಬೇಕಾ, ದಿಶಾ ಸಭೆಗೆ ಹೋಗಬೇಕ ಎಂದು ಪತ್ರ ಕೊಟ್ಟಿದ್ದೇವು. ಸ್ಪೀಕರ್ ಅವರು ಅಸೆಂಬ್ಲಿಯಲ್ಲಿ ಪಾಲ್ಗೊಳ್ಳಿ ಅಂತ ತಿಳಿಸಿದ್ರು. ನಾವು ಬಂದ್ರೆ ಸಮಸ್ಯೆ ಬಗ್ಗೆ ನೇರವಾಗಿ ಮತನಾಡ್ತೀವಿ. ನಾವು ಬರದಿದ್ರೆ ಅವರು ಒಬ್ಬರೇ ಇದ್ರೆ ಅಧಿಕಾರಿಗಳನ್ನು ಏನು ಬೇಕಾದರೂ ಹೆದರಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ನಾವು ನಾಗಮಂಗಲದಲ್ಲೇ ಮನೆ ಕಟ್ಟಿ 24 ಗಂಟೆ ಜನರಿಗೆ ಸಿಗುತ್ತಿದ್ದೇವೆ. ಎಲ್ಲಿದ್ದಾರೆ ಇವಾಗ ಸುಮಲತಾ ಅವರು? ಸುಮಲತಾ ಮಂಡ್ಯ ಮನೆಯಲ್ಲಿದ್ದಾರಾ? ನಾನು ಹುಡ್ಕುತ್ತಿದ್ದಿನಿ. ಗುದ್ದಲಿ ಪೂಜೆಗಳಿಗೆ ಕರೆಯುವುದಕ್ಕೆ ಹುಡುಕ್ತಿದಿನಿ. ನಮಗೆ ಸಿಗ್ತಿಲ್ಲ, ಅವರು ಜನ ಸಾಮಾನ್ಯರಿಗೆ ಹೇಗೆ ಸಿಗ್ತಾರೆ? ಅವರು ಅವರ ಅಧಿಕಾರ ವ್ಯಾಪ್ತಿ ಅರ್ಥ ಮಾಡ್ಕೊಂಡ್ರೆ ಬಹಳ ಒಳ್ಳೆಯದು. ಇಲ್ಲದಿದ್ದರೆ ಗೊಂದಲ್ಲಕ್ಕೆ ಕಾರಣವಾಗುತ್ತೆ‌‌. ನಾವು ಒಬ್ಬ ಹೆಣ್ಣು ಮಗಳು ಸೋದರಿ ಅಂತ ಸುಮ್ಮನಿದ್ದೇವೆ‌‌. ಇವರ ವಿರುದ್ಧ ನಾವು ಅಸೆಂಬ್ಲಿಯಲ್ಲಿ ಧ್ವನಿ ಎತ್ತಬಹುದು. ಅದರ ಅವಶ್ಯಕತೆ ನಮಗೆ ಇಲ್ಲ. ಅವರು ಚೆನ್ನಾಗಿರಲಿ ಚೆನ್ನಾಗಿ ಕೆಲಸ ಮಾಡಲಿ. ಬೇರೆಯವರು ಮಾಡಿದ ಕೆಲಸವನ್ನು ನಾನು ಮಾಡಿದೆ ಅಂದುಕೊಳ್ಳೋದು ಬೇಡ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಂತ್ರಿಗಳಿಗೆ ಲೆಟರ್ ಕೊಟ್ಟು ಫೋಟೊ ಹಾಕಿದ್ರೆ ಪ್ರಯೋಜನವಿಲ್ಲ, ಮಂಡ್ಯಕ್ಕೆ ಏನು ಅನುದಾನ ತಂದಿದ್ದೀರಿ?: ಸುಮಲತಾಗೆ ರವೀಂದ್ರ ಶ್ರೀಕಂಠಯ್ಯ ಪ್ರಶ್ನೆ

ಇದನ್ನೂ ಓದಿ: ಮಂಡ್ಯದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲಾಗುವುದು, ಆದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ: ಸಂಸದೆ ಸುಮಲತಾ ಅಳಲು

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ