ಮಂತ್ರಿಗಳಿಗೆ ಲೆಟರ್ ಕೊಟ್ಟು ಫೋಟೊ ಹಾಕಿದ್ರೆ ಪ್ರಯೋಜನವಿಲ್ಲ, ಮಂಡ್ಯಕ್ಕೆ ಏನು ಅನುದಾನ ತಂದಿದ್ದೀರಿ?: ಸುಮಲತಾಗೆ ರವೀಂದ್ರ ಶ್ರೀಕಂಠಯ್ಯ ಪ್ರಶ್ನೆ

ಶಾಸಕರಿಗೆ ಸಂಸದರಿಗೆ ಅನುದಾನ ಬರುತ್ತೆ. ಅದನ್ನು ಬಿಟ್ಟು ಬೇರೆ ಅನುದಾನ ಏನು ತಂದಿದ್ದೀರಾ? ನಾನು ಅನುದಾನ ತಂದಿದ್ದೇನೆ‌, ಬೇಕು ಎಂದ್ರೆ ಲೆಕ್ಕ ಕೊಡುತ್ತೇನೆ ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ.

ಮಂತ್ರಿಗಳಿಗೆ ಲೆಟರ್ ಕೊಟ್ಟು ಫೋಟೊ ಹಾಕಿದ್ರೆ ಪ್ರಯೋಜನವಿಲ್ಲ, ಮಂಡ್ಯಕ್ಕೆ ಏನು ಅನುದಾನ ತಂದಿದ್ದೀರಿ?: ಸುಮಲತಾಗೆ ರವೀಂದ್ರ ಶ್ರೀಕಂಠಯ್ಯ ಪ್ರಶ್ನೆ
ರವೀಂದ್ರ ಶ್ರೀಕಂಠಯ್ಯ, ಸುಮಲತಾ
Follow us
TV9 Web
| Updated By: ganapathi bhat

Updated on:Mar 21, 2022 | 11:09 AM

ಮಂಡ್ಯ: ಶಾಸಕರ ಕೆಲಸವನ್ನ ನಾನೇ ಮಾಡುತ್ತಿದ್ದೇನೆ ಎಂಬ ಸಂಸದೆ ಸುಮಲತಾ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಶ್ರೀರಂಗಪಟ್ಟಣದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ತಿರುಗೇಟು ನೀಡಿದ್ದಾರೆ. ನಿಮಗೆ ಸಂಸದರಾಗಿ ಏನು ಮಾಡಬೇಕು ಎಂಬ ಜವಬ್ದಾರಿಯ ಅರಿವಿಲ್ಲ. ಮಂಡ್ಯಕ್ಕೆ ಹೊಸದಾಗಿ ಯಾವ ಅನುದಾನ ತಂದಿದ್ದೀರಾ ಮೊದಲು ಹೇಳಿ. ಶಾಸಕರಿಗೆ ಸಂಸದರಿಗೆ ಅನುದಾನ ಬರುತ್ತೆ. ಅದನ್ನು ಬಿಟ್ಟು ಬೇರೆ ಅನುದಾನ ಏನು ತಂದಿದ್ದೀರಾ? ನಾನು ಅನುದಾನ ತಂದಿದ್ದೇನೆ‌, ಬೇಕು ಎಂದ್ರೆ ಲೆಕ್ಕ ಕೊಡುತ್ತೇನೆ ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ.

ನೀವೇನು ಮಂಡ್ಯಕ್ಕೆ ಅನುದಾನ ತಂದಿದ್ದಿರಿ‌. ಎಲ್ಲಾ ಮಂತ್ರಿ ಬಳಿ ಹೋಗಿ ಲೆಟರ್ ಹೆಡ್​​ನಲ್ಲಿ ಬರೆದು ಕೊಂಡೋದ್ರೆ ಪ್ರಯೋಜನವಿಲ್ಲ. ರೈಲ್ವೆ ಯೋಜನೆಗೆ ದಕ್ಷಿಣ ಭಾರತಕ್ಕೆ 55 ಕೋಟಿ ಬಿಡುಗಡೆಯಾಗಿದೆ‌. ಉತ್ತರ ಭಾರತಕ್ಕೆ 13 ಸಾವಿರ ಕೋಟಿ ಬಿಡುಗಡೆಯಾಗಿದೆ‌. ಸಂಸದರಾಗಿ ನೀವು ಏನ್ ಮಾಡುತ್ತಿದ್ದೀರಿ. ಇವರ ಜವಬ್ದಾರಿ ಅರಿವಿಲ್ಲ. ಕೆ.ಆರ್. ನಗರದಲ್ಲಿ ಸ್ಟೇಟ್ ಫಂಡ್ ಕಾಮಗಾರಿಗೆ ಪೂಜೆ ಮಾಡೋಕೆ ಹೋಗ್ತಾರೆ. ಅದರಲ್ಲು ಎಂಎಲ್‌ಎ ಬಿಟ್ಟು ಹೋಗಿದ್ದಾರೆ. ಮಂಡ್ಯ ಜಿಲ್ಲೆಗೆ ಸಂಸದರು ಏನ್ ಕೊಡುಗೆ ಕೊಡ್ತಾರೆ ಅಂತ ಜನ ಕಾಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮುಂದಿನ ಚುನಾವಣೆಗೆ ಜನರು ಉತ್ತರ ಕೊಡ್ತಾರೆ. ಈಗ ಭ್ರಮಾ ಲೋಕದಲ್ಲಿ ಇರುವಂತೆ ಕಾಣುತ್ತಾರೆ. ಮಂಡ್ಯ ಜಿಲ್ಲೆಗೆ ಏನಾದ್ರು ಅಭಿವೃದ್ಧಿ ಮಾಡಿ. ಸಮುದಾಯ ಭವನಕ್ಕೆ ಕೊಟ್ಟಿದ್ದೇನೆ ಅಂತಾರೆ. ಯಾರೇ ಮೆಂಬರ್ ಆದ್ರು ಎಂಪಿ ಫಂಡ್ ಬರುತ್ತೆ ಎಂದು ರವೀಂದ್ರ ಶ್ರೀಕಂಠಯ್ಯ ಸುಮಲತಾಗೆ ತಿರುಗೇಟು ಕೊಟ್ಟಿದ್ದಾರೆ.

ಸಚಿವರಿಗೆ ಪತ್ರ ನೀಡಿ ಫೋಟೋ ಹಾಕಿಕೊಳ್ತಾರೆ. ಫೇಸ್‌ಬುಕ್, ವಾಟ್ಸಾಪ್‌ನಲ್ಲಿ ಫೋಟೋ ಹಾಕಿಕೊಳ್ತಾರೆ. ಅದನ್ನ ಬಿಟ್ಟು ಏನಾದ್ರೂ ಹೊಸ ಯೋಜನೆ ತಂದಿದ್ದಾರಾ?ಅಂಬರೀಶ್ ಪತ್ನಿ ಅನ್ನೋ ಕಾರಣಕ್ಕೆ ಸುಮಲತಾ ಗೆದ್ದಿದ್ದಾರೆ. ಇದು ಎಲ್ಲಾ ಸಂದರ್ಭಗಳಲ್ಲೂ ನಡೆಯುವುದಿಲ್ಲ. ಅಂಬರೀಶ್ ಸಂಸದರಾಗಿ ಅನುಭವಿಸಿದ್ದರು. ಆದ್ರೆ ಮಂಡ್ಯ ಇದ್ದಹಾಗೇ ಇದೆ ಎಂದು ರವೀಂದ್ರ ಶ್ರೀಕಂಠಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲಾಗುವುದು, ಆದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ: ಸಂಸದೆ ಸುಮಲತಾ ಅಳಲು

ಇದನ್ನೂ ಓದಿ: ಗಲಾಟೆಯಲ್ಲಿ ಸುಮಲತಾ ಕಾರು ಚಾಲಕನಿಗೆ ಗಾಯ: ಪೊಲೀಸ್ ಠಾಣೆಗೆ ದೂರು ನೀಡಿದ ಮಂಡ್ಯ ಸಂಸದೆ!

Published On - 10:26 am, Mon, 21 March 22