ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನ ಚುನಾವಣಾ ನಿಪುಣ ಪ್ರಶಾಂತ್ ಕಿಶೋರ್ ಘರ್ ವಾಪಸಿ ಸಾಧ್ಯತೆ ಹೆಚ್ಚು! ಹೇಗೆ?

Political Strategist Prashant Kishor: ಒಂದು ಕಾಲದಲ್ಲಿ ಬಿಜೆಪಿಯ ಪೋಸ್ಟರ್ ಬಾಯ್ ಆಗಿದ್ದ ಪ್ರಶಾಂತ್ ಕಿಶೋರ್ 2014 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಕೇಸರಿ ಅಲೆಯನ್ನು ದೇಶದಲ್ಲಿ ಸೃಷ್ಟಿಸಿದ್ದಕ್ಕಾಗಿ ಮೊದಲ ಬಾರಿಗೆ ಗಮನ ಸೆಳೆದರು. ಅದರ ನಂತರ, ಅವರು ಬಿಜೆಪಿಯೊಂದಿಗೆ ಸಂಬಂಧ ಮುರಿದುಬಿದ್ದಿತ್ತು. ಬಳಿಕ ಪ್ರಶಾಂತ್ ಕಿಶೋರ್ ಬಿಜೆಪಿ ವಿರುದ್ಧ ವಿಧಾನಸಭಾ ಚುನಾವಣಾ ಅಖಾಡಕ್ಕಿಳಿದಿದ್ದ ನಿತೀಶ್ ಕುಮಾರ್ ಮತ್ತು ಮಮತಾ ಬ್ಯಾನರ್ಜಿಗಾಗಿ ಪ್ರಚಾರದ ಸ್ಟ್ರಾಟಜಿ ರೂಪಿಸಿದ್ದರು.

ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನ ಚುನಾವಣಾ ನಿಪುಣ ಪ್ರಶಾಂತ್ ಕಿಶೋರ್  ಘರ್ ವಾಪಸಿ ಸಾಧ್ಯತೆ ಹೆಚ್ಚು! ಹೇಗೆ?
ಗುಜರಾತ್ ವಿಧಾನಸಭೆಗೆ ಚುನಾವಣೆಗೂ ಮುನ್ನ ಚುನಾವಣಾ ನಿಪುಣ ಪ್ರಶಾಂತ್ ಕಿಶೋರ್ ಘರ್ ವಾಪಸಿ ಆಗುವ ಸಾಧ್ಯತೆ ಹೆಚ್ಚು! ಹೇಗೆ?
Follow us
S Chandramohan
| Updated By: ಸಾಧು ಶ್ರೀನಾಥ್​

Updated on:Mar 21, 2022 | 7:16 PM

ಭಾರತದ ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಈಗ ಘರ್ ವಾಪಸಿ ಆಗ್ತಾರಾ ಎಂಬ ಮಾತು ಗುಜರಾತ್ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ವರ್ಷದ ಅಂತ್ಯದಲ್ಲಿ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಯಲಿದೆ (Gujarat Assembly Elections 2022). ಇದರಲ್ಲಿ ಬಿಜೆಪಿ ಪರವಾಗಿ ಚುನಾವಣಾ ರಣತಂತ್ರ ಹೆಣೆಯಲು 45 ವರ್ಷದ ಪ್ರಶಾಂತ್ ಕಿಶೋರ್ ನೇಮಿಸಿಕೊಳ್ಳಲು (political strategist and tactician ) ಬಿಜೆಪಿ ನಾಯಕರು ಪ್ರಶಾಂತ್ ಕಿಶೋರ್ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ. ಈ ಆಫರ್ ಅನ್ನು ಪ್ರಶಾಂತ್ ಕಿಶೋರ್ ಒಪ್ಪಿಕೊಳ್ತಾರಾ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.

ಘರ್ ವಾಪಸಿ ಅಂಚಿನಲ್ಲಿ ಪ್ರಶಾಂತ್ ಕಿಶೋರ್? ಒಂದು ಕಾಲದಲ್ಲಿ ಬಿಜೆಪಿಯ ಪೋಸ್ಟರ್ ಬಾಯ್ ಆಗಿದ್ದ ಪ್ರಶಾಂತ್ ಕಿಶೋರ್ 2014 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಕೇಸರಿ ಅಲೆಯನ್ನು ದೇಶದಲ್ಲಿ ಸೃಷ್ಟಿಸಿದ್ದಕ್ಕಾಗಿ ಮೊದಲ ಬಾರಿಗೆ ಗಮನ ಸೆಳೆದರು. ಅದರ ನಂತರ, ಅವರು ಬಿಜೆಪಿಯೊಂದಿಗೆ ಸಂಬಂಧ ಮುರಿದುಬಿದ್ದಿತ್ತು. ಬಳಿಕ ಪ್ರಶಾಂತ್ ಕಿಶೋರ್ ಬಿಜೆಪಿ ವಿರುದ್ಧ ವಿಧಾನಸಭಾ ಚುನಾವಣಾ ಅಖಾಡಕ್ಕಿಳಿದಿದ್ದ ನಿತೀಶ್ ಕುಮಾರ್ ಮತ್ತು ಮಮತಾ ಬ್ಯಾನರ್ಜಿಗಾಗಿ ಪ್ರಚಾರದ ಸ್ಟ್ರಾಟಜಿ ರೂಪಿಸಿದ್ದರು. ಭಾರತೀಯ ಚುನಾವಣಾ ಪ್ರಚಾರವನ್ನು ಆಧುನೀಕರಿಸಿದ ದೂರದೃಷ್ಟಿ ಎಂದು ಶ್ಲಾಘಿಸಲ್ಪಟ್ಟ ಅವರು ಬಿಜೆಪಿ ವಿರುದ್ಧ ಮಹಾಮೈತ್ರಿಕೂಟವನ್ನು ಪ್ರಸ್ತಾಪಿಸಿದರು.

ಈಗ ಪ್ರಶಾಂತ್ ಕಿಶೋರ್ ಚುನಾವಣಾ ಸ್ಟ್ರಾಟಜಿ ರೂಪಿಸುವಲ್ಲಿ ಒಂದು ಫುಲ್ ಸರ್ಕಲ್ ಬಂದಿದ್ದಾರೆ. ಜೆಡಿಯು, ಟಿಎಂಸಿ, ಕಾಂಗ್ರೆಸ್, ಡಿಎಂಕೆ, ವೈಎಸ್ಆರ್ ಸೇರಿದಂತೆ ಪ್ರಮುಖ ಪಕ್ಷಗಳಿಗೆ ಚುನಾವಣಾ ಸ್ಟ್ರಾಟಜಿ ರೂಪಿಸಿದ್ದು, ಈ ಪಕ್ಷಗಳ ಚುನಾವಣಾ ಗೆಲುವಿನ ಶ್ರೇಯಸ್ಸು ಪ್ರಶಾಂತ್ ಕಿಶೋರ್ ಗೂ ಸಲ್ಲುತ್ತೆ. ಈಗ ಪ್ರಶಾಂತ್ ಕಿಶೋರ್ ಘರ್ ವಾಪಸಿ ಅಂಚಿಗೆ ಬಂದು ನಿಂತಿದ್ದಾರೆ ಎಂದು ಗುಜರಾತ್ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಡಿಸೆಂಬರ್ 2022 ರ ಗುಜರಾತ್ ಚುನಾವಣೆಗೆ ಬಿಜೆಪಿ ಪ್ರಚಾರವನ್ನು ರೂಪಿಸಲು, ಬಿಜೆಪಿ ಪರ ಚುನಾವಣಾ ಸ್ಟ್ರಾಟಜಿ ರೂಪಿಸಲು ಪ್ರಶಾಂತ್ ಕಿಶೋರ್ ಕರೆತರಲು ಗಂಭೀರವಾದ ಮಾತುಕತೆ ನಡೆಯುತ್ತಿದೆ. ಈ ಸಂಬಂಧ ಈಗಾಗಲೇ ಮೊದಲ ಸುತ್ತಿನ ಮಾತುಕತೆ ನವದೆಹಲಿಯಲ್ಲಿ ನಡೆದಿದೆ. ಇದು ನಿಜವಾದರೆ ಪ್ರಶಾಂತ್ ಕಿಶೋರ್‌ಗೆ ಘರ್ ವಾಪ್ಸಿಯೇ ಸರಿ. ಆದರೇ, ಈ ಬಗ್ಗೆ ಪ್ರಶಾಂತ್ ಕಿಶೋರ್ ಅಧಿಕೃತವಾಗಿ ಯಾವುದನ್ನೂ ಖಚಿತಪಡಿಸಿಲ್ಲ.

ಕಳೆದ ಕೆಲ ತಿಂಗಳುಗಳ ಹಿಂದೆ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷ ಸೇರಲು ಸಜ್ಜಾಗಿದ್ದಾರೆ ಎಂದು ಕೂಡ ಹೇಳಲಾಗಿತ್ತು. 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪರವಾಗಿ ಚುನಾವಣಾ ಸ್ಟ್ರಾಟಜಿ ರೂಪಿಸಲು ಪ್ರಶಾಂತ್ ಕಿಶೋರ್ ರನ್ನ ಕಾಂಗ್ರೆಸ್ ಬಳಸಿಕೊಳ್ಳುತ್ತೆ ಎಂದು ಕೂಡ ಹೇಳಲಾಗಿತ್ತು. ಆದರೇ, ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಎಂಟ್ರಿಗೆ ಪಕ್ಷದ ಹಿರಿಯ ನಾಯಕರ ವಿರೋಧ ಇತ್ತಂತೆ. ಹೀಗಾಗಿ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರಿಲ್ಲ.

ಕೆಲ ತಿಂಗಳುಗಳ ಹಿಂದೆ ದೇಶದ ರಾಜಕೀಯ, ಕಾಂಗ್ರೆಸ್ ಗೆ ಚುನಾವಣಾ ಸ್ಟ್ರಾಟಜಿ ರೂಪಿಸುವ ಬಗ್ಗೆ ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿಗೆ ಪ್ರಶಾಂತ್ ಕಿಶೋರ್ ಪ್ರಸಂಟೇಷನ್ ನೀಡಿದ್ದರು. ಆದರೇ, ಈಗ ಪ್ರಶಾಂತ್ ಕಿಶೋರ್ ರನ್ನು 2022ರ ಡಿಸೆಂಬರ್ ನಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ತಮ್ಮ ಪಕ್ಷದ ಪರ ಚುನಾವಣಾ ಸ್ಟ್ರಾಟಜಿ ರೂಪಿಸಲು ನೇಮಿಸಿಕೊಳ್ಳಲು ಕಾಂಗ್ರೆಸ್ ಕೂಡ ಆಸಕ್ತಿ ಹೊಂದಿದೆ. ಆದರೇ, ಬಿಜೆಪಿ ನಾಯಕರು ಈಗಾಗಲೇ ಪ್ರಶಾಂತ್ ಕಿಶೋರ್ ಜೊತೆಗೆ ಮಾತುಕತೆ ನಡೆಸಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ವಿಪಕ್ಷಗಳನ್ನು ಒಗ್ಗೂಡಿಸುವ ಕೆಲಸದಲ್ಲೂ ಪ್ರಶಾಂತ್ ಕಿಶೋರ್ ಪರೋಕ್ಷವಾಗಿ ತೊಡಗಿಸಿಕೊಂಡಿದ್ದರು. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ರನ್ನು ಎರಡು ಮೂರು ಬಾರಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೇ, ಈಗ ಗುಜರಾತ್‌ನ ಆಡಳಿತ ಪಕ್ಷದತ್ತಲೇ ಪ್ರಶಾಂತ್ ಕಿಶೋರ್ ಹೋಗ್ತಾರಾ? ಪ್ರಶಾಂತ್ ಮುಂದಿನ ನಡೆ ಏನು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಗೆ ಕೈ ಕೊಡ್ತಾರಾ ಹತ್ತು ಶಾಸಕರು? ಗುಜರಾತ್‌ನಲ್ಲಿ 10 ಕಾಂಗ್ರೆಸ್ ಶಾಸಕರ ಮೇಲೆ ಬಿಜೆಪಿ ಕಣ್ಣಿಟ್ಟಿದೆ ಎಂದು ರಾಜಸ್ಥಾನದ ಶಾಸಕರೊಬ್ಬರು ಮಾಡಿದ ಟ್ವೀಟ್ ಗ್ರ್ಯಾಂಡ್ ಓಲ್ಡ್ ಪಾರ್ಟಿಯ ಗುಜರಾತ್ ಘಟಕದಲ್ಲಿ ಬಿರುಸಿನ ಚಟುವಟಿಕೆಗಳಿಗೆ ಕಾರಣವಾಗಿದೆ. ಶಾಸಕರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. “ಗುಜರಾತ್ ವಿಧಾನಸಭಾ ಚುನಾವಣೆ 2022 – ಬಿಜೆಪಿ 10 ಕಾಂಗ್ರೆಸ್ ಶಾಸಕರ ಮೇಲೆ ಕಣ್ಣಿಟ್ಟಿದೆ, ಆರೋಗ್ಯವಾಗಿರಿ ಮತ್ತು ಜಾಗರೂಕರಾಗಿರಿ” ಎಂದು ಟ್ವೀಟ್ ಮಾಡಿದ್ದು, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಐಎನ್‌ಸಿ ಇಂಡಿಯಾ ಮತ್ತು ಐಎನ್‌ಸಿ ಗುಜರಾತ್‌ಗೆ ಟ್ಯಾಗ್ ಮಾಡಿದ್ದಾರೆ.

ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾದ ಕೆಲವು ಶಾಸಕರನ್ನು ಪಕ್ಷದ ನಾಯಕರು ಕರೆದು ಮಾತನಾಡಿದ್ದಾರೆ. 10 ಶಾಸಕರು ನಿರ್ಗಮಿಸಿದರೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲ 50 ಶಾಸಕರಿಗೆ ಇಳಿಯಲಿದೆ. ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರ ಜೊತೆ ಮಾತನಾಡಿದಾಗ, ಈ ಬೆಳವಣಿಗೆಯಿಂದ ಅವರು ಬೆಚ್ಚಿ ಬೀಳಲಿಲ್ಲ. ಅವರ ತರ್ಕ ಹೀಗಿತ್ತು, ಈ 10 ಶಾಸಕರು ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸದೇ ಇರಬಹುದು. ಇದು ಪಕ್ಷಕ್ಕೆ ಹೆಚ್ಚಿನ ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದಿದ್ದಾರೆ.

ಆದರೇ, ಮತ್ತೊಂದೆಡೆ ಪ್ರಧಾನಿ ಮೋದಿ ಈಗಾಗಲೇ 2022ರ ಡಿಸೆಂಬರ್ ನಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಗೆ ಪ್ರಚಾರವನ್ನು ಆರಂಭಿಸಿದ್ದಾರೆ. ಪಂಚ ರಾಜ್ಯ ವಿಧಾನಸಭಾ ಚುನಾವಣೆ ಗೆದ್ದ ಮಾರನೇ ದಿನವೇ ಗುಜರಾತ್ ಗೆ ಹೋಗಿ ಎರಡು ದಿನ ಬೇರೆ ಬೇರೆ ಸಭೆ, ಸಮಾರಂಭ ನಡೆಸಿದ್ದಾರೆ. ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಇವೆಲ್ಲವೂ ಮುಂದಿನ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ಮಾಡುತ್ತಿರುವ ಚಟುವಟಿಕೆಗಳು.

Published On - 7:13 pm, Mon, 21 March 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್