ಗಲಾಟೆಯಲ್ಲಿ ಸುಮಲತಾ ಕಾರು ಚಾಲಕನಿಗೆ ಗಾಯ: ಪೊಲೀಸ್ ಠಾಣೆಗೆ ದೂರು ನೀಡಿದ ಮಂಡ್ಯ ಸಂಸದೆ!
ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ, ಗೂಂಡಾ ವರ್ತನೆ ಹಿನ್ನೆಲೆ ದೂರು ದಾಖಲಿಸಿದ್ದಾರೆ. ಗಲಾಟೆಯಲ್ಲಿ ಸುಮಲತಾ ಕಾರು ಚಾಲಕ ನಂಜುಂಡಗೆ ಗಾಯಗಳಾಗಿದ್ದು ಗಾಯಾಳುಗೆ ಕೆ.ಆರ್.ನಗರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಚೌಕಹಳ್ಳಿ ಗ್ರಾಮದ ರಸ್ತೆ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಶುರುವಾದ ಗುದ್ದಾಟ ಬೇರೆಯ ಸ್ವರೂಪವೇ ಪಡೆದಿದೆ. ಕಾರ್ಯಕ್ರಮದಲ್ಲಿ ಸರಿಯಾಗಿ ಶಾಮಿಯಾನ, ಚೇರ್ ವ್ಯವಸ್ಥೆ ಮಾಡದಿದ್ದಕ್ಕೆ ಅಧಿಕಾರಿಗಳ ವಿರುದ್ಧ ಸಂಸದೆ ಸುಮಲತಾ ಕೆಂಡಾಮಂಡಲರಾಗಿದ್ದರು. ಈ ವೇಳೆ ಸಂಸದೆ ಸುಮಲತಾಗೆ ಕಾಮಗಾರಿ ನಡೆಸಲು ಅಡ್ಡಿ ಪಡಿಸಲಾಗಿತ್ತು. ಈ ನಡುವೆ ಜೆಡಿಎಸ್ ಸಂಸದೆ ಸುಮಲತಾ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಿಕಿ ನಡೆದಿತ್ತು. ಈ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು ಗಲಾಟೆ ವೇಳೆ ಸುಮಲತಾ ಕಾರು ಚಾಲಕನ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದ್ದು ಸುಮಲತಾ ಸಾಲಿಗ್ರಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಕರ್ತವ್ಯಕ್ಕೆ ಅಡ್ಡಿ, ಗೂಂಡಾ ವರ್ತನೆ ಹಿನ್ನೆಲೆ ದೂರು ದಾಖಲಿಸಿದ್ದಾರೆ. ಗಲಾಟೆಯಲ್ಲಿ ಸುಮಲತಾ ಕಾರು ಚಾಲಕ ನಂಜುಂಡಗೆ ಗಾಯಗಳಾಗಿದ್ದು ಗಾಯಾಳುಗೆ ಕೆ.ಆರ್.ನಗರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆಗೆ JDS ಕಾರ್ಯಕರ್ತರು ಅಡ್ಡಿಪಡಿಸಿದ್ದರು. ಶಾಸಕ ಸಾ.ರಾ.ಮಹೇಶ್ಗೆ ಆಹ್ವಾನ ನೀಡಿಲ್ಲವೆಂದು ಗಲಾಟೆ ಮಾಡಿದ್ದರು. ಶಿಷ್ಟಾಚಾರ ಪಾಲಿಸಿಲ್ಲ ಅಂತಾ ಆರೋಪ ಮಾಡಿದ್ದರು. ಈ ವೇಳೆ ಸುಮಲತಾ ಪರವಾಗಿ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದ್ದರು. ಕಾರ್ಯಕರ್ತರು ಪರಸ್ಪರ ಕಿತ್ತಾಡಿ ತಳ್ಳಾಟ ನಡೆಸಿದ್ದ ವೇಳೆ ತಳ್ಳಾಟದಲ್ಲಿ ಸಂಸದರ ಕಾರು ಚಾಲಕನಿಗೆ ಗಾಯಗಳಾಗಿವೆ.
ಗ್ರಾಮದ ಮಹಿಳೆಯರನ್ನು ಸೇರಿಸಿ ಸಂಸದೆ ಗುದ್ದಲಿ ಪೂಜೆ ಮಂಡ್ಯ ಸಂಸದೆ ಸುಮಲತಾ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಿಕಿ ನಡೆದಿದೆ. ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ತಲುಪಿದೆ. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಸಂಸದೆ ಸುಮಲತಾ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಜೈಕಾರ ಹೋಗಿದ್ದಾರೆ. 50 ಲಕ್ಷ ವೆಚ್ಚದ ನೀರಾವರಿ ಇಲಾಖೆ ಕಾಮಗಾರಿ ಪೂಜೆ ಇದಾಗಿದ್ದು ಚರಂಡಿ, ಸಿಮೆಂಟ್ ಕಾಂಕ್ರೀಟ್ ರಸ್ತೆಗಳ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನಡೆಯಬೇಕಿತ್ತು. ಸದ್ಯ ನಮ್ಮ ಶಾಸಕ ಸಾ.ರಾ.ಮಹೇಶ್ ಅವರನ್ನು ಬಿಟ್ಟು ನೀವು ಒಬ್ಬರೆ ಗುದ್ದಲಿ ಪೂಜೆ ಮಾಡಲು ಬಿಡಲ್ಲ ಎಂದು ವಿರೋಧ ವ್ಯಕ್ತವಾಗುತ್ತಿದ್ದಂತೆ ಪ್ರೋಟೋ ಕಾಲ್ ನಿಯಮಗಳನ್ನು ಗಾಳಿಗೆ ತೂರಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡು ಗ್ರಾಮದ ಮಹಿಳೆಯರನ್ನು ಸೇರಿಸಿ ಸಂಸದೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.
ಇದನ್ನೂ ಓದಿ: Viral Video: ನದಿಯಲ್ಲಿ ಹಿಡಿದ ಮೀನನ್ನು ಈಜುತ್ತಾ ದಡಕ್ಕೆ ಎಳೆದು ತಂದ ಹದ್ದು; ಇಲ್ಲಿದೆ ವೈರಲ್ ವಿಡಿಯೋ
ಅಭಿಷೇಕ್ ಅಂಬರೀಷ್ ರಾಜಕೀಯಕ್ಕೆ ಬರ್ತಾರಾ?; ಸುಮಲತಾ ಅಂಬರೀಷ್ ಹೇಳಿದ್ದಿಷ್ಟು
Published On - 10:28 pm, Wed, 9 March 22




