ಕರ್ನಾಟಕದಲ್ಲಿ ರೈತರಿಗೆ ಐದು ಗಂಟೆ ವಿದ್ಯುತ್: ತೆಲಂಗಾಣ ಕಾಂಗ್ರೆಸ್​​ಗೆ ಹಿನ್ನಡೆಯಾದ ಡಿಕೆ ಶಿವಕುಮಾರ್ ಹೇಳಿಕೆ

|

Updated on: Oct 30, 2023 | 7:35 PM

Telangana Assembly Elections 2023: ಡಿಕೆ ಶಿವಕುಮಾರ್ ಅವರ ಹೇಳಿಕೆಯ ಲಾಭ ಪಡೆಯಲು ಮುಂದಾಗಿರುವ ಬಿಆರ್‌ಎಸ್ ನಾಯಕರು. ಈ ವಿಷಯ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಲು ಪ್ರಾರಂಭಿಸಿದ್ದಾರೆ. ಐದು ಗಂಟೆ ವಿದ್ಯುತ್ ಸರಬರಾಜು ಮಾಡುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೇ ಅಥವಾ ರಾತ್ರಿಯಿಡೀ ವಿದ್ಯುತ್ ನೀಡುವ ನಮ್ಮ ಪಕ್ಷವನ್ನು ಬೆಂಬಲಿಸಬೇಕೇ ಎಂದು ಜನರನ್ನು ಪ್ರಶ್ನಿಸುತ್ತಿದ್ದಾರೆ.

ಕರ್ನಾಟಕದಲ್ಲಿ ರೈತರಿಗೆ ಐದು ಗಂಟೆ ವಿದ್ಯುತ್: ತೆಲಂಗಾಣ ಕಾಂಗ್ರೆಸ್​​ಗೆ ಹಿನ್ನಡೆಯಾದ ಡಿಕೆ ಶಿವಕುಮಾರ್ ಹೇಳಿಕೆ
ಡಿಕೆ ಶಿವಕುಮಾರ್
Follow us on

ಬೆಂಗಳೂರು, ಅಕ್ಟೋಬರ್ 30: ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರಿಗೆ ಐದು ಗಂಟೆ ವಿದ್ಯುತ್ ನೀಡುತ್ತಿದೆ ಎಂದು ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ತೆಲಂಗಾಣದಲ್ಲಿ ಚುನಾವಣಾ (Telangana Assembly Elections 2023) ಪ್ರಚಾರಕ್ಕೆ ತೆರಳಿದ್ದಾಗ ನೀಡಿದ ಹೇಳಿಕೆ ಇದೀಗ ಅಲ್ಲಿನ ಕಾಂಗ್ರೆಸ್ಸಿಗರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಅವರ ಹೇಳಿಕೆಯು ಪಕ್ಷದ ನಾಯಕರು ಮತ್ತು ಕಾರ್ಯಕರ್ತರಲ್ಲಿ ಕಳವಳ ಉಂಟುಮಾಡಿದೆ. ಚುನಾವಣೆಗೆ ಮುನ್ನ ವಿದ್ಯುತ್ ಪೂರೈಕೆಯಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಪ್ರಮುಖ ನಾಯಕರು ಇಂತಹ ಹೇಳಿಕೆ ನೀಡುವುದರ ಬಗ್ಗೆ ಅವರು ಅತೃಪ್ತರಾಗಿದ್ದಾರೆಂದು ಮೂಲಗಳು ಹೇಳಿವೆ.

ಡಿಕೆ ಶಿವಕುಮಾರ್ ಅವರ ಹೇಳಿಕೆಯ ಲಾಭ ಪಡೆಯಲು ಮುಂದಾಗಿರುವ ಬಿಆರ್‌ಎಸ್ ನಾಯಕರು. ಈ ವಿಷಯ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಲು ಪ್ರಾರಂಭಿಸಿದ್ದಾರೆ. ಐದು ಗಂಟೆ ವಿದ್ಯುತ್ ಸರಬರಾಜು ಮಾಡುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೇ ಅಥವಾ ರಾತ್ರಿಯಿಡೀ ವಿದ್ಯುತ್ ನೀಡುವ ನಮ್ಮ ಪಕ್ಷವನ್ನು ಬೆಂಬಲಿಸಬೇಕೇ ಎಂಬುದಾಗಿ ಜನರು ನಿರ್ಧರಿಸಬೇಕು ಎಂದು ಬಿಆರ್‌ಎಸ್ ನಾಯಕರು ಜನರಿಗೆ ಮನವಿ ಮಾಡಿದ್ದಾರೆ.

ರೈತರಿಗೆ ಐದು ಗಂಟೆ ವಿದ್ಯುತ್ ನೀಡುತ್ತಿದ್ದೇವೆ ಎಂದು ಸ್ವತಃ ಕರ್ನಾಟಕದ ಡಿಸಿಎಂ ಅವೇ ಹೇಳಿರುವಾ, ತೆಲಂಗಾಣದಲ್ಲಿ 24 ಗಂಟೆ ವಿದ್ಯುತ್ ನೀಡುತ್ತಿರುವ ಬಿಆರ್‌ಎಸ್ ನಾಯಕರು ಕರ್ನಾಟಕಕ್ಕೆ ಭೇಟಿ ನೀಡುವ ಅಗತ್ಯ ಏನಿದೆ ಎಂದು ಬಿಆರ್​ಎಸ್ ನಾಯಕ ಮತ್ತು ಸಚಿವ ಹರೀಶ್ ರಾವ್ ಚುನಾವಣಾ ಪ್ರಚಾರದ ಸಂದರ್ಭ ಪ್ರಶ್ನಿಸಿದ್ದಾರೆ. 5 ಗಂಟೆ ವಿದ್ಯುತ್ ನೀಡುತ್ತಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರೂ, ಕರ್ನಾಟಕದ ಅಕ್ಕಪಕ್ಕದ ಹಳ್ಳಿಗಳ ರೈತರು ಈ ಕಡೆ ಬಂದು ಕೇವಲ 3 ಗಂಟೆ ಮಾತ್ರ ಸರಬರಾಜು ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಅನ್ನು ನಂಬಬೇಡಿ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: DK Shivakumar: ಡಿಕೆ ಶಿವಕುಮಾರ್ ಸಾರಥ್ಯದಲ್ಲಿ ಕಾಂಗ್ರೆಸ್ ಎರಡನೇ ಹಂತದ ಬಸ್ ಯಾತ್ರೆ ಆರಂಭ

ಏತನ್ಮಧ್ಯೆ, ಡಿಕೆ ಶಿವಕುಮಾರ್ ಹೇಳಿಕೆ ನಕಾರಾತ್ಮಕವಾಗಿ ಪರಿಣಮಿಸುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ನಾಯಕರು ವಿದ್ಯುತ್, ನೀರು, ರೈತ ಬಂಧು ಯೋಜನೆ ಮತ್ತು ಇತರ ಸೂಕ್ಷ್ಮ ವಿಷಯಗಳ ಬಗ್ಗೆ ಮಾತನಾಡದೆ ಪಕ್ಷದ ಆರು ಗ್ಯಾರಂಟಿಗಳ ಬಗ್ಗೆ ಮಾತ್ರ ಮಾತುಗಳಲ್ಲಿ ಪ್ರಸ್ತಾಪಿಸುವಂತೆ ಸ್ಟಾರ್ ಪ್ರಚಾರಕರಿಗೆ ಸಲಹೆ ನೀಡುತ್ತಿದ್ದಾರೆ.

ರಾಜಕಾರಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ