Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕಕ್ಕೆ ಮಾರಿ, ಪರರಾಜ್ಯಗಳಿಗೆ ಉಪಕಾರಿ: ಡಿಕೆ ಶಿವಕುಮಾರ್ ತೆಲಂಗಾಣ ಪ್ರವಾಸಕ್ಕೆ ಬಿಜೆಪಿ ವ್ಯಂಗ್ಯ

ಕತ್ತಲೆ ಕರುನಾಡಲ್ಲಿ ಸರ್ಕಾರ ನಾಪತ್ತೆಯಾಗಿದೆ. ಬರ ಸಿಡಿಲಿಗೆ ಅನ್ನದಾತ ಬೆಂದು ಹೋಗಿದ್ದಾನೆ ಎಂದು ಮತ್ತೊಂದು ಸಂದೇಶದಲ್ಲಿ ಬಿಜೆಪಿ ಟೀಕಿಸಿದೆ. ಜತೆಗೆ ವಿದ್ಯುತ್ ಅಭಾವ, ರೈತರ ಸಂಕಷ್ಟಗಳ ಕುರಿತ ಪತ್ರಿಕಾ ವರದಿಗಳ ತುಣುಕುಗಳನ್ನೂ ಲಗತ್ತಿಸಿದೆ.

ಕರ್ನಾಟಕಕ್ಕೆ ಮಾರಿ, ಪರರಾಜ್ಯಗಳಿಗೆ ಉಪಕಾರಿ: ಡಿಕೆ ಶಿವಕುಮಾರ್ ತೆಲಂಗಾಣ ಪ್ರವಾಸಕ್ಕೆ ಬಿಜೆಪಿ ವ್ಯಂಗ್ಯ
ಡಿಕೆ ಶಿವಕುಮಾರ್
Follow us
Ganapathi Sharma
|

Updated on: Oct 28, 2023 | 5:21 PM

ಬೆಂಗಳೂರು, ಅಕ್ಟೋಬರ್ 28: ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿಜಯಭೇರಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೈದರಾಬಾದ್​ ತಲುಪಿದ್ದಾರೆ. ಇದೇ ವೇಳೆ ಇತ್ತ ಕರ್ನಾಟಕದಲ್ಲಿ ಪ್ರತಿಪಕ್ಷ ಬಿಜೆಪಿ (BJP) ಅವರ ವಿರುದ್ಧ ವ್ಯಂಗ್ಯಾಸ್ತ್ರಗಳ ಮೂಲಕ ಟೀಕಾ ಪ್ರಹಾರ ನಡೆಸಿದೆ. ಡಿಕೆ ಶಿವಕುಮಾರ್ ಅವರು ಕರ್ನಾಟಕಕ್ಕೆ ಮಾರಿ, ಪರರಾಜ್ಯಗಳಿಗೆ ಉಪಕಾರಿ. ಕಲೆಕ್ಷನ್ ಹಣವನ್ನು ತಲುಪಿಸಲು ತೆಲಂಗಾಣಕ್ಕೆ ಹೋಗಿರಬೇಕು ಎಂದು ಬಿಜೆಪಿ ಸಾಮಾಜಿಕ ಮಾಧ್ಯಮ ಎಕ್ಸ್​ ಮೂಲಕ ವ್ಯಂಗ್ಯವಾಡಿದೆ.

‘ಕರ್ನಾಟಕಕ್ಕೆ ಮಾರಿ, ಪರರಾಜ್ಯಗಳಿಗೆ ಉಪಕಾರಿ! ಡಿಸಿಎಂ ಡಿಕೆ ಶಿವಕುಮಾರ್ ಅವರೇ, ಕರ್ನಾಟಕದಲ್ಲಿ ಭೀಕರ ಬರವಿದೆ, ಜನ-ಜಾನುವಾರುಗಳಿಗೆ ಕುಡಿಯಲು ಸಹ ನೀರಿಲ್ಲ, ಸಾಲದ್ದಕ್ಕೆ ನೀವು ನೀರಾವರಿ ಸಚಿವರು! ಕರ್ನಾಟಕದಲ್ಲಿ ಎಷ್ಟು ಬಾರಿ ಬರ ಪ್ರವಾಸ ಮಾಡಿದ್ದೀರಿ ಸ್ವಾಮಿ? ತೆಲಂಗಾಣ ಕಾಂಗ್ರೆಸ್ಸಿಗರ ಮನೆಯಲ್ಲಿ ಐಟಿ ರೇಡ್‌ ವೇಳೆ ಹಣ ಸಿಕ್ಕಿ ಬಿದ್ದಿದ್ದರಿಂದ, ಕರ್ನಾಟಕದಲ್ಲಿ ಮಾಡಿದ ಕಲೆಕ್ಷನ್ ಹಣವನ್ನು ತಲುಪಿಸಲು ಹೋಗಿದ್ದೀರೇನು’ ಎಂದು ಎಕ್ಸ್​​ ಸಂದೇಶದಲ್ಲಿ ಬಿಜೆಪಿ ಪ್ರಶ್ನಿಸಿದೆ. ಜತೆಗೆ #ATMSarkara, #CongressLootsKarnataka ಹ್ಯಾಷ್​ಟ್ಯಾಗ್​ಗಳ ಮೂಲಕ ಕುಹಕವಾಗಿಡಿದೆ.

ಕತ್ತಲೆ ಕರುನಾಡಲ್ಲಿ ಸರ್ಕಾರ ನಾಪತ್ತೆ: ಬಿಜೆಪಿ ಟೀಕೆ

ಕತ್ತಲೆ ಕರುನಾಡಲ್ಲಿ ಸರ್ಕಾರ ನಾಪತ್ತೆಯಾಗಿದೆ. ಬರ ಸಿಡಿಲಿಗೆ ಅನ್ನದಾತ ಬೆಂದು ಹೋಗಿದ್ದಾನೆ ಎಂದು ಮತ್ತೊಂದು ಸಂದೇಶದಲ್ಲಿ ಬಿಜೆಪಿ ಟೀಕಿಸಿದೆ. ಜತೆಗೆ ವಿದ್ಯುತ್ ಅಭಾವ, ರೈತರ ಸಂಕಷ್ಟಗಳ ಕುರಿತ ಪತ್ರಿಕಾ ವರದಿಗಳ ತುಣುಕುಗಳನ್ನೂ ಲಗತ್ತಿಸಿದೆ.

ಇದನ್ನೂ ಓದಿ: ಹುಬ್ಬಳ್ಳಿ: ಬೊಮ್ಮಾಯಿ ಹೃದಯ ಆರೋಗ್ಯ ಕುರಿತು ಕೀಳು ಅಭಿರುಚಿಯ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕ ಕೋನರಡ್ಡಿ

‘ಕರ್ನಾಟಕಕ್ಕೆ ಬರಗಾಲದ ಗ್ರಹಣ ಹಿಡಿಯುತ್ತಿದ್ದಂತೆ ಕಾಂಗ್ರೆಸ್ ಸರ್ಕಾರ ವಿದ್ಯುತ್ ತೆಗೆದು ಕತ್ತಲಲ್ಲಿ ನಾಪತ್ತೆಯಾಗಿದೆ. ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಶೇ 80 ರಷ್ಟು ಬೆಳೆ ನಾಶವಾಗಿದೆ. ಮತ್ತೊಂದು ಕಡೆ ಎರಡು ಗಂಟೆಯೂ ವಿದ್ಯುತ್ ಪೂರೈಕೆ ಮಾಡಲು ಯೋಗ್ಯತೆ ಇಲ್ಲದ ಸಿದ್ದರಾಮಯ್ಯ ಅವರ ಸರ್ಕಾರದ ಕಾರಣದಿಂದ ಅನ್ನದಾತ ಕಂಗೆಟ್ಟು ಹೋಗಿದ್ದಾನೆ. ಕಾಂಗ್ರೆಸ್ ಬಂದಿದೆ ಬರದ ಜತೆ ಕರುನಾಡು ಕತ್ತಲಾಗಿದೆ!’ ಎಂದು ಬಿಜೆಪಿ ಲೇವಡಿ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್