ಬೆಂಗಳೂರು, ಜನವರಿ 5: ಬಿಜೆಪಿಯ ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಸಹೋದರ ಜಮೀನಿನಲ್ಲಿ ಮರ ಕಡಿದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಅಧಿಕಾರ ದುರುಪಯೋಗಪಡಿಸಿಕೊಂಡು ಕ್ರಮ ಕೈಗೊಂಡಿದ್ದಾರೆ ಎಂದು ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಟೀಕಿಸಿದರು. ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಪ್ರತಾಪಸಿಂಹ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಹಾಸನದ ಗೆಂಡೆಕಟ್ಟೆ ಅರಣ್ಯದಿಂದ ಬೀಟೆ ಮರ ಕಡಿದು ಬೇಲೂರಿನಲ್ಲಿರುವ ಪ್ರತಾಪ್ ಸಿಂಹ ಸಹೋದರನ ಗುತ್ತಿಗೆ ಪಡೆದ ಜಮೀನಿನಲ್ಲಿ ಹಾಕಿಸಲು ಸಿದ್ದರಾಮಯ್ಯ ಸೂಚನೆ ಹೊಟ್ಟಿದ್ದಾರೆ ಎಂದು ಆರೋಪಿಸಿದರು.
ಪ್ರತಾಪ್ ಸಿಂಹ ತೇಜೋವಧೆ ಮಾಡಲು ಅಧಿಕಾರಿಗಳಿಗೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಪ್ರತಾಪ್ ಸಿಂಹ ಸಹೋದರನಿಗೂ ಮರಕಡಿದ ವಿಚಾರಕ್ಕೂ ಸಂಬಂಧವಿಲ್ಲ. ಯಾರು ಯಾರಿಗೆ ಕರೆ ಮಾಡಿದ್ದರು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಕಾಲ್ ಡೀಟೆಲ್ಸ್ ತೆಗೆಸಿದ್ರೆ ಎಲ್ಲವೂ ಗೊತ್ತಾಗುತ್ತೆ ಎಂದು ಕುಮಾರಸ್ವಾಮಿ ಹೇಳಿದರು.
ಹೆಚ್ಡಿ ದೇವೇಗೌಡರ ಹೇಳಿಕೆಯನ್ನು ಸಮರ್ಥಿಸಿದ ಕುಮಾರಸ್ವಾಮಿ, ರಾಷ್ಟ್ರೀಯ ಅಧ್ಯಕ್ಷರು ರೈತರಿಗೆ ಆಗಿರುವ ಅನ್ಯಾಯ ಲೋಪದೋಷಗಳ ಬಗ್ಗೆ ಮಾತನಾಡಿದ್ದಾರೆ. ಸರ್ಕಾರ ಅಕ್ರಮಗಳನ್ನ ತಡೆಯುವಲ್ಲಿ ಕ್ರಮವಹಿಸಿಲ್ಲ. ರಾಜ್ಯದಲ್ಲಿ ಅಧಿಕಾರ ದುರ್ಬಳಕೆಯಾಗುತ್ತಿದ್ದು, ಸಾರ್ವಜನಿಕವಾಗಿ ಮಾದ್ಯಮಗಳಲ್ಲೂ ಸಹಾ ಕಳೆದ ಎರಡು ತಿಂಗಳಿಂದ ಬೇರೆ ಯಾವ ವಿಷಯಗಳಿಗೆ ಗಮನ ಕೊಡೊಕೆ ಆಗ್ತಿಲ್ಲ. ಹುಬ್ಬಳ್ಳಿಯಲ್ಲಿ ಸುಮಾರು 30 ವರ್ಷಗಳ ಪ್ರಕರಣಗಳಿಗೆ ಸಂಬಂದಿಸಿದ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನವಾಗಿದೆ. ನಮ್ಮಎನ್ಡಿಎ ಪಕ್ಷದ ಬಿಜೆಪಿ ನಾಯಕರು ಕರಸೇವಕರ ಪರ ಹೋರಾಟ ಮಾಡುತ್ತಿದ್ದಾರೆ. ಗುಜಾರತ್ ನಲ್ಲಿ ನಡೆದ ಕರಸೇವಕರ ಮೇಲೆ ಆದಂತಹ ದೊಂಬಿ ಇಲ್ಲಿ ಆಗುತ್ತೆ ಎಂದು ಎಮ್ಎಲ್ಸಿ ಒಬ್ಬರು ಹೇಳಿದ್ದಾರೆ. ಅಧಿಕಾರ ದುರ್ಬಳಕೆ ಈ ಸರ್ಕಾರ ಬಂದ ಮೇಲೆ ಆಗ್ತಿದೆ ಎಂದು ಟೀಕಿಸಿದರು.
ಇದನ್ನೂ ಓದಿ: ಕಾಂಗ್ರೆಸ್ಸಿಗರು ಸೇಡಿನ ರಾಜಕಾರಣ ಮಾಡಿ ತುಳಿಯಲು ಹೊರಟಿದ್ದಾರೆ: ಶ್ರೀಕಾಂತ್ ಪ್ರಕರಣ ಉಲ್ಲೇಖಿಸಿ ದೇವೇಗೌಡ ವಾಗ್ದಾಳಿ
ಹಾಸನದ ವರ್ಗಾವಣೆ ಯಾರು ನೋಡಿಕೊಳ್ಳುತ್ತಿದ್ದಾರೆ? ಶಾಸಕ ಹೆಚ್ಡಿ ರೇವಣ್ಣ ನೋಡಿಕೊಳ್ಳುತ್ತಿದ್ದಾರೆಯೋ ಎಂದು ಶಾಸಕ ಶಿವಲಿಂಗೇಗೌಡ ಹೆಸರು ಉಲ್ಲೇಖಿಸದೆ ಕುಮಾರಸ್ವಾಮಿ ಪ್ರಶ್ನಿಸಿದರು. ನಾನೂ ಪೋನ್ ಇಟ್ಟುಕೊಳ್ಳುವುದಿಲ್ಲ. ಸಿಎಂಗೆ ಎಷ್ಟು ಜನ ಸಲಹೆಗಾರರು ಇದ್ದಾರೆ? ಬೀಟೆ ಮರ ತೆಗೆದುಕೊಂಡು ಹೋಗಿ ಹಾಕಿ ಎಂಬ ಸಾಕ್ಷಿ ನಾನು ಎಲ್ಲಿಂದ ತರಲಿ?
ಬೀಟೆ ಮರ ಹಾಕದ್ದಕ್ಕೆ ಅಧಿಕಾರಿಗಳ ಸಸ್ಪೆಂಡ್ ಆಗಿದೆ ಎಂದು ಕುಮಾರಸ್ವಾಮಿ ದೂರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ