ನಾನು ಬ್ರಾಹ್ಮಣ ಸಮುದಾಯಕ್ಕೆ ಅಗೌರವ ತೋರಿಲ್ಲ: ಈ ದೇಶದ ಇತಿಹಾಸದಲ್ಲಿ ನಡೆದ ಬೆಳವಣಿಗೆ ಬಗ್ಗೆ ಹೇಳಿದ್ದೇನೆ ಎಂದ ಕುಮಾರಸ್ವಾಮಿ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 06, 2023 | 6:05 PM

ನಾನು ನಿನ್ನೆ ಕೊಟ್ಟ ಹೇಳಿಕೆ ಬಗ್ಗೆ ಹಲವಾರು ಪ್ರತಿಕ್ರಿಯೆ ಬಂದಿದೆ. ನಾನು ಒಂದು ಸಮಾಜದ ಬಗ್ಗೆ ಅಗೌರವ ತೋರಿಸಿಲ್ಲ. ಈ ದೇಶದ ಇತಿಹಾಸದಲ್ಲಿ ನಡೆದ ಬೆಳವಣಿಗೆ ಬಗ್ಗೆ ಹೇಳಿದ್ದೇನೆ ಎಂದು ಹೆಚ್.​ಡಿ. ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ನಾನು ಬ್ರಾಹ್ಮಣ ಸಮುದಾಯಕ್ಕೆ ಅಗೌರವ ತೋರಿಲ್ಲ: ಈ ದೇಶದ ಇತಿಹಾಸದಲ್ಲಿ ನಡೆದ ಬೆಳವಣಿಗೆ ಬಗ್ಗೆ ಹೇಳಿದ್ದೇನೆ ಎಂದ ಕುಮಾರಸ್ವಾಮಿ
ಜೆಡಿಎಸ್ ನಾಯಕ ಎಚ್​​.ಡಿ.ಕುಮಾರಸ್ವಾಮಿ
Follow us on

ಬೆಂಗಳೂರು: ಚುನಾವಣೆ ಹೊಸ್ತಿಲಲ್ಲಿರುವಾಗ ಮಾಜಿ ಸಿಎಂ ಹೆಚ್.​ಡಿ. ಕುಮಾರಸ್ವಾಮಿ (HD Kumaraswamy) ಅವರು ನಿನ್ನೆ ದೊಡ್ಡ ಬಾಂಬ್​ ಸಿಡಿಸಿದ್ದರು. ಬ್ರಾಹ್ಮಣರ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇ ತಡ, ಬಿಜೆಪಿ ನಾಯಕರು ನಿಗಿ ನಿಗಿ ಕೆಂಡವಾಗಿದ್ದರು. ಅಲ್ಲದೇ ಬ್ರಾಹ್ಮಣ ಸಮುದಾಯ ಕೂಡ ಕ್ಷಮೆ ಕೇಳುವಂತೆ ಕುಮಾರಸ್ವಾಮಿಯನ್ನು ಆಗ್ರಹಿಸಿದೆ. ಇನ್ನು ಇದೀಗ ಹೆಚ್.​ಡಿ. ಕುಮಾರಸ್ವಾಮಿ ತಮ್ಮ ಹೇಳಿಕೆ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದು, ನಾನು ನಿನ್ನೆ ಕೊಟ್ಟ ಹೇಳಿಕೆ ಬಗ್ಗೆ ಹಲವಾರು ಪ್ರತಿಕ್ರಿಯೆ ಬಂದಿದೆ. ನಾನು ಒಂದು ಸಮಾಜದ ಬಗ್ಗೆ ಅಗೌರವ ತೋರಿಸಿಲ್ಲ. ಈ ದೇಶದ ಇತಿಹಾಸದಲ್ಲಿ ನಡೆದ ಬೆಳವಣಿಗೆ ಬಗ್ಗೆ ಹೇಳಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಬ್ರಾಹ್ಮಣ ಸಮಾಜದ ಬಗ್ಗೆ ಅಪಾಮಾನ ಮಾಡಿಲ್ಲ

ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಬೆಳವಣಿಗೆಯನ್ನು ನಾವು ಕಾಣುತ್ತಿದ್ದೇವೆ. ಬ್ರಾಹ್ಮಣ ಸಮಾಜದ ಬಗ್ಗೆ ಅಪಾಮಾನ ಮಾಡಿದ್ದೇನೆ ಎನ್ನುತ್ತಿದ್ದಾರೆ. ಹಳೆ ಕರ್ನಾಟಕ ಭಾಗದ ಬ್ರಾಹ್ಮಣ ಸಮಾಜ ಅತ್ಯಂತ ಗೌರವ ಸಮಾಜ ಎಂದು ಹೇಳಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪುಸ್ತಕದಲ್ಲಿ ಅನೇಕ ತಿರುಚುವ ಕೆಲಸ ಆಯ್ತು. ಇಂಥಹ ವ್ಯಕ್ತಿಗಳ ಬಗ್ಗೆ ಎಚ್ಚರ ಇರಲಿ ಅಂತ ಹೇಳಿದ್ದು ಎಂದರು. ಚಂದ್ರಮೌಳಿ ಕಡವಿದವರಾರು, ಗಾಂಧೀಜಿಯವರನ್ನ ಕೊಂದಿದ್ಯಾರು, ಶವಾಜಿ ಕೊಂದಿದ್ದ ಯಾರು ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಕುಮಾರಸ್ವಾಮಿ ಕೂಡಲೇ ಕ್ಷಮೆ ಕೇಳುವಂತೆ ಆಗ್ರಹಿಸಿದ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ

ಡಿಎನ್​ಎ ಇರುವ ವ್ಯಕ್ತಿಯನ್ನ ಸಿಎಂ ಮಾಡಲು ಹೊರಟಿದ್ದಾರೆ

ಆ ಡಿಎನ್​ಎ ಇರುವ ವ್ಯಕ್ತಿಯನ್ನ ಸಿಎಂ ಮಾಡಲು ಹೊರಟಿದ್ದಾರೆ ಅಂತ ನಾನು ಹೇಳಿದ್ದು. ಅದಕ್ಕೆ ಯಾಕೆ ಇಷ್ಟು ಗಾಬರಿ. ಈ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಈ ಭಾಗದ ಬ್ರಾಹ್ಮಣರು ಸರ್ವೇ ಜನಃ ಸುಕಿನೋ ಭವಂತು ಅಂತಾರೆ. ಪೇಶ್ವೆ ಸಮಾಜ, ಸರ್ವೇ ಜನೋ ನಾಶೋ ಭವಂತು ಅಂತಾರೆ. ಇದು ಅವರ ಪಾಲಿಸಿ. ನನ್ನ ರಾಜ್ಯ ಉಳಿಯಬೇಕು. ಬ್ರಾಹ್ಮಣ ಮಹಾ ಸಮಾಜಕ್ಕೆ ಮನವಿ ಮಾಡ್ತೀನಿ, ಈ ಸಮಾಜಕ್ಕೆ ನಾನು ಸಿಎಂ ಆದಾಗ ಜಾಗ ಕೊಟ್ಟಿದ್ದೇನೆ. ಅಭಿವೃದ್ಧಿ ಪ್ರಾಧಿಕಾರ ಮಾಡಿ ಹಣ ಕೊಟ್ಟಿದ್ದೇನೆ. ನಾನು ವ್ಯಕ್ತಿಯ ಬಗ್ಗೆ ಚರ್ಚೆ ಮಾಡಿರೋದೇ ಹೊರತು ಸಮಾಜದ ಬಗ್ಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.

ಬ್ರಾಹ್ಮಣ ಸಮುದಾಯಕ್ಕೆ ಕ್ಷಮೆ ಯಾಚಿಸಬೇಕು: ಹೆಚ್.ಎಸ್.ಸಚ್ಚಿದಾನಂದಮೂರ್ತಿ

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಎಸ್.ಸಚ್ಚಿದಾನಂದಮೂರ್ತಿ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಅವರು ಪ್ರಹ್ಲಾದ ಜೋಶಿರವರನ್ನು ಮಹಾರಾಷ್ಟ್ರ ಮೂಲದ ಪೇಶ್ವಾಗಳು ಅಥವಾ ದೇಶಸ್ತ ಬ್ರಾಹ್ಮಣರು ಎಂದು ಸೂಕ್ತ ಮಾಹಿತಿ ಇಲ್ಲದೆ ತಮ್ಮ ಹಳೆಯ ಚಾಳಿಯಂತೆ ಯಥಾ ಪ್ರಕಾರ ನಾಲಿಗೆ ಹರಿಬಿಟ್ಟಿರುವುದು ಕ್ಷುಲ್ಲಕ ರಾಜಕಾರಣದ ಪರಮಾವಧಿ. ಪ್ರಹ್ಲಾದ ಜೋಶಿ ಅವರು ಯಾವುದೇ ಪೇಶ್ವೆಗಳಾಗಲಿ ಅಥವಾ ದೇಶಸ್ತ ಬ್ರಾಹ್ಮಣರಲ್ಲ. ಈ ದೇಶದ ಸ್ವತಂತ್ರಕ್ಕಾಗಿ ಬ್ರಾಹ್ಮಣರ ಕೊಡುಗೆ ಅಪಾರ ಎಂದರು.

ಇದನ್ನೂ ಓದಿ: ಬ್ರಾಹ್ಮಣ ಸಮುದಾಯದವರು ಸಿಎಂ ಆಗಬಾರದಾ? ಹೆಚ್​ಡಿ ಕುಮಾರಸ್ವಾಮಿ ಹೇಳಿಕೆಗೆ ಪೇಜಾವರ ಶ್ರೀ ತಿರುಗೇಟು

ಭಾರತೀಯ ಜನತಾ ಪಾರ್ಟಿಯ ಮುಂದಿನ ಮುಖ್ಯಮಂತ್ರಿಗಳ ಆಯ್ಕೆ ಬಿಜೆಪಿ ಪಕ್ಷಕ್ಕೆ ಬಿಟ್ಟ ವಿಚಾರ. ಬಿಜೆಪಿ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಕುಮಾರಸ್ವಾಮಿಯವರು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಬಿಜೆಪಿ ಪಕ್ಷದಿಂದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ನಮ್ಮ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಹೇಳಿದರು. ಈ ಕೂಡಲೇ ಕುಮಾರಸ್ವಾಮಿಯವರು ಬ್ರಾಹ್ಮಣ ಸಮುದಾಯಕ್ಕೆ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:05 pm, Mon, 6 February 23