AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನ ವಿಧಾನಸಭೆ ಕ್ಷೇತ್ರಕ್ಕೆ ಒಳ್ಳೆಯ ಅಭ್ಯರ್ಥಿ ಘೋಷಣೆ: ಪ್ರಜ್ವಲ್ ರೇವಣ್ಣ

ಹಾಸನ ಕ್ಷೇತ್ರಕ್ಕೆ ಜೆಡಿಎಸ್​ನಿಂದ ಚುನಾವಣಾ ಅಖಾಡಕ್ಕಿಳಿಯುವ ಅಭ್ಯರ್ಥಿಯ ಹೆಸರು ಇನ್ನೂ ಘೋಷಣೆಯಾಗಿಲ್ಲ. ಕುಟುಂಬದ ಒಳಗಡೆಯೇ ಗೊಂದಲದ ವಾತಾವರಣ ಕಾಣಿಸಿತ್ತಿದೆ. ಅದಾಗ್ಯೂ, ಕ್ಷೇತ್ರಕ್ಕೆ ಒಂದೊಳ್ಳೆ ಅಭ್ಯರ್ಥಿಯನ್ನು ಘೋಷಿಸಲಾಗುವುದು ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

ಹಾಸನ ವಿಧಾನಸಭೆ ಕ್ಷೇತ್ರಕ್ಕೆ ಒಳ್ಳೆಯ ಅಭ್ಯರ್ಥಿ ಘೋಷಣೆ: ಪ್ರಜ್ವಲ್ ರೇವಣ್ಣ
ಸಂಸದ ಪ್ರಜ್ವಲ್ ರೇವಣ್ಣ (ಎಡ ಚಿತ್ರ)
TV9 Web
| Edited By: |

Updated on: Feb 06, 2023 | 2:55 PM

Share

ಹಾಸನ: ವಿಧಾನಸಭಾ ಕ್ಷೇತ್ರದಿಂದ ಭವಾನಿ (Bhavani Revanna) ಅವರನ್ನು ಕಣಕ್ಕಿಳಿಯಲು ಪತಿ, ಮಾಜಿ ಸಚಿವ ಹೆಚ್.ಡಿ.ರೇವಣ್ಣ (H.D.Revanna) ಮತ್ತು ಸೂರಜ್ ರೇವಣ್ಣ (Suraj Revanna) ಪಟ್ಟು ಹಿಡಿದಂತೆ ಕಾಣಿಸುತ್ತಿದೆ. ಅದಾಗ್ಯೂ, ಭವಾನಿ ಅವರಿಗೆ ಟಿಕೆಟ್ ಸಿಗುತ್ತದೆಯೇ ಎಂಬ ಕೌತುಕ ಕ್ಷೇತ್ರದ ಜನರಲ್ಲಿದೆ. ಈ ನಡುವೆ ಅಭ್ಯರ್ಥಿ ಬಗ್ಗೆ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ (Prajwal Revanna), ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲಾ ಸಮಸ್ಯೆ ಬಗೆಹರಿದ ಮೇಲೆ ಜೆಡಿಎಸ್ ಕಾರ್ಯಕರ್ತರ ಜೊತೆ ಚರ್ಚೆ ನಡೆಸಲಾಗುವುದು. ನಂತರ ಒಂದೊಳ್ಳೆ ದಿನ ನೋಡಿ ಅಭ್ಯರ್ಥಿ ಘೋಷಣೆ ಮಾಡುತ್ತೇವೆ ಎಂದಿದ್ದಾರೆ.

ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಮಾತನಾಡಿದ ಪ್ರಜ್ವಲ್ ರೇವಣ್ಣ, ನಮ್ಮ ಕಾರ್ಯಕರ್ತರನ್ನು ಉಳಿಸವೇಕು ಅಂದರೆ ನಮ್ಮ ಅಭ್ಯರ್ಥಿ ಹಾಕಲೇ ಬೇಕು, ಕ್ಷೇತ್ರವನ್ನು ಹಾಗೇ ಬಿಡಲು ಸಾಧ್ಯವಿಲ್ಲ. ಹೀಗಾಗಿ ಅರಸೀಕೆರೆ ಟಿಕೆಟ್​ ವಿಚಾರವಾಗಿ ಫೆಬ್ರವರಿ 12ರಂದು ಸಭೆ ಕರೆದಿದ್ದೇವೆ. ಶಾಸಕ ಶಿವಲಿಂಗೇಗೌಡಗೆ ಮೊನ್ನೆ ದಿಶಾ ಸಭೆಯಲ್ಲೂ ಹೇಳಿದ್ದೇವೆ. ಕಾಲ ಮಿಂಚಿಹೋಗುವ ಮುನ್ನ ನಿರ್ಧಾರ ಮಾಡಿ ಎಂದಿದ್ದೇವೆ. ಫೆ.12ರೊಳಗೆ ಏನು ತೀರ್ಮಾನ ಮಾಡುತ್ತಾರೋ ನೋಡೋಣ. ಇಲ್ಲವಾದರೆ ನಮ್ಮ ಪಾರ್ಟಿಯಿಂದ ಏನು ಮಾಡಬೇಕೊ ಅದನ್ನ ಮಾಡುತ್ತೇವೆ ಎಂದರು.

ಬಿಜೆಪಿಯವರು ರಾಜ್ಯದಲ್ಲಿ ವರ್ಚಸ್ಸು ಕಳೆದುಕೊಂಡಿ

ಬಿಜೆಪಿಯವರು ರಾಜ್ಯದಲ್ಲಿ ವರ್ಚಸ್ಸು ಕಳೆದುಕೊಂಡಿದ್ದಾರೆ. ಈ ಬಾರಿ ಬಿಜೆಪಿ ನೂರಕ್ಕೆ ನೂರು ಸೋಲುತ್ತಾರೆ. ರಾಜ್ಯದ ಮನೆ ಮನೆಗೆ ಪಂಚರತ್ನ ಯಾತ್ರೆಯ ಯಶಸ್ಸು ತಲುಪಿದೆ. ಇದನ್ನು ಸಹಿಸಲಾಗದೆ ಕಳಂಕ ತರಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತಾಡಿರಬಹುದು. ಬಿಜೆಪಿಯವರು ಈಗ ಯಾವ ಮಟ್ಟಕ್ಕೆ ಇಳಿದಿದ್ದಾರೆ ನಾವು ನೋಡಬೇಕಾಗುತ್ತದೆ. ಹಾಗಾಗಿ ಜೋಶಿ ಹೇಳಿಕೆ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ. ಬಿಜೆಪಿ ಯಾವ ರೀತಿ ಕುಸಿದಿದೆ ಅಂತ ಪ್ರಲ್ಹಾದ್​​ ಜೋಶಿ ಅವರು ಚಿಂತನೆ ಮಾಡಿದರೆ ಸೂಕ್ತ ಎಂದು ಸಂಸದ ಪ್ರಜ್ವಲ್​ ರೇವಣ್ಣ ವಾಗ್ದಾಳಿ ಮಾಡಿದ್ದಾರೆ.

ಪಂಚರತ್ನ ಯಾತ್ರೆಗೆ ನವಗ್ರಹ ಯಾತ್ರೆ ಎಂದು ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ ವಿಚಾರವಾಗಿ ಜಿಲ್ಲೆಯ ಹೊಳೆನರಸೀಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಏನೂ ಮಾಡಿಲ್ಲ. ಪ್ರಹ್ಲಾದ ಜೋಶಿಯವರ ಒಂದು ಬೆರಳು ನಮ್ಮಕಡೆ ತೋರಿಸಿದರೇ, ಉಳಿದ 4 ಬೆರಳು ಅವರ ಕಡೆ ತೋರಿಸುತ್ತೆ. ನೂರಕ್ಕೆ ನೂರರಷ್ಟು ಬಿಜೆಪಿಯವರಿಗೆ ಸೋಲಿನ ಭೀತಿ ಶುರುವಾಗಿದೆ. ಆರ್​ಎಸ್​ಎಸ್ ಸಮೀಕ್ಷೆ ಪ್ರಕಾರವೇ 65 ಸ್ಥಾನ ಅಂತ ಬಂದಿದೆ. ಹೀಗಾಗಿ ಬಿಜೆಪಿಗೆ ಸೂಲಿನ ಭಯ ಶರುವಾಗಿದೆ. ಈ ಬಾರಿ ಬಿಜೆಪಿಗೆ ಜನರು ಪಾಠ ಕಲಿಸುತ್ತಾರೆ ಎಂದರು.

ಇದನ್ನೂ ಓದಿ: ಹಾಸನದಲ್ಲಿ ಮತ್ತೊಂದು ರಾಜಕೀಯ ಬೆಳವಣಿಗೆ: ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ನಾಯಕನಿಗೆ ಜೆಡಿಎಸ್ ಟಿಕೆಟ್ ಘೋಷಣೆ

ಕೊರೊನಾ ಕಾಲದಲ್ಲಿ ಅವರ ತೆಗೆದುಕೊಂಡ ನಿರ್ಧಾರಗಳು ಜನರ ಸಾವು ಬದುಕಿನ ನಡುವೆ ಹೋರಾಡುವ ಹಾಗೆ ಮಾಡಿತು. ಇದೆಲ್ಲವನ್ನು ರಾಜ್ಯದ ಜನರು ನೋಡಿದ್ದಾರೆ. ಅದಲ್ಲದೆ ಈಗ ಜನರೇ ಈ ಸರ್ಕಾರ 40% ಸರ್ಕಾರ ಎಂದು ಹೇಳುತ್ತಿದ್ದಾರೆ. ಇದೆಲ್ಲವನ್ನು ನೋಡಿದರೆ ರಾಜ್ಯದಲ್ಲಿ ಬಿಜೆಪಿ ವರ್ಚಸ್ಸು ಕುಗ್ಗಿದೆ. ಪ್ರದಾನಿ ಮೋದಿಯವರು ಚುನಾವಣೆ ಇದ್ದಾಗ ಮಾತ್ರ 5-6 ಬಾರಿ ಬರುತ್ತಾರೆ ಅಂದರೆ ಯೋಚನೆ ಮಾಡಿ. ರಾಜ್ಯದ ಜನರ ಚಿಂತನೆ ಕೇಂದ್ರಕ್ಕೂ ತಟ್ಟಿದೆ ಎನ್ನೋದು ಇದರ ಅರ್ಥ ಎಂದರು.

ಮಾಜಿಸಚಿವ ಎ.ಮಂಜು ಜೆಡಿಎಸ್‌ ಸೇರ್ಪಡೆ ಬಗ್ಗೆ ಮಾತುಕತೆ

ಮಾಜಿಸಚಿವ ಎ.ಮಂಜು ಜೆಡಿಎಸ್‌ ಸೇರ್ಪಡೆ ವಿಚಾರವಾಗಿ ಮಾತನಾಡಿದ ಪ್ರಜ್ವಲ್, ಪಕ್ಷಕ್ಕೆ ಸೇರ್ಪಡೆ ಆಗುವ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ನಮಗು ಸಂತೋಷ ಬರಬೇಡಿ ಅಂತ ನಾವು ಯಾರಿಗೂ ಹೇಳಲ್ಲ. ಆದರೆ ಅರಕಲಗೂಡು, ಹಳ್ಳಿಮೈಸೂರು, ಇಲ್ಲಿಯ ಕಾರ್ಯಕರ್ತರ ಸಭೆ ನಡೆಸಿನಂತರ ತೀರ್ಮಾನಕ್ಕೆ ಬಂದು ಈ ವಾರದಲ್ಲಿ ನಿರ್ಧಾರ ಮಾಡುತ್ತೇವೆ ಎಂದರು.

ಎ.ಮಂಜು ಸೇರ್ಪಡೆ ಬಗ್ಗೆ ಶಾಸಕ ಎ.ಟಿ.ರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ ವಿಚಾರವಾಗಿ ಪ್ರತಿಕ್ರಿಯಿಸಿ ಪ್ರಜ್ವಲ್, ನನಗೆ ಆ ವಿಚಾರ ಏನು ಗೊತ್ತಿಲ್ಲ, ನಾನು ಆ ಬಗ್ಗೆ ಚರ್ಚೆ ಮಾಡಲ್ಲ. ಅವರು ಹಿರಿಯರಿದ್ದಾರೆ, ಅವರನ್ನು ಗೌರವಿಸುತ್ತೇವೆ. ಅವರ ಬಗ್ಗೆ ಯಾವುದೇ ರೀತಿ ಮಾತನಾಡುವ ಕೆಲಸ ಮಾಡಲ್ಲ. ಅವರ ತಿಳುವಳಿಕೆಯಲ್ಲಿ ಏನು ಮಾತನಾಡಬೇಕೋ ಮಾತನಾಡಿದ್ದಾರೆ. ಕಾರ್ಯಕರ್ತರ ಸಭೆ ಕರೆದಿದ್ದೇವೆ, ಎಲ್ಲಾ ಮಾತನಾಡುತ್ತಾರೆ. ನಂತರದಲ್ಲಿ ರೇವಣ್ಣ ಅವರು ತೀರ್ಮಾನ ಮಾಡುತ್ತಾರೆ ಎಂದರು.

ನಾವಿನ್ನು ಯಾರಿಗೂ ಟಿಕೆಟ್ ಘೋಷಣೆ ಮಾಡಿಲ್ಲ. ಎಲ್ಲಾ ಭಾಗದ ಕಾರ್ಯಕರ್ತರ ಸಭೆಯನ್ನು ಕರೆದು ಚರ್ಚೆ ಮಾಡುತ್ತೇವೆ. ಸಭೆಯಲ್ಲಿ ಬರುವ ಅಭಿಪ್ರಾಯಗಳನ್ನು ಪಡೆದು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾರಿಗೆ ಟಿಕೆಟ್ ಕೊಡಲಾಗುವುದು ಎಂದು ಘೋಷಣೆ ಮಾಡಲಾಗುತ್ತದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ