Tv9 Web Exclusive: ಹಾಸನಕ್ಕೆ ಭವಾನಿ ರೇವಣ್ಣ ಪಟ್ಟು, ಎಚ್​ಡಿಕೆ ರಹಸ್ಯ ಮಾತುಕತೆ; ಜೆಡಿಎಸ್​ ಪಾಳಯದಲ್ಲಿ ಮಹತ್ವದ ಬೆಳವಣಿಗೆ

Hassan Politics: ಹಾಸನ ವಿಧಾನಸಭೆ ಕ್ಷೇತ್ರಕ್ಕೆ ಭವಾನಿ ರೇವಣ್ಣ (Bhavani Revanna) ಅವರಿಗೆ ಜೆಡಿಎಸ್ ಟಿಕೆಟ್ ಸಿಗುತ್ತದೆಯೇ ಎಂಬ ಬಗ್ಗೆ ಮಾತ್ರ ಎಲ್ಲರಿಗೂ ಕುತೂಹಲ ಇದೆ. ಈ ಕಾರಣಕ್ಕೆ ಇಲ್ಲೊಂದು ವರದಿ ನಿಮ್ಮೆದುರು ಇಡಲಾಗುತ್ತಿದೆ.

Tv9 Web Exclusive: ಹಾಸನಕ್ಕೆ ಭವಾನಿ ರೇವಣ್ಣ ಪಟ್ಟು, ಎಚ್​ಡಿಕೆ ರಹಸ್ಯ ಮಾತುಕತೆ; ಜೆಡಿಎಸ್​ ಪಾಳಯದಲ್ಲಿ ಮಹತ್ವದ ಬೆಳವಣಿಗೆ
ಎಚ್.​ಡಿ.ರೇವಣ್ಣ, ಭವಾನಿ ರೇವಣ್ಣ, ಎಚ್​.ಡಿ.ಕುಮಾರಸ್ವಾಮಿ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 05, 2023 | 9:37 AM

ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ (JDS) ಎಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಹೇಳುತ್ತಾ ಬರುತ್ತಿರುವಂತೆ ನೂರಾ ಇಪ್ಪತ್ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆಯೋ ಇಲ್ಲವೋ ಎಂಬ ಬಗ್ಗೆ ರಾಜ್ಯದ ಜನರಿಗೆ ಕುತೂಹಲ ಇದೆಯೋ ಇಲ್ಲವೋ ಗೊತ್ತಿಲ್ಲ; ಹಾಸನ ವಿಧಾನಸಭೆ ಕ್ಷೇತ್ರಕ್ಕೆ ಭವಾನಿ ರೇವಣ್ಣ (Bhavani Revanna) ಅವರಿಗೆ ಜೆಡಿಎಸ್ ಟಿಕೆಟ್ ಸಿಗುತ್ತದೆಯೇ ಎಂಬ ಬಗ್ಗೆ ಮಾತ್ರ ಎಲ್ಲರಿಗೂ ಕುತೂಹಲ ಇದ್ದೇ ಇದೆ. ಈ ಕಾರಣಕ್ಕೆ ಇಲ್ಲೊಂದು ವರದಿ ನಿಮ್ಮೆದುರು ಇಡಲಾಗುತ್ತಿದೆ. ಇದು ಖಂಡಿತಾ ಮೆಗಾ ಎಕ್ಸ್​ಕ್ಲೂಸಿವ್ (Tv9 Web Exclusive). ನಮ್ಮ ಮೂಲಗಳಿಂದ ತಿಳಿದುಬಂದಿರುವ ತುಂಬ ಆಸಕ್ತಿಕರವಾದ ಮಾಹಿತಿ. ಈ ಮಾಹಿತಿಗಳನ್ನು ಬಿಡಿಬಿಡಿಯಾಗಿ ಬಿಡಿಸಿಟ್ಟು, ಕೊನೆಗೆ ಎಲ್ಲವನ್ನೂ ಜೋಡಿಸುವ ಪ್ರಯತ್ನ ಮಾಡಲಾಗುವುದು.

ಅಣ್ಣ- ತಮ್ಮ ತಾಜ್ ವೆಸ್ಟ್ ಎಂಡ್ ಭೇಟಿ

ಮೊದಲಿಗೆ, ಫೆಬ್ರುವರಿ ನಾಲ್ಕನೇ ತಾರೀಖಿನ ಶನಿವಾರದಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ನಲ್ಲಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ ಭೇಟಿ ಆಗಿದ್ದಾರೆ. ನಮ್ಮ ವಿಶ್ವಸನೀಯ ಮೂಲಗಳ ಪ್ರಕಾರ, ಭವಾನಿ ಅವರಿಗೆ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವ ವಿಚಾರವಾಗಿಯೇ ಅಣ್ಣ- ತಮ್ಮನ ಮಧ್ಯೆ ಮಾತುಕತೆ ನಡೆದಿದೆ. ಅದಾದ ನಂತರ ಪದ್ಮನಾಭನಗರದಲ್ಲಿ ಇರುವ, ದೇವೇಗೌಡರು ಇರುವಂಥ ‘ಅಮೋಘ’ ಹೆಸರಿನ ನಿವಾಸಕ್ಕೆ ರೇವಣ್ಣನವರು ಬಂದು, ಹತ್ತಿರಹತ್ತಿರ ಒಂದು ಗಂಟೆಗಳ ಕಾಲ ಚರ್ಚೆ ನಡೆಸಿ, ರಾತ್ರಿ ಹನ್ನೆರಡು ಗಂಟೆಗೂ ಸ್ವಲ್ಪ ಮುಂಚೆ ಹಾಸನದ ಹೊಳೆನರಸೀಪುರಕ್ಕೆ ತೆರಳಿದ್ದಾರೆ.

ಈ ಮಾತುಕತೆಗಳು ಹೀಗೇ ಸಾಗಿವೆ ಎಂದು ಹೇಳುವುದಕ್ಕೆ ಯಾವುದೇ ಖಚಿತತೆ ದೊರೆತಿಲ್ಲ. ಆದರೂ ದೇವೇಗೌಡರ ಕುಟುಂಬ, ಭವಾನಿ ಹಾಗೂ ರೇವಣ್ಣನವರನ್ನು ಬಲ್ಲವರು ಹೇಳುತ್ತಿರುವಂತೆ, ಈ ಬಾರಿ ಹಾಸನದಲ್ಲಿ ಭವಾನಿ ಅವರಿಗೆ ಟಿಕೆಟ್ ನೀಡಲೇಬೇಕು. ಒಂದು ವೇಳೆ ಸ್ವರೂಪ್ ಅವರಿಗೆ ಟಿಕೆಟ್ ಕೊಟ್ಟರೆ ಯಾವ ಕಾರಣಕ್ಕೂ ಜೆಡಿಎಸ್ ಆ ಕ್ಷೇತ್ರದಲ್ಲಿ ಗೆಲ್ಲಲ್ಲ. ಅಷ್ಟೇ ಅಲ್ಲ, ಬಹಳ ಕ್ಷೇತ್ರದಲ್ಲಿ ಜೆಡಿಎಸ್ ಸ್ಥಿತಿ ಬಹಳ ಕಷ್ಟವಾಗುತ್ತದೆ. ಇನ್ನೂ ಮುಂದುವರಿದು, ಜೆಡಿಎಸ್ ಪಕ್ಷಕ್ಕೇ ಅಸ್ತಿತ್ವದ ಪ್ರಶ್ನೆ ಎದುರಾದರೂ ಅಚ್ಚರಿ ಇಲ್ಲ ಎಂಬ ಬಗ್ಗೆ ಪ್ರಸ್ತಾಪವಾಗಿದೆ ಎಂದು ಮೂಲಗಳು ತಿಳಿಸಿವೆ.

ಎರಡು ಮಂಗಳವಾರದಿಂದ ಕುಕ್ಕೆಯಲ್ಲಿ ಪೂಜೆ

ಈ ಮಧ್ಯೆ ಕಳೆದ ಎರಡು ಮಂಗಳವಾರ ರೇವಣ್ಣ ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ಮಾಡಿಸುತ್ತಿದ್ದಾರೆ. ಅದಕ್ಕೂ ಮುಂಚೆ ಭವಾನಿ ಅವರು ತಿರುಪತಿಗೆ ಹೋಗಿಬಂದರು. ಇಂಥ ಸುಳಿವುಗಳೆಲ್ಲ ಟಿಕೆಟ್​ಗಾಗಿ ಭವಾನಿ ರೇವಣ್ಣ ಅವರ ಗಟ್ಟಿ ಪ್ರಯತ್ನಗಳನ್ನೇ ಸೂಚಿಸುತ್ತವೆ ಎಂಬುದು ಒಟ್ಟಾರೆ ಸಾರಾಂಶ. ಆದರೆ ತನಗೆ ಜೆಡಿಎಸ್ ಟಿಕೆಟ್ ಸಿಗುವುದು ಖಚಿತ ಎಂದು ಭವಾನಿ ಅವರು ಕಾರ್ಯಕ್ರಮವೊಂದರಲ್ಲಿ ಹೇಳುವ ಮುಂಚೆಯೇ ಕುಟುಂಬದೊಳಗೆ ಟಿಕೆಟ್ ಕುರಿತು ಮಾತುಕತೆಗಳಾಗಿವೆ. ಆ ನಂತರ ನಿರ್ಣಾಯಕ ಎಂಬಂತೆ ಭವಾನಿ ಅವರು ತಿರುಪತಿಗೆ ತೆರಳಿದ್ದಾರೆ, ರೇವಣ್ಣ ಅವರು ಮಂಗಳವಾರ (ಸತತ ಎರಡು ವಾರ) ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ಮಾಡಿಸಿದ್ದಾರೆ.

ಭವಾನಿ-ರೇವಣ್ಣ ಅವರನ್ನು ಸಮಾಧಾನ ಮಾಡುವುದರ ಸಲುವಾಗಿ ದೇವೇಗೌಡರು ಏನಾದರೂ ಸಂಧಾನ ಸೂತ್ರಗಳನ್ನು ಇಡುತ್ತಾರೆಯೇ ಅಥವಾ ಈಗಾಗಲೇ ಇಟ್ಟಿದ್ದಾರೆಯೇ ಎಂಬ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಅದೇನೆಂದರೆ, ಭವಾನಿ ಅವರಿಗೆ ಹೊಳೆನರಸೀಪುರದ ಟಿಕೆಟ್, ಸ್ವರೂಪ್ ಹಾಸನಕ್ಕೆ ಹಾಗೂ ರೇವಣ್ಣ ಕೆ.ಆರ್.ಪೇಟೆಗೆ ಹೋಗುತ್ತಾರೆ ಎಂಬ ವದಂತಿ ಇದು. ಆದರೆ ಪರಿಸ್ಥಿತಿ ಏನೆಂದರೆ, ಎಚ್.ಡಿ.ರೇವಣ್ಣ ಯಾವುದೇ ಕಾರಣಕ್ಕೂ ಹೊಳೆನರಸೀಪುರ ಬಿಟ್ಟು ಬೇರೆಲ್ಲೂ ಹೋಗಲ್ಲ. ಇವತ್ತಿಗೂ ರೇವಣ್ಣ ರಾತ್ರಿ ಹನ್ನೆರಡು ಗಂಟೆ ಆದ ಮೇಲೂ ಹಾಸನಕ್ಕೆ ಹೋಗಿ, ಅಲ್ಲಿ ನಿದ್ರೆ ಮಾಡುತ್ತಾರೆಯೇ ವಿನಾ ಬೆಂಗಳೂರೋ ಅಥವಾ ಹೋಗುವ ದಾರಿ ಎಂದು ಮತ್ತೆಲ್ಲೋ ಉಳಿದುಕೊಳ್ಳುವ ಆಸಾಮಿ ಅಲ್ಲ.

ಇನ್ನು ಭವಾನಿ ಅವರು 1998ರಿಂದಲೂ ಜೆಡಿಎಸ್ ಪಕ್ಷದಲ್ಲಿ, ಸಕ್ರಿಯ ರಾಜಕಾರಣದಲ್ಲೇ ಇದ್ದಾರೆ, ಹಾಸನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಲೇ ಬರುತ್ತಿದ್ದಾರೆ. ಹಾಗೆ ನೋಡಿದರೆ ಅನಿತಾ ಕುಮಾರಸ್ವಾಮಿ ಅವರಿಗಿಂತ ರಾಜಕಾರಣದಲ್ಲಿ ಬಹಳ ಪಳಗಿದವರು, ಶಾಸಕ ಸ್ಥಾನದ ಜವಾಬ್ದಾರಿ, ಅಧಿಕಾರವನ್ನು ಬಹಳ ಚೆನ್ನಾಗಿ ಬಲ್ಲವರು. ಶತಾಯಗತಾಯ ಈ ಗಂಡ-ಹೆಂಡತಿ (ರೇವಣ್ಣ- ಭವಾನಿ) ಹಾಸನದ ಪಾಳೇಪಟ್ಟಿನಿಂದ ಒಂದು ಹೆಜ್ಜೆ ಕಿತ್ತು ಆಚೆ ಇಡುವುದಿಲ್ಲ.

ಹಾಸನವೂ ಕುಮಾರಸ್ವಾಮಿ ತೆಕ್ಕೆಗೆ ಬಿದ್ದೀತು ಎಂಬ ಆತಂಕ

ಇದೇ ಹಾಸನದಲ್ಲಿ ಕುಮಾರಸ್ವಾಮಿ ಬಗ್ಗೆ ಒಲವಿರುವವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ, ಅಲ್ಲಿ ರೇವಣ್ಣನವರ ಕೆಲಸಗಳನ್ನು ಮೆಚ್ಚುವವರ ಸಂಖ್ಯೆಗೂ ಕಡಿಮೆ ಇಲ್ಲ. ಆ ಕಾರಣಕ್ಕೆ ಎಲ್ಲಿ ಹಾಸನದ ರಾಜಕಾರಣ ಕುಮಾರಸ್ವಾಮಿ ಕೈಗೆ ಸೇರಿಬಿಡುತ್ತದೋ ಎಂಬ ಬಗ್ಗೆ ಭವಾನಿ-ರೇವಣ್ಣ ದಂಪತಿಯಲ್ಲಿ ಸಣ್ಣ ಪ್ರಮಾಣದ ಅಭದ್ರತೆ ಇದ್ದೇ ಇದೆ. ರೇವಣ್ಣ ಏನೇ ಕೆಲಸಗಾರ, ರಾಜಕೀಯದಲ್ಲಿ ಅನುಭವಿ ಅಂದರೂ ಅವರಿಗೆ ಜೆಡಿಎಸ್​ನಲ್ಲಿ ಇರುವವರಿಗಿಂತ ಕಾಂಗ್ರೆಸ್ ಪಕ್ಷದೊಳಗೆ ಇರುವ ಸ್ನೇಹಿತರೇ ಹೆಚ್ಚು. ಇನ್ನು ಜ್ಯೋತಿಷ, ಶಾಸ್ತ್ರ- ಶಕುನ ಇಂಥದ್ದರಲ್ಲೇ ಹೆಚ್ಚಿನ ನಂಬಿಕೆ ಇರುವ ರೇವಣ್ಣ ತಮಗೊಬ್ಬರು ಒಳ್ಳೆ ಮಾಧ್ಯಮ ಸಲಹೆಗಾರರು ಹಾಗೂ ಸೋಷಿಯಲ್ ಮೀಡಿಯಾ ಹ್ಯಾಂಡ್ಲರ್ ಬೇಕು ಎಂದು ಯೋಚಿಸುತ್ತಾರೋ ಇಲ್ಲವೋ, ಆದರೆ ಜ್ಯೋತಿಷಿಗಳನ್ನೇ ಹೆಚ್ಚು ಅವಲಂಬಿಸುತ್ತಾರೆ. ಆದ್ದರಿಂದ ಹೀಗೆ ಹೆಂಡತಿ ಭವಾನಿ ತಿರುಪತಿಗೆ, ಗಂಡ ರೇವಣ್ಣ ಸತತವಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ಮಾಡಿಸುತ್ತಿದ್ದರೆ. ಇದರ ಹಿಂದಿನ ಕಾರಣಗಳು ಹುಡುಕುವುದು ಬಲು ಸುಲಭವಾಗುತ್ತದೆ.

ಗುಪ್ತ ಭೇಟಿ, ರಹಸ್ಯ ಮಾತುಕತೆಗೆ ತಾಜ್ ವೆಸ್ಟ್ ಎಂಡ್ ಹೋಟೆಲ್ ಬಹಳ ಪ್ರಶಸ್ತವಾದ ಸ್ಥಳ. ಸುಲಭಕ್ಕೆ ಯಾರ ಕಣ್ಣಿಗೂ ಬೀಳದಂತೆ, ಕಿವಿಗೆ ತಾಗದಂತೆ ಮಾತನಾಡಬೇಕು ಅಂದರೆ ಅದೇ ಪ್ರಶಸ್ತ ಸ್ಥಳ. ಅಂತಲ್ಲಿ ಅಣ್ಣ- ತಮ್ಮ ಮಾತುಕತೆ ಆಡಿದ್ದಾರೆ. ಆ ನಂತರ ರೇವಣ್ಣ ಅವರು ದೇವೇಗೌಡರನ್ನೂ ಭೇಟಿಯಾಗಿ, ಅಷ್ಟು ರಾತ್ರಿಯಲ್ಲಿ ಹಾಸನಕ್ಕೂ ಹೊರಟಿದ್ದಾರೆ. ಈ ಮೂರರಲ್ಲಿ ಮೊದಲೆರಡು ವಿದ್ಯಮಾನಗಳು ಖಂಡಿತವಾಗಿಯೂ ಕುತೂಹಲಕಾರಿ. ಆದರೆ ಮೂರನೆಯದು, ಅಂದರೆ ಅಷ್ಟು ರಾತ್ರಿಯಲ್ಲಿ ಹಾಸನಕ್ಕೆ ತೆರಳಿದ್ದು- ಇದರಲ್ಲಿ ಯಾವ ವಿಶೇಷವೂ ಇಲ್ಲ.

ಇಷ್ಟೆಲ್ಲ ಹೇಳಿದ ಮೇಲೆ ಕೊನೆ ಮಾತು ಬಿಟ್ಟರೆ ಹೇಗೆ? ಹಾಸನದಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಡುವುದಿಲ್ಲ ಅಂತ ಹೇಳುವುದು ಸದ್ಯದ ಮಟ್ಟಿಗೆ ಜೆಡಿಎಸ್ ಪಾಲಿಗೆ ಗ್ರೆನೇಡ್ ಲಾಕ್ ತೆಗೆದು ಕೈಲಿ ಹಿಡಿದಂತೆ ಎಂಬುದು ಸತ್ಯ. ಇತ್ತ ದೇವೇಗೌಡರಿಗೆ ಫ್ಯಾಮಿಲಿ ಪ್ರಾಬ್ಲಂ ಅದ್ಯಾವ ಪರಿ ಆಗಿದೆ ಅಂದರೆ, ರಾಷ್ಟ್ರ ರಾಜಕಾರಣದಲ್ಲಿ ಮಾತ್ರ ಹೆಚ್ಚಿನ ಆಸಕ್ತಿ ವಹಿಸಿರುವ ಗೌಡರಿಗೆ ಬಜೆಟ್ ಸಂದರ್ಭದಲ್ಲೂ ದೆಹಲಿಗೆ ತೆರಳುವುದಕ್ಕೆ ಮನಸ್ಸಾಗಿಲ್ಲ. ಮೊದಲು ಮನೆಯ ಸಮಸ್ಯೆ ಸರಿಹೋಗಲಿ ಎಂಬ ಚಿಂತೆ ಅವರದು. ಇಲ್ಲಿಗೆ ತಾಜ್ ವೆಸ್ಟ್ ಎಂಡ್​ನಲ್ಲಿನ ಕುಮಾರಸ್ವಾಮಿ- ರೇವಣ್ಣ ಭೇಟಿ ಓಪನ್ ಎಂಡೆಡ್ ಆಗಿಯೇ ಬಿಟ್ಟಿರೋಣ.

ಇದನ್ನೂ ಓದಿ: ಹಾಸನದಲ್ಲಿ ಮತ್ತೊಂದು ರಾಜಕೀಯ ಬೆಳವಣಿಗೆ: ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿಜೆಪಿ ನಾಯಕನಿಗೆ ಜೆಡಿಎಸ್ ಟಿಕೆಟ್ ಘೋಷಣೆ

ಮತ್ತಷ್ಟು ರಾಜಕೀಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:37 am, Sun, 5 February 23

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್