Tripura Elections: ಚುನಾವಣಾ ಪ್ರಚಾರಕ್ಕೆ ಅಮಿತ್ ಶಾ, ಮಮತಾ ಬ್ಯಾನರ್ಜಿ ತ್ರಿಪುರಾಗೆ ಭೇಟಿ

Amit Shah, Mamata Banerjee Tripura Visit: ತ್ರಿಪುರಾದಲ್ಲಿ ಚುನಾವಣಾ ಕಾವು ಏರುತ್ತಿದ್ದು, ಬಿಜೆಪಿಯ ಅಮಿತ್ ಶಾ ಮತ್ತು ಟಿಎಂಸಿಯ ಮಮತಾ ಬ್ಯಾನರ್ಜಿ ಸೋಮವಾರ ಆಗಮಿಸಲಿದ್ದಾರೆ. ಮೊನ್ನೆಯಷ್ಟೇ ತ್ರಿಪುರಾದಲ್ಲಿ ಚುನಾವಣಾ ಹಿಂಸಾಚಾರ ಘಟನೆಗಳು ನಡೆದು 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

Tripura Elections: ಚುನಾವಣಾ ಪ್ರಚಾರಕ್ಕೆ ಅಮಿತ್ ಶಾ, ಮಮತಾ ಬ್ಯಾನರ್ಜಿ ತ್ರಿಪುರಾಗೆ ಭೇಟಿ
ಕೇಂದ್ರ ಗೃಹ ಸಚಿವ ಅಮಿತ್ ಶಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 06, 2023 | 10:53 AM

ಅಗಾರ್ತಲ: ಫೆಬ್ರುವರಿ 16ರಂದು ಚುನಾವಣೆ ನಡೆಯಲಿರುವ ತ್ರಿಪುರಾ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ, ಬಿಜೆಪಿ ಮುಖಂಡ ಅಮಿತ್ ಶಾ (Amit Shah) ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಇಂದು ಸೋಮವಾರ ಭೇಟಿ ನೀಡುತ್ತಿದ್ದಾರೆ. ಈ ಇಬ್ಬರೂ ಕೂಡ ವಿವಿಧ ಚುನಾವಣಾ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಮಿತ್ ಶಾ ಅವರು ತ್ರಿಪುರಾದ ದಕ್ಷಿಣ ಭಾಗದಲ್ಲಿರುವ ಸಂತೀರ್​ಬಜಾರ್ ಮತ್ತು ಖೋವಾಯ್ ಎಂಬೆರಡು ಸ್ಥಳಗಳಲ್ಲಿ ವಿಜಯ ಸಂಕಲ್ಪ ಸಮಾವೇಶ ನಡೆಸಲಿದ್ದಾರೆ. ಅಗಾರ್ತಲದ ಬನಮಾಲಿಪುರ್ ಕ್ಷೇತ್ರದಲ್ಲಿ ಒಂದು ರೋಡ್​ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಳೆದ ತಿಂಗಳು ಕೂಡ ಅಮಿತ್ ಶಾ ತ್ರಿಪುರಾದಲ್ಲಿ ಎರಡು ರಥಯಾತ್ರೆಗಳಲ್ಲಿ (Rath Yatra) ಭಾಗವಹಿಸಿದ್ದರು. ಈ ಬಾರಿ ತ್ರಿಪುರಾದಲ್ಲಿ ಚುನಾವಣಾ ಬಿಸಿ ತಾರಕಕ್ಕೇರಿದ್ದು ಅಲ್ಲಲ್ಲಿ ಹಿಂಸಾಚಾರ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಮಿತ್ ಶಾ ಭೇಟಿ ವೇಳೆ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.

ಮಮತಾ ಬ್ಯಾನರ್ಜಿ ಭೇಟಿ

ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಇಂದು ಸೋಮವಾರ ಸಂಜೆಯ ತ್ರಿಪುರಾಗೆ ಆಗಮಿಸಲಿದ್ದಾರೆ. ನಾಳೆ ಮಂಗಳವಾರ ಅವರು ಒಂದು ರೋಡ್ ಶೋ ಮತ್ತು ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಇದನ್ನೂ ಓದಿ: US Visa: ಅಮೆರಿಕ ವೀಸಾ ವಿತರಣೆಗೆ ಹೊಸ ನಿಯಮ, ವಿದೇಶಗಳಲ್ಲೂ ಅರ್ಜಿ ಸಲ್ಲಿಸಲು ಅವಕಾಶ; ಮಹತ್ವದ ಬೆಳವಣಿಗೆಯ 10 ಅಂಶಗಳಿವು

ದಿದಿ ಇಂದು ಸಂಜೆ ಉದಯಪುರದ ತ್ರಿಪುರೇಶ್ವರಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ್ದಾರೆ. ಅದದ ಬಳಿಕ ಮಂಗಳವಾರ ಅಗಾರ್ತಲದಲ್ಲಿ ಒಂದು ರೋಡ್​ಶೋ ಹಾಗೂ ರಬೀಂದ್ರ ಭವನ್​ನಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಟಿಎಂಸಿ ಮುಖಂಡರೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಹಿಂಸಾಚಾರ ಘಟನೆ

ತ್ರಿಪುರಾದಲ್ಲಿ ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ಮಧ್ಯೆ ಮೊನ್ನೆ ಶನಿವಾರ ಸಂಘರ್ಷ ನಡೆದಿದ್ದು, ಈ ಘಟನೆಯಲ್ಲಿ 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಖೋವೈ ಮತ್ತು ಉನಕೋಟಿ ಜಿಲ್ಲೆಗಳಲ್ಲಿ ಈ ಘಟನೆಗಳು ಸಂಭವಿಸಿವೆ.

ಸಚೀಂದ್ರ ಕಾಲೊನಿ ಎಂಬಲ್ಲಿ ಸಿಪಿಎಂ ಸಭೆಯೊಂದರ ಮೇಲೆ ನಡೆದ ದಾಳಿ ಘಟನೆ ಸಂಬಂಧ ಪೊಲೀಸರು ಬಿಜೆಪಿ ನಾಯಕ ಶಿವೇನ್ ದಾಸ್ ಎಂಬುವವರನ್ನು ಬಂಧಿಸಿದ್ದಾರೆ. ಚುನಾವಣಾ ಸಭೆಗಳಲ್ಲಿ ಪಾಲ್ಗೊಳ್ಳಲು ಸಿಪಿಎಂ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮಾಡಿದ ಪ್ರಯತ್ನಕ್ಕೆ ಅಡ್ಡಿಪಡಿಸಿದ ಆರೋಪ ಶಿವೇನ್ ದಾಸ್ ಮೇಲಿದೆ.

ಇದನ್ನೂ ಓದಿ: Mohan Bhagwat: ಜಾತಿಗಳ ಸೃಷ್ಟಿಯಾಗಿದ್ದು ದೇವರಿಂದಲ್ಲ, ಪುರೋಹಿತರಿಂದ: ಮೋಹನ್ ಭಾಗವತ್

ಖೋವೈನ ಸೋನಾತೊಲಾ ಎಂಬಲ್ಲಿರುವ ಸಿಪಿಎಂ ಬೂತ್ ಆಫೀಸ್ ಮೇಲೆ ಬಿಜೆಪಿ ಬೆಂಬಲಿಗರು ದಾಳಿ ಮಾಡಿ ಬೆಂಕಿ ಹಚ್ಚಿದರು. ಸಿಪಿಎಂ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಒಗ್ಗೂಡಿ ಪ್ರತಿರೋಧ ಒಡ್ಡಿದರು ಎಂದು ತ್ರಿಪುರಾದ ಸಿಪಿಎಂ ಕಾರ್ಯದರ್ಶಿ ಜಿತೇಂದ್ರ ಚೌಧುರಿ ನಿನ್ನೆ ಆರೋಪ ಮಾಡಿದ್ದಾರೆ. ಈ ಘಟನೆಯಲ್ಲಿ 6 ಮಂದಿ ಗಾಯಗೊಂಡಿರುವುದು ತಿಳಿದುಬಂದಿದೆ.

ಇದೂ ಸೇರಿ ಎರಡು ಪ್ರತ್ಯೇಕ ಹಿಂಸಾಚಾರ ಘಟನೆಗಳಲ್ಲಿ 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಫೆ. 16ಕ್ಕೆ ಚುನಾವಣೆ

ತ್ರಿಪುರಾದಲ್ಲಿ ಸದ್ಯ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತದಲ್ಲಿದೆ. 60 ಸದಸ್ಯರ ತ್ರಿಪುರಾ ವಿಧಾನಸಭೆಗೆ ಫೆಬ್ರುವರಿ 16ರಂದು ಚುನಾವಣೆ ನಡೆಯುತ್ತಿದೆ. ಮತ ಎಣಿಕೆ ಮಾರ್ಚ್ 2ರಂದು ಆಗಲಿದೆ. ಬಿಜೆಪಿಯಿಂದ ಅಧಿಕಾರ ಕಸಿಯಲು ಸಿಪಿಎಂ, ಟಿಎಂಸಿ ಮತ್ತು ಕಾಂಗ್ರೆಸ್ ಪಕ್ಷಗಳು ಹರಸಾಹಸ ನಡೆಸುತ್ತಿವೆ.

ಇಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಮತ್ತು ಎಡಮೈತ್ರಿಕೂಟಗಳ ಮಧ್ಯೆ ಬಹುತೇಕ ನೇರ ಪೈಪೋಟಿ ಇದೆ. ಇದರ ಜೊತೆಗೆ ಹೊಸದಾಗಿ ಆರಂಭವಾಗಿರುವ ತಿಪ್ರಾ ಮೋತ ಎಂಬ ಪಕ್ಷವೂ ಮೂರನೇ ಪ್ರಮುಖ ರಾಜಕೀಯ ಶಕ್ತಿಯಾಗಿ ಉದ್ಭವವಾಗಿದ್ದು, ಚುನಾವಣೆಯಲ್ಲಿ ತ್ರಿಕೋನ ಫೈಟ್ ಏರ್ಪಡುವ ಸಾಧ್ಯತೆಯೂ ಇದೆ. ಇಲ್ಲಿ ಎಡರಂಗ ಮೈತ್ರಿಕೂಟದಲ್ಲಿ ಸಿಪಿಎಂ ಮೊದಲಾದ ಎಡಪಕ್ಷಗಳು ಮತ್ತು ಕಾಂಗ್ರೆಸ್ ಪಕ್ಷ ಇವೆ.

ಇನ್ನು ಈ ಚುನಾವಣೆಯಲ್ಲಿ ಬಿಜೆಪಿಯು ಐಪಿಎಫ್​ಟಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದೆ. ತ್ರಿಪುರಾದ ರಾಜಮನೆತನಕ್ಕೆ ಸೇರಿದ ಪ್ರದ್ಯೋತ್ ಮಾಣಿಕ್ಯ ದೇಬಬರ್ಮಾ ನೇತೃತ್ವದ ತಿಪ್ರಾ ಮೋತ ಪಕ್ಷ ಸ್ವತಂತ್ರವಾಗಿ ಕಣಕ್ಕಿಳಿಯುತ್ತಿದೆ. ಅಂದಾಜುಗಳ ಪ್ರಕಾರ ಪ್ರದ್ಯೋತ್ ಅವರು ತ್ರಿಪುರಾದ ಮುಂದಿನ ಅಧಿಕಾರಕ್ಕೆ ಕಿಂಗ್ ಮೇಕರ್ ಆಗುವ ಸಾಧ್ಯತೆ ಇದೆ.

Published On - 10:53 am, Mon, 6 February 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್