AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mohan Bhagwat: ಜಾತಿಗಳ ಸೃಷ್ಟಿಯಾಗಿದ್ದು ದೇವರಿಂದಲ್ಲ, ಪುರೋಹಿತರಿಂದ: ಮೋಹನ್ ಭಾಗವತ್

Castes Not Created by The God- ನಮ್ಮ ಸೃಷ್ಟಿಕರ್ತನಿಗೆ ನಾವೆಲ್ಲರೂ ಸಮಾನರು. ಯಾವುದೇ ಜಾತಿ, ಪಂಥ, ಮತಗಳನ್ನು ಆತ ಸೃಷ್ಟಿಸಲಿಲ್ಲ. ಈ ವೈರುದ್ಧ್ಯಗಳನ್ನು ಸೃಷ್ಟಿಸಿದ್ದು ಪುರೋಹಿತರು. ಇದು ತಪ್ಪು ಎಂದು ಆರೆಸ್ಸೆಸ್ ಸರಸಂಘಚಾಲಕರು ಹೇಳಿದ್ದಾರೆ.

Mohan Bhagwat: ಜಾತಿಗಳ ಸೃಷ್ಟಿಯಾಗಿದ್ದು ದೇವರಿಂದಲ್ಲ, ಪುರೋಹಿತರಿಂದ: ಮೋಹನ್ ಭಾಗವತ್
ಮೋಹನ್ ಭಾಗವತ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 06, 2023 | 7:52 AM

Share

ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ (RSS Chief Mohan Bhagwat) ಜಾತೀಯತೆ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಈ ದೇಶದಲ್ಲಿ ಅಭಿಪ್ರಾಯಗಳು ಬೇರೆ ಇರಬಹುದು. ಆದರೆ ಸಾಕ್ಷ್ಯಪ್ರಜ್ಞೆ ಒಂದೇ ಎಂದವರು ಹೇಳಿದ್ದಾರೆ. ಸಂತ ಶಿರೋಮಣಿ ರೋಹಿದಾಸ್ ಅವರ 647ನೇ ಜನ್ಮೋತ್ಸವದ (Saint Shiromani Rohidas birth anniversary) ಅಂಗವಾಗಿ ಮುಂಬೈನ ರವೀಂದ್ರ ನಾಟ್ಯ ಮಂದಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಭಾಗವತ್, ಜಾತಿ ವ್ಯವಸ್ಥೆ ಭಾರತೀಯ ಸಮಾಜಕ್ಕೆ ಮಾರಕವಾಗಿದೆ ಎಂದಿದ್ದಾರೆ.

ನಮ್ಮ ಸೃಷ್ಟಿಕರ್ತನಿಗೆ ನಾವೆಲ್ಲರೂ ಸಮಾನರು. ಯಾವುದೇ ಜಾತಿ, ಪಂಥ, ಮತಗಳನ್ನು ಆತ ಸೃಷ್ಟಿಸಲಿಲ್ಲ. ಈ ವೈರುದ್ಧ್ಯಗಳನ್ನು ಸೃಷ್ಟಿಸಿದ್ದು ಪುರೋಹಿತರು. ಇದು ತಪ್ಪು ಎಂದು ಆರೆಸ್ಸೆಸ್ ಸರಸಂಘಚಾಲಕರು ಹೇಳಿದ್ದಾರೆ.

ನಾವು ಈ ಸಮಾಜದಲ್ಲಿ ಬದುಕುತ್ತಿರುವಾಗ ಜವಾಬ್ದಾರಿಗಳೂ ಹೆಗಲ ಮೇಲಿರುತ್ತವೆ. ಸಮಾಜದ ಒಳಿತಿಗಾಗಿ ಯಾವುದೇ ಕೆಲಸ ಮಾಡಿದರೂ ಅದು ದೊಡ್ಡದಾ, ಚಿಕ್ಕದಾ ಅಥವಾ ವಿಭಿನ್ನವಾ ಎಂದು ಹೇಳಲಾಗದು. ಎಲ್ಲಾ ಒಳ್ಳೆಯ ಕೆಲಸಗಳು ಒಳ್ಳೆಯವೇ ಎಂದು ಮೋಹನ್ ಭಾಗವತ್ ವಿಶ್ಲೇಷಿಸಿದ್ದಾರೆ.

ಇನ್ನು ಜಾತಿಶ್ರೇಷ್ಠತೆಯ ವಿಚಾರದ ವಿರುದ್ಧ ಸಿಡಿಗುಟ್ಟಿದ ಅವರು, ಸಂತ ಶಿರೋಮಣಿಯ ಉದಾಹರಣೆ ನೀಡಿದ್ದಾರೆ. ತುಳಸೀದಾಸ್, ಕಬೀರ್ ಮತ್ತು ಸೂರದಾಸ್ ಅವರಿಗಿಂತ ಸಂತ ಶಿರೋಮಣಿ ರೋಹಿದಾಸ್ ಮೇಲಿದ್ದಾರೆ. ಶಾಸ್ತ್ರದಲ್ಲಿ ಅವರು ಬ್ರಾಹ್ಮಣರನ್ನು ಗೆಲ್ಲಲು ಆಗದೇ ಹೋದರೂ ಹಲವರ ಹೃದಯಗಳನ್ನು ಗೆದ್ದು ದೇವರಲ್ಲಿ ನಂಬಿಕೆ ಉಂಟಾಗುವಂತೆ ಮಾಡಿದವರು.

ಇದನ್ನೂ ಓದಿ: Chhattisgarh: ಕುಟುಂಬಸ್ಥರ ಎದುರೇ ಬಿಜೆಪಿ ಮುಖಂಡನನ್ನು ಹತ್ಯೆ ಮಾಡಿದ ನಕ್ಸಲರು

ಧರ್ಮ ಎಂಬುದು ಒಬ್ಬರ ಹೊಟ್ಟೆ ಹೊರೆಯುವುದಕ್ಕೆ ಮಾತ್ರ ಸೀಮಿತವಲ್ಲ ಎಂಬುದನ್ನು ಹೇಳಿಕೊಟ್ಟವರು ಸಂತ ಶಿರೋಣಿ ರೋಹಿದಾಸ್ ಎಂದು ಆರೆಸ್ಸೆಸ್ ಮುಖ್ಯಸ್ಥರು ತಿಳಿಸಿದ್ದಾರೆ.

ನಿಮ್ಮ ಧರ್ಮದ ಪ್ರಕಾರ ನಿಮ್ಮ ಕರ್ತವ್ಯ ನಿಭಾಯಿಸಿ. ಸಮಾಜದಲ್ಲಿ ಒಗ್ಗಟ್ಟು ತಂದು ಅದರ ಏಳ್ಗೆಗೆ ಕೆಲಸ ಮಾಡಿ. ಅದೇ ಧರ್ಮ. ಇಂಥ ಆದರ್ಶಗಳಿಂದಾಗಿ ಹಲವರು ದೊಡ್ಡ ಜನರು ಸಂತ ರೋಹಿದಾಸರ ಅನುಯಾಯಿಗಳಾಗಿದ್ದಾರೆ ಎಂದವರು ಹೇಳಿದ್ದಾರೆ.

ಸಮಾಜಮುಖಿ ಮಂತ್ರಗಳು

ಮೋಹನ್ ಭಾಗವತ್ ಇದೇ ವೇಳೆ ಸಂತ ಶಿರೋಮಣಿ ರೋಹಿದಾಸ್ ಅವರ ವಿಚಾರಗಳ ಬಗ್ಗೆ ಮಾತನಾಡುತ್ತಾ ಅವರಿಂದ ಸಮಾಜಕ್ಕೆ ಸಿಕ್ಕ ನಾಲ್ಕು ಮಂತ್ರಗಳನ್ನು ಉದಾಹರಿಸಿದ್ಧಾರೆ.

ಸತ್ಯ, ದಯೆ, ಆತ್ಮಶುದ್ಧಿ, ಶ್ರಮ ಇವು ಸಂತ ರೋಹಿದಾಸರು ಸಮಾಜಕ್ಕೆ ಕೊಟ್ಟಿರುವ ನಾಲ್ಕು ಮಂತ್ರಗಳಾಗಿವೆ ಎಂದು ಅವರು ಹೇಳಿದ್ದಾರೆ.

ನಿಮ್ಮ ಸುತ್ತ ಘಟಿಸುತ್ತಿರುವ ಸಂಗತಿಗಳ ಬಗ್ಗೆ ಗಮನ ಇರಲಿ. ಆದರೆ, ಯಾವುದೇ ಸಂದರ್ಭದಲ್ಲೂ ನಿಮ್ಮ ಧರ್ಮ ಬಿಡದಿರಿ. ಧಾರ್ಮಿಕ ಸಂದೇಶಗಳನ್ನು ಹೇಳುವ ರೀತಿಯಲ್ಲಿ ಭಿನ್ನತೆ ಇರಬಹುದು. ಆದರೆ, ಈ ಸಂದೇಶಗಳು ಬಹುತೇಕ ಒಂದೇ. ಇತರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗದ ರೀತಿ ಜನರು ತಮ್ಮ ಧರ್ಮಾಚರಣೆ ಮಾಡಬೇಕು ಎಂದು ಅವರು ತಿಳಿವು ನೀಡಿದ್ದಾರೆ.

Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Devotional: ಮುಖದ ಮೇಲೆ ಮಚ್ಚೆ ಎಲ್ಲಿದ್ದರೆ ಅದೃಷ್ಟ ತಿಳಿಯಿರಿ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
Daily Horoscope: ಸ್ವಾತಿ ನಕ್ಷತ್ರದ ಪ್ರಭಾವದಿಂದಾಗಿ ಈ ರಾಶಿಗಳಿಗೆ ಶುಭಫಲ
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..