Chhattisgarh: ಕುಟುಂಬಸ್ಥರ ಎದುರೇ ಬಿಜೆಪಿ ಮುಖಂಡನನ್ನು ಹತ್ಯೆ ಮಾಡಿದ ನಕ್ಸಲರು

ಬಿಜೆಪಿ ಮುಖಂಡನನ್ನು ಮಾವೋವಾದಿಗಳು ಕುಟುಂಬಸ್ಥರ ಎದುರೇ ಶಿರಚ್ಛೇದನ ಮಾಡುವ ಮೂಲಕ ರಕ್ಕಸ ಕೃತ್ಯವೆಸಗಿರುವಂತಹ ಘಟನೆ ಇಂದು (ಫೆ. 05) ಛತ್ತೀಸ್‌ಗಢನ ಬಿಜಾಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

Chhattisgarh: ಕುಟುಂಬಸ್ಥರ ಎದುರೇ ಬಿಜೆಪಿ ಮುಖಂಡನನ್ನು ಹತ್ಯೆ ಮಾಡಿದ ನಕ್ಸಲರು
ಮೃತ ಬಿಜೆಪಿ ಮುಖಂಡ ನೀಲಕಂಠ ಕಕ್ಕೆಮ್ Image Credit source: vistaranews.com
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Feb 06, 2023 | 12:10 AM

ಛತ್ತೀಸ್‌ಗಢ: ಬಿಜೆಪಿ (BJP) ಮುಖಂಡನನ್ನು ಮಾವೋವಾದಿಗಳು ಕುಟುಂಬಸ್ಥರ ಎದುರೇ ಶಿರಚ್ಛೇದನ ಮಾಡುವ ಮೂಲಕ ರಕ್ಕಸ ಕೃತ್ಯವೆಸಗಿರುವಂತಹ ಘಟನೆ ಇಂದು (ಫೆ. 05) ಛತ್ತೀಸ್‌ಗಢನ (Chhattisgarh) ಬಿಜಾಪುರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಬಿಜಾಪುರ ಜಿಲ್ಲೆಯ ಉಸುರ್​ ಮಂಡಲದ ಅಧ್ಯಕ್ಷರಾಗಿ ಕಳೆದ 15 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ನೀಲಕಂಠ ಕಕ್ಕೆಮ್​​ ಮೃತ ಬಿಜೆಪಿ ಮುಖಂಡ. ಅತ್ತಿಗೆ ಮದುವೆಯ ಸಿದ್ಧತೆಗಾಗಿ ತನ್ನ ಸ್ವಗ್ರಾಮಕ್ಕೆ ತೆರಳಿದ್ದಾಗ ಘಟನೆ ಸಂಭವಿಸಿದ್ದು, ಕುಟುಂಬದವರ ಎದುರೇ ಮಾವೋವಾದಿಗಳು ಈ ಕೃತ್ಯ ಎಸಗಿದ್ದಾರೆ. ಈ ಘಟನೆ ಬಳಿಕ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ನೀಲಕಂಠ ಕಕ್ಕೆಮ್​​ ಅವರ ಸಾವು ಬಿಜೆಪಿಗೆ ಆಘಾತ ಉಂಟು ಮಾಡಿದೆ. ಕಳೆದ 30 ವರ್ಷಗಳ ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಬಿಜಾಪುರ ಪ್ರದೇಶದಲ್ಲಿ ಇವರಿಗೆ ಹೆಚ್ಚಿನ ಪ್ರಾಬಲ್ಯವಿತ್ತು. ಅವರು ಮಾವೋವಾದಿಗಳಿಂದ ಅತಿ ಹೆಚ್ಚು ಬಾಧಿತ ಗ್ರಾಮವಾದ ಪೆಂಕ್ರಾಮ್‌ಗೆ ಹೋಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಅಧಿಕಾರಿಗಳು ಯಾವುದೇ ಪ್ರತ್ರಿಯೆ ನೀಡಿಲ್ಲ. ಅದೇ ರೀತಿಯಾಗಿ ಈ ಹತ್ಯೆಯ ಹೊಣೆಯನ್ನು ಮಾವೋವಾದಿಗಳು ಕೂಡ ತೆಗೆದುಕೊಳ್ಳುತ್ತಿಲ್ಲ.

ಇದನ್ನೂ ಓದಿ: ಗಾಜಿಯಾಬಾದ್‌ನ ಎಲಿವೇಟೆಡ್ ರಸ್ತೆಯಲ್ಲಿ ಮದ್ಯ ಸೇವಿಸಿ ಯುವಕರ ಡ್ಯಾನ್ಸ್; ಗಾಳಿಯಲ್ಲಿ ಗುಂಡು ಹಾರಿಸುತ್ತಿರುವ ವಿಡಿಯೊ ವೈರಲ್

ಛತ್ತೀಸ್‌ಗಢದಲ್ಲಿ ಕಂಬಿಂಗ್‌ನಲ್ಲಿ 7 ಮಾವೋವಾದಿಗಳನ್ನು ಬಂಧಿಸಲಾಗಿದೆ. ಸಿಆರ್‌ಪಿಎಫ್ ಮತ್ತು ಪೊಲೀಸರು ಮಾವೋವಾದಿಗಳ ವಿರುದ್ಧ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇಲ್ಲಿ ಫಾರ್ವರ್ಡ್ ಆಪರೇಟಿಂಗ್ ಬೇಸ್ ಸ್ಥಾಪನೆಯಾದ ನಂತರ ಮಾವೋವಾದಿಗಳ ಚಟುವಟಿಕೆಗಳು ಕಡಿಯಾಗಿದ್ದವು. ಮಾವೋವಾದಿಗಳಿರುವ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಹೆಚ್ಚಿನ ಜಾಗರೂಕತೆಯಿಂದ ಕಾರ್ಯನಿರ್ವಹಿಸುತ್ತಿವೆ. ಮಾವೋವಾದಿಗಳು ಬಚ್ಚಿಟ್ಟಿದ್ದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ಮರುಪಡೆಯುವ ಉದ್ದೇಶದಿಂದ ಶೋಧನಾ ವಿನಾಶ ಕಾರ್ಯಾಚರಣೆಗಳ ಜೊತೆಗೆ ಪ್ರದೇಶ ಪ್ರಾಬಲ್ಯ ಕಾರ್ಯಾಚರಣೆಗಳನ್ನು ಹೆಚ್ಚಾಗಿ ಇಲ್ಲಿ ನಡೆಸಲಾಗುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ