ಉಡುಪಿ: ಚಾಕು ಇರಿದು ವ್ಯಕ್ತಿಯ ಬರ್ಬರ ಹತ್ಯೆ: ವ್ಯವಹಾರ ವೈಷಮ್ಯ ಕೊಲೆ ಶಂಕೆ

ಚಾಕು ಇರಿದು ವ್ಯಕ್ತಿಯ ಬರ್ಬರ ಕೊಲೆ ಮಾಡಿರುವಂತಹ ಘಟನೆ ಜಿಲ್ಲೆಯ ಕಾಪು ತಾಲೂಕಿನ ಪಾಂಗಾಳ ಗ್ರಾಮದಲ್ಲಿ ನಡೆದಿದೆ. ಶರತ್ ಶೆಟ್ಟಿ(39) ಸಾವನ್ನಪ್ಪಿದ ವ್ಯಕ್ತಿ.

ಉಡುಪಿ: ಚಾಕು ಇರಿದು ವ್ಯಕ್ತಿಯ ಬರ್ಬರ ಹತ್ಯೆ: ವ್ಯವಹಾರ ವೈಷಮ್ಯ ಕೊಲೆ ಶಂಕೆ
ಮೃತ ಶರತ್ ಶೆಟ್ಟಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Feb 05, 2023 | 8:33 PM

ಉಡುಪಿ: ಚಾಕು ಇರಿದು(stabbed) ವ್ಯಕ್ತಿಯ ಬರ್ಬರ ಕೊಲೆ ಮಾಡಿರುವಂತಹ ಘಟನೆ ಜಿಲ್ಲೆಯ ಕಾಪು ತಾಲೂಕಿನ ಪಾಂಗಾಳ ಗ್ರಾಮದಲ್ಲಿ ನಡೆದಿದೆ. ಶರತ್ ಶೆಟ್ಟಿ(39) ಸಾವನ್ನಪ್ಪಿದ ವ್ಯಕ್ತಿ. ಇಬ್ಬರು ದುಷ್ಕರ್ಮಿಗಳು ಚೂರಿಯಿಂದ ಇರಿದು ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಮೃತ ಶರತ್ ರಿಯಲ್ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದ. ವ್ಯವಹಾರದ ವೈಷಮ್ಯ ಹಿನ್ನೆಲೆ ಕೊಲೆ ಶಂಕೆ ವ್ಯಕ್ತವಾಗಿದೆ. ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ನಾಲ್ವರ ಬಂಧನ: 5 ಲಕ್ಷ ರೂ. ವಶಕ್ಕೆ

ಬಾಗಲಕೋಟೆ: ಹಣ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ನಾಲ್ಕು ಕಳ್ಳರನ್ನು ಮುಧೋಳ ಪೊಲೀಸರು ಬಂಧಿಸಿದ್ದಾರೆ. ರಬಕವಿ ಬನಹಟ್ಟಿ ಹಾಗೂ ನಾವಲಗಿ ಮೂಲದವರಾದ ಸಂತೋಷ್ ಮಾಂಗ್, ರಮೇಶ್ ಗಿರಿಮಲ್ಲಪ್ಪ ಮಂಗ್ರೊಳ್ಳಿ, ರಾಘವೇಂದ್ರ ಅಲಗೂರ, ಅವಿನಾಶ್ ಇಂಗಳಗಾವಿ ಬಂಧಿತರು. ಫೆಬ್ರವರಿ 3ರಂದು ಮುಧೋಳ ನಗರದ ಹೆಸ್ಕಾಮ್ ಕಚೇರಿ ಬಳಿ ಅಬ್ದುಲ್ ರಜಾಕ್ ಬಾಡಗಂಡಿ ಎಂಬುವರ 87,000 ರೂ. ನಗದು, ಬಯೋಮೆಟ್ರಿಕ್, ಪವರ್ ಬ್ಯಾಂಕ್ ಹೊಂದಿದ್ದ ಬ್ಯಾಗ್ ದೋಚಿ ಎಸ್ಕೇಪ್ ಆಗಿದ್ದರು.

ನಂತರ ಹಣ ಕಳ್ಳತನದ ಬಗ್ಗೆ ಅಬ್ದುಲ್ ರಜಾಕ್ ಮುಧೋಳ ಠಾಣೆಯಲ್ಲಿ ದೂರು ನೀಡಿದ್ದರು. ಬನಹಟ್ಟಿಯಲ್ಲಿ ಕೂಡ ಇದೇ ರೀತಿ 1 ಲಕ್ಷ 44ಸಾವಿರದ, 666 ರೂ. ಕಳ್ಳತನ ಮಾಡಿದ್ದರು. ದೂರು ಆಧರಿಸಿ ಕಾರ್ಯಚರಣೆಗೆ ಇಳಿದಿದ್ದ ಮುಧೋಳ ಪೊಲೀಸರು, ಬಂಧಿತರಿಂದ ಕದ್ದ ಹಣ, ಟ್ಯಾಬ್, ಬಯೊಮೆಟ್ರಿಕ್, ಪವರ್ ಬ್ಯಾಂಕ್, ಬೈಕ್, ಮೊಬೈಲ್ ಸೇರಿದಂತೆ ಒಟ್ಟು 5 ಲಕ್ಷಕ್ಕೂ ಹೆಚ್ಚು ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಕಾಡು ಔಡಲ ಬೀಜ ತಿಂದು 9 ಶಾಲಾ ಮಕ್ಕಳು ಅಸ್ವಸ್ಥ

ಹಾವೇರಿ: ಕಾಡು ಔಡಲ ಬೀಜ ತಿಂದು 9 ಶಾಲಾ ಮಕ್ಕಳು ಅಸ್ವಸ್ಥಗೊಂಡಿರುವಂತಹ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ನೀರಲಕಟ್ಟಿ ತಾಂಡಾದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ನೀರಲಕಟ್ಟಿ ತಾಂಡಾದ ಸರ್ಕಾರಿ ಶಾಲೆಯ ಬಳಿ ಸಿಕ್ಕ ಕಾಡು ಔಡಲ ಬೀಜ ತಿಂದು ಈ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ. ಮಕ್ಕಳಿಗೆ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡ ಹಿನ್ನೆಲೆ ಅಸ್ವಸ್ಥಗೊಂಡ ಮಕ್ಕಳನ್ನ ಶಿಗ್ಗಾಂವಿ ತಾಲ್ಲೂಕು ಆಸ್ಪತ್ರೆ ದಾಖಲು ಮಾಡಲಾಗಿದೆ. ಸದ್ಯ ಎಲ್ಲಾ ಮಕ್ಕಳು ಪ್ರಾಣಾಪಯಾದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಶಿಗ್ಗಾಂವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.