ಬೆಂಗಳೂರು: ನಮ್ಮದು ಕುಟುಂಬ ರಾಜಕಾರಣ ಎಂದು ಆರೋಪಿಸುತ್ತಾರೆ. ಕುಟುಂಬ ಸದಸ್ಯರು ರಾಜಕಾರಣಕ್ಕೆ ಬರಬಾರದು ಎಂದಿದೆಯಾ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ. ರಾಜಕಾರಣಿ ಮಕ್ಕಳು ರಾಜಕಾರಣಿ, ವೈದ್ಯರ ಮಕ್ಕಳು ವೈದ್ಯರು, ಅದೇ ರೀತಿ ನಮ್ಮ ಕುಟುಂಬದಲ್ಲಿ 14 ಜನರು ವೈದ್ಯರಿದ್ದಾರೆ. ಕುಟುಂಬ ರಾಜಕಾರಣ ವೈಭವೀಕರಿಸುವ ಅವಶ್ಯಕತೆ ಇಲ್ಲ. ದೇಶದಲ್ಲಿನ ಆಘಾತಕಾರಿ ವಿಚಾರಗಳ ಬಗ್ಗೆ ಗಮನಹರಿಸಲಿ. ನಾವು ಮಹಾನ್ ಅಪರಾಧ ಮಾಡಿದ್ದೇವೆಯೇ ಎಂದು ಪ್ರಶ್ನಿಸಿದ್ದಾರೆ.
ಹೆಚ್ ಡಿ ದೇವೇಗೌಡರ ಕಾಲದಲ್ಲಿ 2G ರೀತಿ ಸ್ಕ್ಯಾಂ ಇರಲಿಲ್ಲ. ಕುಟುಂಬ ರಾಜಕಾರಣ ವಿಚಾರ ಬಿಟ್ಟು ದೇಶದ ಬಗ್ಗೆ ಯೋಚಿಸಿ, ನಮ್ಮ ಪಕ್ಷ ನಿಭಾಯಿಸುತ್ತೇವೆ ಅಂದರೆ ನಾವು ಬಿಟ್ಟುಕೊಡುತ್ತೇವೆ. ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ದೇವೇಗೌಡರು ಸಿದ್ಧ. ಇಲ್ಲಿ ಭಿಕ್ಷೆ ಬೇಡಿ ಪಕ್ಷ ಕಟ್ಟುವಂತಹ ಪರಿಸ್ಥಿತಿ ಇದೆ ಎಂದು ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನನ್ನನ್ನು ಪದೇಪದೆ ಕೆಣಕಬೇಡಿ ಎಂದು ಎಚ್ಚರಿಕೆ ನೀಡಿದರು.
ನಾವು ಸರ್ಕಾರದ ಮತ್ತು ಜನರ ಸಂಪತ್ತು ಲೂಟಿ ಹೊಡೆದಿಲ್ಲ. ಕಾರ್ಪೊರೇಟ್ ಕಂಪನಿಗಳಿಗೆ ದೇಶದ ಆಸ್ತಿ ಮಾರಾಟಮಾಡಿಲ್ಲ. ಬಿಟ್ ಕಾಯಿನ್ ವಿಚಾರದಲ್ಲಿ ಸುಮ್ಮನೇ ಪ್ರಚಾರ ಮಾಡಿದರು. ಸುಮ್ಮನೇ ಪ್ರಚಾರ ಮಾಡಿ ತೌಡು ಕುಟ್ಟುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಯಾರೂ ದೊಡ್ಡ ದೊಡ್ಡ ಹಗರಣಗಳಿಗೆ ಕೈ ಹಾಕುವುದಿಲ್ಲ. ಸಣ್ಣಪುಟ್ಟ ಹಗರಣಗಳ ಬಗ್ಗೆ ಮಾತ್ರ ಗಮನಹರಿಸುತ್ತಾರೆ. ದೇಶದ ಜನರ ತೆರಿಗೆ ಹಣ ಸರಿಯಾದ ರೀತಿಯಲ್ಲಿ ಬಳಸಬೇಕು. ತೆರಿಗೆ ಹಣ ಸಮರ್ಪಕ ಬಳಕೆ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲ. ಜನರ ತೆರಿಗೆ ಹಣ ಸರಿಯಾದ ರೀತಿಯಲ್ಲಿ ಬಳಕೆ ಆಗುತ್ತಿದೆಯಾ? ಅಂತ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸರ್ಕಾರದ ಕಾರ್ಯ ವೈಖರಿ ಪ್ರಶ್ನಿಸುವುದನ್ನೂ ಜನ ಮರೆತಿದ್ದಾರೆ. ತೈಲ, ಅಗತ್ಯ ವಸ್ತುಗಳ ದರ ಏರಿಕೆಯಾಗಿದ್ದರೂ ಪ್ರಶ್ನಿಸುತ್ತಿಲ್ಲ. ನಾವು ತಲೆ ಹೊಡೆದು ಹಣ ಸಂಪಾದಿಸಿಲ್ಲ. ಪಕ್ಷ ಸಂಘಟಿಸಲು ದುಡಿಮೆ ಮಾಡಬೇಕು. ಬಿಜೆಪಿಯವರು ಈ ಹಿಂದೆ ಯಾವ ರೀತಿ ಇದ್ದರು. ಈಗ ಹೇಗಿದ್ದಾರೆ ಅಂತಾ ಗೊತ್ತಿದೆ. ಸ್ಕೂಟರ್ಗೆ ಪೆಟ್ರೋಲ್ ಹಾಕಿಸಲು ದುಡ್ಡು ಇಲ್ಲದೆ ಇದ್ದವರು ಈಗ ಹೇಗಿದ್ದಾರೆ ಅಂತಾ ಗೊತ್ತಿದೆ ಅಂತ ಬಿಜೆಪಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಕುಟುಂಬ ರಾಜಕಾರಣ ಕಾಂಗ್ರೆಸ್ನಲ್ಲೂ ದೊಡ್ಡ ಪಟ್ಟಿಯನ್ನೇ ಕೊಡಬಹುದು. ದೇವೇಗೌಡರ ಕಾಲದಲ್ಲಿ ಬಿಟ್ ಕಾಯಿನ್ ಹಗರಣ ಬಂದಿತ್ತಾ? ನಾನು ಸಿಎಂ ಆಗಿದ್ದಾಗ ಇಂತಹದ್ದು ಬಂದಿತ್ತಾ? ಅದ್ಯಾವುದೋ 150 ಕೋಟಿ ಆರೋಪ ಹೊರಿಸಿದ್ದರು. ಬಿಜೆಪಿಯವರು ಶಾಸಕರ ಖರೀದಿ ಮಾಡಿ ವ್ಯವಸ್ಥೆ ಹದಗೆಡಿಸುತ್ತಿದ್ದಾರೆ. ಇದು ಒಳ್ಳೆಯ ರಾಜಕಾರಣವಾ? ಅಂತ ಹೆಚ್ಡಿಕೆ ಕೇಳಿದರು.
ಇದನ್ನೂ ಓದಿ
ಕನ್ನಡ ಕಡ್ಡಾಯ ನೀತಿಯನ್ನು ಸಮರ್ಥಿಸಿಕೊಂಡ ಕರ್ನಾಟಕ ಸರ್ಕಾರ; ಸಂಸ್ಕೃತ ಭಾರತಿ ಟ್ರಸ್ಟ್ ಪರ ವಕೀಲರ ಆಕ್ಷೇಪ
ಖ್ಯಾತ ನಟನಿಗೆ ಇದೆಂಥಾ ಗತಿ? ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ನೋಡಿ ಕಣ್ಣೀರಿಟ್ಟ ಫ್ಯಾನ್ಸ್