ಇನ್ನೊಂದು ವಾರ ರಾಜಕಾರಣದ ಬಗ್ಗೆ ಮಾತನಾಡಲ್ಲ ಎಂದ ಹೆಚ್​ಡಿ ಕುಮಾರಸ್ವಾಮಿ; ಕಾರಣ ಇಲ್ಲಿದೆ

| Updated By: Ganapathi Sharma

Updated on: Aug 26, 2023 | 2:43 PM

ಗ್ಯಾರಂಟಿ ಯೋಜನೆಯಿಂದ ಅದೆಷ್ಟು ಜನರಿಗೆ ಉಪಯೋಗವಾಗಿದೆ ಎಂದು ತಿಳಿಯುತ್ತಿಲ್ಲ. ಸಿಎಂ ಅದಾನಿ, ಅಂಬಾನಿಯವರ ಹಣವನ್ನು ಜನರಿಗೆ ಹಂಚುತ್ತೇನೆ ಎಂದಿದ್ದಾರೆ, ಆದರೆ ಗೃಹ ಜ್ಯೋತಿ ಹೆಸರಿನಲ್ಲಿ ಈಗಲೇ ಅನೇಕರಿಗೆ ಪಟ್ಟು ಬಿದ್ದಿದೆ. ಆಗಸ್ಟ್ ನಲ್ಲೇ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಆರಂಭವಾಗಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೊಂದು ವಾರ ರಾಜಕಾರಣದ ಬಗ್ಗೆ ಮಾತನಾಡಲ್ಲ ಎಂದ ಹೆಚ್​ಡಿ ಕುಮಾರಸ್ವಾಮಿ; ಕಾರಣ ಇಲ್ಲಿದೆ
ಹೆಚ್​ಡಿ ಕುಮಾರಸ್ವಾಮಿ
Follow us on

ಹಾಸನ, ಆಗಸ್ಟ್ 26: ಇನ್ನು ಒಂದು ವಾರ ಕಾಲ ರಾಜಕಾರಣದ ಬಗ್ಗೆ ಮಾತನಾಡಲ್ಲ ಎಂದು ಹೆಚ್​​ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ವಿಜ್ಞಾನಿಗಳ ಅವಿರತ ಶ್ರಮದಿಂದ ಚಂದ್ರಯಾನ -3 (Chandrayaan 3) ಯಶಸ್ವಿಯಾಗಿದೆ. ಅವರ ಕೆಲಸಕ್ಕೆ ದೇಶ ವಿದೇಶದಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈಗ ಎಲ್ಲರೂ ಚಂದ್ರಯಾನದ ಗುಂಗಿನಲ್ಲಿರುವುದರಿಂದ ಇನ್ನೊಂದು ವಾರ ನಾನು ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.

ಕಾವೇರಿ ವಿಚಾರವಾಗಿ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಿಷ್ಟು…

ಕಾವೇರಿ ವಿಚಾರವಾಗಿ ನಿಲುವನ್ನು ನಾನು ಸರ್ವಪಕ್ಷ ಸಭೆಯಲ್ಲಿಯೇ ಸ್ಪಷ್ಟಪಡಿಸಿದ್ದೇನೆ. ಕಾವೇರಿ ಮ್ಯಾನೆಜ್ ಮೆಂಟ್ ನೀರು ಬಿಡಿ ಎಂದಾಗಲೇ ಸರ್ವಪಕ್ಷ ಸಭೆಕರೆದು ಚರ್ಚಿಸಬೇಕಾಗಿತ್ತು. ಈ ಕುರಿತು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದಾಗ ತೀರ್ಪು ಬರೋವರೆಗೂ ಕಾಯದೆ ನೀರು ಪೂರೈಕೆ ಮಾಡಿದೆ. ಈ ಕುರಿತು ರೈತರು ಪ್ರತಿಭಟನೆ ಮಾಡಲು ಹೋದರೆ ರೈತರ ಮೇಲೆಯೇ ಕೇಸ್ ಹಾಕಿ ಎಂದಿದ್ದಾರೆ. ಈ ರೀತಿಯ ವರ್ತನೆ ಸರಿಯಿಲ್ಲ ಎಂದು ನಾನು ನೇರವಾಗಿಯೇ ಹೇಳಿದ್ದೇನೆ. ಬರ ಘೋಷಣೆಗೆ ಮಾನದಂಡ ಪರಿಷ್ಕರಣೆಯನ್ನು ಈ ಕೂಡಲೇ ಕೈ ಬಿಡಬೇಕು, ಈ ಮಾನದಂಡವೂ ಮೊದಲಿನಿಂದಲೂ ಇರುವುದರಿಂದ ಇದನ್ನೇ ಪಾಲಿಸಬೇಕು ಎಂದಿದ್ದಾರೆ.

ಬರ ಘೋಷಣೆಗೆ ಮಾನದಂಡದಲ್ಲಿ ಬದಲಾವಣೆ ಮಾಡಿದರೆ ಹೋರಾಟ ಮಾಡುವುದು ಖಚಿತ. ಆದರೆ, ರೈತರೊಂದಿಗೆ ನಿಲ್ಲುವುದು ಸರ್ಕಾರ ಜವಾಬ್ದಾರಿ ಎಂದಿದ್ದಾರೆ.

ಗ್ಯಾರಂಟಿ ಬಗ್ಗೆ ಟಾಂಗ್

ಬಹಳ ಜನ ಇವರು ತಪ್ಪುಗಳ ಬಗ್ಗೆ ಕಠಿಣವಾಗಿ ಮಾತನಾಡಬೇಡಿ ಎನ್ನುತ್ತಾರೆ, ಮಾತನಾಡದೇ ಹೋದಲ್ಲಿ ಇವರ ತಪ್ಪುಗಳ ಬಗ್ಗೆ ಹೇಳುವವರಾರು? ಈಗಲೇ ಈ ಸರ್ಕಾರಕ್ಕೇ ಹೇಳುವವರು ಕೇಳುವವರು ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ಗ್ಯಾರಂಟಿ ಯೋಜನೆಯಿಂದ ಅದೆಷ್ಟು ಜನರಿಗೆ ಉಪಯೋಗವಾಗಿದೆ ಎಂದು ತಿಳಿಯುತ್ತಿಲ್ಲ. ಸಿಎಂ ಅದಾನಿ, ಅಂಬಾನಿಯವರ ಹಣವನ್ನು ಜನರಿಗೆ ಹಂಚುತ್ತೇನೆ ಎಂದಿದ್ದಾರೆ, ಆದರೆ ಗೃಹ ಜ್ಯೋತಿ ಹೆಸರಿನಲ್ಲಿ ಈಗಲೇ ಅನೇಕರಿಗೆ ಪಟ್ಟು ಬಿದ್ದಿದೆ. ಆಗಸ್ಟ್ ನಲ್ಲೇ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಆರಂಭವಾಗಿದೆ. ಯಾವುದೇ ಸಿದ್ಧತೆಗಳಿಲ್ಲದೆ ಅಘೊಷಿತವಾಗಿ ಲೋಡ್ ಶೆಡ್ಡಿಂಗ್ ಮಾಡುತ್ತಿದ್ದರೆ. 120 ತಾಲೂಕಿನಲ್ಲಿ ಬರ ಪರಿಸ್ಥಿತಿ ಇದೆ ಎಂದ ಸರ್ಕಾರ ಗ್ಯಾರಂಟಿ ಯೋಜನೆಯ ವಿಜೃಂಭಣೆ ಬಿಟ್ಟು ರೈತರ ಬಗ್ಗೆ ಯೋಚನೆ ಮಾಡಲಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆ: ಜಗದೀಶ್​ ಶೆಟ್ಟರ್​​ಗೆ ಅಮಿತ್​ ಶಾ ದೂರವಾಣಿ ಕರೆ

ಆಪರೇಷನ್ ಹಸ್ತದ ಬಗ್ಗೆ ಪ್ರತಿಕ್ರಿಸಿದ ಹೆಚ್​​​ಡಿ ಕುಮಾರಸ್ವಾಮಿ, ಈ ಹಿಂದೆಯೂ ಇದೇ ರೀತಿ ಪರಿಸ್ಥಿತಿ ಎದುರಾಗಿತ್ತು, 1999ರಲ್ಲಿಯೂ ಎಸ್​​​ಎಂ ಕೃಷ್ಣ ರವರು ನಮ್ಮಿಂದ ಐದು ಜನರನ್ನು, ಬಿಜೆಪಿಯಿಂದ ಎಂಟ್ಹತ್ತು ಜನರನ್ನು ಕರೆದುಕೊಂಡು ಹೋಗಿದ್ದರು, ನಂತರ ಅವರ ಸ್ಥಿತಿ ಎಲ್ಲಿಗೆ ಬಂತು? ನಂತರ ಬಿಜೆಪಿಯವರು ಆಪರೇಷನ್ ಕಮಲಮಾಡಿ 40 ಸೀಟ್​ಗೆ ತೃಪ್ತಿಪಡಬೇಕಾಯಿತು. 2013-14ರಲ್ಲಿ ಸಿದ್ದರಾಮಯ್ಯ ಆಪರೇಷನ್ ಆಟವಾಡಿ 2018ರಲ್ಲಿ 78 ಕ್ಕೆ ಬಂದು ನಿಂತಿದ್ದರು. ಇತ್ತಿಚೀಗೆ ನಿಷ್ಠೆ ಎನ್ನುವುದು ಯಾವುದೇ ಪಕ್ಷಕ್ಕೂ ಉಳಿದಿಲ್ಲ. ಕೇವಲ ತಕ್ಷಣ ಸಿಗುವ ಅಧಿಕಾರಕ್ಕೆ ಮರುಳಾಗುತ್ತಾರೆ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ