Siddaramaiah Cabinet:ಸಿದ್ದರಾಮಯ್ಯ ಸಂಪುಟ ಫುಲ್​ ಫಿಲ್: ಅನುಭವಿ- ಉತ್ಸಾಹಿ ತಂಡ ಹೀಗಿದೆ

|

Updated on: May 27, 2023 | 2:43 PM

ಇಂದು ಎರಡನೇ ಕಂತಿನಲ್ಲಿ 24 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ಸಿದ್ದರಾಮಯ್ಯನವರ ಸರ್ಕಾರ ಪುಲ್ ಫಿಲ್ ಆಗಿದೆ. ಅನುಭವಿ- ಉತ್ಸಾಹಿ ತಂಡ ಹೀಗಿದೆ.

Siddaramaiah Cabinet:ಸಿದ್ದರಾಮಯ್ಯ ಸಂಪುಟ ಫುಲ್​ ಫಿಲ್:  ಅನುಭವಿ- ಉತ್ಸಾಹಿ ತಂಡ ಹೀಗಿದೆ
Follow us on

ಬೆಂಗಳೂರು: ಕಷ್ಟು ಕುತೂಹಲ ಮೂಡಿಸಿದ್ದ ಸಿಎಂ ಸಿದ್ದರಾಮಯ್ಯ ಸಂಪುಟ (Siddaramaiah Cabinet) ಕಸರತ್ತಿಗೆ ಕೊನೆಗೂ ತೆರೆ ಬಿದ್ದಿದೆ. ಕಾಂಗ್ರೆಸ್‌ಗೆ ಕಗ್ಗಂಟಾಗಿದ್ದ ಸಂಪುಟ ವಿಸ್ತರಣೆ ಕೊನೆಗೂ ಮುಗಿದಿದೆ. ಸಾಮಾಜಿಕ ನ್ಯಾಯ, ಪ್ರಾದೇಶಿಕ ಸಮಾನತೆಗೆ ಒತ್ತು ನೀಡಿ ಕಾಂಗ್ರೆಸ್ ಹೈಕಮಾಂಡ್ ಸಚಿವರ ಪಟ್ಟಿಯನ್ನು ಫೈನಲ್ ಮಾಡಿದೆ. ಪಕ್ಷದಲ್ಲಿ ಹೊಸ ನಾಯಕತ್ವಕ್ಕೆ ಅವಕಾಶ ಕೊಡುವ ದೃಷ್ಟಿಯಿಂದ ಕೆಲವು ಹಿರಿಯರಿಗೆ ಕೊಕ್‌ ನೀಡಲಾಗಿದೆ. ಎರಡನೇ ಹಂತತದಲ್ಲಿ ಹಳಬರು ಹಾಗೂ ಹೊಸಬರನ್ನು ಒಳಗೊಂಡ 24 ಸಚಿವರು ಇಂದು(ಮೇ 27) ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಂಪೂರ್ಣ ಭರ್ತಿಯಾಗಿದೆ. ಸಿಎಂ, ಡಿಸಿಎಂ ಸೇರಿದಂತೆ ಒಟ್ಟು 34 ಜನರ ಸರ್ಕಾರ ಅನುಭವಿ- ಉತ್ಸಾಹಿಗಳಿಂದ ಕೂಡಿದೆ. ಒಟ್ಟು 8 ಜನರು ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ. ಅವರು ಯಾರು? ಇನ್ನು ಸಿದ್ದರಾಮಯ್ಯ ಸಂಪುಟದಲ್ಲಿ ಯಾರೆಲ್ಲ ಅನುಭವಿಗಳಿದ್ದಾರೆ?  ಎನ್ನುವ ವಿವರ ಇಲ್ಲಿದೆ.

ಇದನ್ನೂ ಓದಿ: Karnataka Cabinet Expansion Live: ಹೊಸದಾಗಿ 24 ಸಚಿವರ ಪ್ರಮಾಣ ವಚನ: ರಚನೆಯಾಯ್ತು ಸಿಎಂ ಸಿದ್ದರಾಮಯ್ಯರ ಪರಿಪೂರ್ಣ ಸಂಪುಟ

ಸಿದ್ದರಾಮಯ್ಯನವರ ಸಂಪುಟದಲ್ಲಿರುವ ಅನುಭವಿ ಸಚಿವರು

ಸಿದ್ದರಾಮಯ್ಯ ಸಂಪುಟದಲ್ಲಿ ಇದೇ ಮೊದಲ ಬಾರಿಗೆ ಸಚಿವರಾದವರ ಜೊತೆಗೆ ಈಗಾಗಲೇ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವಿಗಳು ಸಹ ಇದ್ದಾರೆ. ಡಿಕೆ ಶಿವಕುಮಾರ್, ಕೃಷ್ಣಬೈರೇಗೌಡ, ಡಾ.ಜಿ ಪರಮೇಶ್ವರ್, ಕೆಜೆ ಜಾರ್ಜ್, ಎಚ್​ಕೆ ಪಾಟೀಲ್, ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಖಾನ್, ದಿನೇಶ್ ಗುಂಡೂರಾವ್, ರಾಮಲಿಂಗರೆಡ್ಡಿ, ಈಶ್ವರ್ ಖಂಡ್ರೆ, ಹೆಚ್ ಸಿ ಮಹಾದೇವಪ್ಪ, ಶರಣ ಪ್ರಕಾಶ್ ಪಾಟೀಲ್ , ಚೆಲುವನಾರಾಯಣ ಸ್ವಾಮಿ, ಡಿ ಸುಧಾಕರ್, ಸಂತೋಷ್ ಲಾಡ್, ಎಂಬಿ ಪಾಟೀಲ್, ಕೆಎಚ್​ ಮುನಿಯಪ್ಪ, ಆರ್.ಬಿ.ತಿಮ್ಮಾಪುರ ಸೇರಿದಂತೆ ಇನ್ನು ಕೆಲವರು ಸಿದ್ದರಾಮಯ್ಯನವರ ಕ್ಯಾಬಿನೆಟ್​ನಲ್ಲಿ ಅನುಭವಿ ಸಚಿವರಾಗಿದ್ದಾರೆ.

ಇದೇ ಮೊದಲ ಬಾರಿಗೆ ಸಚಿವರಾದವರು

ಇನ್ನು ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಸಚಿವರಾದವರೇ ಹೆಚ್ಚು.  ಮೊದಲ ಬಾರಿಗೆ ಯಾರೆಲ್ಲ ಸಿದ್ದರಾಮಯ್ಯನವರ ಸಂಪುಟ ಸೇರಿದ್ದಾರೆ ಎನ್ನುವುದನ್ನು ನೋಡುವುದಾದರೆ, ಲಕ್ಷ್ಮೀ ಹೆಬ್ಬಾಳ್ಕರ್, ಬಿ ನಾಗೇಂದ್ರ, ಬೋಸರಾಜು, ಮಧುಬಂಗಾರಪ್ಪ, ಬೈರತಿ ಸುರೇಶ್, ಎಸ್​ಎಸ್ ಮಲ್ಲಿಕಾರ್ಜುನ, ರಹೀಂ ಖಾನ್, ಕೆ.ವೆಂಕಟೇಶ್, ಶಿವಾನಂದ ಪಾಟೀಲ್, ಶರಣಪ್ಪ ದರ್ಶನಪುರ, ಮಕಾಳ್ ವೈದ್ಯ, ಡಾ. ಎಂಸಿ ಸುಧಾಕರ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಸಚಿವರಾಗಿದ್ದಾರೆ.

ಸಿದ್ದರಾಮಯ್ಯನವರೊಳಗೊಂಡು 34 ಜನರ ಪೂರ್ಣ ಪ್ರಮಾಣದ ಸರ್ಕಾರ ರಚನೆಯಾಗಿದ್ದು, ಸರ್ಕಾರದ ಮುಂದೆ ಹಲವು ಕಠಿಣ ಸವಾಲುಗಳೇ ಇವೆ. ಅವುಗಳಲ್ಲಿ ಪ್ರಮುಖವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಅವರ ತಂಡದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವುದೇ ಸಿದ್ದರಾಮಯ್ಯನವರಿಗೆ ಒಂದು ದೊಡ್ಡ ಸವಾಲ್​ ಆಗಿದೆ. ಇಬ್ಬರೂ ಘಟಾನುಘಟಿ ನಾಯಕರು ಆಗಿದ್ದರಿಂದ ಸ್ವಲ್ಪ ಏರುಪೇರು ಆದರೂ ಸಿದ್ದರಾಮಯ್ಯನವರ ಅಧಿಕಾರಕ್ಕೆ ಅಡಚಣೆ ಆಗುವ ಸಾಧ್ಯತೆಗಳಿವೆ. ಇದಷ್ಟೇ ಅಲ್ಲದೇ ಸಿದ್ದರಾಮಯ್ಯನವರ ಮುಂದೆ ಹಲವು ಸವಾಲುಗಳು ಇದ್ದು, ಅವುಗಳನ್ನು ಮೆಟ್ಟಿನಿಂತು ಮುಂದಿನ ಲೋಕಸಭೆ ಚುನಾವಣೆ ಕಾಂಗ್ರೆಸ್ ಹೆಚ್ಚು ಸ್ಥಾನದಲ್ಲಿ ಗೆದ್ದು ಹೈಕಮಾಂಡ್​ಗೆ ಸಂತಸ ಪಡಿಸಬೇಕಾಗಿದೆ.

ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಜಾರಿಗೆ ತರಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಇಂತಹ ಸನ್ನಿವೇಶದಲ್ಲೇ ಈಗ ಎದುರಾಗಿರುವ ಪ್ರಶ್ನೆ ಎಂದರೆ ಪಕ್ಷ ಮತ್ತು ಸರ್ಕಾರದ ನಡುವೆ ಮುಂದಿನ ದಿನಗಳಲ್ಲಿ ಸಮನ್ವಯತೆ ಸಾಧ್ಯವಾದೀತೆ? ಎಂಬುದು.

ಒಟ್ಟಿನಲ್ಲಿ ಅನುಭವಿ-ಉತ್ಸಾಹಿಗಳನ್ನೊಳಗೊಂಡ ಸಿದ್ದರಾಮಯ್ಯನವರ ಮಂತ್ರಿಮಂಡಲ ಹೇಗೆಲ್ಲ ಜನರ ಕಷ್ಟ-ಸಮಸ್ಯೆಗಳಿಗೆ ಸ್ಪಂದಿಸುತ್ತೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.

Published On - 2:28 pm, Sat, 27 May 23