ಹುಬ್ಬಳ್ಳಿ: ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2o023) ಸೋಲಿನ ಬಳಿಕ ಬಿಜೆಪಿ(BJP) ಮನೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸೋಲಿನ ಆತ್ಮಾವಲೋಕನ ಮಾಡಿಕೊಳ್ಳುತ್ತಿರುವ ಕೇಸರಿ ಮನೆಯಲ್ಲಿ ಹೊಂದಾಣಿಕೆಯ ಬೆಂಕಿ ಭುಗಿಲೆದ್ದಿದೆ. ಕಳೆದ ವಾರ ಸಂಸದ ಪ್ರತಾಪ್ ಸಿಂಹ ಸಿಡಿಸಿದ್ದ ಹೊಂದಾಣಿಕೆ ಕಿಡಿ, ಈಗಲೂ, ಈ ಕ್ಷಣಕ್ಕೂ ಕಮಲ ಮನೆಯನ್ನ ಸುಡುತ್ತಿದೆ. ನಮ್ಮನವರೇ ನಮ್ಮನ್ನು ಸೋಲಿಸಿದ್ದಾರೆ ಎನ್ನುವ ಮಾತುಗಳು ಬಿಜೆಪಿಯಲ್ಲಿ ಹರಿದಾಡುತ್ತಿವೆ. ಇದಕ್ಕೆ ಶಾಸಕ ಅರವಿಂದ ಬೆಲ್ಲದ್ (Arvind Bellad,) ಧ್ವನಿಗೂಡಿಸಿದ್ದಾರೆ. ಜನ ನಮ್ಮನ್ನು ಮನೆಗೆ ಕಳಿಸಿಲ್ಲ, ನಮ್ಮ ಪಕ್ಷದವರೇ ಮನೆಗೆ ಕಳಿಸಿದ್ದಾರೆ ಎಂದು ಅರವಿಂದ ಬೆಲ್ಲದ್, ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
ಜನ ನಮ್ಮನ್ನು ಮನೆಗೆ ಕಳಿಸಿಲ್ಲ, ನಮ್ಮ ಪಕ್ಷದವರೇ ಮನೆಗೆ ಕಳಿಸಿದ್ದಾರೆ. ಅಧಿಕಾರದಲ್ಲಿದ್ದಾಗ ಕಾರ್ಯಕರ್ತರಿಗೆ ತೃಪ್ತಿ ಆಗುವ ಕೆಲಸ ಮಾಡಿಲ್ಲ.vಕೆಲವರು ಮುಸ್ಲಿಂ ಮೀಸಲಾತಿ ರದ್ದು ಮಾಡಿದ್ದಕ್ಕೆ ಸೋಲಾಯ್ತು ಅಂತಾರೆ. ಮುಸ್ಲಿಮರು ಯಾವಾಗ ಬಿಜೆಪಿಗೆ ವೋಟ್ ಹಾಕಿದ್ದಾರೆ? ಯಾಕೆ ಸೀಟ್ ಕಳೆದುಕೊಂಡೆವೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಂವಿಧಾನದಲ್ಲಿ ಧರ್ಮದ ಆಧಾರದಲ್ಲಿ ಮೀಸಲಾತಿ ಇಲ್ಲ. ಕ್ರೈಸ್ತರು, ಮುಸ್ಲಿಮರು ಎಲ್ಲರೂ ಒಂದೇ ಎಂದು ಮತಾಂತರ ಮಾಡುತ್ತಾರೆ ಎಂದು ಹೇಳಿದ್ದಾರೆ.
ಮುಸ್ಲಿಮರು, ಕ್ರೈಸ್ತ ಧರ್ಮದವರು ನಮಗೆ ಜಾತಿ ಇಲ್ಲ ಅಂತಾರೆ. ಕಾನೂನು, ಸಂವಿಧಾನದ ವಿರುದ್ಧವಾಗಿ ಮೀಸಲಾತಿ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್, JDS ಸರ್ಕಾರ ಅವರಿಗೆ ಶೇ. 23ರಷ್ಟು ಮೀಸಲಾತಿ ಕೊಟ್ರು. ಇದನ್ನು ಸರಿಪಡಿಸುವ ಕೆಲಸ ನಾವು ಮಾಡಿದ್ವಿ. RSS ಸಲುವಾಗಿ ಮುಸ್ಲಿಮರು ಒಂದಾದರು ಎಂದು ಕೆಲವರು ಹೇಳುತ್ತಾರೆ. ಮುಸ್ಲಿಂ ಸಮಾಜದವರು ಯಾವಾಗಲೂ ಒಗ್ಗಟ್ಟಾಗಿದ್ದಾರೆ. ಎಸ್ಟಿ ಮೀಸಲು 16 ಕ್ಷೇತ್ರಗಳಲ್ಲಿ ನಾವು ಸೋತಿದ್ದೇವೆ ಎಂದಿದ್ದಾರೆ.
ಬೇರೆ ಸಮಾಜದವರನ್ನು ಕಡೆಗಣಿಸಿರುವುದೇ ಸೋಲಿಗೆ ಕಾರಣ. ಕೇವಲ ಎಸ್ಟಿ ಸಮಾಜದ ವೋಟ್ನಿಂದ ಶಾಸಕ, ಸಚಿವರು ಆಗಲ್ಲ. ಕ್ಷೇತ್ರದಲ್ಲಿ ಎಲ್ಲರನ್ನು ಎಸ್ಟಿ ಸಮಾಜದ ಅಧಿಕಾರಿಗಳನ್ನು ಹಾಕುತ್ತಾರೆ. ಎಸ್ಟಿ ಮೀಸಲು ಕ್ಷೇತ್ರಗಳಲ್ಲಿ ಇದೇ ನಮ್ಮ ಸೋಲಿಗೆ ಕಾರಣವಾಗಿದೆ ಎಂದು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದಾರೆ ಎನ್ನಲಾದ ಅರವಿಮದ್ ಬೆಲ್ಲದ್ ಅವರ ವಿಡಿಯೋ ವೈರಲ್ ಆಗಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ