ಬಿಜೆಪಿಯಲ್ಲೇ ಭುಗಿಲೆದ್ದ ಅಂತರ್​​ಯುದ್ಧ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ನಳಿನ್ ಕುಮಾರ್ ಕಟೀಲ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಅವರು ತಮ್ಮ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ರಾಜ್ಯಾಧ್ಯಕ್ಷ ಹುದ್ದಗೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ.

ಬಿಜೆಪಿಯಲ್ಲೇ ಭುಗಿಲೆದ್ದ ಅಂತರ್​​ಯುದ್ಧ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ನಳಿನ್ ಕುಮಾರ್ ಕಟೀಲ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ
ಎಂಪಿ ರೇಣುಕಾಚಾರ್ಯ, ನಳಿನ್ ಕುಮಾರ್ ಕಟೀಲ್
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ರಮೇಶ್ ಬಿ. ಜವಳಗೇರಾ

Updated on: Jun 28, 2023 | 2:33 PM

ಶಿವಮೊಗ್ಗ: ಮನೆಯೊಳಗಿನ ಕಿಚ್ಚು ಮನೆ ಸುಡುವುಲ್ಲದೆ, ನೆರೆ ಮನೆಯ ಸುಟ್ಟಿತೆ ಕೂಡಲ ಸಂಗಮ ದೇವ.. ಇದೇ ಮಾತು ಈಗ ಕರ್ನಾಟಕ ಬಿಜೆಪಿಗೆ (Karnataka BJP) ತುಂಬಾ ಹೋಲಿಕೆಯಾಗುತ್ತೆ. ವಿಧಾನಸಭೆ ಸೋಲಿನ ಬಳಿಕ ಸೈಲೆಂಟ್ ಆಗಿದ್ದ ಕೇಸರಿ ಪಾಳೆಯದಲ್ಲೀಗ ಆರೋಪ-ಪ್ರತ್ಯಾರೋಪ, ಹೊಂದಾಣಿಕೆಯ ಅಂತರ್ಯುದ್ಧ ತಾರಕಕ್ಕೇರಿದೆ. ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಸೋಲಿನ ಬಳಿಕ ಬಿಜೆಪಿಯಲ್ಲಿ ನಾಯಕರು ತಮ್ಮ-ತಮ್ಮ ಮಧ್ಯೆ ಕಿತ್ತಾಡುಗೊಳ್ಳುತ್ತಿದ್ದಾರೆ. ಇದರ ಮಧ್ಯೆ ರಾಜ್ಯಾಧ್ಯಕ್ಷ ಸ್ಥಾನ ಹಾಗು ವಿಪಕ್ಷ ನಾಯಕ ಆಯ್ಕೆ ಬಗ್ಗೆ ಚರ್ಚೆಯಾಗುತ್ತಿದ್ದು, ಈ ವಿಚಾರವಾಗಿ ಯಾವುದೇ ಪಕ್ಷದ ಘನತೆಗೆ ಧಕ್ಕೆ ತರುವಂಥ ಹೇಳಿಕೆಗಳನ್ನು ನೀಡಬಾರದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಖಡಕ್ ಸೂಚನೆ ಕೊಟ್ಟಿದ್ದಾರೆ. ಅದ್ಯಾವುದಕ್ಕೂ ತಲೆಕೆಡಿಸಕೊಳ್ಳದ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ, ನಳಿನ್ ಕುಮಾರ್ ಕಟೀಲ್ ವಿರುದ್ಧವೇ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ; ಪಕ್ಷದ ಘನತೆಗೆ ಧಕ್ಕೆ ತರುವಂಥ ಹೇಳಿಕೆ ನೀಡದಂತೆ ನಳಿನ್ ಕುಮಾರ್ ಕಟೀಲ್ ಸೂಚನೆ

ದಾವಣಗೆರೆಯಲ್ಲಿ ಇಂದು(ಜೂನ್ 28) ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಬಿಜೆಪಿ ಹೀ‌ನಾಯವಾಗಿ ಸೋಲು ಕಂಡಿದೆ. ಇದರಿಂದ ಅವರು ನೈತಿಕ ಹೊಣೆಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಬಹಿರಂಗಿಯೇ ಆಗ್ರಹಿಸಿದರು.

ಪಕ್ಷ, ನಾಯಕರ ವಿರುದ್ಧ ಮಾತಾಡಿದವರ ವಿರುದ್ಧ ಕ್ರಮ ಎಂದಿದ್ದೀರಿ. ಅದ್ರೆ, ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ನಮ್ಮವರೇ ವಾಗ್ದಾಳಿ ನಡೆಸಿದ್ದರು. ಬಿಎಸ್​ವೈ ವಿರುದ್ಧ ಮಾತನಾಡಿದವರ ವಿರುದ್ಧ ಕ್ರಮ ಕೈಗೊಂಡಿದ್ದೀರಾ? ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಮಾಜಿ ಸಿಎಂ ಯಡಿಯೂರಪ್ಪ ಪರ ಮಾತನಾಡಿದ್ರೆ ಪಕ್ಷ ವಿರೋಧಿ. ಯಡಿಯೂರಪ್ಪ ವಿರುದ್ಧ ಮಾತಾಡಿದರೆ ಪಕ್ಷ ವಿರೋಧಿ ಅಲ್ಲವಾ? ಚುನಾವಣೆ ಪೂರ್ವದಲ್ಲಿ ಹತ್ತಾರು ಸಲ ಹೇಳಿದೆ. ಆದ್ರೆ ಕ್ರಮ‌ಕೈಗೊಳ್ಳಲಿಲ್ಲ. ಈ ಎಲ್ಲ ಕಾರಣಕ್ಕೆ ಬಿಜೆಪಿ ಹೀನಾಯ ಸೋಲು ಕಂಡಿದೆ ಎಂದು ನಳಿನ್ ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು.

ಪಕ್ಷ ಕಟ್ಟಿದವರು ಯಡಿಯೂರಪ್ಪ, ಅನಂತ್ ಕುಮಾರ್, ಈಶ್ವರಪ್ಪ, ಜಗದೀಶ ಶೆಟ್ಟರ್‌. ಆದ್ರೆ, ಈಗ ಅನಂತಕುಮಾರ ನಮ್ಮೊಂದಿಗಿಲ್ಲ. ಉಳಿದ ಮೂರು ಜನರನ್ನ ಮುಗಿಸಿ ಹಾಕಿದ್ದೀರಿ. ಯಡಿಯೂರಪ್ಪ ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನ ಸಿಎಂ ಮಾಡಿದ್ರಿ. ಆದ್ರೆ ಅವರ ಕೈ ಕಟ್ಟಿ ಹಾಕಿದ್ರಿ. ಅವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡಲಿಲ್ಲ  ವಿಧಾನಸಭೆ ಚುನಾವಣೆ ಸೋಲಿನ ಬಗ್ಗೆ ಆತ್ಮಾವಲೋಕನ ಅಗತ್ಯವಿದೆ. ಮೊದಲು ನಳಿನ್ ಕುಮಾರ್ ಕಟೀಲು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಮತ್ತೊಮ್ಮೆ ಒತ್ತಾಯಿಸಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ