ಕಾಂಗ್ರೆಸ್​ನವರಿಗೆ ತಕ್ಕ ಉತ್ತರ ಕೊಡಬಲ್ಲವನು ನಾನೊಬ್ಬನೆ, ವಿರೋಧ ಪಕ್ಷದ ನಾಯಕನಾದ್ರೆ ಮಜಾ ಇರುತ್ತೆ: ಶಾಸಕ ಯತ್ನಾಳ್

|

Updated on: May 24, 2023 | 6:10 PM

ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ನಾನು ಅಪೇಕ್ಷೆಪಟ್ಟಿಲ್ಲ. ಕಾಂಗ್ರೆಸ್​ನವರಿಗೆ ತಕ್ಕ ಉತ್ತರ ಕೊಡಬಲ್ಲವನು ನಾನೊಬ್ಬನೆ ಎಂದು ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಹೇಳಿದರು.

ಬೆಂಗಳೂರು: ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ನಾನು ಅಪೇಕ್ಷೆಪಟ್ಟಿಲ್ಲ. ಕಾಂಗ್ರೆಸ್​ನವರಿಗೆ ತಕ್ಕ ಉತ್ತರ ಕೊಡಬಲ್ಲವನು ನಾನೊಬ್ಬನೆ. ನಾನು ವಿರೋಧ ಪಕ್ಷದ ನಾಯಕನಾದರೆ ಮಜಾ ಇರುತ್ತೆ ಎಂದು ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ (Basangouda Patil Yatnal) ಹೇಳಿದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯಿರುವ ಕೆಐಎಬಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವರ ಭ್ರಷ್ಟಾಚಾರ, ಗೂಂಡಾಗಿರಿ 6 ತಿಂಗಳು ಇರುವುದಿಲ್ಲ ಎಂದು ವಾಗ್ದಾಳಿ ಮಾಡಿದರು. ಯೂಟಿ ಖಾದರ್, ಜಮೀರ್ ಯಾರೆ ಆದರೂ ಸಂವಿಧಾನದಲ್ಲಿ ಅವಕಾಶವಿದೆ. ಯಾರೆ ಆದರೂ ಸಂವಿಧಾನದಂತೆ ನಡೆಯಬೇಕು ಎಂದು ಹೇಳಿದರು.

ಕಾಂಗ್ರೆಸ್ ವಿರುದ್ದ ಶಾಸಕ ಯತ್ನಾಳ್​ ವಾಗ್ದಾಳಿ

ಡಿಕೆ ಶಿವಕುಮಾರ್ ಪೊಲೀಸ್ ಠಾಣೆಗಳನ್ನ ಹಸರಿಕರಣ ಮಾಡಿ ಪಾಕಿಸ್ತಾನ ಮಾಡಲು ಹೊರಟಿದ್ದಾರಾ? ಕೇಸರಿ ಈ ಧರ್ಮದ ದೇಶದ ಸಂಕೇತವಿದೆ. ಪೊಲೀಸರು ಕೇಸರಿಶಾಲು ಹಾಕ್ಕೊಂಡ್ರೆ ತಪ್ಪೇನಿದೆ. ಕೇಸರಿಯನ್ನು ವಿರೋಧ ಮಾಡಿದ್ರು ಉಳಿಗಾಲವಿಲ್ಲ. ಕೆಲ ಗ್ಯಾರಂಟಿ ಕಾರ್ಡಗಳಿಂದ ಆರಿಸಿ ಬಂದಿದ್ದಾರೆ. ಶೀಘ್ರದಲ್ಲೇ ಗ್ಯಾರಂಟಿ ಕಾರ್ಡಗಳು ಮುಗಿಯುತ್ತವೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಬಂದ ಮೇಲೆ ದೇಶ ದ್ರೋಹಿ ಚಟುವಟಿಕೆಗಳು ಹೆಚ್ಚಾಗುತ್ತಿವೆ

2024ಕ್ಕೆ ಮತ್ತೆ ಮೋದಿ ಪ್ರಧಾನಿಯಾಗಲಿದ್ದಾರೆ. ದೇಶ ಹಿಂದೂ ದೇಶವಾಗಲಿದೆ. ಇಂತಹ ನೂರು ಡಿಕೆ ಶಿವಕುಮಾರ್​ಗಳು ಬಂದರು ಏನು ಆಗೋದಿಲ್ಲ. ಕಾಂಗ್ರೆಸ್​ನವರು ಏನು ಬಹಳ ಸಾಚಾ ಇದ್ದಾರ ನೊಡೋಣ.  ಕಾಂಗ್ರೆಸ್ ಬಂದ ಮೇಲೆ ದೇಶ ದ್ರೋಹಿ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಪಾಕಿಸ್ತಾನ ಧ್ವಜಗಳು ಹಾರಾಡುತ್ತಿವೆ.

ರಾಜ್ಯದಲ್ಲಿ ಬಿಜೆಪಿ ಮುಗಿದು ಹೋಗಿಲ್ಲ, ನಾವು ಹೋರಾಡ ಮಾಡುತ್ತೇವೆ. 66 ಜನ ನಾವು ವಿರೋಧ ಪಕ್ಷದಲ್ಲಿದ್ದೇವೆ. ಐದು ವರ್ಷ ಅವರು ಏನ್ಮಾಡಿದ್ರು ನಡೆಯುತ್ತೆ ಅನ್ನೋದಿಲ್ಲ. ರಾಜಕಾರಣದಲ್ಲಿ ಏನುಬೇಕಾದರೂ ಆಗಬಹುದು 135 ಅಲ್ಲ 200 ಬಂದ್ರು ಏನು ಬೇಕಾದರೂ ಆಗಬಹುದು. ಮಹಾರಾಷ್ಟ್ರದಲ್ಲಿ ಏನಾಯಿತು ಅನ್ನೂದು ಗೊತ್ತಲ್ವ ಎಂದು ವಾಗ್ದಾಳಿ ಮಾಡಿದ್ದಾರೆ.

ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ

ಕೆಐಎಬಿಯಲ್ಲಿ ನೂತನ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ, ಆದಷ್ಟು ಬೇಗ ಆಗಬೇಕಿದೆ. ಸರ್ಕಾರ ಹೇಗೆ ಆಡಳಿತ ನೀಡುತ್ತದೆ ಅಂತಾ ಹೇಳಲು 6 ತಿಂಗಳು ಬೇಕು ಎಂದು ಹೇಳಿದರು.


6 ತಿಂಗಳಿಂದ 1 ವರ್ಷ ಸಮಯಬೇಕೆಂದು ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯವರು ಏನೋ ಹೇಳ್ತಾರೆಂದು ನಾವು ಹೇಳಲು ಆಗೋದಿಲ್ಲ. ಯತ್ನಾಳ್ ಗಿರಾಕಿಗೆ ಯಾರು ಉತ್ತರ ಕೊಡೋರು. ಅವನು ಹೇಳಿದಕ್ಕೆಲ್ಲ ಉತ್ತರ ಕೊಡಲು ಆಗಲ್ಲ. ನರೇಂದ್ರ ಮೋದಿಯವರ 15 ಲಕ್ಷದ ವಿಚಾರ ಮೊದಲು ಹೇಳಲಿ ಎಂದು ಕಿಡಿಕಾರಿದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.